ನಾವು ಅಂಬೇಡ್ಕರ್​ರ ಸಂವಿಧಾನದ ಪರವಾಗಿ ಇರುವವರು: ಬಿಜೆಪಿ ಪ್ರತಿಭಟನೆಗೆ ಸಿದ್ದರಾಮಯ್ಯ ತಿರುಗೇಟು

TV9 Digital Desk

| Edited By: ganapathi bhat

Updated on: Nov 03, 2021 | 3:05 PM

Siddaramaiah: ಅಂಬೇಡ್ಕರ್‌, ಸಂವಿಧಾನಕ್ಕೆ ಅಗೌರವ ತೋರಿದ್ದು ಬಿಜೆಪಿ. ಬಿಜೆಪಿಯವರಿಗೆ ಈ ಬಗ್ಗೆ ಮಾತನಾಡಲು ನೈತಿಕತೆಯೇ ಇಲ್ಲ ಎಂದು ಸಿದ್ದರಾಮಯ್ಯ ದಲಿತ ನಾಯಕರನ್ನು ಮುಗಿಸಿದರೆಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ನಾವು ಅಂಬೇಡ್ಕರ್​ರ ಸಂವಿಧಾನದ ಪರವಾಗಿ ಇರುವವರು: ಬಿಜೆಪಿ ಪ್ರತಿಭಟನೆಗೆ ಸಿದ್ದರಾಮಯ್ಯ ತಿರುಗೇಟು
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ

Follow us on

ಬೆಂಗಳೂರು: ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ಮಾಡ್ತಿದ್ದಾರೆ. ನಾನು ಸಿಂದಗಿಯ ಎಡಗೈ ಸಮಾವೇಶದಲ್ಲಿ ಮಾತನಾಡಿದ್ದೆ. ಆಗ ನಾನು ದಲಿತ ಎಂಬ ಪದವನ್ನೇ ಬಳಕೆ ಮಾಡಿಲ್ಲ. ನಾನು ಕಾರಜೋಳ, ಜಿಗಜಿಣಗಿ ಬಗ್ಗೆ ಮಾತನಾಡಿದ್ದೆ. ಇವರು ಅಂಬೇಡ್ಕರ್‌ಗೆ ಗೌರವ ಕೊಡದ ಪಕ್ಷ ಸೇರಿದ್ದಾರೆ. ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾರೆ ಎಂದು ನಾನು ಹೇಳಿದ್ದೆ. ಅದಕ್ಕೆ ಬಿಜೆಪಿ ಬಣ್ಣ ಕಟ್ಟಿ ಪ್ರತಿಭಟನೆ ಮಾಡುತ್ತಿದೆ. ನಾನು ಈಗ ಆರ್‌ಎಸ್‌ಎಸ್ ವಿರುದ್ಧವಾಗಿ ಇದ್ದೀನಿ. ಅದಕ್ಕಾಗಿ ಬಿಜೆಪಿಯವರೇ ಹೇಳಿ ಧರಣಿ ಮಾಡಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ನನ್ನ ಪ್ರಕಾರ ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧ ಇರೋರು. ನಾವು ಅಂಬೇಡ್ಕರ್‌ರ ಸಂವಿಧಾನದ ಪರವಾಗಿ ಇರುವವರು. ನಾನು ದಲಿತರ ಬಗ್ಗೆ ಮಾತಾಡಿದ್ದು ತಪ್ಪಿದ್ದರೆ ವಿರೋಧಿಸ್ತಿದ್ರು. ಸಮಾವೇಶ ಸ್ಥಳದಲ್ಲಿಯೇ ದಲಿತರು ವಿರೋಧ ಮಾಡುತ್ತಿದ್ದರು. ಈಗ ಬಿಜೆಪಿಯವರು ಸುಮ್ಮನೆ ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಎಂದೂ ದಲಿತರ ಪರವಾಗಿ ಇರುವವನು ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ನಮ್ಮ ಗುರಿ ಮಿಷನ್ 1 2 3’ ಎಂಬ ಹೇಳಿಕೆಗೆ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಇಂತಹ ಮಿಷನ್‌ಗಳನ್ನು ನಾವು ಬೇಕಾದಷ್ಟು ನೋಡಿದ್ದೇವೆ. ಇಂತಹ ಮಿಷನ್‌ಗಳು ಸಾಕಷ್ಟು ಬಂದು ಹೋಗಿವೆ. ಹೀಗಾಗಿ ಅವರ ಹೇಳಿಕೆ ಬಗ್ಗೆ ಏನೂ ಹೋಳೋದಿಲ್ಲ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಜನಸೇವಕ ಯೋಜನೆ ಒಂದು ಗಿಮಿಕ್, ಡ್ರಾಮಾ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಮೇಜ್ ಇಲ್ಲ. ಜನರಿಗೆ ಯೋಜನೆ ತಲುಪಿಸುವುದು ಸರ್ಕಾರದ ಕೆಲಸ. ಸರ್ಕಾರದ ಮೂಲ ಕರ್ತವ್ಯವನ್ನು ಗಿಮಿಕ್ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಈ ಸರ್ಕಾರ ಬಂದಾಗಿನಿಂದ ಒಂದೂ ಉದ್ಯೋಗ ಕೊಟ್ಟಿಲ್ಲ. ಸರ್ಕಾರಿ ಉದ್ಯೋಗ ಕೊಟ್ಟಿಲ್ಲ, ಒಂದೇ ಒಂದು ಮನೆ ಕೊಟ್ಟಿಲ್ಲ. 3 ವರ್ಷ ಆಯ್ತು ಒಂದೇ ಒಂದು ಉದ್ಯೋಗವನ್ನ ಕೊಟ್ಟಿಲ್ಲ. ಇವರೇನು ಜನಸೇವೆ ಮಾಡ್ತಾರೆಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಅನಂತಕುಮಾರ್​ ಹೆಗಡೆ ಸಂವಿಧಾನದ ವಿರುದ್ಧ ಮಾತಾಡಿದ್ರು. ಆಗ ಗೋವಿಂದ ಕಾರಜೋಳ ಎಲ್ಲಿ ಹೋಗಿದ್ದರೆಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಗೋವಿಂದ ಕಾರಜೋಳ ಆ ದಿನ ಏಕೆ ಮಾತಾಡಿಲ್ಲವೆಂದು ಕೇಳಿದ್ದಾರೆ. ಡಾ.ಅಂಬೇಡ್ಕರ್ ಇಲ್ಲದಿದ್ದರೆ ದಲಿತರಿಗೆ ರಕ್ಷಣೆ ಸಿಗುತ್ತಿರಲಿಲ್ಲ. ಅಂಥ ಅಂಬೇಡ್ಕರ್‌, ಸಂವಿಧಾನಕ್ಕೆ ಅಗೌರವ ತೋರಿದ್ದು ಬಿಜೆಪಿ. ಬಿಜೆಪಿಯವರಿಗೆ ಈ ಬಗ್ಗೆ ಮಾತನಾಡಲು ನೈತಿಕತೆಯೇ ಇಲ್ಲ ಎಂದು ಸಿದ್ದರಾಮಯ್ಯ ದಲಿತ ನಾಯಕರನ್ನು ಮುಗಿಸಿದರೆಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಶ್ರೀನಿವಾಸಪ್ರಸಾದ್‌ರನ್ನು ಸಚಿವರನ್ನಾಗಿ ಮಾಡಿದ್ದು ಯಾರು? ಹೆಚ್.ಸಿ.ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದರು. ಹೆಚ್.ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದರು. ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿದ್ದರು. ಇದನ್ನೆಲ್ಲಾ ಮಾಡಿದ್ದು ಕಾಂಗ್ರೆಸ್ ಪಕ್ಷ. ಛಲವಾದಿ ನಾರಾಯಣಸ್ವಾಮಿಯೂ ಕಾಂಗ್ರೆಸ್‌ನಲ್ಲಿ ಇದ್ದ. ಆಗ ಕಾಂಗ್ರೆಸ್ ಹೊಗಳುತ್ತಿದ್ದ, ಈಗ ಬಿಜೆಪಿಗೆ ಹೋಗಿದ್ದಾನೆ. ಅಲ್ಲಿ ಬಿಜೆಪಿ ಪರ ಮಾತನಾಡುತ್ತಿದ್ದಾನೆ. ಸಂವಿಧಾನ ಬದಲಿಸಲು ಹೊರಟವರಿಂದ ಏನು ಕಲಿಯಬೇಕಿಲ್ಲ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಬಿಟ್ ಕಾಯಿನ್ ದಂಧೆ: ಸಿದ್ದರಾಮಯ್ಯ, ಸೋಮಣ್ಣ ಆರೋಪ ಪ್ರತ್ಯಾರೋಪ

ಇದನ್ನೂ ಓದಿ: ‘ಪುನೀತ್​ಗೆ ಪದ್ಮಶ್ರೀ ಪ್ರಶಸ್ತಿ ನೀಡಿ’; ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada