AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಲಿಸುತ್ತಿರುವ ಬಸ್ ನಿಲ್ಲಿಸಲು ಯತ್ನಿಸಿದ ಸೂಪರ್​ಮ್ಯಾನ್​ಗೆ ಅಪ್ಪಳಿಸಿದ ಬಸ್!

ನೀಲಿ ಮತ್ತು ಕೆಂಪು ಬಟ್ಟೆ ಧರಿಸಿದ 35 ವರ್ಷದ ಈ ಮಿಮಿಕ್ರಿ ಕಲಾವಿದನಿಗೆ ತನ್ನ ವಿಶೇಷ ಕೌಶಲವನ್ನು ಸಾಬೀತುಪಡಿಸುವ ಹುಚ್ಚು. ಹೀಗಾಗಿ ಅವರು, ಸೂಪರ್​ಮ್ಯಾನ್​ ವೇಶ ಧರಿಸಿ ಚಲಿಸುವ ಬಸ್​ನ ನಿಲ್ಲಿಸುವ ವಿಡಿಯೋ ಮಾಡಲು ಯತ್ನಿಸಿದ್ದರು.

Viral Video: ಚಲಿಸುತ್ತಿರುವ ಬಸ್ ನಿಲ್ಲಿಸಲು ಯತ್ನಿಸಿದ ಸೂಪರ್​ಮ್ಯಾನ್​ಗೆ ಅಪ್ಪಳಿಸಿದ ಬಸ್!
ಮಿಮಿಕ್ರಿ ಕಲಾವಿದನ ಸಾಹಸ
TV9 Web
| Edited By: |

Updated on: Jun 04, 2021 | 9:12 PM

Share

ಎಲ್ಲಾ ಪ್ಲಾನ್​ ಪ್ರಕಾರವೇ ನಡೆದಿದ್ದರೆ ಈ ಮಿಮಿಕ್ರಿ ಕಲಾವಿದನ ವಿಡಿಯೋ ಲಕ್ಷಗಟ್ಟಲೆ ವ್ಯೂಸ್ ಪಡೆದು ಹಿಟ್ ಆಗುತ್ತಿತ್ತೇನೋ..ಆದರೆ ಈ ಮಿಮಿಕ್ರಿ ಸೂಪರ್​ಮ್ಯಾನ್​ನ ಯೋಜನೆ ಕೈಕೊಟ್ಟ ಕಾರಣ ಚಲಿಸುತ್ತಿರುವ ಬಸ್​ ಈತನಿಗೆ ಡಿಕ್ಕಿ ಹೊಡೆಯಿತು.

ಅರೇ! ಏನಿದು ಅಂದಿರಾ? ಹೌದು, ಬ್ರೆಜಿಲ್​ನ ಓರ್ವ ಪ್ರಸಿದ್ಧ ಮಿಮಿಕ್ರಿ ಕಲಾವಿದ ಸೂಪರ್​ಮ್ಯಾನ್​ನ ವೇಶ ಧರಿಸಿ ಚಲಿಸುತ್ತಿರುವ ಬಸ್​ನ್ನು ನಿಲ್ಲಿಸುವ ರೀತಿ ವಿಡಿಯೋ ಮಾಡಲು ಯೋಜನೆ ರೂಪಿಸಿದ್ದರು. ಆದರೆ ಅವರ ಗ್ರಹಗತಿ ಸರಿ ಇರಲಿಲ್ಲವೋ ಏನೋ, ಬಸ್​ನಿಂದ ತಮಗೆ ಇರುವ ಅಂತರ ಎಷ್ಟಿದೆ ಎಂದು ಅಂದುಕೊಂಡಿದ್ದು ತಪ್ಪೇ ಹೋಗಿತ್ತು. ಹೀಗಾಗಿ ಚಲಿಸುತ್ತಿರುವ ಬಸ್​ ಸೂಪರ್​ಮ್ಯಾನ್ ವೇಶಧಾರಿ ಮಿಮಿಕ್ರಿ ಕಲಾವಿದನಿಗೇ ಬಂದು ಅಪ್ಪಳಿಸಿತು.

ನೀಲಿ ಮತ್ತು ಕೆಂಪು ಬಟ್ಟೆ ಧರಿಸಿದ 35 ವರ್ಷದ ಈ ಮಿಮಿಕ್ರಿ ಕಲಾವಿದನಿಗೆ ತನ್ನ ವಿಶೇಷ ಕೌಶಲವನ್ನು ಸಾಬೀತುಪಡಿಸುವ ಹುಚ್ಚು. ಹೀಗಾಗಿ ಅವರು, ಸೂಪರ್​ಮ್ಯಾನ್​ ವೇಶ ಧರಿಸಿ ಚಲಿಸುವ ಬಸ್​ನ ನಿಲ್ಲಿಸುವ ವಿಡಿಯೋ ಮಾಡಲು ಯತ್ನಿಸಿದ್ದರು. ಆದರೆ ಚಲಿಸುವ ಬಸ್​ನ ಅಂತರವನ್ನು ಗುರುತಿಸಲು ಅವರ ಬಳಿ ಸಾಧ್ಯವಾಗಲಿಲ್ಲ. ಹೀಗಾಗಿ ಬಸ್​ ಅವರಿಗೆ ಅಪ್ಪಳಿಸಿತು. ಆದರೆ ಬಸ್​ನ ಬ್ರೇಕ್​ನಲ್ಲಿ ಯಾವುದೇ ದೋಷವಿರಲಿಲ್ಲ ಎಂದು ಬಸ್​ ಒಡೆತನದ ಕಂಪನಿ ತಿಳಿಸಿದೆ.

ಇದನ್ನೂ ಓದಿ:  Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ

‘ನನ್ನ ಕೋಳಿಗೆ ಮಲ ಬದ್ಧತೆ ಸಮಸ್ಯೆ’ ಚಿಕಿತ್ಸೆಗೆಂದು ಹೊರಬಂದೆ, ಲಾಕ್​ಡೌನ್​ ಉಲ್ಲಂಘಿಸಿದ್ದಕ್ಕೆ ಕಾರಣ ಹೇಳಿದ ಗದಗ ವ್ಯಕ್ತಿ; ವಿಡಿಯೋ ವೈರಲ್

(Brazil mimicry artist Superman gets hit by bus)

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ