AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಟುಂಬಕ್ಕೆ ಆಸರೆ ಒದಗಿಸಿದ್ದ ಪುನೀತ್ ರಾಜ್​ಕುಮಾರ್ ನಿಧನಕ್ಕೆ ಕಣ್ಣೀರಿಟ್ಟ ರೈತ ಮಹಿಳೆ

‘ದೊಡ್ಮನೆ ಹುಡುಗ’ ಶೂಟಿಂಗ್ ವೇಳೆ ಆತ್ಮಹತ್ಯೆಗೆ ಶರಣಾಗಿದ್ದ ರೈತರ ಕುಟುಂಬಗಳಿಗೆ ಪುನೀತ್​ ಆರ್ಥಿಕ ನೆರವು ನೀಡಿದ್ದರು. ಈ ವೇಳೆ ಭಾರತಿ ಅವರಿಗೂ ಪುನೀತ್ ಅವರಿಂದ ನೆರವು ಸಿಕ್ಕಿತ್ತು.

ಕುಟುಂಬಕ್ಕೆ ಆಸರೆ ಒದಗಿಸಿದ್ದ ಪುನೀತ್ ರಾಜ್​ಕುಮಾರ್ ನಿಧನಕ್ಕೆ ಕಣ್ಣೀರಿಟ್ಟ ರೈತ ಮಹಿಳೆ
ಪುನೀತ್ ರಾಜ್​ಕುಮಾರ್​ ನೆನೆದು ಕಣ್ಣೀರು ಹಾಕಿದ ರೈತ ಮಹಿಳೆ ಭಾರತಿ
TV9 Web
| Edited By: |

Updated on:Oct 31, 2021 | 5:34 PM

Share

ಮಂಡ್ಯ: ನಟ ಪುನೀತ್ ರಾಜ್​ಕುಮಾರ್ ನಿಧನಕ್ಕೆ ಶ್ರೀರಂಗಪಟ್ಟಣ ತಾಲ್ಲೂಕು ಸಬ್ಬನಕುಪ್ಪೆ ಗ್ರಾಮದ ರೈತ ಮಹಿಳೆ ಭಾರತಿ ಕಣ್ಣೀರಿಟ್ಟರು. ಭಾರತಿ ಕುಟುಂಬಕ್ಕೆ ಪುನೀತ್ ಆರ್ಥಿಕ ನೆರವು ನೀಡಿದ್ದರು. ಭಾರತಿ ಅವರ ಪತಿ, ಕುಮಾರ್ 2015ರ ಜು.22ರಂದು ಆತ್ಮಹತ್ಯೆಗೆ ಶರಣಾಗಿದ್ದರು.

2015ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಶೂಟಿಂಗ್ ನಂತರ ಪುನೀತ್ ರಾಜ್​ಕುಮಾರ್ ಜನರ ಕಷ್ಟಸುಖ ಕೇಳುತ್ತಿದ್ದರು. ‘ದೊಡ್ಮನೆ ಹುಡುಗ’ ಶೂಟಿಂಗ್ ವೇಳೆ ಆತ್ಮಹತ್ಯೆಗೆ ಶರಣಾಗಿದ್ದ ರೈತರ ಕುಟುಂಬಗಳಿಗೆ ಪುನೀತ್​ ಆರ್ಥಿಕ ನೆರವು ನೀಡಿದ್ದರು. ಈ ವೇಳೆ ಭಾರತಿ ಅವರಿಗೂ ಪುನೀತ್ ಅವರಿಂದ ನೆರವು ಸಿಕ್ಕಿತ್ತು.

‘ಅಪ್ಪು ಇದ್ದಿದ್ರೆ ನಮ್ಮಂತಹ ಬಡ ಕುಟುಂಬಗಳಿಗೆ ನೆರವು ಸಿಗ್ತಿತ್ತು. ದೇವರು ಇಷ್ಟು ಬೇಗ ಅವರನ್ನು ಕರೆಸಿಕೊಂಡ’ ಎಂದು ಆತ್ಮಹತ್ಯೆಗೆ ಶರಣಾಗಿದ್ದ ರೈತ ಕುಮಾರ್ ಅವರ​ ಪತ್ನಿ ಭಾರತಿ ಕಣ್ಣೀರು ಹಾಕಿದರು.

ಸಾಮಾಜಿಕ ಜವಾಬ್ದಾರಿ ಮೆರೆದಿದ್ದ ಚಂದನವನದ ಚಂದದ ನಟ ಪುನೀತ್​ ನಟ ಪುನೀತ್​ ರಾಜ್​ ಕುಮಾರ್ ತಮ್ಮ ಅಲ್ಪ ಜೀವಿತಾವಧಿಯಲ್ಲಿ ಅನೇಕರಿಗೆ ಖುದ್ದಾಗಿ ಸಹಾಯಹಸ್ತ ಚಾಚಿಸಿದ್ದರು. ಚನ್ನಗಿರಿ ತಾಲ್ಲೂಕಿನ ಕಣಸಾಲು ಬಡಾವಣೆಗೆಯ ಬಾಲಕಿ ಪ್ರೀತಿ ಅವರಿಗೆ ಸಹಾಯ ಮಾಡಿದ್ದರು ಎಂಬ ಸಂಗತಿ ಗೊತ್ತಾಗಿದೆ.

ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ಅವರು ಚನ್ನಗಿರಿ ತಾಲ್ಲೂಕಿನ ಕಣಸಾಲು ಬಡಾವಣೆಗೆಯ ಬಾಲಕಿ ಪ್ರೀತಿ ಅವರಿಗೆ ಸಹಾಯ ಮಾಡಿದ್ದರು ಎಂಬ ಸಂಗತಿ ಗೊತ್ತಾಗಿದೆ. ಕುಮಾರ್ ಹಾಗೂ ಮಂಜುಳಾ ದಂಪತಿಯ ಪುತ್ರಿಯಾದ ಪ್ರೀತಿ 2017ರಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

ಆಗ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಈ ದಂಪತಿ ಮಾಧ್ಯಮಗಳ ಮೂಲಕ ಸಹಾಯ ಯಾಚಿಸಿದ್ದರು. ಆ ವೇಳೆ ಪುನೀತ್ ಅವರು ನೆರವು ನೀಡಿದ್ದರು. ‘ಆ ವೇಳೆ ಭೇಟಿ ನೀಡಿದ ಪುನೀತ್ ರಾಜ್‌ಕುಮಾರ್ ಆ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೇ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಪೂರ್ತಿ ಬಿಲ್ 12.50 ಲಕ್ಷವನ್ನು ಭರಿಸಿದ್ದರು’ ಪ್ರೀತಿ ಅವರ ಮಾವ ಹನುಮಂತಪ್ಪ ಗೆ ತಿಳಿಸಿದರು.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್​ ಒಡೆತನದ ಪಿಆರ್​ಕೆ ಪ್ರೊಡಕ್ಷನ್​ ಏನಾಗಲಿದೆ? ಇದನ್ನೂ ಓದಿ: ಇಬ್ಬರಿಗೆ ಪುನೀತ್ ರಾಜ್​ಕುಮಾರ್ ಕಣ್ಣುಗಳು ಅಳವಡಿಕೆ; ನಾರಾಯಣ ನೇತ್ರಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

Published On - 3:54 pm, Sun, 31 October 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!