AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake Calls: ಟೆಲಿಕಾಂ ಕಂಪನಿಗಳಿಗೆ ಬಿಗ್ ಶಾಕ್ ನೀಡಿದ ಟ್ರಾಯ್: ಬರೋಬ್ಬರಿ 110 ಕೋಟಿ ರೂ. ದಂಡ

Spam Calls: ನಕಲಿ ಕರೆಗಳಿಗೆ ಕಡಿವಾಣ ಹಾಕದ ಟೆಲಿಕಾಂ ಕಂಪನಿಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇದುವರೆಗೆ 110 ಕೋಟಿ ರೂಪಾಯಿ ದಂಡ ವಿಧಿಸಿದೆ. ಹೀಗಿದ್ದರೂ ಜನರು ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ಪಡೆಯುತ್ತಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಮಾರ್ಕೆಟಿಂಗ್ ಕರೆಗಳಾಗಿವೆ. ಇವುಗಳನ್ನು ತಡೆಯಲು ಟ್ರಾಯ್ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

Fake Calls: ಟೆಲಿಕಾಂ ಕಂಪನಿಗಳಿಗೆ ಬಿಗ್ ಶಾಕ್ ನೀಡಿದ ಟ್ರಾಯ್: ಬರೋಬ್ಬರಿ 110 ಕೋಟಿ ರೂ. ದಂಡ
Spam Call and TRAI
Vinay Bhat
|

Updated on: Feb 08, 2024 | 11:16 AM

Share

ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ದೊಡ್ಡ ಟೆಲಿಕಾಂ ಕಂಪನಿಗಳಿಗೆ ಶಾಕ್ ನೀಡಿದೆ. ದೇಶಾದ್ಯಂತ ಫೋನ್ ಬಳಕೆದಾರರು ನಕಲಿ ಕರೆಗಳಿಂದ ಬೇಸತ್ತಿದ್ದಾರೆ. ಇಂತಹ ಕರೆಗಳನ್ನು ನಿಲ್ಲಿಸುವಂತೆ ಟ್ರಾಯ್ ಹಲವಾರು ಬಾರಿ ಟೆಲಿಕಾಂ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದರೂ ಪ್ರಸಿದ್ಧ ಕಂಪನಿಗಳು ಈ ಸೂಚನೆಯನ್ನು ಪಾಲಿಸಲು ವಿಫಲವಾಗಿವೆ. ಇದೀಗ ಈ ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಇದುವರೆಗೆ 110 ಕೋಟಿ ರೂ. ದಂಡ ವಿಧಿಸಿದೆ. ಹೀಗಿದ್ದರೂ ಅಪರಿಚಿತ ಸಂಖ್ಯೆಗಳಿಂದ ಬರುವ ನಕಲಿ ಕರೆಗಳು ಭಾರತದಲ್ಲಿ ನಿಂತಿಲ್ಲ ಎಂಬುದು ದುರಾದೃಷ್ಟಕರ.

ಫೇಕ್ ಕಾಲ್​ಗಳನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಟ್ರಾಯ್ ಪದೇ ಪದೇ ಟೆಲಿಕಾಂ ಕಂಪನಿಗಳಿಗೆ ಕೇಳಿಕೊಂಡಿದೆ. ಕೆಲವು ಮಾರ್ಕೆಟಿಂಗ್ ಸಂಸ್ಥೆಗಳು ಟೆಲಿಮಾರ್ಕೆಟಿಂಗ್ ಸಂಖ್ಯೆಗಳ ಬದಲಿಗೆ ಸಾಮಾನ್ಯ ಫೋನ್ ಸಂಖ್ಯೆಗಳ ಮೂಲಕ ಸಂಪರ್ಕಿಸುತ್ತವೆ. ಇದು ಪರಿಚಯಸ್ಥರ ಕರೆ ಎಂದು ಜನರು ಭಾವಿಸುತ್ತಾರೆ, ಆದರೆ ಇವು ನಕಲಿ ಟೆಲಿಮಾರ್ಕೆಟಿಂಗ್ ಸಂಖ್ಯೆಗಳು. ಪ್ರಸ್ತುತ, ಟೆಲಿಕಾಂ ಆಪರೇಟರ್‌ಗಳು ಅಂತಹ ಕರೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ವಿಫಲರಾಗಿದ್ದಾರೆ.

ಭಾರತದಲ್ಲಿ ಮೊದಲ ಸೇಲ್ ಕಾಣುತ್ತಿದೆ ಒನ್​ಪ್ಲಸ್ 12R: ಬೆಲೆ ಎಷ್ಟು?, ಏನಿದೆ ಆಫರ್?

ಇದನ್ನೂ ಓದಿ
Image
18GB ಡೇಟಾ ಫ್ರೀ, 14 OTT ಪ್ರವೇಶ: ಇದು ಜಿಯೋದ ಟ್ರೆಂಡಿಂಗ್ ಪ್ಲಾನ್
Image
ಭಾರತದಲ್ಲಿ ಮೊದಲ ಸೇಲ್ ಕಾಣುತ್ತಿದೆ ರಿಯಲ್ ಮಿ 12 ಪ್ರೊ ಸ್ಮಾರ್ಟ್​ಫೋನ್
Image
ಜಿಯೋ ಇದ್ರೆ ಕಾಲ್ ಹಿಸ್ಟರಿ ನೋಡೋದು ಈಸಿ!
Image
ನಕಲಿ ಚಿನ್ನ ಚೆಕ್ ಮಾಡೋದು ಹೇಗೆ ಗೊತ್ತಾ?

110 ಕೋಟಿ ರೂ. ದಂಡ:

ನಕಲಿ ಕರೆಗಳನ್ನು ನಿಲ್ಲಿಸಲು ವಿಫಲವಾಗಿರುವ ಟೆಲಿಕಾಂ ಕಂಪನಿಗಳ ಮೇಲೆ ಇಲ್ಲಿಯವರೆಗೆ 110 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ನಂಬರ್ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಮಾತ್ರವಲ್ಲದೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ (Vi) ಸೇರಿದಂತೆ ದೇಶದಲ್ಲಿ ಮೂರು ದೊಡ್ಡ ಟೆಲಿಕಾಂ ಕಂಪನಿಗಳ ಮೇಲೆ ದಂಡ ಹಾಕಲಾಗಿದೆ. ಇದಲ್ಲದೇ ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕೂಡ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿದ್ದು, ಸ್ಲ್ಯಾಮ್ ಕಾಲ್ ಬರುತ್ತಿದೆ. ಸದ್ಯ ಯಾವ ಟೆಲಿಕಾಂ ಕಂಪನಿಗೆ ಎಷ್ಟು ದಂಡ ವಿಧಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ಅನಗತ್ಯ ಕರೆಗಳ ಮೇಲೆ ಕ್ರಮ

ಈಗಾಗಲೇ ಅನಗತ್ಯ ಕರೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಟ್ರಾಯ್ 74,000 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳ ಸಂಪರ್ಕವನ್ನು ಕಡಿತಗೊಳಿಸಿದೆ. ಹೀಗಿದ್ದರೂ, ಅನಗತ್ಯ ಕರೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿದಿನ ಸರಾಸರಿ 20 ಲಕ್ಷಕ್ಕೂ ಹೆಚ್ಚು ಅನಗತ್ಯ ಕರೆಗಳನ್ನು ಜನರು ಸ್ವೀಕರಿಸುತ್ತಾರಂತೆ.

ಆ್ಯಪಲ್​ಗೆ ಬಿಗ್ ಶಾಕ್: 2024 ರ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಆ್ಯಪಲ್ ಹಿಂದಿಕ್ಕಿದ ಹುವೈ

ಟ್ರಾಯ್ ಅಪ್ಲಿಕೇಶನ್‌ನಲ್ಲಿ ದೂರು ನೀಡಿ

ಟ್ರಾಯ್ 11 ಲಕ್ಷಕ್ಕೂ ಹೆಚ್ಚು ಟೆಲಿಮಾರ್ಕೆಟರ್‌ಗಳಿಗೆ ನೋಟಿಸ್ ಕಳುಹಿಸಿದೆ. ಅದೇ ಸಮಯದಲ್ಲಿ, 2 ಲಕ್ಷ ಸಂಖ್ಯೆಗಳಲ್ಲಿ ಹೊರಹೋಗುವ ಸೇವೆಯನ್ನು 6 ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಸ್ಪ್ಯಾಮ್ ಕರೆಗಳನ್ನು ನಿಲ್ಲಿಸಲು ಕೃತಕ ಬುದ್ಧಿಮತ್ತೆ (AI) ಸಹಾಯವನ್ನು ಕೂಡ ಬಳಸಲಾಗುತ್ತಿದೆ. AI ಮೂಲಕ 30 ಲಕ್ಷ SMS ಹೆಡರ್‌ಗಳನ್ನು ಮತ್ತು ಸುಮಾರು 2 ಲಕ್ಷ SMS ಟೆಂಪ್ಲೇಟ್‌ಗಳನ್ನು ತೆಗೆದುಹಾಕಲಾಗಿದೆ. ನೀವು ಸಹ ನಕಲಿ ಮತ್ತು ಅನಗತ್ಯ ಕರೆಗಳಿಂದ ತೊಂದರೆಗೊಳಗಾಗಿದ್ದರೆ, ಟ್ರಾಯ್​ನ ಅಪ್ಲಿಕೇಶನ್ TRAI DND 3.0 ನಲ್ಲಿ ದೂರು ನೀಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ