AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಮನೆಯಲ್ಲಿರುವ ವಾಟರ್ ಹೀಟರ್ ರಾಡ್ ಕೆಲಸ ಮಾಡುತ್ತಿಲ್ಲವೇ?: ಸುಲಭವಾಗಿ ನೀವೇ ಸರಿಪಡಿಸಿ

Immersion Rod Cleaning Tips: ನಿಮ್ಮ ಮನೆಯಲ್ಲಿ ನೀರನ್ನು ಬಿಸಿಮಾಡಲು ನೀವು ಎಲೆಕ್ಟ್ರಿಕ್ ರಾಡ್ ಅನ್ನು ಬಳಸುತ್ತಿದ್ದೀರಾ?. ಆದರೆ, ಇದು ಆಗಾಗ್ಗೆ ಸಮಸ್ಯೆ ನೀಡುತ್ತಿದ್ದೆಯಾ?. ನೀರು ಬೇಗನೆ ಬಿಸಿ ಮಾಡುತ್ತಿಲ್ವಾ?. ಈ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ. ಇದರ ಸಹಾಯದಿಂದ ನಿಮ್ಮ ಇಮ್ಮರ್ಶನ್ ರಾಡ್‌ ನೀರನ್ನು ವೇಗವಾಗಿ ಬಿಸಿಮಾಡುತ್ತದೆ. ಇದನ್ನು ಸ್ವಚ್ಛಗೊಳಿಸಲು ಇಲ್ಲಿದೆ ನೋಡಿ ಟಿಪ್ಸ್.

Tech Tips: ಮನೆಯಲ್ಲಿರುವ ವಾಟರ್ ಹೀಟರ್ ರಾಡ್ ಕೆಲಸ ಮಾಡುತ್ತಿಲ್ಲವೇ?: ಸುಲಭವಾಗಿ ನೀವೇ ಸರಿಪಡಿಸಿ
Water Heater Rod
Vinay Bhat
|

Updated on: Feb 08, 2024 | 12:50 PM

Share

ಇಂದು ಅನೇಕ ಮನೆಗಳಲ್ಲಿ ಬಿಸಿನೀರಿಗೆ ಗೀಸರ್‌ಗಳ ಬದಲಿಗೆ ಇಮ್ಮರ್ಶನ್ ರಾಡ್‌ಗಳನ್ನು (Immersion Rod) ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ರಾಡ್ ನಿಧಾನಗತಿಯಲ್ಲಿ ನೀರನ್ನು ಬಿಸಿಮಾಡುತ್ತದೆ. ಇದಲ್ಲದೆ, ಉಪ್ಪಿನಂತಹ ಅಂಶಗಳು ಅದರ ಮೇಲೆ ಅಂಡಿಗಳ್ಳಲು ಪ್ರಾರಂಭಿಸುತ್ತದೆ. ಹೀಗಾದಾಗ ಜನರು ಇದು ಹಾಳಾಗಿದೆ ಎಂದು ಹೊಸ ರಾಡ್ ಖರೀದಿಸಲು ಯೋಚಿಸುತ್ತಾರೆ. ಆದರೆ ರಾಡ್ ನೀರನ್ನು ಬಿಸಿ ಮಾಡಿಲ್ಲ ಎಂದಾದರೆ ಅದರ ಹಿಂದೆ ಬೇರೆ ಕಾರಣಗಳಿರಬಹುದು. ವಾಟರ್ ಹೀಟಿಂಗ್ ರಾಡ್ ಅನ್ನು ಸರಿ ಮಾಡುವುದು ಹೇಗೆ?, ಯಾವರೀತಿ ಸ್ವಚ್ಛಗೊಳಿಸಬಹುದು? ಎಂಬುದನ್ನು ಇಲ್ಲಿ ನಾವು ನಿಮಗೆ ಹೇಳುತ್ತೇವೆ.

ಇಮ್ಮರ್ಶನ್ ರಾಡ್​ನಲ್ಲಿ ಉಪ್ಪಿನಂತಹ ಅಂಶಗಳು ಕಂಡುಬಂದರೆ ಜನರು ಬಟ್ಟೆಗಳ ಮೂಲಕ ಉಚ್ಚುತ್ತಾರೆ, ಆದರೆ ಅದು ಹೋಗುವುದಿಲ್ಲ. ನಂತರ ಅದನ್ನು ಸ್ವಚ್ಛಗೊಳಿಸಲು ಸ್ಕ್ರಾಚ್ ಮಾಡುತ್ತಾರೆ. ಆದರೆ ಈ ಎರಡೂ ವಿಧಾನಗಳಿಂದ, ನಿಮ್ಮ ರಾಡ್ ಹಾನಿಯಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ, ಉಪ್ಪನ್ನು ತೆಗೆದುಹಾಕಲು ನೀವು ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಬಹುದು.

ನಿಮ್ಮ ಆಂಡ್ರಾಯ್ಡ್ ಫೋನ್ ಸಂಪೂರ್ಣ ಐಫೋನ್ ಆಗುತ್ತದೆ: ಇಲ್ಲಿದೆ ನೋಡಿ ಟ್ರಿಕ್

ಇದನ್ನೂ ಓದಿ
Image
ಬೇಸಿಗೆ ಅಥವಾ ಚಳಿಗಾಲವಿರಲಿ, ಈ ಹಾಟ್-ಕೋಲ್ಡ್ ಎಸಿ ಜನರ ಮೊದಲ ಆಯ್ಕೆ
Image
ಟೆಲಿಕಾಂ ಕಂಪನಿಗಳಿಗೆ ಶಾಕ್ ನೀಡಿದ ಟ್ರಾಯ್: ಬರೋಬ್ಬರಿ 110 ಕೋಟಿ ದಂಡ
Image
18GB ಡೇಟಾ ಫ್ರೀ, 14 OTT ಪ್ರವೇಶ: ಇದು ಜಿಯೋದ ಟ್ರೆಂಡಿಂಗ್ ಪ್ಲಾನ್
Image
ಭಾರತದಲ್ಲಿ ಮೊದಲ ಸೇಲ್ ಕಾಣುತ್ತಿದೆ ರಿಯಲ್ ಮಿ 12 ಪ್ರೊ ಸ್ಮಾರ್ಟ್​ಫೋನ್

ಹೈಡ್ರೋಜನ್ ಪೆರಾಕ್ಸೈಡ್:

ಹೈಡ್ರೋಜನ್ ಪೆರಾಕ್ಸೈಡ್ ಮೂಲಕ ನೀವು ಅನೇಕ ಗೃಹೋಪಯೋಗಿ ಉಪಕರಣಗಳನ್ನು ಸ್ವಚ್ಛಗೊಳಿಸಬಹುದು. ಇದರ ಮೂಲಕ ಇಮ್ಮರ್ಶನ್ ರಾಡ್ ಅನ್ನು ಸುಲಭವಾಗಿ ಸರಿ ಪಡಿಸಬಹುದು. ಇದಕ್ಕಾಗಿ ನೀವು ಕೇವಲ 1-2 ಲೀಟರ್ ನೀರಿನಲ್ಲಿ 5 ಚಮಚ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಸೇರಿಸಿ. ನಂತರ, ಈ ದ್ರಾವಣದಲ್ಲಿ 10 ನಿಮಿಷಗಳ ಕಾಲ ರಾಡ್ ಅನ್ನು ನೆನೆಸಿ. ಇದನ್ನು ಮಾಡಿದ ನಂತರ, ಮರಳು ಕಾಗದದಿಂದ ಉಜ್ಜಿ ಸ್ವಚ್ಚಗೊಳಿಸಬಹುದು.

Water Heater Rod

ಇಮ್ಮರ್ಶನ್ ರಾಡ್‌

ವಿನೆಗರ್:

ಸಾಮಾನ್ಯವಾಗಿ, ನಿಮ್ಮ ಅಡುಗೆಮನೆಯಲ್ಲಿ ವಿನೆಗರ್ ಅನ್ನು ಅಡುಗೆಗೆ ಬಳಸಲಾಗುತ್ತದೆ. ಇದರ ಮೂಲಕ ಇಮ್ಮರ್ಶನ್ ರಾಡ್ ಅನ್ನು ಕೂಡ ಸರಿ ಮಾಡಬಹುದು. ಇದಕ್ಕಾಗಿ ನೀವು ಬಕೆಟ್​ನಲ್ಲಿ ನೀರನ್ನು ತೆಗೆದುಕೊಳ್ಳಬೇಕು (ರಾಡ್ ಮುಳುಗುವಷ್ಟು ಸಾಕು), ಈಗ ಅದರಲ್ಲಿ ಸ್ವಲ್ಪ ವಿನೆಗರ್ ಸೇರಿಸಿ. ನಂತರ ಇಮ್ಮರ್ಶನ್ ರಾಡ್ ಅನ್ನು ವಿನೆಗರ್‌ನಲ್ಲಿ 4 ರಿಂದ 5 ಗಂಟೆಗಳ ಕಾಲ ನೆನೆಸಿಡಿ. ಬಳಿಕ ರಾಡ್​ನ ಮೇಲಿನ ಬಿಳಿ ಪದರವು ಕರಗಲು ಪ್ರಾರಂಭವಾಗಿ ಸ್ವಚ್ಚವಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ