Google Pixel: ಎಫ್1 ಇನ್ಫೋ ಜೊತೆ ಗೂಗಲ್ ಸಹಭಾಗಿತ್ವ: ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳ ಸರ್ವೀಸ್ ಸಮಸ್ಯೆಗೆ ಸಿಕ್ಕಿತು ಪರಿಹಾರ

ವಾಕ್-ಇನ್ ಸರ್ವೀಸ್ ಸೆಂಟರ್​ಗಳಲ್ಲಿ ಗ್ರಾಹಕರು ತಮ್ಮ ಪಿಕ್ಸೆಲ್ ಡಿವೈಸ್​ಗಳಲ್ಲಿ ಸರಳವಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಅವುಗಳ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ.

Google Pixel: ಎಫ್1 ಇನ್ಫೋ ಜೊತೆ ಗೂಗಲ್ ಸಹಭಾಗಿತ್ವ: ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳ ಸರ್ವೀಸ್ ಸಮಸ್ಯೆಗೆ ಸಿಕ್ಕಿತು ಪರಿಹಾರ
Google Pixel
Follow us
|

Updated on:Jun 12, 2023 | 3:40 PM

ಫ್ಲಿಪ್​ಕಾರ್ಟ್​ನ (Flipkart) ಅಂಗಸಂಸ್ಥೆ ಮತ್ತು ಸೇವಾ ವಿಭಾಗವಾಗಿರುವ ಎಫ್1 ಇನ್ಫೋ (F1 Info) ಸಲೂಶನ್ಸ್ ಮತ್ತು ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನೋಯ್ಡಾದಲ್ಲಿರುವ ಕೇಂದ್ರೀಕೃತ ರಿಪೇರಿ ಕೇಂದ್ರ ಹಾಗೂ ದೇಶಾದ್ಯಂತ 27 ನಗರಗಳಲ್ಲಿ ವಾಕ್-ಇನ್ ಸೇವಾ ಕೇಂದ್ರಗಳ ಮೂಲಕ ಗೂಗಲ್ ಪಿಕ್ಸೆಲ್ (Google Pixel) ಫೋನ್​ಗಳಿಗೆ ಎಂಡ್-ಟು-ಎಂಡ್ ಗ್ರಾಹಕ ಬೆಂಬಲವನ್ನು ಒದಗಿಸುವ ನಿಟ್ಟಿನಲ್ಲಿ ಗೂಗಲ್ ನೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ.

ವಾಕ್-ಇನ್ ಸರ್ವೀಸ್ ಸೆಂಟರ್​ಗಳಲ್ಲಿ ಗ್ರಾಹಕರು ತಮ್ಮ ಪಿಕ್ಸೆಲ್ ಡಿವೈಸ್​ಗಳಲ್ಲಿ ಸರಳವಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಅವುಗಳ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಒಂದು ವೇಳೆ ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳನ್ನು ಭೌತಿಕ ರಿಪೇರಿ ಮಾಡುವ ಅಗತ್ಯವಿದ್ದರೆ, ಅವುಗಳನ್ನು ನೋಯ್ಡಾದಲ್ಲಿರುವ ಕೇಂದ್ರೀಕೃತ ಕೇಂದ್ರಕ್ಕೆ ಕಳುಹಿಸಿ ರಿಪೇರಿ ಮಾಡಿಸಿಕೊಡಲಾಗುತ್ತದೆ.

ಕಳೆದ ಹಲವು ವರ್ಷಗಳಿಂದ ಎಫ್1 ಸರ್ವೀಸಸ್ ತನ್ನ ಗ್ರಾಹಕರಿಗೆ ಮಾರಾಟದ ನಂತರದ ಸೇವೆಗಳನ್ನು ಉನ್ನತೀಕರಿಸಲು ಅರ್ಹ ತಂತ್ರಜ್ಞರ ತಂಡಗಳನ್ನು ರಚಿಸಲೆಂದು ಸೂಕ್ತ ತರಬೇತಿ ನೀಡಲು ಸಾಕಷ್ಟು ಹೂಡಿಕೆ ಮಾಡಿದೆ. ಎಫ್1 ಸರ್ವೀಸಸ್ ನಲ್ಲಿರುವ ತಂತ್ರಜ್ಞರು ಗೂಗಲ್ ಪಿಕ್ಸೆಲ್ ಫೋನ್​ಗಳನ್ನು ಸರ್ವೀಸ್ ಮಾಡಲೆಂದೇ ಗೂಗಲ್ ಪರಿಣತರಿಂದ ತರಬೇತಿ ಪಡೆದಿದ್ದಾರೆ.

ಇದನ್ನೂ ಓದಿ
Image
Best Camera Phones: 50,000 ರೂ. ಒಳಗೆ ಸಿಗುತ್ತಿರುವ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
Image
WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್: ಆಂಡ್ರಾಯ್ಡ್ ಬಳಕೆದಾರರಿಗೆ ಸಂತಸದ ಸುದ್ದಿ
Image
Tech Tips: ಪೇಟಿಯಂ ಆ್ಯಪ್ ಮೂಲಕ ರೈಲು ಎಲ್ಲಿದೆ ಎಂದು ತಿಳಿಯುವುದು ಹೇಗೆ?: ಇಲ್ಲಿದೆ ಟ್ರಿಕ್
Image
Infinix Note 30 5G: ಭಾರತಕ್ಕೆ ಬರುತ್ತಿದೆ 108MP ಕ್ಯಾಮೆರಾದ ಮತ್ತೊಂದು ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು ನೋಡಿ

Tech Tips: ನಿಮ್ಮ ಫೇಸ್​ಬುಕ್ ಪ್ರೊಫೈಲ್ ಯಾರೆಲ್ಲ ನೋಡುತ್ತಿದ್ದಾರೆಂದು ತಿಳಿಯಬೇಕೆ?: ಇಲ್ಲಿದೆ ಟ್ರಿಕ್

ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ಫ್ಲಿಪ್​ಕಾರ್ಟ್​ ಗ್ರೂಪ್​ನ ಜೀವ್ಸ್ ಕನ್ಸೂಮರ್ ಅಂಡ್ ಎಫ್1 ಇನ್ಫೋ ಸಲೂಶನ್ಸ್ & ಸರ್ವೀಸ್ ನ ಸಿಇಒ ಡಾ. ನಿಪುಣ್ ಶರ್ಮಾ ಅವರು, ಗ್ರಾಹಕರು ಮಾರಾಟದ ನಂತರದಲ್ಲಿ ಕಳಪೆ ಗುಣಮಟ್ಟ ಸೇವೆಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸವಾಲುಗಳನ್ನು ಗಮನಿಸಿದ ಎಫ್1 ಸಮಗ್ರ ಮತ್ತು ಗ್ರಾಹಕ ಕೇಂದ್ರಿತ ಮಾರಾಟ ನಂತರದ ಸೇವಾ ಜಾಲವನ್ನು ಆರಂಭಿಸುವುದರ ಕಡೆಗೆ ಗಮನಹರಿಸಿತು. ಈ ದಿಸೆಯಲ್ಲಿ ಗೂಗಲ್ ಪಿಕ್ಸೆಲ್ ಅನ್ನು ಗ್ರಾಹಕ ಸೇವಾ ಪೂರೈಕೆದಾರ ಸಂಸ್ಥೆಯನ್ನಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಈ ಪೂರೈಕೆದಾರ ಸಂಸ್ಥೆಯು ತನ್ನ ಗ್ರಾಹಕರ ಗೂಗಲ್ ಪಿಕ್ಸೆಲ್ ಫೋನ್ ಗಳಿಗೆ ಮಾರಾಟದ ನಂತರದಲ್ಲಿ ಎಂಡ್-ಟು-ಎಂಡ್ ಸೇವೆಗಳನ್ನು ಒದಗಿಸುತ್ತದೆ’’ ಎಂದು ತಿಳಿಸಿದರು.

ಎಫ್1 ಅತ್ಯುತ್ತಮವಾದ ಸೇವೆಗಳು ಮತ್ತು ಪಾಲುದಾರ ಜಾಲವನ್ನು ಹೊಂದಿದೆ. ಇದು ರಿಪೇರಿ, ನಿರ್ವಹಣೆ, ಸ್ಥಾಪನೆ, ಡೆಮೊ ಮತ್ತು ಮೌಲ್ಯವರ್ಧಿತ ಸೇವೆಗಳಂತಹ ವ್ಯಾಪಕವಾದ ಶ್ರೇಣಿಯ ಮಾರಾಟದ ನಂತರದ ಪರಿಹಾರಗಳನ್ನು ಒದಗಿಸುತ್ತದೆ. ಅಲ್ಲದೇ, ರಕ್ಷಣೆ, ವಾರಂಟಿ, ಇನ್ ಬೌಂಡ್, ಔಟ್ ಬೌಂಡ್ ಹಾಗೂ 40 ಕ್ಕೂ ಹೆಚ್ಚು ನಾನ್-ವಾಯ್ಸ್ ಗ್ರಾಹಕ ಸೇವೆಗಳ ಮೂಲಕ ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಪೂರೈಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Mon, 12 June 23

ತಾಜಾ ಸುದ್ದಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು