WhatsApp New Feature: ವಾಟ್ಸ್ಆ್ಯಪ್ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್: ಫೋಟೋ ಶೇರ್ ಮಾಡುವಾಗ ಸಿಗುತ್ತೆ ಈ ಆಯ್ಕೆ
ವಾಟ್ಸ್ಆ್ಯಪ್ ಇದೀಗ ಹೊಸ ಕ್ರಾಪ್ ಟೂಲ್ ಎಂಬ ಆಯ್ಕೆ ನೀಡಲು ಮುಂದಾಗಿದೆ. ವಾಟ್ಸ್ಆ್ಯಪ್ ವಿಂಡೋಸ್ ಬಿಟಾದಲ್ಲಿ ಡ್ರಾಯಿಂಗ್ ಎಡಿಟರ್‌ಗಾಗಿ ಹೊಸ ಕ್ರಾಪ್ ಟೂಲ್ ತಯಾರಾಗುತ್ತಿದೆ.
ವಾಟ್ಸ್ಆ್ಯಪ್ ಅನ್ನು ಇಂದು ಕೇವಲ ಭಾರತದಲ್ಲೇ (India) ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಕ್ಷಣಾರ್ಧದಲ್ಲಿ ಸಂದೇಶಗಳ ಮೂಲಕ ಮಾತುಕತೆ ನಡೆಸಲು ಉಪಯೋಗಿಸುವ ವಾಟ್ಸ್ಆ್ಯಪ್ (WhatsApp) ಸಾಲು ಸಾಲು ಫೀಚರ್ಗಳನ್ನು ಕೂಡ ಪರಿಚಯಿಸುತ್ತದೆ. ಎರಡು ದಿನಗಳ ಹಿಂದೆಯಷ್ಟೆ ದಿಢೀರ್ ಆಗಿ ಐಒಎಸ್ ಬಳಕೆದಾರರಿಗೆ ಅಚ್ಚರಿಯ ”ಎಡಿಟ್ ಸೆಂಟ್ ಮೆಸೇಜ್” (Edit Sent Message) ಎಂಬ ನೂತನ ಅಪ್ಡೇಟ್ ಪರಿಚಯಿಸಿದ್ದ ವಾಟ್ಸ್ಆ್ಯಪ್ ಇದೀಗ ಹೊಸ ಕ್ರಾಪ್ ಟೂಲ್ ಎಂಬ ಆಯ್ಕೆ ನೀಡಲು ಮುಂದಾಗಿದೆ.
ವಾಟ್ಸ್ಆ್ಯಪ್ ವಿಂಡೋಸ್ ಬಿಟಾದಲ್ಲಿ ಡ್ರಾಯಿಂಗ್ ಎಡಿಟರ್‌ಗಾಗಿ ಹೊಸ ಕ್ರಾಪ್ ಟೂಲ್ ತಯಾರಾಗುತ್ತಿದೆ. ಈ ಟೂಲ್‌ನಿಂದಾಗಿ ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ಇಮೇಜ್‌ಗಳನ್ನು ಕ್ರಾಪ್ ಮಾಡಬಹುದು. ಜೊತೆಗೆ ಇಮೇಜ್‌ಗಳನ್ನು ಎಡಿಟ್ ಮಾಡಲು ಸಾದ್ಯವಾಗಲಿದೆ. ಈ ಹಿಂದೆ ಬಳಕೆದಾರರು ತಮ್ಮ ಫೋಟೋಗಳನ್ನು ಶೇರ್ ಮಾಡುವ ಮೊದಲು ಕ್ರಾಪ್ ಮಾಡಬೇಕಾದರೆ ಬಾಹ್ಯ ಇಮೇಜ್ ಎಡಿಟಿಂಗ್ ಟೂಲ್‌ಗಳನ್ನು ಬಳಸಬೇಕಿತ್ತು. ಆದರೆ ಈ ಹೊಸ ಆಯ್ಕೆಯು ನಿಮಗೆ ಅಪ್ಲಿಕೇಶನ್‌ನಲ್ಲಿಯೇ ಇಮೇಜ್ ಕ್ರಾಪ್ ಮಾಡಲು ಅವಕಾಶ ನೀಡಲಿದೆ.
WhatsApp Tricks: ವಾಟ್ಸ್ಆ್ಯಪ್ನಲ್ಲಿರುವ ಈ 3 ಟ್ರಿಕ್ ಬಗ್ಗೆ ನಿಮಗೆ ಗೊತ್ತೆ?
ಸದ್ಯ ವಾಟ್ಸ್ಆ್ಯಪ್ ಡ್ರಾಯಿಂಗ್ ಎಡಿಟರ್‌ಗಾಗಿ ಕ್ರಾಪ್ ಟೂಲ್ ಕೆಲವೇ ಕೆಲ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಇದು ಎಲ್ಲಾ ರೀತಿಯ ಪರೀಕ್ಷೆಗಳ ನಂತರ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ.
ಎಡಿಟ್ ಸೆಂಟ್ ಮೆಸೇಜ್:
ವಾಟ್ಸ್ಆ್ಯಪ್ ಸದ್ದಿಲ್ಲದೆ ಐಒಎಸ್ ಬಳಕೆದಾರರಿಗೆ ”ಎಡಿಟ್ ಸೆಂಟ್ ಮೆಸೇಜ್” ಎಂಬ ನೂತನ ಅಪ್ಡೇಟ್. ಪ್ರಕಟಿಸಿದೆ. ಇದರ ಮೂಲಕ ಕಳುಹಿಸದ ಮೆಸೇಜ್ ಅನ್ನು ಎಡಿಟ್ ಮಾಡಬಹುದಾಗಿದೆ. ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ. ಆದರೆ, ಇದಕ್ಕೆ 15 ನಿಮಿಷಗಳ ಕಾಲವಕಾಶ ಮಾತ್ರ ಇರುತ್ತದೆ. ನೀವು ಕಳುಹಿಸಿದ ಮೆಸೇಜ್ ಮೇಲೆ ಲಾಂಗ್ ಪ್ರೆಸ್ ಮಾಡುವ ಮೂಲಕ ಈ ಆಯ್ಕೆಯನ್ನು ಉಪಯೋಗಿಸಬಹುದು.
ಪ್ರಸ್ತುತ, ವಾಟ್ಸ್ಆ್ಯಪ್ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್ ಮಾಡಲು ಸಾಧ್ಯವಿಲ್ಲ. ಈ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್ ಮಾಡಲು ಸಾಧ್ಯವಾಗಿಸುತ್ತದೆ. ಐಒಎಸ್ನ 23.10.77 ವರ್ಷನ್ನಲ್ಲಿ ಈ ಆಯ್ಕೆ ನೀಡಲಾಗಿದೆ. ಆ್ಯಪ್ ಸ್ಟೋರ್ಗೆ ತೆರಳಿ ವಾಟ್ಸ್ಆ್ಯಪ್ ಅಪ್ಡೇಟ್ ಮಾಡಿದರೆ ಎಡಿಟ್ ಮೆಸೇಜ್ ಫೀಚರ್ ಸಿಗಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ