AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್ ಫೋನ್ ಬಳಕೆದಾರರಿಗೆ ಎಚ್ಚರಿಕೆ: ಏಪ್ರಿಲ್ 15 ರಿಂದ ಈ ಸೇವೆ ಸ್ಥಗಿತ

Department of Telecommunications: ಏಪ್ರಿಲ್ 15 ರಿಂದ USSD ಆಧಾರಿತ ಕರೆ ಫಾರ್ವರ್ಡ್ ಮಾಡುವುದನ್ನು ನಿಲ್ಲಿಸುವಂತೆ ದೂರಸಂಪರ್ಕ ಇಲಾಖೆ (DoT) ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಮುಂದಿನ ಆದೇಶದವರೆಗೆ ಇದನ್ನು ಸ್ಥಗಿತಗೊಳಿಸಲಾಗುತ್ತಿದೆ. ಆದಾಗ್ಯೂ, ಕರೆ ಫಾರ್ವರ್ಡ್ ಮಾಡಲು ಗ್ರಾಹಕರಿಗೆ ಪರ್ಯಾಯ ಆಯ್ಕೆಗಳನ್ನು ಮಾಡಬಹುದು.

ಮೊಬೈಲ್ ಫೋನ್ ಬಳಕೆದಾರರಿಗೆ ಎಚ್ಚರಿಕೆ: ಏಪ್ರಿಲ್ 15 ರಿಂದ ಈ ಸೇವೆ ಸ್ಥಗಿತ
Smartphone
Vinay Bhat
|

Updated on: Mar 31, 2024 | 12:13 PM

Share

ನೀವು 2G, 3G, 4G, 5G ಅಥವಾ ಯಾವುದೇ ಫೋನ್ ಬಳಸುತ್ತಿದ್ದರೆ, ಏಪ್ರಿಲ್ 15 ರಿಂದ ಈ ದೊಡ್ಡ ಸೇವೆ ಸ್ಥಗಿತಗೊಳ್ಳಲಿದೆ. ಮುಂದಿನ ಆದೇಶದವರೆಗೆ ಈ ಸೇವೆಯನ್ನು ನಿಲ್ಲಿಸುವಂತೆ ಟೆಲಿಕಾಂ (Telecom) ಇಲಾಖೆಯು ಟೆಲಿಕಾಂ ಕಂಪನಿಗಳಿಗೆ ತಿಳಿಸಿದೆ. ನೀವು ಫೋನ್‌ನಲ್ಲಿ *121# ಅಥವಾ *#99# ನಂತಹ USSD ಸೇವೆಗಳನ್ನು ಬಳಸುತ್ತಿದ್ದರೆ ಮುಂದಿನ ಆದೇಶದವರೆಗೆ ಈ ಸೇವೆಯನ್ನು ಟೆಲಿಕಾಂ ಇಲಾಖೆ ನಿಷೇಧಿಸುತ್ತಿದೆ. ಏಪ್ರಿಲ್ 15 ರಿಂದ USSD ಆಧಾರಿತ ಕರೆ ಫಾರ್ವರ್ಡ್ ಮಾಡುವುದನ್ನು ನಿಲ್ಲಿಸುವಂತೆ ದೂರಸಂಪರ್ಕ ಇಲಾಖೆ (DoT) ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಮುಂದಿನ ಆದೇಶದವರೆಗೆ ಇದನ್ನು ಸ್ಥಗಿತಗೊಳಿಸಲಾಗುತ್ತಿದೆ.

ಆದಾಗ್ಯೂ, ಕರೆ ಫಾರ್ವರ್ಡ್ ಮಾಡಲು ಗ್ರಾಹಕರಿಗೆ ಪರ್ಯಾಯ ಆಯ್ಕೆಗಳನ್ನು ಮಾಡಬಹುದು. ಮೊಬೈಲ್ ಗ್ರಾಹಕರು ತಮ್ಮ ಫೋನ್ ಡಿಸ್​ಪ್ಲೇಯಲ್ಲಿ ಯಾವುದೇ ಸಕ್ರಿಯಗೊಳಿಸುವ ಕೋಡ್ ಅನ್ನು ಡಯಲ್ ಮಾಡುವ ಮೂಲಕ USSD ಸೇವೆಯನ್ನು ಬಳಸುತ್ತಾರೆ. ಮೊಬೈಲ್ ಫೋನ್‌ನಲ್ಲಿ IMEI ಸಂಖ್ಯೆ, ಉಳಿದ ಬ್ಯಾಲೆನ್ಸ್ ಇತ್ಯಾದಿ ಮಾಹಿತಿಯನ್ನು ಹುಡುಕಲು ಈ ಸೇವೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

ನಿಮ್ಮ ಸ್ಮಾರ್ಟ್​ಫೋನ್​ಗೆ ಅಪ್ಡೇಟ್ ಬಂದಿದ್ದರೆ ಕೂಡಲೇ ಕೊಟ್ಟುಬಿಡಿ: ಇಲ್ಲದಿದ್ರೆ…

ಮೊಬೈಲ್ ಫೋನ್‌ಗಳ ಮೂಲಕ ವಂಚನೆ ಮತ್ತು ಆನ್‌ಲೈನ್ ಅಪರಾಧಗಳನ್ನು ತಡೆಯಲು DOT ಈ ಆದೇಶಗಳನ್ನು ಹೊರಡಿಸಿದೆ. ದೂರಸಂಪರ್ಕ ಇಲಾಖೆಯು ಮಾರ್ಚ್ 28 ರ ಆದೇಶದಲ್ಲಿ, ಕೆಲವು ಅನುಚಿತ ಉದ್ದೇಶಗಳಿಗಾಗಿ ಅನ್ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸೇವೆಯ ಡೇಟಾ ಆಧಾರಿತ ಕರೆ ಫಾರ್ವರ್ಡ್ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿರುವುದು ಗಮನಕ್ಕೆ ಬಂದಿದೆ.

ಆದ್ದರಿಂದ, 15ನೇ ಏಪ್ರಿಲ್ 2024 ರಿಂದ ಮುಂದಿನ ಸೂಚನೆಯವರೆಗೆ ಎಲ್ಲಾ USSD ಆಧಾರಿತ ಕರೆ ಫಾರ್ವರ್ಡ್ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. USSD ಆಧಾರಿತ ಕರೆ ಫಾರ್ವರ್ಡ್ ಮಾಡುವಿಕೆಯನ್ನು ಸಕ್ರಿಯಗೊಳಿಸಿರುವ ಎಲ್ಲಾ ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಪರ್ಯಾಯ ವಿಧಾನಗಳ ಮೂಲಕ ಕರೆ ಫಾರ್ವರ್ಡ್ ಮಾಡುವ ಸೇವೆಯನ್ನು ಪುನಃ ಸಕ್ರಿಯಗೊಳಿಸಲು ಕೇಳಲಾಗುತ್ತದೆ ಎಂದು ಆದೇಶದನ್ನು ಬರೆಯಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ