ಎಲ್ಲಾ ಪ್ಲಾನ್ ಪ್ರಕಾರವೇ ನಡೆದಿದ್ದರೆ ಈ ಮಿಮಿಕ್ರಿ ಕಲಾವಿದನ ವಿಡಿಯೋ ಲಕ್ಷಗಟ್ಟಲೆ ವ್ಯೂಸ್ ಪಡೆದು ಹಿಟ್ ಆಗುತ್ತಿತ್ತೇನೋ..ಆದರೆ ಈ ಮಿಮಿಕ್ರಿ ಸೂಪರ್ಮ್ಯಾನ್ನ ಯೋಜನೆ ಕೈಕೊಟ್ಟ ಕಾರಣ ಚಲಿಸುತ್ತಿರುವ ಬಸ್ ಈತನಿಗೆ ಡಿಕ್ಕಿ ಹೊಡೆಯಿತು.
ಅರೇ! ಏನಿದು ಅಂದಿರಾ? ಹೌದು, ಬ್ರೆಜಿಲ್ನ ಓರ್ವ ಪ್ರಸಿದ್ಧ ಮಿಮಿಕ್ರಿ ಕಲಾವಿದ ಸೂಪರ್ಮ್ಯಾನ್ನ ವೇಶ ಧರಿಸಿ ಚಲಿಸುತ್ತಿರುವ ಬಸ್ನ್ನು ನಿಲ್ಲಿಸುವ ರೀತಿ ವಿಡಿಯೋ ಮಾಡಲು ಯೋಜನೆ ರೂಪಿಸಿದ್ದರು. ಆದರೆ ಅವರ ಗ್ರಹಗತಿ ಸರಿ ಇರಲಿಲ್ಲವೋ ಏನೋ, ಬಸ್ನಿಂದ ತಮಗೆ ಇರುವ ಅಂತರ ಎಷ್ಟಿದೆ ಎಂದು ಅಂದುಕೊಂಡಿದ್ದು ತಪ್ಪೇ ಹೋಗಿತ್ತು. ಹೀಗಾಗಿ ಚಲಿಸುತ್ತಿರುವ ಬಸ್ ಸೂಪರ್ಮ್ಯಾನ್ ವೇಶಧಾರಿ ಮಿಮಿಕ್ರಿ ಕಲಾವಿದನಿಗೇ ಬಂದು ಅಪ್ಪಳಿಸಿತು.
ನೀಲಿ ಮತ್ತು ಕೆಂಪು ಬಟ್ಟೆ ಧರಿಸಿದ 35 ವರ್ಷದ ಈ ಮಿಮಿಕ್ರಿ ಕಲಾವಿದನಿಗೆ ತನ್ನ ವಿಶೇಷ ಕೌಶಲವನ್ನು ಸಾಬೀತುಪಡಿಸುವ ಹುಚ್ಚು. ಹೀಗಾಗಿ ಅವರು, ಸೂಪರ್ಮ್ಯಾನ್ ವೇಶ ಧರಿಸಿ ಚಲಿಸುವ ಬಸ್ನ ನಿಲ್ಲಿಸುವ ವಿಡಿಯೋ ಮಾಡಲು ಯತ್ನಿಸಿದ್ದರು. ಆದರೆ ಚಲಿಸುವ ಬಸ್ನ ಅಂತರವನ್ನು ಗುರುತಿಸಲು ಅವರ ಬಳಿ ಸಾಧ್ಯವಾಗಲಿಲ್ಲ. ಹೀಗಾಗಿ ಬಸ್ ಅವರಿಗೆ ಅಪ್ಪಳಿಸಿತು. ಆದರೆ ಬಸ್ನ ಬ್ರೇಕ್ನಲ್ಲಿ ಯಾವುದೇ ದೋಷವಿರಲಿಲ್ಲ ಎಂದು ಬಸ್ ಒಡೆತನದ ಕಂಪನಿ ತಿಳಿಸಿದೆ.
ಇದನ್ನೂ ಓದಿ: Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ
(Brazil mimicry artist Superman gets hit by bus)