Galaxy XCover 7: ಕಬ್ಬಿಣದಂತೆ ಬಲಶಾಲಿ, ಕೆಳಗೆ ಬಿದ್ದರೆ ಏನೂ ಆಗಲ್ಲ: ಸ್ಯಾಮ್ಸಂಗ್ನಿಂದ ಅದ್ಭುತ ಫೋನ್ ಬಿಡುಗಡೆ
Samsung Galaxy XCover 7 Launched: ಪ್ರಸಿದ್ಧ ಸ್ಯಾಮ್‌ಸಂಗ್ ಕಂಪನಿ ಹೊಸ ಗ್ಯಾಲಕ್ಸಿ XCover 7 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಅತ್ಯಂತ ಬಲಿಷ್ಠವಾದ ಫೋನ್ ಆಗಿದ್ದು, ಕೆಳಗೆ ಬಿದ್ದರೆ ಏನೂ ಆಗುವುದಿಲ್ಲ. ಮಿಲಿಟರಿ-ದರ್ಜೆಯ (MIL-STD-810H) ರಗಡ್ ಫೋನ್ ಇದಾಗಿದೆ.

ಇಂದು ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳು ಲಭ್ಯವಿರುವ ಕಾರಣ ಅದರ ಬಗ್ಗೆ ಜಾಗರೂಕತೆ ಕಡಿಮೆ. ಹೀಗಾಗಿ ಅನೇಕ ಜನರ ಕೈಯಲ್ಲಿ ಮೊಬೈಲ್ ಫೋನ್‌ಗಳು ಚೆನ್ನಾಗಿ ಉಳಿಯುವುದಿಲ್ಲ. ಅದು ಆಗಾಗ್ಗೆ ಬೀಳುತ್ತಲೇ ಇರುತ್ತದೆ. ಇದರಿಂದ ಮೊಬೈಲ್‌ಗೆ ಹಾನಿಯಾಗಿ ಕೆಲಸ ಮಾಡುವುದು ನಿಲ್ಲಿಸುತ್ತದೆ. ಇದನ್ನು ಮನಗಂಡು ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿ ಪರಿಹಾರವನ್ನು ಕಂಡುಕೊಂಡಿದೆ. ಸ್ಯಾಮ್‌ಸಂಗ್ ಇದೀಗ ಹೊಸದಾಗಿ ಗ್ಯಾಲಕ್ಸಿ XCover 7 (Samsung Galaxy XCover 7) ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಯಾಮ್‌ಸಂಗ್ ಮೊಬೈಲ್ ಫೋನ್‌ನ ಪ್ರಮುಖ ವೈಶಿಷ್ಟ್ಯ ಇದು ಅತ್ಯಂತ ಶಕ್ತಿಯುತವಾಗಿವೆ. ಮಿಲಿಟರಿ-ದರ್ಜೆಯ (MIL-STD-810H) ರಗಡ್ ಫೋನ್ ಇದಾಗಿದೆ.
ರಗಡ್ ಫೋನ್ (ಒರಟಾದ ಫೋನ್) ಎಂದರೆ ಇದು ಎಲ್ಲ ರೀತಿಯಲ್ಲೂ ಸ್ಟ್ರಾಂಗ್ ಫೋನ್. ಈ ಫೋನಿನ ವಿನ್ಯಾಸ ಬಹಳ ವಿಶೇಷವಾಗಿದೆ. ಈ ಸ್ಮಾರ್ಟ್‌ಫೋನ್ ಹವಾಮಾನ, ತಾಪಮಾನ, ಆಕಸ್ಮಿಕವಾಗಿ ಹಾನಿಯಾದರೆ ಮತ್ತು ಮಳೆಯ ಹನಿಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಅದಕ್ಕಾಗಿಯೇ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ಗ್ಯಾಲಕ್ಸಿ XCover 7 ಬೆಲೆ ಮತ್ತು ವೈಶಿಷ್ಟ್ಯ ಇಲ್ಲಿದೆ ನೋಡಿ.
ಭಾರತದಲ್ಲಿ ಮೊದಲ ಸೇಲ್ ಕಾಣುತ್ತಿದೆ ರಿಯಲ್ ಮಿ 12 ಪ್ರೊ ಸ್ಮಾರ್ಟ್‌ಫೋನ್: ಇಂದೇ ಖರೀದಿಸಿ
ಗ್ಯಾಲಕ್ಸಿ XCover 7 ಫೀಚರ್ಸ್:
ಡಿಸ್‌ಪ್ಲೇ: ಈ ಸ್ಮಾರ್ಟ್‌ಫೋನ್ 60 Hz ರಿಫ್ರೆಶ್ ದರದೊಂದಿಗೆ ಬರುತ್ತದೆ. 6.6 ಇಂಚಿನ ಪೂರ್ಣ HD TFT ಡಿಸ್‌ಪ್ಲೇ ಹೊಂದಿದೆ. ಕಂಪನಿಯು ಡಿಸ್ಪ್ಲೇಯ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಬಳಸಿದೆ.
ಚಿಪ್‌ಸೆಟ್: ವೇಗ ಮತ್ತು ಬಹುಕಾರ್ಯಕ್ಕಾಗಿ, ಈ ಹ್ಯಾಂಡ್‌ಸೆಟ್ 6nm ಆಧಾರಿತ ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ.
ಕ್ಯಾಮೆರಾ – ಸ್ಟೋರೇಜ್: ಈ ಸ್ಮಾರ್ಟ್‌ಫೋನ್‌ನ ಹಿಂಭಾಗವು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಮುಂಭಾಗದಲ್ಲಿ, ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕ ಇದೆ. 128 GB ಸಂಗ್ರಹಣೆಯನ್ನು ಮೈಕ್ರೊ SD ಕಾರ್ಡ್‌ನ ಸಹಾಯದಿಂದ 1 TB ವರೆಗೆ ವಿಸ್ತರಿಸಬಹುದು.
ಭಾರತದಲ್ಲಿ ಮೊದಲ ಸೇಲ್ ಕಾಣುತ್ತಿದೆ ಒನ್ಪ್ಲಸ್ 12R: ಬೆಲೆ ಎಷ್ಟು?, ಏನಿದೆ ಆಫರ್?
ಸಂಪರ್ಕ: ಗ್ಯಾಲಕ್ಸಿ XCover 7 ಫೋನ್ 4G LTE, Wi-Fi ಡೈರೆಕ್ಟ್, 5G, Wi-Fi 802.11 ಬೆಂಬಲ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಜೊತೆಗೆ ಪೊಗೊ ಪಿನ್, NFC ಮತ್ತು GPS ಬೆಂಬಲವನ್ನು ಹೊಂದಿದೆ.
ಇತರೆ ವೈಶಿಷ್ಟ್ಯಗಳು: ಈ ಸ್ಮಾರ್ಟ್‌ಫೋನ್‌ನಲ್ಲಿ ಎಕ್ಸ್‌ಕವರ್ ಕೀ ನೀಡಲಾಗಿದೆ. ಧ್ವನಿಗಾಗಿ ಡಾಲ್ಬಿ ಅಟ್ಮಾಸ್ ಸೌಂಡ್ ತಂತ್ರಜ್ಞಾನವನ್ನೂ ಬಳಸಲಾಗಿದೆ.
ಭಾರತದಲ್ಲಿ ಗ್ಯಾಲಕ್ಸಿ XCover 7 ಬೆಲೆ:
ಗ್ಯಾಲಕ್ಸಿ XCover 7 ಸ್ಮಾರ್ಟ್‌ಫೋನ್‌ನ ಸ್ಟ್ಯಾಂಡರ್ಡ್ ಆವೃತ್ತಿಯ ಮಾದರಿಯ ಬೆಲೆ 27 ಸಾವಿರದ 208 ರೂಪಾಯಿಗಳಾಗಿರಲಿದೆ. ಈ ಫೋನ್ 6 GB RAM ಮತ್ತು 128 GB ಸ್ಟೋರೇಜ್ ರೂಪಾಂತರಗಳೊಂದಿಗೆ ಮಾತ್ರ ಬರುತ್ತದೆ. ಎರಡು ವರ್ಷಗಳವರೆಗೆ ವಾರಂಟಿ ಇದೆ. 128GB ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ, ಇದನ್ನು SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು. 240 ಗ್ರಾಂ. ತೂಕ ಇರುವ ಈ ಫೋನ್ ಮಿಲಿಟರಿ ದರ್ಜೆಯ ಪ್ರಮಾಣೀಕರಣವನ್ನು ಪಡೆದುಕೊಂಡಿದೆ, ಅಂದರೆ ಫೋನ್ ಕೆಳಗೆ ಬಿದ್ದರೆ ಹಾಳಾಗುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Thu, 8 February 24




