Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್: ಆಂಡ್ರಾಯ್ಡ್ ಬಳಕೆದಾರರಿಗೆ ಸಂತಸದ ಸುದ್ದಿ

ವಾಟ್ಸ್​ಆ್ಯಪ್ ಆಂಡ್ರಾಯ್ಡ್‌ನಲ್ಲಿ ಕೆಲ ಬೀಟಾ ಪರೀಕ್ಷಕರಿಗೆ ಮರುವಿನ್ಯಾಸಗೊಳಿಸಲಾದ ಎಮೋಜಿ ಕೀಬೋರ್ಡ್ ಅನ್ನು ಹೊರತರುತ್ತಿದೆ. ಇದು ಕೆಲವೇ ವಾರಗಳಲ್ಲಿ ಎಲ್ಲ ಬಳಕೆದಾರರಿಗೆ ಸಿಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್: ಆಂಡ್ರಾಯ್ಡ್ ಬಳಕೆದಾರರಿಗೆ ಸಂತಸದ ಸುದ್ದಿ
WhatsApp New Feature
Follow us
Vinay Bhat
|

Updated on: Jun 12, 2023 | 1:24 PM

ಮೆಟಾ ಒಡೆತನದ ಪ್ರಸಿದ್ಧ ನಂಬರ್ ಒನ್ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್ (WhatsApp) ಅನ್ನು ಇಂದು ಕೇವಲ ಭಾರತದಲ್ಲೇ (India) ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಈಗ ಸಂದೇಶಗಳ ಮೂಲಕ ಮಾತುಕತೆ ನಡೆಸಲು ಮಾತ್ರ ಇದನ್ನು ಉಪಯೋಗಿಸುತ್ತಿಲ್ಲ. ಬದಲಾಗಿ ಅನೇಕ ಅಪ್ಡೇಟ್​ಗಳನ್ನು ಪರಿಚಯಿಸಿ ಗ್ರಾಹಕರ ನೆಚ್ಚಿನ ಅಪ್ಲಿಕೇಷನ್ ಆಗಿಬಿಟ್ಟಿದೆ. ವಾರಕ್ಕೊಂದು ನೂತನ ಫೀಚರ್​ಗಳ ಕುರಿತು ಘೋಷನೆ ಮಾಡುವ ವಾಟ್ಸ್​ಆ್ಯಪ್ ಎರಡು ದಿನಗಳ ಹಿಂದೆಯಷ್ಟೆ ಐಒಎಸ್ ಬಳಕೆದಾರರಿಗೆ ಎಡಿಟ್ ಸೆಂಟ್ ಮೆಸೇಜ್ ಆಯ್ಕೆ ನೀಡಿತ್ತು. ಆಂಡ್ರಾಯ್ಡ್ ನವರಿಗೆ ಹೊಸ ಕ್ರಾಪ್‌ ಟೂಲ್ ಎಂಬ ಫೀಚರ್ (New Feature) ಪರಿಚಯಿಸುವುದಾಗಿ ಹೇಳಿತ್ತು. ಇದೀಗ ಬಳಕೆದಾರರಿಗೆ ಖುಷಿ ನೀಡಲು ಮತ್ತೊಂದು ಅಪ್ಡೇಟ್ ನೀಡುತ್ತಿದೆ.

ವಾಟ್ಸ್​ಆ್ಯಪ್ ಆಂಡ್ರಾಯ್ಡ್‌ನಲ್ಲಿ ಕೆಲ ಬೀಟಾ ಪರೀಕ್ಷಕರಿಗೆ ಮರುವಿನ್ಯಾಸಗೊಳಿಸಲಾದ ಎಮೋಜಿ ಕೀಬೋರ್ಡ್ ಅನ್ನು ಹೊರತರುತ್ತಿದೆ. ಈ ಮರುವಿನ್ಯಾಸಗೊಳಿಸಲಾದ ಎಮೋಜಿ ಕೀಬೋರ್ಡ್​ನಲ್ಲಿ ಸ್ಕ್ರಾಲ್ ಮಾಡುವ ಮೂಲಕ ಅನೇಕ ಆಯ್ಕೆ ಪಡೆಯಬಹುದು ಎಂದು WABetaInfo ವರದಿ ಮಾಡಿದೆ. ಜೊತೆಗೆ GIF, ಸ್ಟಿಕ್ಕರ್ ಮತ್ತು ಅವತಾರ್ ಎಂಬ ಕಾಲಮ್​ಗಳನ್ನು ಮೇಲ್ಭಾಗದಲ್ಲಿ ನೀಡಲಾಗಿದೆ. ಮರುವಿನ್ಯಾಸಗೊಳಿಸಲಾದ ಕೀಬೋರ್ಡ್ ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಇದು ಕೆಲವೇ ವಾರಗಳಲ್ಲಿ ಎಲ್ಲ ಬಳಕೆದಾರರಿಗೆ ಸಿಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

OnePlus 10R 5G: ಒನ್​ಪ್ಲಸ್ ಹೊಸ ಸ್ಮಾರ್ಟ್​ಫೋನ್​ ಮೇಲೆ 10 ಸಾವಿರ ಡಿಸ್ಕೌಂಟ್ ಆಫರ್!

ಇದನ್ನೂ ಓದಿ
Image
Tech Tips: ಪೇಟಿಯಂ ಆ್ಯಪ್ ಮೂಲಕ ರೈಲು ಎಲ್ಲಿದೆ ಎಂದು ತಿಳಿಯುವುದು ಹೇಗೆ?: ಇಲ್ಲಿದೆ ಟ್ರಿಕ್
Image
Infinix Note 30 5G: ಭಾರತಕ್ಕೆ ಬರುತ್ತಿದೆ 108MP ಕ್ಯಾಮೆರಾದ ಮತ್ತೊಂದು ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು ನೋಡಿ
Image
Tech Tips: ನಿಮ್ಮ ಫೇಸ್​ಬುಕ್ ಪ್ರೊಫೈಲ್ ಯಾರೆಲ್ಲ ನೋಡುತ್ತಿದ್ದಾರೆಂದು ತಿಳಿಯಬೇಕೆ?: ಇಲ್ಲಿದೆ ಟ್ರಿಕ್
Image
Realme 11 Pro+ 5G: 200 ಮೆಗಾಪಿಕ್ಸೆಲ್ ಕ್ಯಾಮೆರಾ ರಿಯಲ್​ಮಿ ಸೂಪರ್ ಸ್ಮಾರ್ಟ್​ಫೋನ್ ಬಿಡುಗಡೆ

ಕ್ರಾಪ್‌ ಟೂಲ್ ಆಯ್ಕೆ:

ವಾಟ್ಸ್​ಆ್ಯಪ್ ಇದೀಗ ಹೊಸ ಕ್ರಾಪ್‌ ಟೂಲ್ ಎಂಬ ಆಯ್ಕೆ ನೀಡಲು ಮುಂದಾಗಿದೆ. ವಾಟ್ಸ್​ಆ್ಯಪ್ ವಿಂಡೋಸ್‌ ಬಿಟಾದಲ್ಲಿ ಡ್ರಾಯಿಂಗ್‌ ಎಡಿಟರ್‌ಗಾಗಿ ಹೊಸ ಕ್ರಾಪ್‌ ಟೂಲ್ ತಯಾರಾಗುತ್ತಿದೆ. ಈ ಟೂಲ್‌ನಿಂದಾಗಿ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ಇಮೇಜ್‌ಗಳನ್ನು ಕ್ರಾಪ್‌ ಮಾಡಬಹುದು. ಜೊತೆಗೆ ಇಮೇಜ್‌ಗಳನ್ನು ಎಡಿಟ್‌ ಮಾಡಲು ಸಾದ್ಯವಾಗಲಿದೆ. ಈ ಹಿಂದೆ ಬಳಕೆದಾರರು ತಮ್ಮ ಫೋಟೋಗಳನ್ನು ಶೇರ್‌ ಮಾಡುವ ಮೊದಲು ಕ್ರಾಪ್‌ ಮಾಡಬೇಕಾದರೆ ಬಾಹ್ಯ ಇಮೇಜ್ ಎಡಿಟಿಂಗ್ ಟೂಲ್‌ಗಳನ್ನು ಬಳಸಬೇಕಿತ್ತು. ಆದರೆ ಈ ಹೊಸ ಆಯ್ಕೆಯು ನಿಮಗೆ ಅಪ್ಲಿಕೇಶನ್‌ನಲ್ಲಿಯೇ ಇಮೇಜ್‌ ಕ್ರಾಪ್‌ ಮಾಡಲು ಅವಕಾಶ ನೀಡಲಿದೆ.

ಸದ್ಯ ವಾಟ್ಸ್​ಆ್ಯಪ್ ಡ್ರಾಯಿಂಗ್ ಎಡಿಟರ್‌ಗಾಗಿ ಕ್ರಾಪ್ ಟೂಲ್ ಕೆಲವೇ ಕೆಲ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಇದು ಎಲ್ಲಾ ರೀತಿಯ ಪರೀಕ್ಷೆಗಳ ನಂತರ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ