Clubhouse App: ಕ್ಲಬ್ ಹೌಸ್ ಆ್ಯಪ್ಗೆ ಅಂತೂ ಬಂತು ಬಹು ಬೇಡಿಕೆಯ ಫೀಚರ್; ಗ್ರಾಹಕರ ಆ ಮನವಿ ಏನು?
ಬಹಳ ಮಂದಿ ಬಳಕೆದಾರರಿಂದ ಬೇಡಿಕೆಯಲ್ಲಿದ್ದ ಟ್ವಿಟ್ಟರ್, ಇನ್ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಕ್ಲಬ್ ಹೌಸ್ ಆ್ಯಪ್ಗೆ ಸೇರ್ಪಡೆ ಮಾಡಲು ಸಾಧ್ಬೇಯವಾಗಬೇಕು ಎಂಬುದು ಅಂತೂ ಸದ್ಯದಲ್ಲೇ ನಿಜವಾಗಲಿದೆ.
ಆಡಿಯೋ ಓನ್ಲಿ ಸೋಷಿಯಲ್ ನೆಟ್ವರ್ಕಿಂಗ್ ಅಪ್ಲಿಕೇಷನ್ ಕ್ಲಬ್ಹೌಸ್ ಕಳೆದ ತಿಂಗಳು ಅಂತೂ ಭಾರತದಲ್ಲಿ ಆಂಡ್ರಾಯಿಡ್ನಲ್ಲಿ ಆರಂಭವಾಗಿದೆ. ಕ್ಲಬ್ಹೌಸ್ ಆ್ಯಪ್ ಹೊಸ ಫೀಚರ್ಗಳೊಂದಿಗೆ ಇರುವುದರಿಂದ ಡೌನ್ಲೋಡ್ ಪ್ರಮಾಣ ಹೆಚ್ಚಾಗಿದೆ. ಟ್ವಿಟ್ಟರ್ ಸ್ಪೇಸ್ಗಳಂಥ ಪ್ರತಿಸ್ಪರ್ಧಿಗಳ ಜತೆಗೆ ಸ್ಪರ್ಧಿಸುತ್ತಿದೆ. ಈಚಿನ ಟೌನ್ಹಾಲ್ ಸಭೆಯಲ್ಲಿ ಕಂಪೆನಿ ಖಾತ್ರಿಪಡಿಸಿರುವ ಪ್ರಕಾರ, ಸದ್ಯದಲ್ಲೇ ಆಹ್ವಾನ ವ್ಯವಸ್ಥೆ (Invite system) ಕೊನೆಯಾಗಲಿದೆ. ಆಂಡ್ರಾಯಿಡ್ ಬಳಕೆದಾರರಿಗೆ ಕಂಪೆನಿಯಿಂದ ಹೊಸ ಅಪ್ಡೇಟ್ ಜಾರಿಗೆ ತರಲಾಗಿದೆ. ಈ ಅಪ್ಡೇಟ್ ನಂತರ ಬಳಕೆದಾರರು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಖಾತೆ ಜತೆಗೆ ಪ್ರೊಫೈಲ್ ಸೇರ್ಪಡೆ ಮಾಡಬಹುದು. ಬಿಡುಗಡೆ ಮಾಡಿರುವ ಮಾಹಿತಿಯ ಅನುಸಾರ, ಈ ಫೀಚರ್ ಬಗ್ಗೆ ಅತಿ ಹೆಚ್ಚು ಗ್ರಾಹರಿಂದ ಮನವಿ ಸಲ್ಲಿಸಲಾಗಿತ್ತು.
ಕ್ಲಬ್ಹೌಸ್ ಪ್ರೊಫೈಲ್ಗೆ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆ ಸೇರ್ಪಡೆ ಮಾಡುವುದಕ್ಕೆ ಆ್ಯಪ್ನಲ್ಲಿ ಇರುವಂಥ “Add Twitter” ಅಥವಾ “Add Instagram” ಆಯ್ಕೆಯ ಮೇಲೆ ಒತ್ತಬೇಕು. ಕಂಪೆನಿ ಹೇಳಿರುವಂತೆ, ನಾವು ತುಂಬ ಸ್ಪಷ್ಟವಾಗಿ ಹಾಗೂ ಗಟ್ಟಿಯಾಗಿ ಹೇಳುತ್ತಿದ್ದೇವೆ. ಇದು ಬಹಳ ಬೇಡಿಕೆಯಲ್ಲಿನ ಆಂಡ್ರಾಯಿಡ್ ಫೀಚರ್ ಹಾಗೂ ಅದೀಗ ಇಲ್ಲಿದೆ. ಸೋಷಿಯಲ್ ಖಾತೆಗಳನ್ನು ಪ್ರೊಫೈಲ್ಗಳನ್ನು ಸೇರ್ಪಡೆ ಮಾಡುವುದರಿಂದ ಕ್ಲಬ್ಹೌಸ್ನಲ್ಲಿ ಜನರು ನಿಮ್ಮನ್ನು ತಿಳಿಯಲು ಹೆಚ್ಚು ಅನುಕೂಲ ಆಗುತ್ತದೆ. ನಿಮ್ಮ ಇತರ ಅಕೌಂಟ್ಗಳನ್ನು ಅನುಸರಿಸಲು ಸಹಾಯ ಆಗುತ್ತದೆ ಎಂದು ಹೇಳಲಾಗಿದೆ.
ಇದರೊಂದಿಗೆ ಕ್ಲಬ್ಹೌಸ್ನಿಂದ ಕ್ಲಬ್ಗಳು ಮತ್ತು ಸ್ಪೀಕರ್ಗಳು ನೇರವಾಗಿ ತಮ್ಮ ರೂಮ್ಗಳಿಂದ ಫಾಲೋ ಮಾಡಲು ಸುಲಭವಾಗುತ್ತದೆ. ಕೆಲವು ನಿಮಿಷಗಳ ಕಾಲ ರೂಮ್ನಲ್ಲಿ ಇದ್ದ ಮೇಲೆ ಕ್ಲಬ್ ಅಥವಾ ಸ್ಪೀಕರ್ಗಳನ್ನು ರೂಮ್ನಲ್ಲಿ ಫಾಲೋ ಮಾಡುವುದಕ್ಕೆ ನೆನಪಿಸಲಾಗುತ್ತದೆ. ಸ್ಕ್ರೀನ್ನ ಕೆಳಭಾಗದಲ್ಲಿ ಇದು ಕಾಣಿಸುತ್ತದೆ. “Follow” ಎಂಬುದರ ಮೇಲೆ ಒತ್ತಿದರೆ ಭವಿಷ್ಯದ ರೂಮ್ಗಳನ್ನು ನೋಡಬಹುದು ಮತ್ತು ಅವರು ಯಾವಾಗೆಲ್ಲ ಲೈವ್ ಹೋಗುತ್ತಾರೆ ಆಗ ನೋಟಿಫಿಕೇಷನ್ ಬರುತ್ತದೆ.
ಕೊನೆಯದಾಗಿ, ಕ್ಲಬ್ಹೌಸ್ ಆ್ಯಪ್ನಿಂದ ಆಂಡ್ರಾಯಿಡ್ನಲ್ಲಿ ಕ್ಲಬ್ಹೌಸ್ ಪೇಜ್ ಮೂಲಕ ಮುಂದೆ ಇರುವ ಕಾರ್ಯಕ್ರಮಗಳನ್ನು ಸೇರಿಸಲಾಗುತ್ತದೆ. ಈಗಂತೂ ಒಂದಕ್ಕೂ ಹೆಚ್ಚಿನ ಕಾರ್ಯಕ್ರಮ ಇದ್ದಲ್ಲಿ ಸುಲಭವಾಗಿ ಕಂಡುಹಿಡಿಯಬಹುದು. ಕ್ಲಬ್ ಪೇಜ್ಗೆ ಹೋಗಿ, ಎಲ್ಲ ಮುಂಬರುವ ಕಾರ್ಯಕ್ರಮಗಳನ್ನು ನೋಡಬಹುದು. ಒಂದಕ್ಕಿಂತ ಹೆಚ್ಚಿದ್ದಲ್ಲಿ ಸ್ಕ್ರಾಲ್ ಮಾಡಬಹುದು. ಒಂದು ವೇಳೆ ಕಾರ್ಯಕ್ರಮ ಆಸಕ್ತಿಕರವಾಗಿ ಇದ್ದಲ್ಲಿ ಗಂಟೆಯ ಗುರುತಿನ ಮೇಲೆ ಒತ್ತಿದರೆ, ಆ ಕಾರ್ಯಕ್ರಮ ಶುರುವಾಗುತ್ತಿದ್ದಂತೆಯೇ ಆ ಬಗ್ಗೆ ಮಾಹಿತಿ ಬರುತ್ತದೆ.
ಕ್ಲಬ್ಹೌಸ್ ಎಂಬುದು ಇನ್ವಿಟೇಷನ್ ಓನ್ಲಿ ಸೋಷಿಯಲ್ ಮೀಡಿಯಾ ಆ್ಯಪ್. ಇದರ ಮೂಲಕವಾಗಿ ಚಾಟ್ ರೂಮ್ಗಳಲ್ಲಿ ಬಳಕೆದಾರರು ಧ್ವನಿಯ ಮೂಲಕ ಸಂವಹನ ನಡೆಸಬಹುದು. ಇದರಲ್ಲಿ 5000 ಮಂದಿಯ ತನಕ ಒಂದು ಗುಂಪಾಗಿ ಚಾಟಿಂಗ್ಗೆ ಅವಕಾಶ ಇದೆ. ಇದು ಆಡಿಯೋ- ಓನ್ಲಿ ಆ್ಯಪ್. ನೇರ ಮಾತುಕತೆಗಳನ್ನು ಆಯೋಜಿಸುವುದಕ್ಕೆ ಈ ಪ್ಲಾಟ್ಫಾರ್ಮ್ ಬಳಸಿಕೊಳ್ಳಬಹುದು. ಮಾತನಾಡುವ ಹಾಗೂ ಕೇಳಿಸಿಕೊಳ್ಳುವ ಮೂಲಕ ಇದರಲ್ಲಿ ಭಾಗವಹಿಸಬಹುದು. ಈ ಆ್ಯಪ್ನಲ್ಲಿ ನಡೆಯುವ ಸಂಭಾಷಣೆಗಳ ರೆಕಾರ್ಡ್ ಮಾಡುವುದಕ್ಕೆ, ದಾಖಲಿಸುವುದಕ್ಕೆ, ಮತ್ತೊಮ್ಮೆ ಪ್ರಸಾರ ಮಾಡುವುದಕ್ಕೆ ಅವಕಾಶ ಇಲ್ಲ.
ಇದನ್ನೂ ಓದಿ: Clubhouse appನಲ್ಲಿ ಕಿಕ್ಕಿರಿದಿರುವ ಮಲಯಾಳಿಗಳದೇ ಪಾರಮ್ಯ; ಭಾರತದಲ್ಲಿ ಎಷ್ಟು ಡೌನ್ಲೋಡ್ ಆಗಿದೆ ಗೊತ್ತಾ?
ಇದನ್ನೂ ಓದಿ: Clubhouse app: ಕ್ಲಬ್ ಹೌಸ್ ಆ್ಯಪ್ ಈಗ ಭಾರತದಲ್ಲೂ ಲಭ್ಯ; ಏನಿದರ ವೈಶಿಷ್ಟ್ಯ, ಯಾವುದಕ್ಕೆ ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ
(Twitter, Instagram profile can add to Clubhouse audio only social media app)
Published On - 5:07 pm, Sat, 5 June 21