ಉತ್ತರ ಕರ್ನಾಟಕದಲ್ಲಿ ಪುನೀತ್​ ರಾಜ್​ಕುಮಾರ್ ಹೆಸರಿನಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಿ: ಬಸವ ಜಯಮೃತ್ಯುಂಜಯಶ್ರೀ ಒತ್ತಾಯ

ಪುನೀತ್​ ರಾಜ್​​ಕುಮಾರ್​ ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಹಾಗೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು ಬೆಂಗಳೂರಿನಲ್ಲಿ ಬಸವ ಜಯಮೃತ್ಯುಂಜಯಶ್ರೀ ಒತ್ತಾಯ ಮಾಡಿದರು.

ಉತ್ತರ ಕರ್ನಾಟಕದಲ್ಲಿ ಪುನೀತ್​ ರಾಜ್​ಕುಮಾರ್ ಹೆಸರಿನಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಿ: ಬಸವ ಜಯಮೃತ್ಯುಂಜಯಶ್ರೀ ಒತ್ತಾಯ
ಪುನೀತ್ ರಾಜ್​ಕುಮಾರ್ ಮತ್ತು ಬಸವ ಜಯ ಮೃತ್ಯುಂಜಯ ಸ್ವಾಮೀಜಿ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 03, 2021 | 3:25 PM

ಬೆಂಗಳೂರು: ಪುನೀತ್ ರಾಜ್​ಕುಮಾರ್ ನಿಧನದೊಂದಿಗೆ ಈ ದೇಶವು ಅಪ್ರತಿಮ ನಟನನ್ನು ಕಳೆದುಕೊಂಡಿದೆ. ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೂ ಅಪ್ಪು ಜನಸೇವೆ ಮಾಡಿದರು. ಕಳಸಾ ಬಂಡೂರಿ ಹೋರಾಟಕ್ಕೂ ನೈತಿಕ ಬೆಂಬಲ ನೀಡಿದ್ದರು. ಉತ್ತರ ಕರ್ನಾಟಕದಲ್ಲಿ ಅಪ್ಪು ಹೆಸರಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಬೇಕು. IAS ಕೋಚಿಂಗ್ ಸೆಂಟರ್ ಸಹ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಪುನೀತ್​ ರಾಜ್​​ಕುಮಾರ್​ ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಹಾಗೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು ಬೆಂಗಳೂರಿನಲ್ಲಿ ಬಸವ ಜಯಮೃತ್ಯುಂಜಯಶ್ರೀ ಒತ್ತಾಯ ಮಾಡಿದರು.

ನಮ್ಮ ನಾಡು ಮತ್ತು ದೇಶವು ಅಪ್ರತಿಮ ನಟನನ್ನು ಕಳೆದುಕೊಂಡು ಬಡವಾಗಿದೆ. ಭಗವಂತನ ಅನುಗ್ರಹ ಪಡೆದಿದ್ದ ಪುನೀತ್ ರಾಜ್ ಕುಮಾರ್ ಕುಟುಂಬದವರಿಗೆ ಧೈರ್ಯ ತುಂಬಲೆಂದು ನಾನು ಬಂದಿದ್ದೇನೆ. ಕರ್ನಾಟಕದಲ್ಲಿ ಅಪ್ಪು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸುತ್ತೇನೆ ಎಂದರು.

ಭಜರಂಗಿ 2 ಪ್ರೀ ರಿಲೀಸ್ ವೇಳೆ ಡಾನ್ಸ್ ಮಾಡುವಾಗ ಡಲ್ ಆಗಿದ್ದ ಪುನೀತ್ ರಾಜ್​ಕುಮಾರ್ ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿದ್ದಾರೆ ಎನ್ನುವ ವಿಚಾರವನ್ನು ಯಾರಿಂದಲೂ ನಂಬೋಕೆ ಸಾಧ್ಯವಾಗುತ್ತಿಲ್ಲ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಅವರು ತೊರೆದು ಹೋಗಿದ್ದಾರೆ. ಅನೇಕ ಸ್ಟಾರ್​​ಗಳು ಕೂಡ ಅವರ ಅಂತಿಮ ದರ್ಶನ ಪಡೆದು ಹೋಗಿದ್ದಾರೆ. ಇದು ಕನಸೋ ಅಥವಾ ನನಸೋ ಎನ್ನುವ ಪ್ರಶ್ನೆ ಅವರಲ್ಲೂ ಇದೆ. ಶಿವರಾಜ್​ಕುಮಾರ್​ ಅವರು ಈಗ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ.

‘ಭಜರಂಗಿ 2’ ಪ್ರೀ ರಿಲೀಸ್​ ಇವೆಂಟ್​ ದಿನ ಶಿವರಾಜ್​ಕುಮಾರ್, ಯಶ್​​ ಹಾಗೂ ಪುನೀತ್​ ರಾಜ್​ಕುಮಾರ್​ ಒಟ್ಟಾಗಿ ಡಾನ್ಸ್​ ಮಾಡಿದ್ದರು. ಈ ವೇಳೆ ಪುನೀತ್​ ಅವರು ತುಂಬಾನೆ ಡಲ್​ ಆಗಿದ್ದರಂತೆ. ಈ ಬಗ್ಗೆ ಶಿವರಾಜ್​ಕುಮಾರ್​ ಅವರು ಹೇಳಿಕೊಂಡಿದ್ದಾರೆ. ಅವರು ಆ ಬಗ್ಗೆ ವಿವರಿಸಿದ್ದರು ವಿಡಿಯೋದಲ್ಲಿದೆ.

ಅಪ್ಪ ಸಮಾಧಿ ದರ್ಶನಕ್ಕೆ ಎತ್ತಿನಗಾಡಿಯಲ್ಲಿ ಬಂದ ಅಭಿಮಾನಿ ಪಾವಗಡದ ಪುನೀತ್ ರಾಜ್​ಕುಮಾರ್ ಅಭಿಮಾನಿ ದಯಾನಂದ್ ಎತ್ತಿನಗಾಡಿಯಲ್ಲಿಯೇ ಬೆಂಗಳೂರಿಗೆ ಬಂದು ಪುನೀತ್ ರಾಜ್​ಕುಮಾರ್ ಸಮಾಧಿಯ ದರ್ಶನ ಪಡೆದಿದ್ದಾರೆ. ನಾನು ಅಪ್ಪು ಅಭಿಮಾನಿ. ರೈತರ ಬಗ್ಗೆ ಅವರಿಗೆ ಅಪಾರ ಕಾಳಜಿಯಿತ್ತು. ಎಲ್ಲರಿಗೂ ಅನುಕೂಲ ಮಾಡಿರುವ ಅವರಿಗೆ ಗೌರವ ಸಲ್ಲಿಸಲು ಎತ್ತಿನಗಾಡಿಯಲ್ಲಿಯೇ ಬರಬೇಕು ಎಂದು ಸಮಾಧಿ ದರ್ಶನ ಪಡೆದೆವು. ಈಗ ಈಗ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಕುಟುಂಬಕ್ಕೆ ಆಸರೆ ಒದಗಿಸಿದ್ದ ಪುನೀತ್ ರಾಜ್​ಕುಮಾರ್ ನಿಧನಕ್ಕೆ ಕಣ್ಣೀರಿಟ್ಟ ರೈತ ಮಹಿಳೆ ಇದನ್ನೂ ಓದಿ: ಇಬ್ಬರಿಗೆ ಪುನೀತ್ ರಾಜ್​ಕುಮಾರ್ ಕಣ್ಣುಗಳು ಅಳವಡಿಕೆ; ನಾರಾಯಣ ನೇತ್ರಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ