AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hyundai: ಭಾರತದ ಷೇರುಮಾರುಕಟ್ಟೆಗೆ ಬರಲು ಹ್ಯೂಂಡಾಯ್ ಕಾರ್ ಕಂಪನಿ ಆಲೋಚನೆ; ಬಂದರೆ ಎಲ್ಲಾ ದಾಖಲೆ ಧೂಳೀಪಟವಾಗುವ ಸಾಧ್ಯತೆ

Hyundai IPO likely in Deepavali: ದಕ್ಷಿಣ ಕೊರಿಯಾದ ಆಟೊಮೊಬೈಲ್ ಸಂಸ್ಥೆ ಹ್ಯೂಂಡಾಯ್ ಭಾರತದ ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆಗಲು ನಿರ್ಧರಿಸಿದೆ ಎನ್ನುವ ಸುದ್ದಿ ಇದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹ್ಯುಂಡೈನ ಐಪಿಒ ಆಫರ್ ಬಿಡುಗಡೆ ಆಗಬಹುದು. ಇದುವರೆಗಿನ ಭಾರತದ ಐಪಿಒಗಳಲ್ಲೇ ಇದು ದೊಡ್ಡದಿರಲಿದೆ. ಹ್ಯೂಂಡಾಯ್ ಮೋಟಾರ್ ಕೋ ಭಾರತದ ಮಾರುಕಟ್ಟೆ ಪ್ರವೇಶಿಸಿ ಮೂರು ದಶಕದ ಬಳಿಕ ಷೇರು ಮಾರುಕಟ್ಟೆಗೆ ಅಡಿ ಇಡಲು ಹೊರಟಿರುವುದು ಕುತೂಹಲ ಮೂಡಿಸಿದೆ.

Hyundai: ಭಾರತದ ಷೇರುಮಾರುಕಟ್ಟೆಗೆ ಬರಲು ಹ್ಯೂಂಡಾಯ್ ಕಾರ್ ಕಂಪನಿ ಆಲೋಚನೆ; ಬಂದರೆ ಎಲ್ಲಾ ದಾಖಲೆ ಧೂಳೀಪಟವಾಗುವ ಸಾಧ್ಯತೆ
ಹ್ಯೂಂಡಾಯ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 05, 2024 | 11:06 AM

Share

ನವದೆಹಲಿ, ಫೆಬ್ರುವರಿ 5: ದಕ್ಷಿಣ ಕೊರಿಯಾ ಮೂಲದ ಕಾರ್ ಕಂಪನಿಯಾದ ಹ್ಯೂಂಡಾಯ್ ಮೋಟಾರ್ಸ್ (Hyundai Motor Co) ಭಾರತದ ಷೇರು ಮಾರುಕಟ್ಟೆ ಪ್ರವೇಶಿಸಲು ಯೋಜಿಸಿದೆ. ಹ್ಯುಂಡೈ ಸಂಸ್ಥೆ ಐಪಿಒ (Hyundai IPO) ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಈ ವರದಿ ಪ್ರಕಾರ ಹ್ಯೂಂಡಾಯ್ ಐಪಿಒ ಅತಿದೊಡ್ಡದಿರಲಿದೆ. 21,000 ಕೋಟಿ ರೂ ಗಾತ್ರದ ಎಲ್​ಐಸಿ ಐಪಿಒಗಿಂತಲೂ ಹ್ಯುಂಡೈ ಬಂಡವಾಳ ಗುರಿ ದೊಡ್ಡದಿರಲಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಐಪಿಒ ಆಫರ್ ಕೊಡಬಹುದು ಎನ್ನಲಾಗಿದೆ.

ಹ್ಯೂಂಡಾಯ್ ಭಾರತದ ಮಾರುಕಟ್ಟೆಗೆ ಬಂದು ಮೂರು ದಶಕಗಳಾಗಿವೆ. ಈಗ ಷೇರುಪೇಟೆಯಲ್ಲಿ ಲಿಸ್ಟ್ ಆಗಲು ಯೋಜಿಸಿರುವುದು ಗಮನಾರ್ಹ. ಸೌತ್ ಕೊರಿಯಾದ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದ್ದು, ಅದರ ಷೇರುಸಂಪತ್ತು ಅಥವಾ ಮಾರ್ಕೆಟ್ ಕ್ಯಾಪ್ 39 ಬಿಲಿಯನ್ ಡಾಲರ್ ಇದೆ. ಭಾರತದಲ್ಲಿ ಮಾರುತಿ ಸುಜುಕಿ ಬಿಟ್ಟರೆ ಹ್ಯುಂಡೈ ಮೋಟಾರ್ಸ್ ಕಂಪನಿ ಅತಿದೊಡ್ಡದು. ಇದರ ಮೌಲ್ಯವನ್ನು 22ರಿಂದ 28 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಕೇಂದ್ರದಿಂದ ಅತಿಹೆಚ್ಚು ತೆರಿಗೆ ಪಾಲು ಪಡೆಯುವ ರಾಜ್ಯಗಳ್ಯಾವುವು? ಕರ್ನಾಟಕದ ಪಾಲೆಷ್ಟು? ಇಲ್ಲಿದೆ ತೆರಿಗೆ ಹಂಚಿಕೆ ಸೂತ್ರ ಇತ್ಯಾದಿ ಮಾಹಿತಿ

ಹ್ಯೂಂಡಾಯ್ ಮೋಟಾರ್ಸ್ ಸಂಸ್ಥೆ ಭಾರತದಲ್ಲಿ ಷೇರುಪೇಟೆಗೆ ಪದಾರ್ಪಣೆ ಮಾಡುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಹಲವು ಇನ್ವೆಸ್ಟ್​ಮೆಂಟ್ ಬ್ಯಾಂಕುಗಳ ಅಧಿಕಾರಿಗಳು ದಕ್ಷಿಣ ಕೊರಿಯಾ ರಾಜಧಾನಿ ಸೋಲ್ ನಗರಕ್ಕೆ ಭೇಟಿ ನೀಡಿದ್ದಾರೆ. ಹ್ಯುಂಡೈ ಐಪಿಒ ಯೋಜನೆ ಕುರಿತು ಮಾತುಕತೆ ನಡೆದಿರಬಹುದು ಎಂದು ಹೇಳಲಾಗಿದೆ.

ಸೌತ್ ಕೊರಿಯಾ ಆಡಳಿತದಿಂದ ಬಿಸಿ…?

ದೇಶದ ಕಾರ್ಪೊರೇಟ್ ಕಂಪನಿಗಳು ಕಾಲ ಕಾಲಕ್ಕೆ ಸುಧಾರಣೆ ಮಾಡಿಕೊಳ್ಳಬೇಕು, ಅಪ್​ಡೇಟ್ ಆಗುತ್ತಿರಬೇಕು ಎಂಬುದು ಸೌತ್ ಕೊರಿಯಾ ಆಡಳಿತದ ಆಗ್ರಹವಾಗಿದೆ. ಜಪಾನ್ ಕಾರ್ಪೊರೇಟ್ ಸುಧಾರಣೆಗಳ ಮಾದರಿಯಲ್ಲಿ ಕೊರಿಯಾ ಸರ್ಕಾರ ಕೂಡ ತನ್ನ ಕಳಪೆ ಕಾರ್ಪೊರೇಟ್ ಕಂಪನಿಗಳನ್ನು ಬಹಿರಂಗವಾಗಿ ಹೆಸರಿಸುವ ಕೆಲಸಕ್ಕೆ ಕೈಹಾಕಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಹ್ಯುಂಡೈ ಸಂಸ್ಥೆ ಒಂದಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ.

ಇದನ್ನೂ ಓದಿ: ತಂಬಾಕು ಉತ್ಪನ್ನ ತಯಾರಿಸುವ ಯಂತ್ರಗಳ ನೊಂದಣಿ ಆಗದಿದ್ದರೆ ಲಕ್ಷ ರೂ ದಂಡ: ಆದಾಯ ಸೋರಿಕೆ ತಡೆಗೆ ಸರ್ಕಾರ ಕ್ರಮ

ಈ ವರ್ಷ ಹಾಗೂ ಮುಂದಿನ ವರ್ಷ ಲಕ್ಷಾಂತರ ಕೋಟಿ ಹಣದ ಹೂಡಿಕೆ ಮಾಡಲು ಹ್ಯುಂಡೈ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆ ಮೂಲಕ ಒಂದಷ್ಟು ಬಂಡವಾಳ ಸಂಗ್ರಹಿಸುವುದು ಅದರ ಚಿಂತನೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್