AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Clubhouse appನಲ್ಲಿ ಕಿಕ್ಕಿರಿದಿರುವ ಮಲಯಾಳಿಗಳದೇ ಪಾರಮ್ಯ; ಭಾರತದಲ್ಲಿ ಎಷ್ಟು ಡೌನ್​ಲೋಡ್ ಆಗಿದೆ ಗೊತ್ತಾ?

ಧ್ವನಿ ಆಧಾರಿತ ಸೋಷಿಯಲ್ ಮೀಡಿಯಾವಾದ ಕ್ಲಬ್​ಹೌಸ್ ಆ್ಯಪ್ ಬಳಕೆಯಲ್ಲಿ ಮಲಯಾಳಿಗಳ ಪ್ರಮಾಣ ಬಹಳ ಹೆಚ್ಚಾಗಿದೆ. ಅದು ಯಾವ ಪ್ರಮಾಣದಲ್ಲಿ ಎಂಬ ಮಾಹಿತಿ ಇಲ್ಲಿದೆ.

Clubhouse appನಲ್ಲಿ ಕಿಕ್ಕಿರಿದಿರುವ ಮಲಯಾಳಿಗಳದೇ ಪಾರಮ್ಯ; ಭಾರತದಲ್ಲಿ ಎಷ್ಟು ಡೌನ್​ಲೋಡ್ ಆಗಿದೆ ಗೊತ್ತಾ?
ಸಾಂದರ್ಭಿಕ ಚಿತ್ರ
Srinivas Mata
|

Updated on: Jun 02, 2021 | 4:50 PM

Share

ಧ್ವನಿ ಆಧಾರಿತ ಸೋಷಿಯಲ್ ಮೀಡಿಯಾ ಅಪ್ಲಿಕೇಷನ್ ಆದ ಕ್ಲಬ್ ಹೌಸ್ ಮೇ 25ನೇ ತಾರೀಕಿಗೆ ಭಾರತದಲ್ಲಿ 1.03 ಲಕ್ಷಕ್ಕೂ ಹೆಚ್ಚು ಬಾರಿ ಗೂಗಲ್ ಪ್ಲೇಸ್ಟೋರ್​ನಲ್ಲಿ ಡೌನ್​ಲೋಡ್ ಆಗಿದೆ. ಅಂದ ಹಾಗೆ ಈ ಆ್ಯಪ್ ಭಾರತದಲ್ಲಿ ಬಿಡುಗಡೆ ಆಗಿದ್ದು ಮೇ 21ನೇ ತಾರೀಕು. ಇನ್ನು ಐಇಎಸ್​ಗೆ ಆಗಿರುವ ಡೌನ್​ಲೋಡ್ 2 ಲಕ್ಷಕ್ಕೂ ಹೆಚ್ಚಿದೆ. ಆಸಕ್ತಿಕರ ಸಂಗತಿ ಏನೆಂದರೆ, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಯೋಜಕರಾಗಿ ಕಾಣಿಸಿಕೊಂಡಿರುವವರು ಮಲಯಾಳಿಗಳು. ಭಾರತದಲ್ಲಿ ಮಾತ್ರ ಅಷ್ಟೇ ಅಲ್ಲ, ಅನಿವಾಸಿ ಭಾರತೀಯರ ಪೈಕಿಯು ಆಯೋಜಕರ ರೂಮ್​ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದು ಮಲಯಾಳಿಗಳೇ. ಇದರರ್ಥ ಏನೆಂದರೆ, ಮಧ್ಯರಾತ್ರಿ 3 ಗಂಟೆಗೆ ಕ್ಲಬ್ ಹೌಸ್ ಲಾಗ್ ಇನ್ ಆದರೂ ಈ ಸೋಷಿಯಲ್ ಮೀಡಿಯಾದ ರೂಮ್​ಗಳಲ್ಲಿ ಕೊರತೆ ಇದ್ದೇ ಇರುತ್ತದೆ. ಈ ಬಗ್ಗೆ ಕೇಸಿ ನ್ಯೂಟನ್ ಮಾಹಿತಿ ಹಂಚಿಕೊಂಡಿದ್ದು, ಈ ತನಕ ಆಂಡ್ರಾಯಿಡ್​ನಲ್ಲಿ 26 ಲಕ್ಷ ಡೌನ್​ಲೋಡ್ ಆಗಿದ್ದು, ಭಾರತದಲ್ಲೇ 10 ಲಕ್ಷದಷ್ಟು ಡೌನ್​ಲೋಡ್ ಆಗಿದೆ. ಮೇ ತಿಂಗಳಲ್ಲಿ ಐಒಎಸ್​ನಲ್ಲಿ 7,19,000 ಡೌನ್​ಲೋಡ್ ಆಗಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಶೇ 22ರಷ್ಟು ಕಡಿಮೆ ಆಗಿದೆ.

ಈ ಕ್ಲಬ್​ ಹೌಸ್​ ಆ್ಯಪ್​ ಅನ್ನು ಎಲಾನ್ ಮಸ್ಕ್, ಮಾರ್ಕ್ ಝುಕರ್​ಬರ್ಗ್ ಅಂಥವರು ಬಳಸುತ್ತಿರುವುದರಿಂದ ಜನಪ್ರಿಯತೆ ಹೆಚ್ಚಾಗಿದೆ. ಕ್ಲಬ್​ ಹೌಸ್​ಗೆ ಆರಂಭದ ವರ್ಷದಲ್ಲೇ ಹತ್ತಾರು ಲಕ್ಷ ಬಳಕೆದಾರರು ಸಿಕ್ಕಿದ್ದಾರೆ. ಸಿಕ್ಕಾಪಟ್ಟೆ ಜನ ಆಡಿಯೋ ಆಧಾರಿಯ ಸೋಷಿಯಲ್ ಅಪ್ಲಿಕೇಷನ್​ಗಳಲ್ಲಿ ಆಸಕ್ತರಾಗಿರುವುದರಿಂದ ಹಲವು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ತಮ್ಮದೇ ವರ್ಷನ್​ನ ಕ್ಲಬ್​ ಹೌಸ್​ ಅಭಿವೃದ್ಧಿ ಮಾಡುವುದಕ್ಕೆ ಪ್ರಯತ್ನಿಸುತ್ತಿವೆ. ಚಾಟ್​ ರೂಮ್​ಗಳಲ್ಲಿ ಬಳಕೆದಾರರು ಧ್ವನಿಯ ಮೂಲಕ ಸಂವಹನ ನಡೆಸಬಹುದು. ಇದರಲ್ಲಿ 5000 ಮಂದಿಯ ತನಕ ಒಂದು ಗುಂಪಾಗಿ ಚಾಟಿಂಗ್​ಗೆ ಅವಕಾಶ ಇದೆ. ಇದು ಆಡಿಯೋ- ಓನ್ಲಿ ಆ್ಯಪ್. ನೇರ ಮಾತುಕತೆಗಳನ್ನು ಆಯೋಜಿಸುವುದಕ್ಕೆ ಈ ಪ್ಲಾಟ್​ಫಾರ್ಮ್ ಬಳಸಿಕೊಳ್ಳಬಹುದು. ಮಾತನಾಡುವ ಹಾಗೂ ಕೇಳಿಸಿಕೊಳ್ಳುವ ಮೂಲಕ ಇದರಲ್ಲಿ ಭಾಗವಹಿಸಬಹುದು.

ಈ ಆ್ಯಪ್​ನಲ್ಲಿ ನಡೆಯುವ ಸಂಭಾಷಣೆಗಳ ರೆಕಾರ್ಡ್ ಮಾಡುವುದಕ್ಕೆ, ದಾಖಲಿಸುವುದಕ್ಕೆ, ಮತ್ತೊಮ್ಮೆ ಪ್ರಸಾರ ಮಾಡುವುದಕ್ಕೆ ಅವಕಾಶ ಇಲ್ಲ. ಆದ್ದರಿಂದ ಬೆದರಿಕೆ, ಜನಾಂಗೀಯ ನಿಂದನೆ ಇಂಥದ್ದು ಆಗಬಹುದು. ಆಗ ದೂರು ನೀಡಲು ಸಾಧ್ಯವಿಲ್ಲ ಎಂಬ ಆರೋಪ ಇದೆ. ಇನ್ನು ಈ ಆ್ಯಪ್​ನ ಮೂಲದಲ್ಲೇ ಖಾಸಗಿತನ ಕಾಯ್ದುಕೊಳ್ಳುವುದರೂ ಸಮಸ್ಯೆ ಇದ್ದು, ಒಮನ್, ಜೋರ್ಡಾನ್, ಚೀನಾದಂಥ ದೇಶಗಳು ಈ ಆ್ಯಪ್​ನ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ.

ಇದನ್ನೂ ಓದಿ: Clubhouse app: ಕ್ಲಬ್ ಹೌಸ್ ಆ್ಯಪ್ ಈಗ ಭಾರತದಲ್ಲೂ ಲಭ್ಯ; ಏನಿದರ ವೈಶಿಷ್ಟ್ಯ, ಯಾವುದಕ್ಕೆ ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ

ಇದನ್ನೂ ಓದಿ: Audio- Only Forum Hotline: ಫೇಸ್​ಬುಕ್​ನಿಂದ ಲೈವ್ ಆಡಿಯೋ ಹಾಟ್​ಲೈನ್ ಪ್ರಯೋಗ; ಇದೇನು, ಎತ್ತ?

(Audio only social media clubhouse app most used by Malayalis in India and abroad here is the numbers)

Follow Us
Srinivas Mata
Srinivas Mata
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ