AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಛೇರ್ಮನ್ ಜೇಯ್ ಲೀ ಆರೋಪಮುಕ್ತ; ಮತ್ತೆ ಜೈಲು ಸೇರುವ ಅಪಾಯದಿಂದ ಪಾರು

Samsung Electronics Chairman Jay Y Lee Acquitted: ವಿಲೀನದ ಹೆಸರಿನಲ್ಲಿ ಷೇರು ಅಕ್ರಮ ಮತ್ತಿತರ ವಂಚನೆ ಎಸಗಿದ ಆರೋಪದಿಂದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಛೇರ್ಮನ್ ಖುಲಾಸೆಯಾಗಿದ್ದಾರೆ. ಜೇಯ್ ವೈ ಲೀ ಅವರನ್ನು ನ್ಯಾಯಾಲಯವು ಆರೋಪಮುಕ್ತಗೊಳಿಸಿದೆ. ಈ ಹಿಂದೆ ಲಂಚ ನೀಡಿದ ಪ್ರಕರಣದಲ್ಲಿ ಲೀ ಒಂದೂವರೆ ವರ್ಷ ಜೈಲುವಾಸ ಅನುಭವಿಸಿದ್ದರು. ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್​ನ ಎರಡು ಸೋದರ ಸಂಸ್ಥೆಗಳ ವಿಲೀನದ ಹಿಂದೆ ಲೀ ಮೊದಲಾದವರ ಷಡ್ಯಂತ್ರ ಇತ್ತು ಎಂಬುದು ಅವರ ಮೇಲಿದ್ದ ಪ್ರಮುಖ ಆರೋಪ.

ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಛೇರ್ಮನ್ ಜೇಯ್ ಲೀ ಆರೋಪಮುಕ್ತ; ಮತ್ತೆ ಜೈಲು ಸೇರುವ ಅಪಾಯದಿಂದ ಪಾರು
ಜೇಯ್ ವೈ ಲೀ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 05, 2024 | 2:58 PM

Share

ನವದೆಹಲಿ, ಫೆಬ್ರುವರಿ 5: ಒಂಬತ್ತು ವರ್ಷದ ಹಿಂದಿನ ವಿಲೀನ ಪ್ರಕರಣವೊಂದರಲ್ಲಿ (2015 Samsung Merger Case) ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಛೇರ್ಮನ್ ಜೇಯ್ ವೈ ಲೀ (Jay Y. Lee) ಅವರು ವಂಚನೆಯ ಆರೋಪದಿಂದ ಖುಲಾಸೆಗೊಂಡಿದ್ದಾರೆ. ಇದರೊಂದಿಗೆ ಕಾರ್ಪೊರೇಟ್ ಲೋಕದ ದೊಡ್ಡ ವಿವಾದಿತ ಪ್ರಕರಣವೊಂದರಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. 2015ರಲ್ಲಿ ಸ್ಯಾಮ್ಸಂಗ್ ಮತ್ತು ಅಂಗ ಸಂಸ್ಥೆಗಳ ವಿಲೀನವು ವೈಯಕ್ತಿಕ ಸ್ವಾರ್ಥದಿಂದ ನಡೆಸಲಾಗಿತ್ತು ಎಂಬುದು ಜೇಯ್ ವೈ ಲೀ ಮೇಲಿರುವ ಆರೋಪವಾಗಿದೆ. ಆದರೆ, ಈ ಆರೋಪದಲ್ಲಿ ಸತ್ಯಾಂಶ ಇಲ್ಲ. ಲೀ ಅವರಿಂದ ಯಾವ ಅಕ್ರಮವೂ ನಡೆದಿರುವುದು ಸ್ಪಷ್ಟವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಛೇರ್ಮನ್ ಆಗಿರುವ ಜೇಯ್ ವೈ ಲೀ ಅಕಾ ಲೀ ಜೇ ಯೋಂಗ್ (Lee Jae- Yong) ಅವರಿಗೆ ಐದು ವರ್ಷ ಜೈಲುಶಿಕ್ಷೆ ವಿಧಿಸಬೇಕು ಎಂದು 2023ರ ನವೆಂಬರ್ ತಿಂಗಳಲ್ಲಿ ಪ್ರಾಸಿಕ್ಯೂಟರ್​ಗಳು ಕೋರ್ಟ್​ಗೆ ಮನವಿ ಮಾಡಿದ್ದರು. ವಸ್ತುಸ್ಥಿತಿ ಏನೆಂದರೆ ಈ ಪ್ರಕರಣದಲ್ಲಿ ಲೀ ಅವರು ಈ ಹಿಂದೆ ಲಂಚ ಆರೋಪದಲ್ಲಿ ತಪ್ಪಿತಸ್ಥರೆಂಬುದು ಸಾಬೀತಾಗಿ 2017ರಲ್ಲಿ ಅವರಿಗೆ ಜೈಲುಶಿಕ್ಷೆ ವಿಧಿಸಲಾಗಿತ್ತು. ಒಂದಷ್ಟು ಅವಧಿ ಅವರು ಜೈಲುವಾಸ ಅನುಭವಿಸಿ, ಬಳಿಕ ದಕ್ಷಿಣ ಕೊರಿಯಾ ಅಧ್ಯಕ್ಷರಿಂದ ಕ್ಷಮಾದಾನ ಪಡೆದು ಸ್ಯಾಮ್ಸಂಗ್ ಕರ್ತವ್ಯಕ್ಕೆ ಮರಳಿದ್ದರು.

ಜೇಯ್ ವೈ ಲೀ ವಿರುದ್ಧದ ಪ್ರಕರಣವೇನು?

ಸ್ಯಾಮ್ಸಂಗ್ ಸಿ ಅಂಡ್ ಟಿ (Samsung C & T) ಹಾಗೂ ಅದರ ಸೋದರ ಸಂಸ್ಥೆ ಚಿಯೆಲ್ ಇಂಡಸ್ಟ್ರೀಸ್ (Chiel Industries) ವಿಲೀನಗೊಂಡಿದ್ದವು. ಇದರಲ್ಲಿ ಜಯ್ ಲೀ ಹಾಗೂ ಇತರ ಕೆಲವರು ಷೇರುದಾರರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡು ಕ್ಯಾಪಿಟಲ್ ಮಾರ್ಕೆಟ್ಸ್ ಕಾಯ್ದೆ ಉಲ್ಲಂಘಿಸಿ ವಿಲೀನ ಷಡ್ಯಂತ್ರ ಮಾಡಿದ್ದಾರೆ ಎಂಬುದು ಆರೋಪ.

ಇದನ್ನೂ ಓದಿ: ಕೂಲಿಯಾಗಿ ಕೆಲಸ ಮಾಡುತ್ತಿದ್ದವ ತನ್ನ ದೇಶದ ಅತಿಶ್ರೀಮಂತನಾದ ಕಥೆ ಕೇಳಿ

ವಿಲೀನಕ್ಕೆ ಮೊದಲು ಲೀ ಹಾಗೂ ಅವರ ಕುಟುಂಬದವರು ಚಿಯೆಲ್ ಇಂಡಸ್ಟ್ರೀಸ್​ನಲ್ಲಿ ಹೆಚ್ಚು ಷೇರುದಾರರಾಗಿದ್ದಾರೆ. ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್​ನಲ್ಲಿ ಲೀ ಕುಟುಂಬದವರ ಪಾಲು ಶೇ. 20.7ರಷ್ಟಿದೆ. ಆದರೆ, ಪ್ರಮುಖ ಷೇರುದಾರಿಕೆ ಇರುವುದು ಸ್ಯಾಮ್ಸಂಗ್ ಸಿ ಅಂಡ್ ಟಿ ಸಂಸ್ಥೆಯದ್ದು. ಈ ಹಿನ್ನೆಲೆಯಲ್ಲಿ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್​ನಲ್ಲಿ ಹೆಚ್ಚು ಹಿಡಿತ ಸಾಧಿಸುವ ಸಲುವಾಗಿ ಸ್ಯಾಮ್ಸಂಗ್ ಸಿ ಅಂಡ್ ಟಿ ಮತ್ತು ಚಿಯೆಲ್ ಇಂಡಸ್ಟ್ರೀಸ್ ಅನ್ನು ವಿಲೀನಗೊಳಿಸುವ ಕಾರ್ಯ ಮಾಡಲಾಯಿತು ಎಂಬುದು ಪ್ರಾಸಿಕ್ಯೂಟರ್​ಗಳ ವಾದ.

ಅಲ್ಲದೇ, 2017ರಲ್ಲಿ ಇದೇ ವಿಲೀನ ಕಾರ್ಯ ಆಗುವಾಗ ಅಂದು ದಕ್ಷಿಣ ಕೊರಿಯಾದ ಅಧ್ಯಕ್ಷೆಯಾಗಿದ್ದು ಪಾರ್ಕ್ ಗ್ಯೂನ್ ಹೈಯೆ. ಇವರಿಗೆ ಹಾಗೂ ಇವರ ಆಪ್ತೆ ಚೋಯ್ ಸೂನ್ ಸಿಲ್ ಅವರಿಗೆ ಜೇಯ್ ವೈ ಲೀ ಅವರು ಸ್ಯಾಮ್ಸಂಗ್ ಸಂಸ್ಥೆಗಳ ವಿಲೀನಕ್ಕೆ ಅಡ್ಡಿಯಾಗಬಾರದೆಂದು ಲಂಚದ ಆಫರ್ ಕೊಟ್ಟರೆಂಬ ಆರೋಪ ಎದುರಾಗಿತ್ತು. ಇದರಲ್ಲಿ ಲೀ ತಪ್ಪಿತಸ್ಥ ಎಂಬುದು ಸೋಲ್ ಸೆಂಟ್ರಲ್ ಡಿಸ್ಟ್ರಿಕ್ಟ್ ಕೋರ್ಟ್​ನಲ್ಲಿ ಸಾಬೀತಾಗಿತ್ತು. ಪ್ರಾಸಿಕ್ಯೂಟರ್​ಗಳು 12 ವರ್ಷ ಜೈಲುಶಿಕ್ಷೆ ಯಾಚಿಸಿದ್ದರು. ಕೋರ್ಟ್ 5 ವರ್ಷ ಜೈಲುಶಿಕ್ಷೆ ಎಂದು ತೀರ್ಪು ನೀಡಿತು.

2018ರ ಫೆಬ್ರುವರಿಯಲ್ಲಿ ಸೋಲ್​ನ ಉಚ್ಚ ನ್ಯಾಯಾಲಯವು ಐದು ವರ್ಷದ ಜೈಲುಶಿಕ್ಷೆಯನ್ನು ಎರಡೂವರೆ ವರ್ಷಕ್ಕೆ ಇಳಿಸಿತು.

ಇದನ್ನೂ ಓದಿ: ಭಾರತದ ಷೇರುಮಾರುಕಟ್ಟೆಗೆ ಬರಲು ಹ್ಯೂಂಡಾಯ್ ಕಾರ್ ಕಂಪನಿ ಆಲೋಚನೆ; ಬಂದರೆ ಎಲ್ಲಾ ದಾಖಲೆ ಧೂಳೀಪಟವಾಗುವ ಸಾಧ್ಯತೆ

ಈ 30 ತಿಂಗಳ ಜೈಲುಶಿಕ್ಷೆಯಲ್ಲಿ ಲೀ ಅವರು 18 ತಿಂಗಳು ಜೈಲುವಾಸ ಅನುಭವಿಸಿದ್ದಾರೆ. 2022ರಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಲೀಗೆ ಕ್ಷಮಾದಾನ ನೀಡಿದ್ದರು. ಕೊರಿಯಾದಲ್ಲಿ ಆರ್ಥಿಕ ಬಿಕ್ಕಟ್ಟು ಉದ್ಭವಿಸಿರುವುದರಿಂದ ಅದರಿಂದ ಹೊರಬರಲು ಲೀ ಅವರ ನೆರವು ಬೇಕಾಗುತ್ತದೆ ಎಂದು ಹೇಳಿ ಅವರನ್ನು ಬಂಧಮುಕ್ತಗೊಳಿಸಿದರು. ಆ ಬಳಿಕ ಲೀ ಸ್ಯಾಮ್ಸಂಗ್​ನಲ್ಲಿ ಛೇರ್ಮನ್ ಸ್ಥಾನಕ್ಕೆ ಮತ್ತೆ ಏರಿದ್ದಾರೆ.

ಜೇಯ್ ವೈ ಲೀ ವಿರುದ್ಧ ಪ್ರಕರಣ ಇದೊಂದೇ ಅಲ್ಲ, ಮಾದಕ ವಸ್ತು ಸೇವನೆ ಪ್ರಕರಣವೊಂದರಲ್ಲೂ ಅವರು ದೋಷಿ ಎನಿಸಿರುವುದುಂಟು. ಪ್ರೊಪೋಫೋಲ್ ಎಂಬ ಅಕ್ರಮ ಡ್ರಗ್​ವೊಂದನ್ನು 2015ರಿಂದ 2020ರವರೆಗೆ ಹಲವು ಬಾರಿ ಬಳಕೆ ಮಾಡಿದ್ದರೆಂಬುದು ಸಾಬೀತಾಗಿತ್ತು. 2021ರ ಅಕ್ಟೋಬರ್ 26ರಂದು ಅವರಿಗೆ 70 ಮಿಲಿಯನ್ ವೋನ್ (ಸುಮಾರು 50 ಲಕ್ಷ ರೂ) ಹಣವನ್ನು ದಂಡವಾಗಿ ವಿಧಿಸಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ