Deepfake Scam: ಡೀಪ್​ಫೇಕ್ ಆಟ; ನಕಲಿ ಸಿಎಫ್​ಒ ಸೂಚನೆ ಕೇಳಿ 200 ಕೋಟಿ ರೂ ಕಳೆದುಕೊಂಡ ಉದ್ಯೋಗಿಗಳು

Hongkong Company Loses Rs 200 Crore For Deepfake Call: ದೃಶ್ಯಗಳಲ್ಲಿ ವ್ಯಕ್ತಿಯ ಚಹರೆಗಳನ್ನು ಬದಲಿಸಬಲ್ಲ ಡೀಪ್​ಫೇಕ್ ಟೆಕ್ನಾಲಜಿ ವಿಶ್ವಾದ್ಯಂತ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಹಾಂಕಾಂಗ್​ನ ಕಂಪನಿಯೊಂದರ ಸಿಎಫ್​ಒ ಅವರನ್ನೇ ಡೀಪ್​ಫೇಕ್ ಮಾಡಿ ನೈಜ ಉದ್ಯೋಗಿಗಳಿಂದ 200 ಕೋಟಿ ರೂ ವರ್ಗಾವಣೆ ಮಾಡಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಕಾಲ್​ನಲ್ಲಿ ನಕಲಿ ಸಿಎಫ್​ಒ ಅವರ ಸೂಚನೆಯಂತೆ ಉದ್ಯೋಗಿಗಳು ಹಣ ವರ್ಗಾವಣೆ ಮಾಡಿದ್ದರು.

Deepfake Scam: ಡೀಪ್​ಫೇಕ್ ಆಟ; ನಕಲಿ ಸಿಎಫ್​ಒ ಸೂಚನೆ ಕೇಳಿ 200 ಕೋಟಿ ರೂ ಕಳೆದುಕೊಂಡ ಉದ್ಯೋಗಿಗಳು
ಡೀಪ್​ಫೇಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 05, 2024 | 5:17 PM

ನವದೆಹಲಿ, ಫೆಬ್ರುವರಿ 5: ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಗಾದೆ ಮಾತನ್ನು ಈಗ ಅಕ್ಷರಶಃ ಪಾಲಿಸಬೇಕಾದ ಸಂದರ್ಭ ಬಂದಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ (AI Technology) ಬಂದ ಮೇಲೆ ಹೊಸ ಬೆಳಕಿನ ಹೊಸ ಜಗತ್ತು ಸೃಷ್ಟಿಯಾಗುತ್ತಿದೆ. ಹಾಗೆಯೇ, ಕತ್ತಲೆ ಪ್ರಪಂಚವೂ ಸೃಷ್ಟಿಯಾಗುತ್ತಿದೆ. ಅಸಲಿಗೆ ತಲೆಗೆ ಹೊಡೆದಂತೆ ನಕಲಿ ಸೃಷ್ಟಿಯಾಗುತ್ತದೆ. ಎಐ ಟೆಕ್ನಾಲಜಿಯ ಸೈಡ್ ಎಫೆಕ್ಟ್​ಗಳಲ್ಲಿ ಡೀಪ್​ಫೇಕ್ (Deepfake) ಒಂದು. ಡೀಪ್​ಫೇಕ್ ಈಗಾಗಲೇ ಸೃಷ್ಟಿಸಿರುವ ಅವಾಂತರಗಳು ಗಾಬರಿ ಹುಟ್ಟಿಸುವಂತಿವೆ. ರಶ್ಮಿಕಾ ಮಂದಣ್ಣರ ಡೀಪ್​ಫೇಕ್ ವಿಡಿಯೋ ಅದೆಷ್ಟು ಸಂಚಲನ ಸೃಷ್ಟಿಸಿತ್ತು ನೋಡಿ. ಇದೀಗ ಹಾಂಕಾಂಗ್​ನ ಕಂಪನಿಯೊಂದು ಡೀಪ್​ಫೇಕ್ ವಂಚನೆಗೆ ಒಳಗಾಗಿ 200ಕ್ಕೂ ಕೋಟಿ ರೂ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಸೌತ್ ಚೀನಾ ಮಾರ್ನಿಂಗ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ, ವಂಚಕರು ಕಂಪನಿಯೊಂದರ ಉದ್ಯೋಗಿಗಳ ಕಾನ್​ಫರೆನ್ಸ್ ಕಾಲ್ ಸೃಷ್ಟಿಸಿದ್ದಾರೆ. ಅದರಲ್ಲಿ ಕಂಪನಿಯ ಸಿಎಫ್​ಒ ಅವರ ರೀತಿಯಲ್ಲೇ ಇರುವ ಅವತಾರ್ ಅನ್ನು ಸೃಷ್ಟಿಸಿ ಕಾನ್ಫರೆನ್ಸ್ ಕಾಲ್​ನಲ್ಲಿ ಅವರಂತೆಯೇ ಕಾಣುವ ಹಾಗೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ಧ್ವನಿ ಕೂಡ ನೈಜ ಸಿಎಫ್​ಒ ಅವರದ್ದಂತೆಯೇ ನಕಲು ಮಾಡಲಾಗಿತ್ತು. ಎಲ್ಲವೂ ಕೂಡ ರಿಯಲ್ ಟೈಮ್​ನಲ್ಲಿ ಕಾನ್ಫರೆನ್ಸ್ ಕಾಲ್ ನಡೆದಿತ್ತು. ಈ ಕಾಲ್​ನಲ್ಲಿದ್ದ ರಿಯಲ್ ಉದ್ಯೋಗಿಗಳಿಗೆ ತಾವು ನಕಲಿ ಸಿಎಫ್​ಒ ಜೊತೆ ಮಾತನಾಡುತ್ತಿದ್ದೇವೆ ಎಂಬುದು ಗೊತ್ತೇ ಆಗಲಿಲ್ಲ. ಅಷ್ಟು ಮಟ್ಟಿಗೆ ಸಿಎಫ್​ಒ ಅವರ ಚಹರೆ ಮತ್ತು ಧ್ವನಿಯನ್ನು ಡೀಪ್​ಫೇಕ್ ಮೂಲಕ ಸೃಷ್ಟಿಸಲಾಗಿತ್ತು.

ಇದನ್ನೂ ಓದಿ: ಆಧಾರ್ ನಂಬರ್ ದುರುಪಯೋಗವಾಗುವ ಭಯವಾ? ಈ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ

ಈ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಉದ್ಯೋಗಿಗಳಿಗೆ ಬ್ಯಾಂಕ್ ಹಣ ವರ್ಗಾವಣೆ ಮಾಡುವಂತೆ ಸೂಚಿಸಲಾಗಿತ್ತು. ಐದು ಬೇರೆ ಬೇರೆ ಬ್ಯಾಂಕ್ ಅಕೌಂಟ್​​ಗಳಿಗೆ ಒಟ್ಟು 200 ಮಿಲಿಯನ್ ಹಾಂಕಾಂಗ್ ಡಾಲರ್ ಹಾಕಿದ್ದರು ಉದ್ಯೋಗಿಗಳು. ಅಂದರೆ ಸುಮಾರು 200 ಕೋಟಿ ರುಪಾಯಿ ಹಣವನ್ನು ಕಂಪನಿಯ ಬ್ಯಾಂಕ್ ಅಕೌಂಟ್​ಗಳಿಂದಲೇ ಟ್ರಾನ್ಸ್​ಫರ್ ಮಾಡಲಾಗಿತ್ತು. ಸ್ವತಃ ಸಿಎಫ್​ಒ ಅವರೇ ಹೇಳಿದ್ದಾರೆಂದು ತಪ್ಪಾಗಿ ಭಾವಿಸಿ ಉದ್ಯೋಗಿಗಳು ಹಣ ಟ್ರಾನ್ಸ್​ಫರ್ ಮಾಡಿದ್ದರು.

ಹಾಂಕಾಂಗ್ ಪೊಲೀಸರು ಮೊದಲ ಬಾರಿಗೆ ಹಣಕಾಸು ಸಂಸ್ಥೆಗೆ ಡೀಪ್ ಫೇಕ್ ಟೆಕ್ನಾಲಜಿ ಮೂಲಕ ವಂಚನೆ ಮಾಡಿರುವುದನ್ನು ಕಂಡಿದ್ದರು. ‘ಈ ಬಾರಿ ಬಹು ಜನರಿರುವ ವಿಡಿಯೋ ಕಾನ್ಫರೆನ್ಸ್​ನಲ್ಲಿ ನೀವು ನೋಡುವ ಪ್ರತಿಯೊಬ್ಬರೂ ಫೇಕ್ ಆಗಿರುತ್ತಾರೆ’ ಎಂದು ಪೊಲೀಸ್ ಅಧಿಕಾರಿ ಚಾನ್ ಶುನ್ ಚಿಂಗ್ ಹೇಳುತ್ತಾರೆ.

ಇದನ್ನೂ ಓದಿ: ಭಾರತದ ಷೇರುಮಾರುಕಟ್ಟೆಗೆ ಬರಲು ಹ್ಯೂಂಡಾಯ್ ಕಾರ್ ಕಂಪನಿ ಆಲೋಚನೆ; ಬಂದರೆ ಎಲ್ಲಾ ದಾಖಲೆ ಧೂಳೀಪಟವಾಗುವ ಸಾಧ್ಯತೆ

ಡೀಪ್​ಫೇಕ್ ಟೆಕ್ನಾಲಜಿ ಈಗ ವಿಶ್ವಾದ್ಯಂತ ತಲೆನೋವಿನ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ದೊಡ್ಡ ಉದ್ಯಮಿಗಳು, ಸೆಲಬ್ರಿಟಿಗಳು ಮೊದಲಾದವರನ್ನು ಡೀಪ್​ಫೇಕ್ ಮೂಲಕ ನಕಲು ಮಾಡುತ್ತಿರುವುದು ಹೆಚ್ಚುತ್ತಿದೆ. ಸ್ವತಃ ನರೇಂದ್ರ ಮೋದಿ ಅವರನ್ನೇ ನಕಲು ಮಾಡಲಾಗದೆ. ಇಲಾನ್ ಮಸ್ಕ್ ಅವರಂತಹ ಎಐ ಟೆಕ್ನಾಲಜಿ ಪ್ರೋತ್ಸಾಹಕರೇ ಡೀಪ್​ಫೆಕ್ ಬಗ್ಗೆ ಹುಷಾರು ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ