ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗೂ ಸೈ ಮಿಡ್ ರೇಂಜ್ ಮೊಬೈಲ್ಗೂ ರೆಡಿ ಎಂಬಂತೆ ಆಕರ್ಷಕ ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ವಿಶೇಷ ಸ್ಥಾನ ಸಂಪಾದಿಸಿರುವ ಒಪ್ಪೋ (Oppo) ಸಂಸ್ಥೆಗೆ A ಸರಣಿಯ ಫೋನ್‌ಗಳು ಹೆಚ್ಚಿನ ಹೆಸರು ತಂದುಕೊಟ್ಟಿದೆ. ಈಗ ಇದೇ ಸರಣಿಯಲ್ಲಿ ಒಪ್ಪೋ ಎ 16ಕೆ (Oppo A16K) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಮೀಡಿಯಾ ಟೆಕ್ ಹೆಲಿಯೊ ಪ್ರೊಸೆಸರ್, ಬಲಿಷ್ಠ ಬ್ಯಾಟರಿ ಬಲವನ್ನು ಪಡೆದುಕೊಂಡಿರುವ ಈ ಸ್ಮಾರ್ಟ್‌ಫೋನ್ (Smartphone) ಮುಂದಿನ ತಿಂಗಳು ಭಾರತದಲ್ಲಿ ಲಾಂಚ್ ಆಗಲಿದೆ. ಇದರ ಬೆಲೆ ಅತಿ ಕಡಿಮೆ ಆಗಿರಲಿದೆ ಎನ್ನಲಾಗಿದೆ.
ಒಪ್ಪೋ A 16K ಸ್ಮಾರ್ಟ್‌ಫೋನ್ 1,600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52 ಇಂಚಿನ HD+ ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಡಿಸ್‌ಪ್ಲೇ IPS LCD ಡಿಸ್‌ಪ್ಲೇ ಆಗಿದ್ದು, 60Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇದು 269 ಪಿಕ್ಸೆಲ್ ಸಾಂದ್ರೆತಯನ್ನು ಒಳಗೊಂಡಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ ColorOS 11.1 ಲೈಟ್ ಜೊತೆಗೆ ಕಾರ್ಯನಿರ್ವಹಿಸುತ್ತದೆ.
13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಅಲ್ಲದೆ ಇದು 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 4,230mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಇದು 5V/ 2A ಚಾರ್ಜಿಂಗ್‌ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ v5, 3.5mm ಹೆಡ್‌ಫೋನ್ ಜ್ಯಾಕ್, GPS ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಈ ಸ್ಮಾರ್ಟ್‌ಫೋನ್ ಬೆಲೆ 16 ಸಾವಿರ ರೂ. ಒಳಗೆ ಇರಲಿದೆ ಎಂದು ವರದಿಯಾಗಿದೆ.
ಕೆಲ ತಿಂಗಳುಗಳ ಹಿಂದೆಯಷ್ಟೆ ಒಪ್ಪೋ ಕಂಪನಿ ಭಾರತದಲ್ಲಿ ತನ್ನ ಒಪ್ಪೋ A16 ಫೋನ್ ಬಿಡುಗಡೆ ಮಾಡಿತ್ತು. ಇದು ಭರ್ಜರಿ ಯಶಸ್ಸು ಕಂಡಿತು. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G35SoC ಪ್ರೊಸೆಸರ್, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿತ್ತು.
Tecno Spark Go 2022: ಹೊಸ ವರ್ಷಕ್ಕೆ ಹೊಸ ಫೋನ್: ಕೇವಲ ರೂ 7,499ಕ್ಕೆ ಬಿಡುಗಡೆ ಆಗಿದೆ ಈ ಬೊಂಬಾಟ್ ಸ್ಮಾರ್ಟ್‌ಫೋನ್
Reliance Jio: ಜಿಯೋದಿಂದ ಬಿಗ್ ಶಾಕ್: ಗ್ರಾಹಕರ ನೆಚ್ಚಿನ ಪ್ಲಾನ್ನನ್ನೇ ಸ್ಥಗಿತಗೊಳಿಸಿದ ಕಂಪನಿ
(Cheapest phone Oppo A16K Launch Date In India Tipped Expected Price Specifications All You Need To Know)