ವಾಟ್ಸಾಪ್ (Whats App), ಫೇಸ್ಬುಕ್ (Facebook), ಇನ್ಸ್ಟಾಗ್ರಾಂಗಳನ್ನು (Instagram) ಓಪನ್ ಮಾಡಿದರೆ ಅಲ್ಲಿ ನಾನಾ ರೀತಿಯ ಇಮೋಜಿಗಳಿರುತ್ತವೆ. ಹತ್ತಾರು ಪದಗಳಲ್ಲಿ ಹೇಳುವುದನ್ನು ಒಂದು ಇಮೋಜಿಯಲ್ಲಿ ಸುಲಭವಾಗಿ ವಿವರಿಸಿಬಿಡಬಹುದು. ಅದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಇಮೋಜಿಗಳ ಕಾರುಬಾರು ಹೆಚ್ಚಾಗಿದೆ. ಇದೀಗ ಪಿಂಚ್ಡ್ ಫಿಂಗರ್ (Pinched Fingers) ಇಮೋಜಿಗಳು ಸಾಕಷ್ಟು ಜನಪ್ರಿಯವಾಗಿವೆ. ಈ ಇಮೋಜಿಗಳು ಅಪನಂಬಿಕೆಯ ಸಂಕೇತವೇ? ಇತರರನ್ನು ಶಾಂತವಾಗಿರುವಂತೆ ಕೇಳುವ ಮಾರ್ಗವೇ? ಅಥವಾ ಕೆ-ಪಾಪ್ ತಾರೆಯಿಂದ ಜನಪ್ರಿಯವಾದ ಶೈಲಿಯೇ? ಇದನ್ನು “ಪಿಂಚ್ಡ್ ಫಿಂಗರ್‌ಗಳು” ಎಂದು ಕರೆಯಲಾಗುತ್ತದೆ. ನೀವು ಯಾವ ಪ್ರದೇಶದಲ್ಲಿ ಇದ್ದೀರಿ ಎಂಬುದರ ಆಧಾರದ ಮೇಲೆ ಇಮೋಜಿಗಳಿಗೆ ಅಲ್ಲಿ ನೀಡುವ ವ್ಯಾಖ್ಯಾನ, ಅರ್ಥ ಕೂಡ ಬದಲಾಗುತ್ತದೆ.
ಇಮೋಜಿಯ ರಚನೆಕಾರರ ಪ್ರಕಾರ, ಒಬ್ಬ ಇಟಾಲಿಯನ್ “ನಿಮಗೆ ಏನು ಬೇಕು?” ಎಂದು ಕೇಳುವ ರೀತಿಯಲ್ಲಿ ಈ ಇಮೋಜಿಯನ್ನು ರಚಿಸಲಾಗಿದೆ. ಆದರೆ ಜನವರಿ 2020ರಲ್ಲಿ ಈ ಇಮೋಜಿ ಪ್ರಾರಂಭವಾದಾಗಿನಿಂದ ವಿಶ್ವಾದ್ಯಂತ ಅದಕ್ಕೆ ವಿಭಿನ್ನ ವ್ಯಾಖ್ಯಾನಗಳನ್ನು ನೀಡಲಾಗುತ್ತಿದೆ.
ಈ ಇಮೋಜಿಗಾಗಿ 14 ಪುಟದ ಪ್ರಸ್ತಾವನೆ ಸಲ್ಲಿಸಲಾಗಿದ್ದು, “ಪಿಂಚ್ಡ್ ಫಿಂಗರ್ಸ್” ಐಕಾನ್ ರಚನೆಕಾರರು ಇದು ಇಟಾಲಿಯನ್ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ಸೂಚಿಸಿದ್ದಾರೆ. ಇಟಾಲಿಯನ್ನರು ತಮ್ಮ ಕೈಗಳಿಂದ ಮಾತನಾಡುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಬೇರೆಡೆ ಇತರ ಅರ್ಥಗಳು ಬೇರೆ ಬೇರೆ ರೀತಿ ಇರಬಹುದು ಎಂದು ಅವರು ಹೇಳಿದ್ದಾರೆ.
In Israel, you generally use this gesture when you’re annoyed or angry with someone – it means “hold your horses,” “just a minute”, “be patient” or even “wtf?” Apparently, not everyone uses it this way. I’m guessing this new emoji is going to be confusing. https://t.co/7Ngje3Rd5V
— Kim Zetter (@KimZetter) January 29, 2020
ಈ ಇಮೋಜಿಯನ್ನು ಇಟಲಿ ಮತ್ತು ಇತರ ಮೆಡಿಟರೇನಿಯನ್ ದೇಶಗಳಲ್ಲಿ ಮಾತ್ರ ವ್ಯಾಪಕವಾಗಿ ಬಳಸಲಾಗುವುದು ಎಂದು ನಾವು ನಿರೀಕ್ಷಿಸಿದ್ದೆವು. ಇಟಾಲಿಯನ್ ಸಂಸ್ಕೃತಿ ಮತ್ತು ಜೀವನ ವಿಧಾನದ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ, ಹೆಚ್ಚು ವಿಶಾಲವಾಗಿ, ಪ್ರಪಂಚದಾದ್ಯಂತ ಈ ಇಮೋಜಿ ಮನ್ನಣೆ ಗಳಿಸಿದೆ. ಹೆಚ್ಚಿನ ಸಂಸ್ಕೃತಿಗಳಲ್ಲಿ ಬೆರಳುಗಳ ಈ ನಿರ್ದಿಷ್ಟ ಸಂರಚನೆಯನ್ನು ಬಳಸುವ ಜನರನ್ನು ನೀವು ಕಾಣಬಹುದು, ಇದು ಸರಳವಾದ ಸನ್ನೆಯ ಒಂದು ರೂಪವಾಗಿದೆ ಎಂದು ಈ ಇಮೋಜಿಯ ನಿರ್ಮಾತೃಗಳು ಹೇಳಿದ್ದಾರೆ.
New in Emoji 13.0: Pinched Fingers, with skin tone support #Emoji2020 https://t.co/nSYHGVUTJn pic.twitter.com/AFGuZf2azR
— Emojipedia ??? (@Emojipedia) January 29, 2020
ಅರಬ್ ಜಗತ್ತಿನಲ್ಲಿ ಇದು ತಾಯಿಯು ತನ್ನ ಮಗುವಿಗೆ ಬಳಸುವ ಒಂದು ಸೂಚಕವಾಗಿದೆ. ಈ ಪಿಂಚ್ಡ್ ಇಮೋಜಿಗೆ ಸಹಜವಾಗಿಯೇ ಹಲವಾರು ಹಾಸ್ಯಮಯವಾದ ವ್ಯಾಖ್ಯಾನಗಳು ಕೂಡ ಹೊರಹೊಮ್ಮಿವೆ. ಉದಾಹರಣೆಗೆ ಇದು ಊಟ ಮಾಡುವುದನ್ನು ಪ್ರತಿನಿಧಿಸುತ್ತದೆ ಎಂದು ಒಬ್ಬರು ಹೇಳಿದ್ದರೆ ಇನ್ನೊಬ್ಬರು ಇದು ಒಂದು ಚಿಟಿಕೆ ಉಪ್ಪನ್ನು ಪ್ರತಿನಿಧಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ.
New in Emoji 13.0: Pinched Fingers, with skin tone support #Emoji2020 https://t.co/nSYHGVUTJn pic.twitter.com/AFGuZf2azR
— Emojipedia ??? (@Emojipedia) January 29, 2020
ಒಂದು ಇಮೋಜಿಯನ್ನು ರಚಿಸಲು, ಒಬ್ಬ ವ್ಯಕ್ತಿಯು ಅದನ್ನು ಯೂನಿಕೋಡ್‌ನಲ್ಲಿ ಸೇರಿಸಲು ವಿವರವಾದ ಅಪ್ಲಿಕೇಶನ್ ಅನ್ನು ಮಾಡಬೇಕು. ಇದು ಆ್ಯಪಲ್ ಅಥವಾ ಗೂಗಲ್ ಉತ್ಪನ್ನವಾಗಿದ್ದರೂ ಒಂದೇ ಇಮೋಜಿಯು ವಿವಿಧ ಸಾಧನಗಳಲ್ಲಿ ಗೋಚರಿಸಬಹುದು.
ಇದನ್ನೂ ಓದಿ: ಸಾಮಾಜಿಕ ಜಾಲಾತಾಣಗಳಲ್ಲಿ ಈ ವರ್ಷ ಅತಿಹೆಚ್ಚು ಉಪಯೋಗಿಸಲ್ಪಟ್ಟಿರುವ ಇಮೋಜಿ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ