Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಲೈವ್ ಚರ್ಚೆಯಲ್ಲಿ​ ಕೃಷಿ ತಜ್ಞ ಬಾಳೆಹಣ್ಣಿನ ಗಾತ್ರದ ಬಗ್ಗೆ ಹೇಳುತ್ತಿದ್ದಂತೆ ಬಿದ್ದುಬಿದ್ದು ನಕ್ಕ ಪಾಕಿಸ್ತಾನಿ ಸುದ್ದಿ ನಿರೂಪಕಿ

ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಭಾರತೀಯ ಕ್ರಿಕೆಟರ್​ ಹರ್ಭಜನ್​ ಸಿಂಗ್​ ಕೂಡ ವಿಡಿಯೋ ಶೇರ್ ಮಾಡಿಕೊಂಡು ಅದಕ್ಕೆ, ಬಾಳೆ ಹಣ್ಣಿನ ಮತ್ತು ನಗುವಿನ ಇಮೋಜಿ ಕ್ಯಾಪ್ಷನ್​ ಕೊಟ್ಟಿದ್ದಾರೆ.

Video: ಲೈವ್ ಚರ್ಚೆಯಲ್ಲಿ​ ಕೃಷಿ ತಜ್ಞ ಬಾಳೆಹಣ್ಣಿನ ಗಾತ್ರದ ಬಗ್ಗೆ ಹೇಳುತ್ತಿದ್ದಂತೆ ಬಿದ್ದುಬಿದ್ದು ನಕ್ಕ ಪಾಕಿಸ್ತಾನಿ ಸುದ್ದಿ ನಿರೂಪಕಿ
ಸುದ್ದಿ ನಿರೂಪಕಿ ನಗುತ್ತಿರುವ ದೃಶ್ಯ
Follow us
TV9 Web
| Updated By: Lakshmi Hegde

Updated on: Nov 03, 2021 | 3:52 PM

ಸಾಮಾನ್ಯವಾಗಿ ಸುದ್ದಿ ವಾಹಿನಿಗಳಲ್ಲಿ ಯಾವುದೇ ತಜ್ಞರು, ಪರಿಣತರನ್ನು ಕರೆಸಿ ಅವರೊಂದಿಗೆ ಚರ್ಚೆಗಳನ್ನು ನಡೆಸಲಾಗುತ್ತದೆ. ಹೀಗೆ ಪಾಕಿಸ್ತಾನದ ಸುದ್ದಿ ವಾಹಿನಿಯೊಂದರಲ್ಲಿ ಅಂಥ ಅತಿಥಿಯೊಬ್ಬರನ್ನು ಕರೆಸಿ, ಅವರು ಹೇಳಿದ ಬಾಳೆಹಣ್ಣಿನ ಕತೆ ಕೇಳಿ, ಸುದ್ದಿ ನಿರೂಪಕಿ ಬಿದ್ದು ಬಿದ್ದು ನಕ್ಕಿದ್ದಾರೆ. ಈ ಫನ್ನಿ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಭರ್ಜರಿ ವೈರಲ್​ ಆಗಿದೆ. 

ಸುದ್ದಿ ನಿರೂಪಕಿಯ ಹೆಸರು ಅಲ್ವೀನಾ ಅಘಾ. ಪಾಕಿಸ್ತಾನದಲ್ಲಿ ಕೃಷಿ, ತೋಟಗಾರಿಕೆ ಅಭಿವೃದ್ಧಿ ಸಂಬಂಧ ಚರ್ಚಿಸಲು ಖವಾಜಾ ನವೀದ್ ಅಹ್ಮದ್ ಎಂಬುವರನ್ನು ಕರೆಸಲಾಗಿತ್ತು. ಅವರು ಪಾಕಿಸ್ತಾನದ ಅಭಿವೃದ್ಧಿ ಬಗ್ಗೆ ವಿಸ್ತರಿಸಲು ಬಾಳೆಹಣ್ಣಿನ ಉದಾಹರಣೆ ಕೊಡಲು ಪ್ರಾರಂಭಿಸಿದರು. ಪಾಕಿಸ್ತಾನ ಮತ್ತು ಭಾರತದಲ್ಲಿ ಬೆಳೆಯಲಾಗುವ ಬಾಳೆಹಣ್ಣುಗಳ ನಡುವಿನ ವ್ಯತ್ಯಾಸ ಹೇಳತೊಡಗಿದರು. ಮುಂಬೈನಲ್ಲಿ ಬೆಳೆಯುವ ಬಾಳೆ ಹಣ್ಣುಗಳ ಗಾತ್ರವೂ ದೊಡ್ಡದಾಗಿದ್ದು, ಪರಿಮಳವೂ ಅದ್ಭುತವಾಗಿರುತ್ತದೆ. ಒಳ್ಳೆಯ ಗುಣಮಟ್ಟದ ಹಣ್ಣುಗಳಾಗಿವೆ. ಒಂದು ಕೋಣೆಯಲ್ಲಿ ಆರೇ ಬಾಳೆಹಣ್ಣುಗಳನ್ನು ಇಟ್ಟರೂ ಸಾಕು ಇಡೀ ಕೋಣೆ ಬಾಳೆಹಣ್ಣಿನ ಪರಿಮಳದಿಂದ ತುಂಬಿಹೋಗುತ್ತದೆ ಎಂದು ವಿವರಿಸಿದ ಅವರು, ಬಾಂಗ್ಲಾದೇಶದ ಢಾಕಾದಲ್ಲಿ ಮತ್ತು ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿ ಬೆಳೆಯುವ ಬಾಳೆಹಣ್ಣುಗಳ ಬಗ್ಗೆ ವಿವರಿಸುತ್ತ, ಅವುಗಳ ಗಾತ್ರವನ್ನು ಕೈಸನ್ನೆ ಮೂಲಕ ತೋರಿಸಿದರು. ಅಷ್ಟೇ ಅಲ್ಲ, ಪಾಕಿಸ್ತಾನದಲ್ಲಿ ಮಣ್ಣಿನ ಬಗ್ಗೆ ಹೆಚ್ಚೆಚ್ಚು ಸಂಶೋಧನೆ ಆಗಬೇಕು. ಇಲ್ಲಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು. ಆದರೆ ನಿರೂಪಕಿ ಅಲ್ವೀನಾ ಮಾತ್ರ ಬಿದ್ದುಬಿದ್ದು ನಗುತ್ತಿದ್ದರು. ನಗು ತಡೆಯಲಾಗದೆ ತಲೆತಗ್ಗಿಸಿ ಕುಳಿತುಬಿಟ್ಟರು.

ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಭಾರತೀಯ ಕ್ರಿಕೆಟರ್​ ಹರ್ಭಜನ್​ ಸಿಂಗ್​ ಕೂಡ ವಿಡಿಯೋ ಶೇರ್ ಮಾಡಿಕೊಂಡು ಅದಕ್ಕೆ, ಬಾಳೆ ಹಣ್ಣಿನ ಮತ್ತು ನಗುವಿನ ಇಮೋಜಿ ಕ್ಯಾಪ್ಷನ್​ ಕೊಟ್ಟಿದ್ದಾರೆ. ಅದರಂತೆ ಹಲವರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲೊಬ್ಬರು ಕಾಮೆಂಟ್ ಮಾಡಿ, ನನಗೆ ಈ ಟಿವಿ ಆ್ಯಂಕರ್​ ನೋಡಿದರೆ ಅಯ್ಯೋ ಎನ್ನಿಸುತ್ತದೆ. ಬಹುಶ್ಯಃ ನಾನು ಆ ಜಾಗದಲ್ಲಿ ಇದ್ದಿದ್ದರೆ ಹೀಗೆ ವರ್ತಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋದ ಪುಟ್ಟ ಕ್ಲಿಪ್​ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪೂರ್ತಿ ವಿಡಿಯೋ ಪಾಕಿಸ್ತಾನದ ಈ ಸುದ್ದಿವಾಹಿನಿಯ ಯೂಟ್ಯೂಬ್​ ನಲ್ಲಿ ಅಪ್ಲೋಡ್​ ಆಗಿದೆ. ಅದರಲ್ಲಿ ನಿರೂಪಕಿ ಮತ್ತು ಆ ಅತಿಥಿ ಇಬ್ಬರೂ ಪಾಕಿಸ್ತಾನದ ಮಣ್ಣು, ಅಲ್ಲಿನ ಕೃಷಿ ವಿಶ್ವವಿದ್ಯಾಲಯ, ಬೆಳೆಗಳ ಆಮದು-ರಫ್ತು, ಲಾಭ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅದೊಂದು ಲೈವ್​ ಕಾರ್ಯಕ್ರಮವಾಗಿತ್ತು ಎಂಬುದು ಗೊತ್ತಾಗುತ್ತದೆ.

ಇದನ್ನೂ ಓದಿ: ಮಿಲಿಟರಿ ಸಾಮರ್ಥ್ಯ ಬಲಗೊಳಿಸಲು 7965 ಕೋಟಿ ರೂ.ಮೌಲ್ಯದ ರಕ್ಷಣಾ ಉಪಕರಣಗಳ ಖರೀದಿಗೆ ಅನುಮೋದನೆ

ನಾವು ಅಂಬೇಡ್ಕರ್​ರ ಸಂವಿಧಾನದ ಪರವಾಗಿ ಇರುವವರು: ಬಿಜೆಪಿ ಪ್ರತಿಭಟನೆಗೆ ಸಿದ್ದರಾಮಯ್ಯ ತಿರುಗೇಟು