Aadhaar Lesson: ಆಧಾರ್ ನಂಬರ್ ದುರುಪಯೋಗವಾಗುವ ಭಯವಾ? ಈ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ

How To Prevent misuse of Aadhaar: ಆಧಾರ್ ನಂಬರ್ ಅನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅದನ್ನು ತಪ್ಪಿಸಲು ಕೆಲ ಮುಂಜಾಗ್ರತಾ ಕ್ರಮ ಅನುಸರಿಸುವುದು ಅವಶ್ಯ. ವರ್ಚುವಲ್ ಐಡಿಯಿಂದ ಹಿಡಿದು ಬಯೋಮೆಟ್ರಿಕ್ ಲಾಕ್ ಮಾಡುವವರೆಗೂ ವಿವಿಧ ಸೌಲಭ್ಯ ಬಳಸಬಹುದು. ಆಧಾರ್ ಕಾರ್ಡ್ ಅಥವಾ ನಕಲು ಪ್ರತಿಯನ್ನು ಸಾರ್ವಜನಿಕವಾಗಿ ಎಲ್ಲಿಯೂ ಬಿಡಬೇಡಿ.

Aadhaar Lesson: ಆಧಾರ್ ನಂಬರ್ ದುರುಪಯೋಗವಾಗುವ ಭಯವಾ? ಈ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ
ಆಧಾರ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 05, 2024 | 1:02 PM

ಆಧಾರ್ ಎಂಬುದು ಬಹಳ ವ್ಯಾಪಕವಾಗಿ ಆವರಿಸಿರುವ ಬಯೋಮೆಟ್ರಿಕ್ ಆಧಾರಿತ ಐಡಿಯಾಗಿದೆ. ಮೊಬೈಲ್ ಸಿಮ್ ಪಡೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಸವಲತ್ತುಗಳವರೆಗೆ ಆಧಾರ್ ಅಗತ್ಯವಾಗಿರುವ ದಾಖಲೆಯಾಗಿದೆ. ಬಯೋಮೆಟ್ರಿಕ್ ಮಾಹಿತಿ ಇರುವುದರಿಂದ ಬಹಳಷ್ಟು ಅನುಕೂಲತೆಗಳ ಜೊತೆಗೆ ಅಪಾಯದ ಅಂಶಗಳೂ ಇವೆ. ಆಧಾರ್​ನಲ್ಲಿರುವ ಮಾಹಿತಿಯನ್ನು ದುರುಳರು ದುರುಪಯೋಗಿಸಿಕೊಳ್ಳುವ (misuse of aadhaar) ಸಾಧ್ಯತೆ ಅಲ್ಪಪ್ರಮಾಣದಲ್ಲಾದರೂ ಇದ್ದೇ ಇದೆ. ಆದ್ದರಿಂದ ಆಧಾರ್ ಕಾರ್ಡ್ ಬಗ್ಗೆ ಪ್ರತಿಯೊಬ್ಬರೂ ಕೂಡ ಜಾಗ್ರತೆಯಿಂದ ಇರಬೇಕು. ಆಧಾರ್ ವಿಚಾರದಲ್ಲಿ ನೀವು ಏನು ಮಾಡಬೇಕು, ಏನು ಮಾಡಬಾರದು, (Do’s and Don’ts) ವಿವರ ತಪ್ಪದೇ ಓದಿ:

ಆಧಾರ್ ವಿಚಾರದಲ್ಲಿ ಏನು ಎಚ್ಚರಿಕೆ ಬೇಕು?

  • ಯಾವ ಸಂಸ್ಥೆಯಾದರೂ ದೃಢೀಕರಣಕ್ಕೋ ಅಥವಾ ಇನ್ಯಾವುದಕ್ಕೋ ಆಧಾರ್ ದಾಖಲೆ ಕೇಳಿದರೆ, ಯಾವ ಉದ್ದೇಶಕ್ಕೆ ಬೇಕು ಎಂಬುದನ್ನು ಕೇಳಿ ತಿಳಿದು ಆ ಬಳಿಕ ಆಧಾರ್ ದಾಖಲೆ ಒದಗಿಸಿ.
  • ಆಧಾರ್ ದಾಖಲೆ ಕೊಡಬೇಕು, ಆದರೆ, ನಂಬರ್ ಬಹಿರಂಗವಾಗಬಾರದು ಎಂದಿದ್ದರೆ ಆಗ ವಿಐಡಿ ಅಥವಾ ವರ್ಚುವಲ್ ಐಡೆಂಟಿಫಯರ್ ಅನ್ನು ಸೃಷ್ಟಿಸಿ ನೀಡಬಹುದು.
  • ಆಧಾರ್​ಗೆ ಲಿಂಕ್ ಮಾಡಿರುವ ಮೊಬೈಲ್ ನಂಬರ್ ಚಾಲನೆಯಲ್ಲಿ ಉಳಿಸಿಕೊಳ್ಳಿ. ನಂಬರ್ ಬದಲಿಸಿದರೆ ಆಧಾರ್​ನಲ್ಲೂ ಅದನ್ನು ಬಳಸಿ. ಬಹಳಷ್ಟು ಆಧಾರ್ ಆಧಾರಿತ ಸೇವೆಗಳಲ್ಲಿ ಮೊಬೈಲ್​ಗೆ ಒಟಿಪಿ ಬರುತ್ತದೆ.
  • ಆಧಾರ್​ಗೆ ಮೊಬೈಲ್ ನಂಬರ್ ಲಿಂಕ್ ಮಾಡಿದಂತೆ ನಿಮ್ಮ ಇಮೇಲ್ ಐಡಿಯನ್ನೂ ಲಿಂಕ್ ಮಾಡುವುದನ್ನು ಮರೆಯದಿರಿ. ನಿಮ್ಮ ಆಧಾರ್ ನಂಬರ್ ಅನ್ನು ದೃಢೀಕರಿಸುವಾಗೆಲ್ಲಾ ಇಮೇಲ್ ಮೂಲಕ ನಿಮಗೆ ಮಾಹಿತಿ ತಲುಪುತ್ತದೆ.
  • ಯುಐಡಿಎಐ ವೆಬ್​ಸೈಟ್ ಅಥವಾ ಎಂ ಆಧಾರ್ ಆ್ಯಪ್​ನಲ್ಲಿ ಹಿಂದಿನ ಆರು ತಿಂಗಳ ನಿಮ್ಮ ಆಧಾರ್ ದೃಢೀಕರಣ ಇತಿಹಾಸವನ್ನು ತಿಳಿಯಬಹುದು. ಈ ರೀತಿ ಆಗಾಗ್ಗೆ ಪರಿಶೀಲನೆ ನಡೆಸುತ್ತಿರಿ. ನಿಮಗೆ ಗೊತ್ತಾಗದಂತೆ ಯಾವುದಾದರೂ ಆಧಾರ್ ಅಥೆಂಟಿಕೇಶನ್ ನಡೆದಿದ್ದರೆ ಪತ್ತೆ ಮಾಡಬಹುದು.
  • ನೀವು ಆಧಾರ್​ನ ಬಯೋಮೆಟ್ರಿಕ್ ಬಳಕೆಯನ್ನು ಲಾಕ್ ಮಾಡುವ ಅವಕಾಶ ನಿಮಗೆ ಇರುತ್ತದೆ. ಯುಐಡಿಎಐ ವೆಬ್​ಸೈಟ್ ಅಥವಾ ಎಂ ಆಧಾರ್ ಆ್ಯಪ್​ನಲ್ಲಿ ಬಯೋಮೆಟ್ರಿಕ್ ಲಾಕ್ ಮಾಡುವ ಆಯ್ಕೆ ಇರುತ್ತದೆ. ನೀವು ಲಾಕ್ ಮಾಡಿದಂತೆ, ಅನ್​ಲಾಕ್ ಕೂಡ ಮಾಡಬಹುದು.
  • ನಿಮ್ಮ ಆಧಾರ್ ಅನ್ನು ಯಾರಾದರೂ ಅನಧಿಕೃತವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಅನುಮಾನ ಬಂದಾಗ 1947 ನಂಬರ್​ಗೆ ಸಂಪರ್ಕಿಸಬಹುದು. help@uidai.gov.in ಎನ್ನುವ ಇಮೇಲ್ ಮೂಲಕವೂ ಮಾಹಿತಿ ನೀಡಬಹುದು.

ಇದನ್ನೂ ಓದಿ: ಅಗ್ಗದ ಬೆಲೆಯಲ್ಲಿ ಕಂಪನಿಗಳಿಗೆ ಬಂಡವಾಳ ತರುವ ಮಸಾಲ ಬಾಂಡ್ ಎಂದರೇನು? ಇದರ ಅನುಕೂಲಗಳ ಬಗ್ಗೆ ಒಂದಷ್ಟು ಮಾಹಿತಿ

ಆಧಾರ್ ವಿಚಾರದಲ್ಲಿ ಇವು ಮಾಡಬೇಡಿ…

ನಿಮ್ಮ ಆಧಾರ್ ಕಾರ್ಡ್ ಅಥವಾ ಲೆಟರ್ ಅಥವಾ ಅವುಗಳ ನಕಲುಪ್ರತಿಗಳೇ ಆಗಲಿ, ಸಾರ್ವಜನಿಕವಾಗಿ ಬಿಟ್ಟುಹೋಗದಿರಿ.

ನಿಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಆಧಾರ್ ಮಾಹಿತಿಯನ್ನು ಬಹಿರಂಗಪಡಿಸದಿರಿ.

ಯಾವುದಾದರೂ ಅನಧಿಕೃತ ಸಂಸ್ಥೆ ನಿಮ್ಮಿಂದ ಆಧಾರ್ ಒಟಿಪಿ ಕೇಳಿದರೆ ಅದನ್ನು ಕೊಡದಿರಿ.

ನಿಮ್ಮ ಎಂ ಆಧಾರ್ ಆ್ಯಪ್​ನ ಪಿನ್ ನಂಬರ್ ಅನ್ನು ಯಾರಿಗೂ ನೀಡಬೇಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ