AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಪಲ್​ಗೆ ಬಿಗ್ ಶಾಕ್: 2024 ರ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಆ್ಯಪಲ್ ಹಿಂದಿಕ್ಕಿದ ಹುವೈ

Number One Smartphone Company: ಚೀನಾದಲ್ಲಿ ಆ್ಯಪಲ್ ಅನ್ನು ಹಿಂದಿಕ್ಕುವುದು ಅಷ್ಟೊಂದು ಸುಲಭವಲ್ಲ. ಆದರೆ 2019 ರ ಯುಎಸ್ ನಿಷೇಧದ ನಂತರ ಇದೇ ಮೊದಲ ಬಾರಿಗೆ ಚೀನಾದಲ್ಲಿ ಸ್ಮಾರ್ಟ್‌ಫೋನ್ ಮಾರಾಟದ ವಿಷಯದಲ್ಲಿ ಹುವೈ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಆ್ಯಪಲ್​ಗೆ ಬಿಗ್ ಶಾಕ್: 2024 ರ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಆ್ಯಪಲ್ ಹಿಂದಿಕ್ಕಿದ ಹುವೈ
Apple and huawei
Vinay Bhat
|

Updated on: Feb 06, 2024 | 12:40 PM

Share

ಹುವೈ (Huawei) 2023 ರಲ್ಲಿ ಚೀನಾದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಇತ್ತೀಚಿನ IDC ವರದಿಯು 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಹುವೈನ ಸಾಗಣೆಗಳು ಶೇಕಡಾ 36.2 ರಷ್ಟು ಹೆಚ್ಚಿದೆ ಎಂದು ಹೇಳಿತ್ತು. ಇದು ಚೀನಾದಲ್ಲಿ ನಾಲ್ಕನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿದೆ. ಈಗ ಕೌಂಟರ್‌ಪಾಯಿಂಟ್ ರಿಸರ್ಚ್‌ನ ಹೊಸ ವರದಿಯು 2024 ರ ಮೊದಲ ಎರಡು ವಾರಗಳಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಹುವೈ ಅಗ್ರಸ್ಥಾನವನ್ನು ಪಡೆದುಕೊಂಡಿದೆ ಎಂದು ಬಹಿರಂಗಪಡಿಸಿದೆ.

ಇದು ದೊಡ್ಡ ಬೆಳವಣಿಗೆಯಾಗಿದೆ, ಏಕೆಂದರೆ ಚೀನಾದಲ್ಲಿ ಆ್ಯಪಲ್ ಅನ್ನು ಹಿಂದಿಕ್ಕುವುದು ಅಷ್ಟೊಂದು ಸುಲಭವಲ್ಲ. ಆದರೆ 2019 ರ ಯುಎಸ್ ನಿಷೇಧದ ನಂತರ ಇದೇ ಮೊದಲ ಬಾರಿಗೆ ಚೀನಾದಲ್ಲಿ ಸ್ಮಾರ್ಟ್‌ಫೋನ್ ಮಾರಾಟದ ವಿಷಯದಲ್ಲಿ ಹುವೈ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಚೀನೀ ಮಾರುಕಟ್ಟೆಯಲ್ಲಿ ಹುವೈ Mate 60 ಸರಣಿಯು ದಾಖಲೆ ಮಟ್ಟದಲ್ಲಿ ಸೇಲ್ ಆಗುತ್ತಿರುವುದು ಇದಕ್ಕೆ ಕಾರಣವಂತೆ.

Deepfake Scam: ಡೀಪ್​ಫೇಕ್ ಆಟ; ನಕಲಿ ಸಿಎಫ್​ಒ ಸೂಚನೆ ಕೇಳಿ 200 ಕೋಟಿ ರೂ ಕಳೆದುಕೊಂಡ ಉದ್ಯೋಗಿಗಳು

ಇದನ್ನೂ ಓದಿ
Image
ನಿಮ್ಮ ಆಂಡ್ರಾಯ್ಡ್ ಫೋನ್ ಸಂಪೂರ್ಣ ಐಫೋನ್ ಆಗುತ್ತದೆ: ಇಲ್ಲಿದೆ ನೋಡಿ ಟ್ರಿಕ್
Image
ಹಳೆಯ ಫೋನ್ ಮಾರಾಟ ಮಾಡಲು ಹಲವು ಆಯ್ಕೆ
Image
ಬರುತ್ತಿದೆ ವ್ಯಾಲೆಂಟೈನ್ಸ್ ಡೇ: ನಿಮ್ಮ ಸಂಗಾತಿಗೆ ಈ ಫೋನ್ ಗಿಫ್ಟ್ ನೀಡಿ
Image
ವಾಟ್ಸ್​ಆ್ಯಪ್ ಮೆಸೇಜ್ ಡಿಲೀಟ್ ಆದ್ರೂ ನೋಡಬಹುದು!

ಕಳೆದ ವರ್ಷ ಬಿಡುಗಡೆಯಾದ ಹುವೈ Mate 60 ಸರಣಿಯ ಸ್ಮಾರ್ಟ್‌ಫೋನ್‌ಗಳು ಕಿರಿನ್ 9000 ಎಸ್ ಪ್ರೊಸೆಸರ್ ಮತ್ತು ಹಾರ್ಮನಿ ಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿವೆ. ಈ ಫೋನುಗಳು ಈಗಲೂ ಹೆಚ್ಚಿನ ಬೇಡಿಕೆಯಲ್ಲಿದೆ. ಇದರ ನಡುವೆ ಕಂಪನಿಯು ಹಾರ್ಮನಿ ಓಎಸ್ ನೆಕ್ಸ್ಟ್ ಅನ್ನು ಪ್ರಾರಂಭಿಸಲು ಯೋಜಿಸಿದೆ. ಆಂಡ್ರಾಯ್ಡ್ ಅಪ್ಲಿಕೇಶನ್ ಬೆಂಬಲವನ್ನು ಸಂಪೂರ್ಣವಾಗಿ ತೆಗೆದುಹಾಕುವ ಹುವೈನ ಸ್ವಂತ ಕರ್ನಲ್ ಹೊಂದಿರುವ ಆಪರೇಟಿಂಗ್ ಸಿಸ್ಟಮ್ ಇದಾಗಿದೆ. ಇದು 2024 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಹುವೈ Mate 60 ಹೊರತಾಗಿ, ಡಿಸೆಂಬರ್‌ನಲ್ಲಿ ಬಿಡುಗಡೆಯಾದ ನೋವಾ 12 ಸರಣಿಯು ಹುವೈ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡಿದೆ. ಇವೆಲ್ಲವೂ ಕಿರಿನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಾಗಿವೆ. ಆದಾಗ್ಯೂ, ನೋವಾ 12 ಲೈಟ್ ಸ್ನಾಪ್‌ಡ್ರಾಗನ್ 778G 4G ಚಿಪ್ ಅನ್ನು ಹೊಂದಿದೆ.

ಕೌಂಟರ್‌ಪಾಯಿಂಟ್‌ನ ವರದಿಯ ಪ್ರಕಾರ, ಚೀನಾದಲ್ಲಿ ಉನ್ನತ-ಮಟ್ಟದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 2024 ರಲ್ಲಿ 27 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ. ಆ್ಯಪಲ್ ಅಗ್ರ ಸ್ಥಾನದಲ್ಲಿ ಉಳಿದಿದ್ದರೂ, ಹುವೈ ಮತ್ತು ಇತರ ಚೀನೀ ಬ್ರ್ಯಾಂಡ್‌ಗಳು 2023 ರ ಮೂರನೇ ತ್ರೈಮಾಸಿಕದಿಂದ ಆ್ಯಪಲ್‌ನ ಮಾರುಕಟ್ಟೆ ಪಾಲನ್ನು ಕ್ರಮೇಣ ಕಡಿಮೆ ಮಾಡುತ್ತಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ