Covid test: ಎದೆಯ ಎಕ್ಸ್​-ರೇಗಳ ಮೂಲಕ ಕೋವಿಡ್​-19 ಶೀಘ್ರ ಪತ್ತೆ ಹಚ್ಚಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಲ್ಗೊರಿದಂ ಅಭಿವೃದ್ಧಿ

|

Updated on: May 07, 2021 | 7:12 PM

ಎದೆಯ ಎಕ್ಸ್​ರೇ ಮೂಲಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ಕೆಲವೇ ನಿಮಿಷಗಳಲ್ಲಿ ಕೋವಿಡ್-19 ಕಂಡುಹಿಡಿಯುವಂಥ ಸಾಧನವನ್ನು ಡಿಆರ್​ಡಿಒ ಮತ್ತು ಸಿಎಐಆರ್​ನಿಂದ ಸೃಷ್ಟಿಸಲಾಗಿದೆ.

Covid test: ಎದೆಯ ಎಕ್ಸ್​-ರೇಗಳ ಮೂಲಕ ಕೋವಿಡ್​-19 ಶೀಘ್ರ ಪತ್ತೆ ಹಚ್ಚಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಲ್ಗೊರಿದಂ ಅಭಿವೃದ್ಧಿ
ಸಾಂದರ್ಭಿಕ ಚಿತ್ರ
Follow us on

ಎದೆಯ ಎಕ್ಸ್​-ರೇಗಳ ಮೂಲಕ ಕೋವಿಡ್​-19 ಶೀಘ್ರವಾಗಿ ಪತ್ತೆ ಮಾಡುವುದಕ್ಕೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI)ಆಲ್ಗೊರಿದಂ ಅನ್ನು ಡಿಫೆನ್ಸ್ ರೀಸರ್ಚ್ ಅಂಡ್ ಡೆವಲಪ್​ಮೆಂಟ್ ಆರ್ಗನೈಸೇಷನ್ (DRDO) ಮತ್ತು ಸೆಂಟರ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ರೋಬೋಟಿಕ್ಸ್ (CAIR) ಸೃಷ್ಟಿ ಮಾಡಿದೆ. ಇದನ್ನು ಡೆವಲಪ್ ಮಾಡಿದವರ ಪ್ರಕಾರ, ಈ ಸಾಧನಕ್ಕೆ Atman AI ಎಂದು ಹೆಸರಿಡಲಾಗಿದೆ. ಎದೆಯ ಎಕ್ಸ್​ರೇ ಸ್ಕ್ರೀನಿಂಗ್​ಗೆ ಬಳಸಲಾಗುತ್ತದೆ. ಮತ್ತು ಶೇ 96.73ರಷ್ಟು ನಿಖರ ಫಲಿತಾಂಶ ಬರುತ್ತದೆ. CAIR, DRDO ನಿರ್ದೇಶಕ ಡಾ. ಯು.ಕೆ. ಸಿಂಗ್ ಮಾತನಾಡಿ, ಕೋವಿಡ್- 19 ರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಮತ್ತು ಶೀಘ್ರವಾಗಿ ಕೊರೊನಾ ಪತ್ತೆ ಹಚ್ಚಲು, ರೋಗ ಪತ್ತೆ ಹಚ್ಚುವ ಸಾಧನವನ್ನು ಕಂಡುಹಿಡಿದಿದ್ದರಿಂದ ಫ್ರಂಟ್​ಲೈನ್ ಸಹಭಾಗಿಗಳು ಮತ್ತು ಕ್ಲಿನಿಷಿಯನ್ಸ್​ಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಕೊರೊನಾವೈರಸ್​ ಪರೀಕ್ಷೆಗೆ ಇರುವ ವ್ಯವಸ್ಥೆ ಸೀಮಿತವಾಗಿದೆ. ಎಕ್ಸ್​-ರೇಗಳನ್ನು ಬಳಸಿ ಶೀಘ್ರವಾಗಿ ಫಲಿತಾಂಶವನ್ನು ಕಡುಹಿಡಿಯುವುದಕ್ಕೆ ಆರ್ಟಿಫಿಷಿಯನ್ ಇಂಟೆಜೆನ್ಸ್ ಸಾಧನ ಅಭಿವೃದ್ಧಿ ಪಡಿಸುವುದಕ್ಕೆ ಬಹಳ ಪ್ರಯತ್ನಗಳು ನಡೆಯುತ್ತಿವೆ. ಕೋವಿಡ್​ 19 ಅನ್ನು ಸೂಚ್ಯವಾಗಿ ರೇಡಿಯಾಲಜಿಕಲ್ ಮೂಲಕ ತಾನಾಗಿಯೇ ಪತ್ತೆ ಹಚ್ಚಲು ಸಹಾಯ ಆಗುತ್ತದೆ. ವಿಶೇಷವಾಗಿ ತುರ್ತು ಸಂದರ್ಭದಲ್ಲಿ ಇದನ್ನು ಪರೀಕ್ಷಿಸುವುದಕ್ಕೆ ಫಿಜಿಷಿಯನ್​ಗಳು ಮತ್ತು ರೇಡಿಯಾಲಜಿಸ್ಟ್​ಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ವಿವರಿಸಲಾಗಿದೆ.

ಎಕ್ಸ್​ರೇ ಬಳಸಿ ರೋಗವನ್ನು ಪತ್ತೆ ಹಚ್ಚುವುದು ವೇಗವಾಗಿ ಆಗುತ್ತದೆ. ಖರ್ಚು ಕಡಿಮೆ ಮತ್ತು ಪರಿಣಾಮಕಾರಿಯಾಗಿರುತ್ತದೆ. ನಮ್ಮ ದೇಶದ ಸಣ್ಣ ಪಟ್ಟಣಗಳಲ್ಲಿ ಎಲ್ಲಿ ಸಿ.ಟಿ. ಸ್ಕ್ಯಾನ್ ಸುಲಭವಾಗಿ ಸಿಗುವುದಿಲ್ಲವೋ ಅಂಥಲ್ಲಿ ಸಹಾಯ ಆಗುತ್ತದೆ. ಇದರಿಂದ ರೇಡಿಯಾಲಜಿಸ್ಟ್​ಗಳ ಮೇಲಿನ ಹೊರೆ ಕಡಿಮೆ ಆಗುತ್ತದೆ. ಸದ್ಯಕ್ಕೆ ಕೋವಿಡ್​ಗೆ ಬಳಸುವ ಸಿ.ಟಿ. ಮಶೀನ್​ಗಳನ್ನು ಬೇರೆ ಕಾಯಿಲೆಗಳಿಗೆ ಬಳಸಬಹುದು ಎಂದು ಡೆಲವಪರ್​ಗಳು ಹೇಳಿದ್ದಾರೆ.

RT- PCR ಪಾಸಿಟಿವ್ ಇರುವ ರೋಗಿಯ ಎದೆಯ ಎಕ್ಸ್​-ರೇಗಳನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಾಡೆಲ್​ಗಳನ್ನು ಬಳಸಿ, ವಿವಿಧ ಹಂತಗಳಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ. ಆಳವಾದ ಅಧ್ಯಯನ ಅಪ್ಲಿಕೇಷನ್​ಗಳನ್ನು ದೇಶೀಯವಾಗಿ CAIR- DRDOನಿಂದ ಅಭಿವೃದ್ಧಿ ಮಾಡಲಾಗಿದೆ. ಕೋವಿಡ್- 19 ಸ್ಕ್ರೀನಿಂಗ್​ಗಾಗಿ ಎದೆಯ ಡಿಜಿಟಲ್ ಎಕ್ಸ್​-ರೇಗಳನ್ನು ಬಳಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಈ ಮಧ್ಯೆ ರೇಡಿಯಾಲಜಿಸ್ಟ್​ ಡಿಜಿಟಲ್ ನೆಟ್​ವರ್ಕ್​ಗಳ 5C ನೆಟ್​ವರ್ಕ್ ದೇಶದಲ್ಲಿ 1000 ಆಸ್ಪತ್ರೆಗಳಲ್ಲಿ ಬಳಸಲು ನಿರ್ಧರಿಸಿದೆ. ಇದಕ್ಕೆ ಎಚ್​ಸಿಜಿ ಅಕೆಡಮಿಕ್ಸ್ ಬೆಂಬಲ ಪಡೆಯಲಾಗಿದೆ. ಈಗಿನ ಈ ಸಾಧನದಿಂದ ಸಮಯಕ್ಕೆ, ಸರಿಯಾದ ಚಿಕಿತ್ಸೆ ಒದಗಿಸಲು ಸಹಾಯ ಆಗುತ್ತದೆ ಎಂದು 5C ನೆಟ್​ವರ್ಕ್ ಸಿಇಒ ಕಲ್ಯಾಣ್ ಶಿವಶೈಲಮ್ ಹೇಳಿದ್ದಾರೆ. ಎಚ್​ಸಿಜಿ ಕ್ಯಾನ್ಸರ್ ಆಸ್ಪತ್ರೆ ಡೀನ್ ಡಾ. ವಿಶಾಲ್ ರಾವ್ ಮಾತನಾಡಿ, ಆಸ್ಪತ್ರೆಯಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ನೆರವಾಗುತ್ತದೆ. ರೋಗಿಗಳು ಹಾಗೂ ಹೆಲ್ತ್​ಕೇರ್ ವ್ಯವಸ್ಥೆ ಮೇಲೆ ಹಣಕಾಸಿನ ಹೊರೆ ಆಗದಂತೆ ಇದು ಆಗುತ್ತದೆ. ಶ್ವಾಸಕೋಶದ ಕಾಯಿಲೆಯನ್ನು ಆರಂಭದಲ್ಲೇ ಕಂಡುಹಿಡಿಯಲು ಸಹಾಯ ಆಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್ ಸೋಂಕು ಬಂದ ಕೂಡಲೇ ಯಾರಿಗೂ ಆಕ್ಸಿಜನ್ ಕೊರತೆ ಇರುವುದಿಲ್ಲ. ಯಾರು ಆತಂಕಕ್ಕೆ ಒಳಗಾಗೋದು ಬೇಡ.

ಇದನ್ನೂ ಓದಿ: AI ಆಧಾರಿತ ಆಲ್ಗರಿದಂ ಬಳಸಿ ಸಂಗಾತಿ ಆಯ್ಕೆ, ರಾಜಕೀಯ ನಾಯಕರಿಗೆ ವೋಟು; ಏನ್ ಸ್ವಾಮಿ ಇದೆಲ್ಲಾ?

(DRDO and CAIR developed AI algorithm to find Covid through Xrays analysing in minutes)