ಭಾರತದಲ್ಲಿ ಮೊದಲ ಸೇಲ್ ಕಾಣುತ್ತಿದೆ ಒನ್ಪ್ಲಸ್ 12R: ಬೆಲೆ ಎಷ್ಟು?, ಏನಿದೆ ಆಫರ್?
OnePlus 12R First Sale: ಒನ್ಪ್ಲಸ್ 12R ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದ್ದು, ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಭಾರತದಲ್ಲಿ ಫೋನ್‌ನ ಮಾರಾಟವು ಫೆಬ್ರವರಿ 6 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಿದೆ. ICICI ಕ್ರೆಡಿಟ್ ಕಾರ್ಡ್ ಮತ್ತು OneCard ಹೊಂದಿರುವವರಿಗೆ ರೂ. 1,000 ಬ್ಯಾಂಕ್ ರಿಯಾಯಿತಿ ಪಡೆಯಬಹುದು.
ಚೀನೀ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒನ್ಪ್ಲಸ್ ಇತ್ತೀಚೆಗೆ ಭಾರತದಲ್ಲಿ ತನ್ನ ಎರಡು ಹೊಸ ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದು ಒನ್ಪ್ಲಸ್ 12 ಮತ್ತು ಒನ್ಪ್ಲಸ್ 12R (OnePlus 12R) ಫೋನ್ ಆಗಿದೆ. ಈಗಾಗಲೇ ಒನ್ಪ್ಲಸ್ 12 ದೇಶಾದ್ಯಂತ ಖರೀದಿಗೆ ಲಭ್ಯವಿದ್ದರೆ, ಒನ್ಪ್ಲಸ್ 12R ಫೆಬ್ರವರಿ 6 ಅಂದರೆ ಇಂದು ಮೊದಲ ಸೇಲ್ ಕಾಣುತ್ತಿದೆ. ಇದೊಂದು ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದ್ದು, ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಒನ್ಪ್ಲಸ್ 12R ಮಾರಾಟದ ವಿವರಗಳು, ಕೊಡುಗೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಒನ್ಪ್ಲಸ್ 12R ಮೊದಲ ಸೇಲ್:
ಒನ್ಪ್ಲಸ್ 12R ಮೂಲ ಮಾದರಿ ರೂ. 39,999 ರಿಂದ ಪ್ರಾರಂಭವಾಗುತ್ತದೆ. ಇದು 8GB RAM ಮತ್ತು 128GB ಆಂತರಿಕ ಸಂಗ್ರಹಣೆಯದ್ದಾಗಿದೆ. 16GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 45,999 ರೂ. ಆಗಿದೆ. ಭಾರತದಲ್ಲಿ ಫೋನ್‌ನ ಮಾರಾಟವು ಫೆಬ್ರವರಿ 6 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಿದೆ. ICICI ಕ್ರೆಡಿಟ್ ಕಾರ್ಡ್ ಮತ್ತು OneCard ಹೊಂದಿರುವವರಿಗೆ ರೂ. 1,000 ಬ್ಯಾಂಕ್ ರಿಯಾಯಿತಿ ಪಡೆಯಬಹುದು.
ಒನ್ಪ್ಲಸ್ 12R ಖರೀದಿದಾರರು ಆರು ತಿಂಗಳ ಗೂಗಲ್ ಒನ್ ಚಂದಾದಾರಿಕೆಯನ್ನು ಮತ್ತು ಮೂರು ತಿಂಗಳ ಯೂಟ್ಯೂಬ್ ಪ್ರೀಮಿಯಂ ಅನ್ನು ಪಡೆಯುತ್ತಾರೆ. ಮಾರಾಟದ ಭಾಗವಾಗಿ, ಆ್ಯಕ್ಸಿಂಡೆಟ್ ಪ್ರೊಟೆಕ್ಷನ್ ಒನ್ಪ್ಲಸ್ 12R ಗ್ರಾಹಕರಿಗೆ ಶೇಕಡಾ 50 ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ಅಧಿಕೃತ ವೆಬ್‌ಸೈಟ್‌ಗೆ ಬಂದ ಮೊದಲ 24 ಗಂಟೆಗಳ ಒಳಗೆ ಆರ್ಡರ್ ಮಾಡಿದ ಬಳಕೆದಾರರು 4,999 ರೂ. ಮೌಲ್ಯದ ಉಚಿತ ಒನ್ಪ್ಲಸ್ ಬಡ್ಸ್ Z2 ಅನ್ನು ಪಡೆಯಬಹುದು.
ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಡಿಲೀಟ್ ಆದ್ರೂ ನೋಡಬಹುದು!
ಒನ್ಪ್ಲಸ್ 12R ಫೀಚರ್ಸ್:
ಡಿಸ್‌ಪ್ಲೇ: ಒನ್ಪ್ಲಸ್ 12R ಸ್ಮಾರ್ಟ್‌ಫೋನ್ 6.78-ಇಂಚಿನ LTPO 4.0 ಪ್ಯಾನೆಲ್ AMOLED 120Hz ಡಿಸ್‌ಪ್ಲೇ ಜೊತೆಗೆ 4500 nits ಗರಿಷ್ಠ ಬ್ರೈಟ್ನೆಸ್ ಮತ್ತು ಗೋರಿಲ್ಲ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್: ಹೊಸ ಒನ್ಪ್ಲಸ್ 12R ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 2 ಚಿಪ್ಸೆಟ್ನಿಂದ ಚಾಲಿತವಾಗಿದೆ.
ಹಿಂದಿನ ಕ್ಯಾಮೆರಾಗಳು: ಈ ಫೋನ್ ಸೋನಿ IMX890 50MP ಪ್ರಾಥಮಿಕ ಸಂವೇದಕ, 112-ಡಿಗ್ರಿ 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ.
ಸೆಲ್ಫಿ ಕ್ಯಾಮೆರಾ: ಒನ್ಪ್ಲಸ್ 12R 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಸಂಗ್ರಹಣೆ: ಒನ್ಪ್ಲಸ್ 12R 16GB RAM ಮತ್ತು 256GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ.
ಸಾಫ್ಟ್‌ವೇರ್: ಈ ಫೋನ್ ಆಂಡ್ರಾಯ್ಡ್ 14-ಆಧಾರಿತ ColorOS 14.0 ಔಟ್-ಆಫ್-ದಿ-ಬಾಕ್ಸ್ ಮೂಲಕ ರನ್ ಆಗುತ್ತದೆ.
ಬ್ಯಾಟರಿ: ಒನ್ಪ್ಲಸ್ 12R 100W SUPERVOOC ಚಾರ್ಜಿಂಗ್‌ನೊಂದಿಗೆ 5,500mAh ಬ್ಯಾಟರಿಯನ್ನು ಹೊಂದಿದೆ, 26 ನಿಮಿಷಗಳಲ್ಲಿ 1-100 ಪ್ರತಿಶತ ಚಾರ್ಜ್ ಆಗುತ್ತದೆ. ಇದು SUPERVOOC S ಚಾರ್ಜಿಂಗ್ ಮ್ಯಾನೇಜ್ಮೆಂಟ್ ಚಿಪ್ ಮತ್ತು ಬ್ಯಾಟರಿ ಹೆಲ್ತ್ ಇಂಜಿನ್ ತಂತ್ರಜ್ಞಾನವನ್ನು ಹೊಂದಿದೆ.
ಇತರೆ ವೈಶಿಷ್ಟ್ಯಗಳು: ಈ ಫೋನ್ ನೀರು ಮತ್ತು ಧೂಳಿನ ನಿರೋಧಕತೆಗಾಗಿ IP64 ರೇಟಿಂಗ್ ಅನ್ನು ಹೊಂದಿದೆ, Dolby Atmos ಜೊತೆಗೆ ಸ್ಟೀರಿಯೋ ಸ್ಪೀಕರ್‌ಗಳು, Wi-Fi 7, ಬ್ಲೂಟೂತ್ 5.3, NFC ಮತ್ತು USB ಟೈಪ್-ಸಿ ಪೋರ್ಟ್ ಇವೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ