18GB ಡೇಟಾ ಫ್ರೀ, 14 OTT ಪ್ರವೇಶ: ಇದು ರಿಲಯನ್ಸ್ ಜಿಯೋದ ಟ್ರೆಂಡಿಂಗ್ ಪ್ಲಾನ್
Reliance Jio Best Prepaid Plans: ನೀವು ಉಚಿತ ಡೇಟಾ ಜೊತೆಗೆ ಓಟಿಟಿ ಅಪ್ಲಿಕೇಶನ್‌ಗಳನ್ನು ಫ್ರೀ ಆಗಿ ನೀಡುವ ಯೋಜನೆಯನ್ನು ಹುಡುಕುತ್ತಿದ್ದರೆ, ರಿಲಯನ್ಸ್ ಜಿಯೋ ಅಂತಹ ಅತ್ಯುತ್ತಮ ಯೋಜನೆಯನ್ನು ಹೊಂದಿದೆ. ಈ ಯೋಜನೆಯ ಬೆಲೆ ರೂ. 1198 ಆಗಿದೆ. ಈ ಟ್ರೆಂಡಿಂಗ್ ಪ್ಲಾನ್ನ ಮಾನ್ಯತೆ ಮತ್ತು ಯಾವ ಓಟಿಟಿ ಅಪ್ಲಿಕೇಶನ್‌ಗಳ ಪ್ರಯೋಜನವನ್ನು ಪಡೆಯಬಹುದು ಎಂಬ ಕುರಿತ ಮಾಹಿತಿ ಇಲ್ಲಿದೆ.
ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಉಚಿತ ಡೇಟಾವನ್ನು ನೀಡುವ ಅನೇಕ ಉತ್ತಮ ಯೋಜನೆಗಳನ್ನು ಹೊಂದಿದೆ. ಇಂದು ನಾವು ನಿಮಗೆ ಅಂತಹ ಒಂದು ಅತ್ಯುತ್ತಮ ಪ್ಲಾನ್ ಬಗ್ಗೆ ಹೇಳಲಿದ್ದೇವೆ. ಈ ಯೋಜನೆಯ ಬೆಲೆ 1198 ರೂ. ಆಗಿದೆ. ಈ ಯೋಜನೆಯೊಂದಿಗೆ, ನಿಮಗೆ ರಿಲಯನ್ಸ್ ಜಿಯೋದಿಂದ ಉಚಿತ ಡೇಟಾವನ್ನು ನೀಡಲಾಗುತ್ತದೆ. ಜೊತೆಗೆ 14 ಓಟಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶ ಪಡೆಯಬಹುದು. ಈ ರೀಚಾರ್ಜ್ ಯೋಜನೆಯ ಮಾನ್ಯತೆ ಏನು?, ಯಾವ ಓಟಿಟಿ ಅಪ್ಲಿಕೇಶನ್‌ಗಳು ಲಭ್ಯವಿರುತ್ತವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ರಿಲಯನ್ಸ್ ಜಿಯೋ 1198 ಯೋಜನೆ:
ರೂ. 1198 ಯೋಜನೆಯೊಂದಿಗೆ, ನಿಮಗೆ ಪ್ರತಿದಿನ 2 GB ಹೈ ಸ್ಪೀಡ್ ಡೇಟಾ ನೀಡಲಾಗುತ್ತದೆ. ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಉಚಿತ ಕರೆ ಮತ್ತು ದಿನಕ್ಕೆ 100 SMS ನೀಡಲಾಗುವುದು. ಈ ಯೋಜನೆಯನ್ನು ಖರೀದಿಸುವ ದೊಡ್ಡ ಪ್ರಯೋಜನವೆಂದರೆ ಈ ರೀಚಾರ್ಜ್ ಯೋಜನೆಯೊಂದಿಗೆ ನೀವು ಹೆಚ್ಚುವರಿ ಬೋನಸ್ ಡೇಟಾವನ್ನು ಪಡೆಯುವುದು ಮಾತ್ರವಲ್ಲದೆ 14 ಓಟಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಉಚಿತವಾಗಿ ನೀಡುತ್ತದೆ. ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಲಭ್ಯವಿರುತ್ತದೆ.
ಭಾರತದಲ್ಲಿ ಮೊದಲ ಸೇಲ್ ಕಾಣುತ್ತಿದೆ ಒನ್ಪ್ಲಸ್ 12R: ಬೆಲೆ ಎಷ್ಟು?, ಏನಿದೆ ಆಫರ್?
ಈ ಪ್ಲಾನ್ನೊಂದಿಗೆ, ಪ್ರಿಪೇಯ್ಡ್ ಬಳಕೆದಾರರು ರಿಲಯನ್ಸ್ ಜಿಯೋದಿಂದ 18GB ಬೋನಸ್ ಡೇಟಾವನ್ನು ಪಡೆಯುತ್ತಾರೆ. ನೀವು ತಲಾ 6 GB ಯನ್ನು ಮೂರು ಡೇಟಾ ವೋಚರ್‌ಗಳ ರೂಪದಲ್ಲಿ ಪಡೆಯಬಹುದು. ಇದನ್ನು ನಿಮ್ಮ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ಕ್ರೆಡಿಟ್ ಮಾಡಲಾಗುತ್ತದೆ.
OTT ಅಪ್ಲಿಕೇಶನ್‌ಗಳ ಪ್ರಯೋಜನ:
ಈ ಯೋಜನೆಯು ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಹಾಟ್‌ಸ್ಟಾರ್, ಝೀ5, ಸೋನಿ ಲಿವ್, ಜಿಯೋ ಸಿನಿಮಾ ಪ್ರೀಮಿಯಂ, ಡಿಸ್ಕವರ್+ ಮತ್ತು ಲಯನ್ಸ್ಗೇಟ್ ಪ್ಲೇ ನಂತಹ ಒಟ್ಟು 14 ಓಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.
ಗಮನಿಸಿ
ಡಿಸ್ನಿ+ ಹಾಟ್‌ಸ್ಟಾರ್ ಅನ್ನು ಮೂರು ತಿಂಗಳವರೆಗೆ ಮಾತ್ರ ನೀಡಲಾಗುತ್ತದೆ. ಆದರೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿಯೋ ಸಿನಿಮಾದ ಪ್ರೀಮಿಯಂ ಚಂದಾದಾರಿಕೆಯನ್ನು 84 ದಿನಗಳವರೆಗೆ ಪಡೆಯಬಹುದು. ಈ ಅಪ್ಲಿಕೇಶನ್‌ಗಳ ಸೇವೆಯನ್ನು ಸಕ್ರಿಯಗೊಳಿಸಲು, ನೀವು ಮೈ ಜಿಯೋ ಅಪ್ಲಿಕೇಶನ್‌ನ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಯೋಜನೆಯೊಂದಿಗೆ ನೀವು ಅನಿಯಮಿತ 5G ಪ್ರಯೋಜನವನ್ನು ಪಡೆಯುತ್ತೀರಿ, ಆದರೆ ಯೋಜನೆಯಲ್ಲಿ ಲಭ್ಯವಿರುವ ಡೇಟಾದ ಮಿತಿಯನ್ನು ತಲುಪಿದ ನಂತರ, ವೇಗವು 64 Kbps ಗೆ ಕಡಿಮೆಯಾಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:36 am, Thu, 8 February 24