AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆ ಅಥವಾ ಚಳಿಗಾಲವಿರಲಿ, ಈ ಹಾಟ್-ಕೋಲ್ಡ್ ಎಸಿ ಜನರ ಮೊದಲ ಆಯ್ಕೆ: ಬೆಲೆ ಕೂಡ ಕಡಿಮೆ

Best 1.5 Ton Air Conditioners: ಸುಡುವ ಬಿಸಿ ವಾತಾವರಣವು ನಿಮ್ಮನ್ನು ಬೆವರುವಂತೆ ಮಾಡುತ್ತಿದೆಯೇ?. ಮತ್ತೊಂತರಡೆ ಚಳಿಯಿಂದ ಮುಕ್ತಿ ಪಡೆಯಲು ಆಗುತ್ತಿಲ್ಲವೇ?. ಇವೆಲ್ಲದರಿಂದ ಪಾರಾಗಲು ಮಾರುಕಟ್ಟೆಯಲ್ಲಿ ಹೊಸ ಆಯ್ಕೆ ಇದೆ. ಬಿಸಿ ಮತ್ತು ತಣ್ಣನೆಯ ಎಸಿಯನ್ನು ಚಳಿಗಾಲ ಮತ್ತು ಬೇಸಿಗೆ ಕಾಲಗಳಲ್ಲಿ ಬಳಸಬಹುದು.

ಬೇಸಿಗೆ ಅಥವಾ ಚಳಿಗಾಲವಿರಲಿ, ಈ ಹಾಟ್-ಕೋಲ್ಡ್ ಎಸಿ ಜನರ ಮೊದಲ ಆಯ್ಕೆ: ಬೆಲೆ ಕೂಡ ಕಡಿಮೆ
best Air Conditioners
Vinay Bhat
|

Updated on: Feb 08, 2024 | 12:16 PM

Share

ಈಗಿನ ವಾತಾವರಣ (Weather) ಹೇಗಿದೆ ಎಂದರೆ ಹಗಲು ಸೆಕೆ, ರಾತ್ರಿ ಚಳಿ. ಇದರಿಂದ ಮುಕ್ತಿ ಪಡೆಯಲು ಜನ ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಕೆಲವರು ಚಳಿಗೆ ಬೆಂಕಿಯ ಮೂಲಕ ಪರಿಹಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ, ಇನ್ನು ಕೆಲವರು ಮನೆಗಳಲ್ಲಿ ಹೀಟರ್, ಬ್ಲೋವರ್ ಬಳಸುತ್ತಿದ್ದಾರೆ. ಸೆಕೆ ಫ್ಯಾನ್ ಹಾಕಿದರೂ ಅದು ಸಾಕಾಗುತ್ತಿಲ್ಲ. ಇದರಿಂದ ಜನರಿಗೆ ಪರಿಹಾರ ಸಿಗುತ್ತಿಲ್ಲ. ಇವೆಲ್ಲದರ ನಡುವೆ ಚಳಿಯಿಂದ ಮತ್ತು ಸೆಕೆಯಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ಹೊಸ ಆಯ್ಕೆ ಇದೆ. ಇದು ಬೇಸಿಗೆಯಲ್ಲಿ ತಂಪಾದ ಗಾಳಿ ಮತ್ತು ಚಳಿಗಾಲದಲ್ಲಿ ಬಿಸಿಯ ಅನುಭವವನ್ನು ನೀಡುತ್ತದೆ. ಇಲ್ಲಿ ನಾವು ನಿಮಗೆ ಬಿಸಿ ಮತ್ತು ತಣ್ಣನೆಯ ಹವಾನಿಯಂತ್ರಣಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

ವೋಲ್ಟಾಸ್ 1.5 ಟನ್ 3 ಸ್ಟಾರ್ ಹಾಟ್ ಮತ್ತು ಕೋಲ್ಡ್ ಎಸಿ

1.5 ಟನ್ ವೋಲ್ಟೇಜ್​ನ ಈ ಸ್ಪ್ಲಿಟ್ ಇನ್ವರ್ಟರ್ ಎಸಿ ವಿದ್ಯುತ್ ಉಳಿತಾಯಕ್ಕಾಗಿ 3 ಸ್ಟಾರ್ ರೇಟಿಂಗ್ ಹೊಂದಿದೆ. 111 ರಿಂದ 150 ಚದರ ಅಡಿವರೆಗಿನ ಜಾಗ ಈ ಸ್ಪ್ಲಿಟ್ ಎಸಿಗೆ ಸಾಕು. ಈ ಇನ್ವರ್ಟರ್ ಸ್ಪ್ಲಿಟ್ ಎಸಿ ಅಮೆಜಾನ್‌ನಲ್ಲಿ ರೂ. 75,900 ಕ್ಕೆ ಪಟ್ಟಿಮಾಡಲಾಗಿದೆ. ನೀವು ಪ್ರಸ್ತುತ 46 ಶೇಕಡಾ ರಿಯಾಯಿತಿಯಲ್ಲಿ ಕೇವಲ 40,895 ರೂ. ಗಳಲ್ಲಿ ಇದನ್ನು ಖರೀದಿಸಬಹುದು. ಇದು 1.5 ಟನ್ ವೋಲ್ಟಾಸ್​ನ 3 ಸ್ಟಾರ್ ಹಾಟ್ ಮತ್ತು ಕೋಲ್ಡ್ ಎಸಿ ಕಂಪ್ರೆಸರ್‌ನಲ್ಲಿ 1 ವರ್ಷದ ವಾರಂಟಿ ಮತ್ತು 10 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ.

ಅಸಲಿ ಮತ್ತು ನಕಲಿ ಚಿನ್ನ ಚೆಕ್ ಮಾಡೋದು ಹೇಗೆ ಗೊತ್ತಾ?

ಇದನ್ನೂ ಓದಿ
Image
ಟೆಲಿಕಾಂ ಕಂಪನಿಗಳಿಗೆ ಶಾಕ್ ನೀಡಿದ ಟ್ರಾಯ್: ಬರೋಬ್ಬರಿ 110 ಕೋಟಿ ದಂಡ
Image
18GB ಡೇಟಾ ಫ್ರೀ, 14 OTT ಪ್ರವೇಶ: ಇದು ಜಿಯೋದ ಟ್ರೆಂಡಿಂಗ್ ಪ್ಲಾನ್
Image
ಭಾರತದಲ್ಲಿ ಮೊದಲ ಸೇಲ್ ಕಾಣುತ್ತಿದೆ ರಿಯಲ್ ಮಿ 12 ಪ್ರೊ ಸ್ಮಾರ್ಟ್​ಫೋನ್
Image
ಜಿಯೋ ಇದ್ರೆ ಕಾಲ್ ಹಿಸ್ಟರಿ ನೋಡೋದು ಈಸಿ!

ಪ್ಯಾನಾಸೋನಿಕ್ 1.5 ಟನ್ 3 ಸ್ಟಾರ್ ಎಸಿ

ಪ್ಯಾನಾಸೋನಿಕ್​ನ ಈ ಸ್ಪ್ಲಿಟ್ ಇನ್ವರ್ಟರ್ ಎಸಿ ಬೆಲೆ 61,400 ರೂ. ನೀವು ಪ್ರಸ್ತುತ ರೂ. 17,410 ರ ರಿಯಾಯಿತಿಯಲ್ಲಿ ಕೇವಲ ರೂ. 43,990 ಕ್ಕೆ ಇದನ್ನು ಖರೀದಿಸಬಹುದು. ಟ್ವಿನ್ ಕೂಲ್, ಪಿಎಂ 0.1 ಏರ್ ಪ್ಯೂರಿಫೈಯರ್ ಫಿಲ್ಟರ್‌ನಂತಹ ವೈಶಿಷ್ಟ್ಯಗಳನ್ನು ಈ ಎಸಿಯಲ್ಲಿ ನೀಡಲಾಗಿದೆ. ಅಮೆಜಾನ್ ಅಲೆಕ್ಸಾ ಮೂಲಕ ಪ್ಯಾನಾಸೋನಿಕ್‌ನ ಈ ಇನ್ವರ್ಟರ್ ಎಸಿಯನ್ನು ನೀವು ನಿಯಂತ್ರಿಸಬಹುದು. ಅಲ್ಲದೆ, ಕಂಪನಿಯು ಈ ಎಸಿಯಲ್ಲಿ 1 ವರ್ಷದ ಮತ್ತು 10 ವರ್ಷಗಳ ಕಂಪ್ರೆಸರ್ ವಾರಂಟಿಯನ್ನು ಒದಗಿಸುತ್ತದೆ.

LG 3 ಸ್ಟಾರ್ (1.5) ಸ್ಪ್ಲಿಟ್ AC

LG ಯ ಈ ಬಿಸಿ ಮತ್ತು ತಂಪು ಹವಾನಿಯಂತ್ರಣವನ್ನು 79,999 ರೂ. ಗಳಿಗೆ ಪಟ್ಟಿ ಮಾಡಲಾಗಿದೆ, ನೀವು ಪ್ರಸ್ತುತ 41 ಪ್ರತಿಶತದಷ್ಟು ರಿಯಾಯಿತಿಯಲ್ಲಿ ಕೇವಲ 46,990 ರೂ. ಗಳಲ್ಲಿ ಖರೀದಿಸಬಹುದು. ಡ್ಯುಯಲ್ ಇನ್ವರ್ಟರ್ ಕಂಪ್ರೆಸರ್ ಮತ್ತು 5 ಇನ್ 1 ಕೂಲಿಂಗ್‌ನಂತಹ ವೈಶಿಷ್ಟ್ಯಗಳನ್ನು ಈ ಎಸಿಯಲ್ಲಿ ನೀಡಲಾಗಿದೆ. ಈ ಇನ್ವರ್ಟರ್ ಎಸಿಯಲ್ಲಿ, ಕಂಪನಿಯು ಕಂಪ್ರೆಸರ್‌ನಲ್ಲಿ 10 ವರ್ಷಗಳ ವಾರಂಟಿ ಮತ್ತು ಪಿಸಿಬಿಯಲ್ಲಿ 5 ವರ್ಷಗಳ ವಾರಂಟಿಯನ್ನು ಒದಗಿಸುತ್ತದೆ.

ಆ್ಯಪಲ್​ಗೆ ಬಿಗ್ ಶಾಕ್: 2024 ರ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಆ್ಯಪಲ್ ಹಿಂದಿಕ್ಕಿದ ಹುವೈ

ಲಾಯ್ಡ್ 1.5 ಟನ್ 4 ಸ್ಟಾರ್ ವಿಂಡೋ ಎಸಿ

ಲಾಯ್ಡ್ 1.5 ಟನ್ 4 ಸ್ಟಾರ್ ವಿಂಡೋ ಎಸಿ ಬೆಲೆ ಮತ್ತು 4-ಸ್ಟಾರ್ ರೇಟಿಂಗ್‌ನಿಂದ ಕೂಡಿದ್ದು, ಅತ್ಯುತ್ತಮ ಬಜೆಟ್ ಆಯ್ಕೆಯಾಗಿದೆ. ಇದು 100% ತಾಮ್ರದ ಕಂಡೆನ್ಸರ್‌ನೊಂದಿಗೆ ಬೆಸ್ಟ್ ಕೂಲಿಂಗ್ ಅನ್ನು ಒದಗಿಸುತ್ತದೆ.

ಬ್ಲೂ ಸ್ಟಾರ್ 1.5 ಟನ್ 3 ಸ್ಟಾರ್ ಕನ್ವರ್ಟಿಬಲ್ ಇನ್ವರ್ಟರ್ ಸ್ಪ್ಲಿಟ್ ಎಸಿ

ಬ್ಲೂ ಸ್ಟಾರ್‌ನ 3-ಸ್ಟಾರ್ ಎಸಿ, ಕನ್ವರ್ಟಿಬಲ್ 4-ಇನ್-1 ಕೂಲಿಂಗ್ ಮತ್ತು ಮಲ್ಟಿ-ಸೆನ್ಸರ್‌ಗಳನ್ನು ಹೊಂದಿದ್ದು, ದೊಡ್ಡ ರೂಮ್​ಗಳಿಗೆ ಸೂಕ್ತವಾಗಿದೆ. ಇದರ ಶಕ್ತಿಯುತ ಕೂಲಿಂಗ್ ಸಾಮರ್ಥ್ಯಗಳು, self-diagnosis ವೈಶಿಷ್ಟ್ಯ ಮತ್ತು ಸ್ಮಾರ್ಟ್-ರೆಡಿ ಆಯ್ಕೆ ವಿಶಾಲವಾದ ಪ್ರದೇಶಗಳಿಗೆ ಅತ್ಯುತ್ತಮವಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ