ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರ ಮುಂದುವರೆಯುತ್ತಲೇ ಇದೆ. ಒಂದು ಕಡೆ ಏರ್ಟೆಲ್ ಸಂಸ್ಥೆ ನಂಬರ್ ಒನ್ ಸ್ಥಾನದಲ್ಲಿರುವ ಜಿಯೋ ಮೇಲೆ ಕಣ್ಣಿಟ್ಟದ್ದರೆ, ಇತ್ತ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಹೊಸ ಹೊಸ ಆಫರ್ಗಳನ್ನ ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಸದ್ಯ ಬಿಎಸ್‌ಎನ್‌ಎಲ್ ಮತ್ತೊಂದು ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು ಅನಿಯಮಿತ ಕರೆ, ಅನಿಯಮಿತ ಡೇಟಾ ಸೇರಿದಂತೆ ಭರ್ಜರಿ ಆಫರ್ಗಳಿಂದ ಕೂಡಿದೆ.
ಬಿಎಸ್‌ಎನ್‌ಎಲ್ ಪರಿಚಯಿಸಿರುವ ಹೊಸ ಪ್ರಿಪೇಯ್ಡ್ ಪ್ಲಾನ್ನ ಬೆಲೆ 398 ರೂ. ಆಗಿದೆ. ಇದು 30 ದಿನಗಳ ಮಾನ್ಯತೆ ಪಡೆದಿದ್ದು, ಅನ್‌ಲಿಮಿಟೆಡ್ ಡೇಟಾ ಪ್ರಯೋಜನ, ಅನಿಯಮಿತ ಕರೆಯ ಆಫರ್ ನೀಡುವ ಮೂಲಕ ಇತರೆ ಕಂಪೆನಿಗಳಿಗೆ ಶಾಕ್ ನೀಡಿದೆ.
ಇನ್ನೂ ಮುಂಬೈ ಮತ್ತು ದೆಹಲಿಯ ಎಂಟಿಎನ್ಎಲ್ ಪ್ರದೇಶಗಳು ಸೇರಿದಂತೆ ದಿನಕ್ಕೆ 100 ಎಸ್‌ಎಂಎಸ್‌ನೊಂದಿಗೆ ದೆಹಲಿ ಮತ್ತು ಮುಂಬೈನ ಎಂಟಿಎನ್‌ಎಲ್ ನೆಟ್‌ವರ್ಕ್‌ನಲ್ಲಿ ಅನಿಯಮಿತ ದೇಶೀಯ ಧ್ವನಿ ಕರೆಗಳು ಮತ್ತು ರಾಷ್ಟ್ರೀಯ ರೋಮಿಂಗ್ ಜೊತೆಗೆ ಯಾವುದೇ ವೇಗದ ನಿರ್ಬಂಧವಿಲ್ಲದೆ ಅನಿಯಮಿತ ಡೇಟಾವನ್ನು ಈ ಪ್ಲಾನ್ನಲ್ಲಿ ಪಡೆಯಬಹುದು.
ಬಿಎಸ್‌ಎನ್‌ಎಲ್ ಈ ಪ್ಲಾನ್ ಬಿಡುಗಡೆ ಮಾಡಿದ ಬೆನ್ನಲ್ಲೆ ಇತ್ತ ಖಾಸಗಿ ಟೆಲಿಕಾಂಗಳು ಕೂಡ ಹೊಸ ಹೊಸ ಯೋಜನೆಗಳನ್ನು 30 ದಿನಗಳು ಮತ್ತು 60 ದಿನಗಳ ಮಾನ್ಯತೆಯೊಂದಿಗೆ ಬಿಡುಗಡೆ ಮಾಡಿ ಪರೀಕ್ಷಿಸಿಲು ಮುಂದಾಗಿದೆ.
ಇತ್ತೀಚಿಗಷ್ಟೆ ರಿಲಯನ್ಸ್ ಜಿಯೋ ವಿಶೇಷವಾಗಿ ಐದು ದೈನಂದಿನ ಡೇಟಾ ಮಿತಿ ಯೋಜನೆಗಳನ್ನು ಬಿಡುಗಡೆ ಮಾಡಿತ್ತು. ಅವುಗಳಲ್ಲಿ ಒಂದು 247 ರೂ. ಬೆಲೆಯ ಪ್ಲಾನ್ ಆಗಿದೆ. ಇದು 30 ದಿನಗಳ ವ್ಯಾಲಿಡಿಟಿ ಹೊಂದಿದ್ದು, 25GB ಡೇಟಾ ಪ್ರಯೋಜನ ಪಡೆಯಬಹುದು. ಜೊತೆಗೆ ಅನಿಯಮಿತ ಕರೆಗಳು ಮತ್ತು ಜಿಯೋ ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ.
ಇನ್ನೂ ಏರ್ಟೆಲ್ನ 299 ರೂ.ಗಳ ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳನ್ನು 30 ದಿನಗಳಿಗೆ ಹೆಚ್ಚಿಸಲಾಗಿದೆ. 30 ದಿನಗಳವರೆಗೆ ಅನಿಯಮಿತ ಕರೆಗಳೊಂದಿಗೆ 30GB ಡೇಟಾವನ್ನು ಮತ್ತು ದಿನಕ್ಕೆ 100 ಉಚಿತ ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳಲ್ಲಿ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ಉಚಿತ ಹಲೋ ಟ್ಯೂನ್‌ಗಳು, ವಿಂಕ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.
Mi Anniversary Sale 2021: ಅತಿ ಕಡಿಮೆಗೆ ಸಿಗುತ್ತಿದೆ ದುಬಾರಿ ಬೆಲೆಯ ರೆಡ್ಮಿ, ಎಂಐ ಸ್ಮಾರ್ಟ್ಫೋನ್
ರಿಲೀಸ್ಗೂ ಮುನ್ನ ರೋಚಕತೆ ಸೃಷ್ಟಿಸಿದ Nokia C30 ಸ್ಮಾರ್ಟ್ಫೋನ್: ಪ್ರಮುಖ ಮಾಹಿತಿ ಸೋರಿಕೆ
(BSNL introduced best prepaid plan Rs 398 gives unlimited data and calls)
Published On - 5:31 pm, Mon, 12 July 21