AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cash Withdrawal: ಕಾರ್ಡ್ ಬೇಕಿಲ್ಲ, ಮೊಬೈಲ್​ನ ಯುಪಿಐ ಮೂಲಕವೇ ಎಟಿಎಂನಿಂದ ಹಣ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ICCW Enabled UPI App: ಈಗ ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಕ್ಯಾಷ್ ಪಡೆಯಬಹುದು. ಐಸಿಸಿಡಬ್ಲ್ಯೂ ಎಂಬ ತಂತ್ರಜ್ಞಾನವನ್ನು ಅನಾವರಣಗೊಳಿಸಲಾಗಿದೆ. ಇದರಲ್ಲಿ ನಾವು ಯುಪಿಐ ಆ್ಯಪ್ ಮೂಲಕ ಎಟಿಎಂನಲ್ಲಿ ಕ್ಯಾಷ್ ಪಡೆಯಲು ಸಾಧ್ಯವಾಗುತ್ತದೆ.

Cash Withdrawal: ಕಾರ್ಡ್ ಬೇಕಿಲ್ಲ, ಮೊಬೈಲ್​ನ ಯುಪಿಐ ಮೂಲಕವೇ ಎಟಿಎಂನಿಂದ ಹಣ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಎಟಿಎಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 06, 2023 | 6:52 PM

ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಎಟಿಎಂ, ಯುಪಿಐ ಬಂದ ಬಳಿಕ ಬ್ಯಾಂಕಿಂಗ್ ವ್ಯವಸ್ಥೆ ಬಹಳ ಸುಗಮಗೊಂಡಿದೆ. ಎಟಿಎಂನಲ್ಲಿ ಕ್ಯಾಷ್ ಪಡೆಯುವುದರಿಂದ ಹಿಡಿದು ಸ್ಟೇಟ್ಮೆಂಟ್​ವರೆಗೆ ಹಲವು ಕಾರ್ಯಗಳನ್ನು ಮಾಡಬಹುದು. ನಮಗೆ ಕ್ಯಾಷ್ ಹಣ ಬೇಕೆಂದರೆ ಬ್ಯಾಂಕಿಗೆ ಹೋಗಿ ನಮ್ಮ ಖಾತೆಯಿಂದ ಹಣ ವಿತ್​ಡ್ರಾ ಮಾಡುತ್ತೇವೆ. ಇಲ್ಲವಾದರೆ ಎಟಿಎಂನಲ್ಲಿ ಕ್ಯಾಷ್ ಪಡೆಯುತ್ತೇವೆ. ಎಟಿಎಂನಲ್ಲಿ ಕ್ಯಾಷ್ ಪಡೆಯಲು ಕಾರ್ಡ್ ಬೇಕು. ಆದರೆ, ಈಗ ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಕ್ಯಾಷ್ ಪಡೆಯಬಹುದು. ಐಸಿಸಿಡಬ್ಲ್ಯೂ ಅಥವಾ ಇಂಟರಾಪರಬಲ್ ಕಾರ್ಡ್​ಲೆಸ್ ಕ್ಯಾಷ್ ವಿತ್​ಡ್ರಾಯಲ್ (ICCW- Interoperable Cardless Cash Withdrawal) ಎಂಬ ತಂತ್ರಜ್ಞಾನವನ್ನು ಅನಾವರಣಗೊಳಿಸಲಾಗಿದೆ. ಇದರಲ್ಲಿ ನಾವು ಯುಪಿಐ ಆ್ಯಪ್ ಮೂಲಕ ಎಟಿಎಂನಲ್ಲಿ ಕ್ಯಾಷ್ ಪಡೆಯಲು ಸಾಧ್ಯವಾಗುತ್ತದೆ.

ದಿನಕ್ಕೆ ಗರಿಷ್ಠ 10,000 ರೂ ಮಾತ್ರ ಪಡೆಯಲು ಸಾಧ್ಯ

ಯುಪಿಐ ಮೂಲಕ ಎಟಿಎಂನಲ್ಲಿ ದಿನಕ್ಕೆ ಎರಡು ಬಾರಿ ಮಾತ್ರ ಕ್ಯಾಷ್ ಡ್ರಾ ಮಾಡಬಹುದು. ಒಮ್ಮೆಗೆ ಗರಿಷ್ಠ 5,000 ರೂವರೆಗೂ ಮಾತ್ರ ಹಣ ಪಡೆಯಬಹುದು. ಅಂದರೆ ದಿನಕ್ಕೆ 10,000 ರೂಗಿಂತ ಹೆಚ್ಚು ಹಣ ವಿತ್​ಡ್ರಾಗೆ ಸದ್ಯಕ್ಕೆ ಅವಕಾಶ ಇಲ್ಲ.

ಇದನ್ನೂ ಓದಿIT Returns: ನೀವೇ ಸ್ವತಃ ಐಟಿ ರಿಟರ್ನ್ಸ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಐಸಿಸಿಡಬ್ಲ್ಯೂ ಅನ್ನು ಸದ್ಯಕ್ಕೆ ಬ್ಯಾಂಕ್ ಆಫ್ ಬರೋಡಾ ಮಾತ್ರ ಅಳವಡಿಸಿದೆ. ಉಳಿದ ಬ್ಯಾಂಕುಗಳು ಮುಂದಿನ ದಿನಗಳಲ್ಲಿ ಇದರ ಬಳಕೆ ಮಾಡಬಹುದು. ಹೀಗಾಗಿ, ಬ್ಯಾಂಕ್ ಆಫ್ ಬರೋಡಾದ ಎಟಿಎಂಗಳಲ್ಲಿ ಮಾತ್ರ ಯುಪಿಐ ಮೂಲಕ ಕ್ಯಾಷ್ ವಿತ್​ಡ್ರಾ ಮಾಡಲು ಸದ್ಯಕ್ಕೆ ಸಾಧ್ಯವಿದೆ. ಹಾಗಂತ ಬ್ಯಾಂಕ್ ಆಫ್ ಬರೋಡಾದ ಖಾತೆದಾರರಿಗೆ ಮಾತ್ರವೇ ಈ ಸೇವೆ ಸೀಮಿತ ಅಲ್ಲ. ಯಾವುದೇ ಬ್ಯಾಂಕ್​ನ ಗ್ರಾಹಕರು ಬಿಒಬಿ ಎಟಿಎಂಗೆ ಹೋಗಿ ಯುಪಿಐ ಮೂಲಕ ಕಾರ್ಡ್ ಹಾಕದೆಯೇ ಕ್ಯಾಷ್ ಡ್ರಾ ಮಾಡಿಕೊಂಡು ಬರಬಹುದು.

ಯುಪಿಐ ಆ್ಯಪ್​ಗಳಲ್ಲಿ ಐಸಿಸಿಡಬ್ಲ್ಯೂ ಎನೇಬಲ್ ಆಗಿರಬೇಕು

ಇಲ್ಲಿ ಗ್ರಾಹಕರು ಭೀಮ್ ಯುಪಿಐ, ಬ್ಯಾಂಕ್ ಆಫ್ ಬರೋಡಾದ ವರ್ಲ್ಡ್ ಯುಪಿಐ, ಪೇಟಿಎಂ, ಫೋನ್​ಪೇ ಅಥವಾ ಬೇರೆ ಯಾವುದಾದರೂ ಯುಪಿಐ ಆ್ಯಪ್​ಗಳನ್ನು ತಮ್ಮ ಮೊಬೈಲ್​ಗಳಲ್ಲಿ ಹೊಂದಿರಬೇಕು. ಅದರಲ್ಲಿ ಐಸಿಸಿಡಬ್ಲ್ಯೂ ಅನ್ನು ಎನೇಬಲ್ ಮಾಡಿರಬೇಕು. ಆಗ ಮಾತ್ರ ಎಟಿಎಂಗೆ ಹೋಗಿ ಯುಪಿಐ ಮೂಲಕ ಕ್ಯಾಷ್ ವಿತ್​ಡ್ರಾ ಮಾಡಬಹುದು.

ಇದನ್ನೂ ಓದಿAccident Insurance: ಅಪಘಾತ ವಿಮೆ ಬಹಳ ಮುಖ್ಯ; ಆಕ್ಸಿಡೆಂಟ್ ಇನ್ಷೂರೆನ್ಸ್ ಖರೀದಿಸುವ ಮುನ್ನ ಈ ಅಂಶ ತಿಳಿದಿರಲಿ

ಎಟಿಎಂನಲ್ಲಿ ಯುಪಿಐ ಬಳಸಿ ಹಣ ಡ್ರಾ ಮಾಡುವ ವಿಧಾನ

  • ಬ್ಯಾಂಕ್ ಅಫ್ ಬರೋಡಾದ ಯಾವುದಾದರೂ ಎಟಿಎಂ ಸೆಂಟರ್​ಗೆ ಹೋಗಿ
  • ಯುಪಿಐ ಕ್ಯಾಷ್ ವಿತ್​ಡ್ರಾಯಲ್ ಅನ್ನು ಅಯ್ಕೆ ಮಾಡಿ
  • ನೀವು ವಿತ್​ಡ್ರಾ ಮಾಡಬೇಕೆಂದಿರುವ ಮೊತ್ತವನ್ನು ನಮೂದಿಸಿ
  • ಎಟಿಎಂ ಪರದೆ ಮೇಲೆ ಕ್ಯೂಆರ್ ಕೋಡ್ ಕಾಣಿಸುತ್ತದೆ.
  • ಐಸಿಸಿಡಬ್ಲ್ಯೂ ಎನೇಬಲ್ ಆಗಿರುವ ಯುಪಿಐ ಆ್ಯಪ್ ತೆರೆದು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿರಿ.
  • ಆ್ಯಪ್​ನಲ್ಲಿ ಯುಪಿಐ ಪಿನ್ ಹಾಕಿದರೆ ಎಟಿಎಂನಲ್ಲಿ ಹಣ ಬರುತ್ತದೆ.

ಆಗಲೇ ಹೇಳಿದಂತೆ ಈ ರೀತಿ ಯುಪಿಐ ಮೂಲಕ ನೀವು ಎಟಿಎಂನಲ್ಲಿ ಒಂದು ಸಲಕ್ಕೆ 5,000 ರೂಗಿಂತ ಹೆಚ್ಚು ಹಣ ವಿತ್​ಡ್ರಾ ಮಾಡಲು ಆಗುವುದಿಲ್ಲ. ನಿಮ್ಮ ಕೈಯಲ್ಲಿ ಎಟಿಎಂ ಕಾರ್ಡ್ ಇಲ್ಲದಿದ್ದಾಗ ಈ ಸೌಲಭ್ಯ ಬಹಳ ಸಹಾಯಕ್ಕೆ ಬರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Tue, 6 June 23

VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ