ಭಾರತೀಯ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ BSNL ಗ್ರಾಹಕರನ್ನು ಸೆಳೆಯಲು ಅತ್ಯುತ್ತಮ ಮತ್ತು ಅಗ್ಗದ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದೀಗ ಬಿಎಸ್‌ಎನ್‌ಎಲ್ ಒಂದು ವರ್ಷದ ವಾಲಿಡಿಟಿ ಹೊಂದಿರುವ ಭರ್ಜರಿ ಪ್ಲ್ಯಾನ್ವೊಂದನ್ನು ಗ್ರಾಹಕರ ಮುಂದಿಟ್ಟಿದೆ. ಈ ಪ್ಲ್ಯಾನ್ನಲ್ಲಿ ಅನಿಯಮಿತ ಡೇಟಾ ಕೂಡ ನೀಡುತ್ತಿರುವುದು ವಿಶೇಷ. ಹಾಗಿದ್ರೆ ಬಿಎಸ್ಎನ್ಎಲ್ನ ದೀರ್ಘಾವಧಿಯ ಈ ರಿಚಾರ್ಜ್ ಪ್ಲ್ಯಾನ್ನ ವಿಶೇಷತೆಗಳೇನು ಎಂದು ತಿಳಿಯೋಣ.
BSNL ಪರಿಚಯಿಸಿರುವ ಹೊಸ ಪ್ಲ್ಯಾನ್ನ ಮೊತ್ತ 1,999 ರೂ. ಒಂದು ವರ್ಷದ ವಾಲಿಡಿಟಿ ಹೊಂದಿರುವ ಈ ಪ್ಲ್ಯಾನ್ನಲ್ಲಿ ಅನಿಯಮಿತ ಕರೆ ಸೌಲಭ್ಯ ನೀಡಲಾಗುತ್ತದೆ. ಜೊತೆಗೆ 600 GB ಡೇಟಾವನ್ನು ನೀಡಲಾಗುತ್ತದೆ. ಅಂದರೆ ಬಳಕೆದಾರರು ವರ್ಷಪೂರ್ತಿ ಈ ಡೇಟಾವನ್ನು ಬಳಸಬಹುದು. ಈ ಡೇಟಾದಲ್ಲಿ ಯಾವುದೇ ದೈನಂದಿನ ಬಳಕೆಯ ಮಿತಿಯನ್ನು ವಿಧಿಸಲಾಗಿಲ್ಲ. ಹೀಗಾಗಿ ಬಳಕೆದಾರರು 600 GB ಯನ್ನು ತಮಗಿಷ್ಟವಿದ್ದಾಗ ಬಳಸಬಹುದು. ಇದರೊಂದಿಗೆ, ಈ ಯೋಜನೆಯಲ್ಲಿ ಬಳಕೆದಾರರಿಗೆ ದಿನಕ್ಕೆ 100 SMS ಗಳನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ.
ಇದಲ್ಲದೆ BSNL ರೂ. 447 ರ ಹೊಸ ಪ್ರೀಪೇಯ್ಡ್ ಪ್ಲಾನ್ ಅನ್ನು ಕೂಡ ಬಿಡುಗಡೆ ಮಾಡಿದೆ. ಈ ಪ್ಲ್ಯಾನ್ನ ವಾಲಿಡಿಟಿ 60 ದಿನಗಳು. ಈ ಯೋಜನೆಯಲ್ಲಿ ಗ್ರಾಹಕರಿಗೆ 100 GB ಡೇಟಾ ಸಿಗಲಿದ್ದು, ದೈನಂದಿನ ಬಳಕೆಯ ಮಿತಿ ಇರುವುದಿಲ್ಲ. ಇನ್ನು ಡೇಟಾ ಮುಗಿದ ನಂತರ, ಈ ಯೋಜನೆಯಲ್ಲಿ 80Kbps ವೇಗದಲ್ಲಿ ಉಚಿತ ಡೇಟಾ ಸಿಗಲಿದೆ. ಇನ್ನು ಈ ಪ್ಲ್ಯಾನ್ ಮೂಲಕ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಮಾಡಬಹುದು.
ಇದನ್ನೂ ಓದಿ: Airtel: ಏರ್ಟೆಲ್ ಕಡೆಯಿಂದ ನಿಮಗೆ ಈ ಮೆಸೇಜ್ ಬಂದಿದ್ರೆ ನಿರ್ಲಕ್ಷಿಸಿ
ಇದನ್ನೂ ಓದಿ: Suresh Raina: ರೈನಾ ಜೊತೆ ಸಚಿನ್ ಹೆಂಡ್ತಿಯನ್ನು ವಿಚಾರಿಸಿದ ಏರ್ ಹೋಸ್ಟೆಸ್: ಆಮೇನಾಯ್ತು?
ಇದನ್ನೂ ಓದಿ: Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ