Sign In

By signing in or creating an account, you agree with Associated Broadcasting Company's Terms & Conditions and Privacy Policy.

IT Returns: ನೀವೇ ಸ್ವತಃ ಐಟಿ ರಿಟರ್ನ್ಸ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

Step-by-step Guide To File ITR: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆ ನೀವು ಅಂದುಕೊಂಡಷ್ಟು ಸಂಕೀರ್ಣವಾಗಿಲ್ಲ. ಬಹುತೇಕ ಎಲ್ಲರೂ ಕೂಡ ಸುಲಭವಾಗಿ ರಿಟರ್ನ್ಸ್ ಸಲ್ಲಿಕೆ ಮಾಡಬಹುದು. ಈ ಪ್ರಕ್ರಿಯೆಯ ಹಂತ ಹಂತದ ವಿಧಾನ ಇಲ್ಲಿದೆ...

IT Returns: ನೀವೇ ಸ್ವತಃ ಐಟಿ ರಿಟರ್ನ್ಸ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ಐಟಿಆರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 06, 2023 | 3:05 PM

2022-23ರ ಹಣಕಾಸು ವರ್ಷದ ಐಟಿ ರಿಟರ್ನ್ಸ್ ಫೈಲ್ ಮಾಡುವ ಸಮಯ ಇದು. ಐಟಿಆರ್ ಸಲ್ಲಿಕೆಗೆ (IT Returns Filing) ಜುಲೈ 31ರವರೆಗೂ ಕಾಲಾವಕಾಶ ಇರುತ್ತದೆ. ನಮ್ಮಲ್ಲಿ ಬಹುತೇಕರು ಐಟಿ ರಿಟರ್ನ್ಸ್ ಸಲ್ಲಿಕೆಗೆ ಯಾವುದಾದರೂ ಏಜೆನ್ಸಿಗೋ, ಆಡಿಟರ್​ಗೋ ಜವಾಬ್ದಾರಿ ವಹಿಸಿ ಸುಮ್ಮನಾಗುತ್ತಾರೆ. ಆದರೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆ ನೀವು ಅಂದುಕೊಂಡಷ್ಟು ಸಂಕೀರ್ಣವಾಗಿಲ್ಲ. ಬಹುತೇಕ ಎಲ್ಲರೂ ಕೂಡ ಸುಲಭವಾಗಿ ರಿಟರ್ನ್ಸ್ ಸಲ್ಲಿಕೆ ಮಾಡಬಹುದು. ಸಂಬಳದಾರರಾಗಿರುವ ತೆರಿಗೆದಾರರು ಅಥವಾ ಉದ್ಯೋಗಿಗಳು ಐಟಿ ರಿಟರ್ನ್ಸ್ ಹೇಗೆ ಫೈಲ್ ಮಾಡಬಹುದು ಎಂಬ ವಿವರ ಈ ಲೇಖನದಲ್ಲಿದೆ.

ಒಂದು ಹಣಕಾಸು ವರ್ಷದಲ್ಲಿ ಒಟ್ಟು ಆದಾಯ 50 ಲಕ್ಷ ರೂಗಿಂತ ಕಡಿಮೆ ಇದ್ದರೆ, ಒಂದು ಮನೆ, ಕುಟುಂಬ ಪಿಂಚಣಿ ಆದಾಯ, 5000 ರೂವರೆಗಿನ ಕೃಷಿ ಆದಾಯ, ಬ್ಯಾಂಕ್ ಠೇವಣಿಗಳಿಂದ ಬಡ್ಡಿ ಇತ್ಯಾದಿ ರೀತಿಯ ಆದಾಯ ಮಾತ್ರ ಇದ್ದರೆ ಅಂತಹವರು ಐಟಿಆರ್-1 ಫಾರ್ಮ್ ಅನ್ನು ಆರಿಸಿಕೊಳ್ಳಬೇಕು. ಭಾರತದಲ್ಲಿರುವ ಬಹುತೇಕ ಸಂಬಳದಾರರಿಗೆ ಐಟಿಆರ್-1 ಫಾರ್ಮ್ ಅನ್ವಯ ಆಗುತ್ತದೆ.

ಇದನ್ನೂ ಓದಿRailway Travel Insurance: ರೈಲಿನಲ್ಲಿ ಹೋಗುತ್ತೀರಾ? ಕೇವಲ 35 ಪೈಸೆ ಕಟ್ಟಿ 10 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಪಡೆಯಿರಿ

ಆನ್​ಲೈನ್​ನಲ್ಲಿ ಐಟಿಆರ್ ಫೈಲ್ ಮಾಡುವ ಕ್ರಮಗಳು

  1. ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್​ಗೆ ಭೇಟಿ ನೀಡಿ. ಅದರ ಯುಅರ್​ಎಲ್ ಇಲ್ಲಿದೆ: www.incometax.gov.in/iec/foportal/
  2. ಇ ಫೈಲಿಂಗ್ ಪೋರ್ಟಲ್​ಗೆ ಯೂಸರ್ ಐಡಿ, ಪಾಸ್ವರ್ಡ್ ಬಳಸಿ ಲಾಗಿನ್ ಆಗಬೇಕು. ಇಲ್ಲಿ ಪ್ಯಾನ್ ನಂಬರ್ ಯೂಸರ್ ಐಡಿ ಆಗಿರುತ್ತದೆ.
  3. ಲಾಗಿನ್ ಆದ ಬಳಿಕ ಮುಖ್ಯಪುಟದಲ್ಲಿ ಕಾಣುವ ‘ಇಫೈಲ್’ ಮೆನು ಕೆಳಗೆ ‘ಇನ್ಕಮ್ ಟ್ಯಾಕ್ಸ್ ರಿಟರ್ನ್’ ಲಿಂಕ್ ಅನ್ನು ಕ್ಲಿಕ್ ಮಾಡಿ
  4. ಇಲ್ಲಿ ನೀವು ಅಸೆಸ್ಮೆಂಟ್ ವರ್ಷ, ಆನ್​ಲೈನ್ ಮೋಡ್ ಆಯ್ಕೆ ಮಾಡಬೇಕು. ನಂತರ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ. ಅದಾದ ನಂತರ ಫೈಲಿಂಗ್ ಪ್ರಕ್ರಿಯೆ ಆರಂಭಿಸಬಹುದು.
  5. ಐಟಿಆರ್ ಫಾರ್ಮ್ ಸಂಖ್ಯೆ ಆರಿಸಿಕೊಳ್ಳಬೇಕು. ಫೈಲಿಂಗ್ ಟೈಪ್ ಅನ್ನು ಒರಿಜಿನಲ್ ಅಥವಾ ರಿವೈಸ್ಡ್ ರಿಟರ್ನ್ ಎಂದು ಆರಿಸಬೇಕು. ಸಬ್ಮಿಶನ್ ಮೋಡ್ ಅನ್ನು ಪ್ರಿಪೇರ್ ಅಂಡ್ ಸಬ್ಮಿಟ್ ಆನ್ಲೈನ್ ಎಂದು ಆರಿಸಿಕೊಳ್ಳಬೇಕು.
  6. ನಂತರ ಕಂಟಿನ್ಯೂ ಕ್ಲಿಕ್ ಮಾಡಿ
  7. ಆನ್​ಲೈನ್ ಐಟಿಆರ್ ಫಾರ್ಮ್​ನಲ್ಲಿರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿ, ಜಾಗ್ರತೆಯಿಂದ ಮಾಹಿತಿ ತುಂಬಿರಿ.
  8. ಅದಾ ಬಳಿಕ ಸೇವ್ ಡ್ರಾಫ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಈ ಡ್ರಾಫ್ಟ್ 30 ದಿನಗಳವರೆಗೂ ನಿಮ್ಮ ದತ್ತಾಂಶವನ್ನು ಉಳಿಸಿಟ್ಟಿರುತ್ತದೆ.
  9. ಒಟ್ಟು ಆದಾಯ, ಡಿಡಕ್ಷನ್, ಪಾವತಿಸಿದ ತೆರಿಗೆ, ತೆರಿಗೆ ಬಾಕಿ ಇತ್ಯಾದಿ ಎಲ್ಲಾ ವಿವರವೂ ಭರ್ತಿಯಾಗಿರಲಿ. ತೆರಿಗೆ ಉಳಿಸುವ ಯಾವುದೇ ಹೂಡಿಕೆ ಇದ್ದರೂ ಅದರ ವಿವರ ಇಲ್ಲಿ ತಪ್ಪದೇ ಹಾಕಿ. ಇದರಿಂದ ಹೆಚ್ಚು ತೆರಿಗೆ ಉಳಿಸಬಹುದು.
  10. ಈಗ ವೆರಿಫಿಕೇಶನ್ ಪ್ರಕ್ರಿಯೆ. ‘ಟ್ಯಾಕ್ಸಸ್ ಪೇಯ್ಡ್ ಅಂಡ್ ವೆರಿಫಿಕೇಶನ್’ ಟ್ಯಾಬ್​ನಲ್ಲಿ ಮೂರು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕು. ನೀವು ಇವೆರಿಫೈ ಮಾಡುವ ಬದಲು ಫಾರ್ಮ್ ಅನ್ನು ಪೋಸ್ಟ್ ಮೂಲಕ ಸಿಪಿಸಿ ಕಚೇರಿಗೆ ಕಳುಹಿಸುವುದಾದರೆ ಮೂರನೇ ಆಯ್ಕೆ ಚೆಕ್ ಮಾಡಬೇಕು.
  11. ಇದಾದ ಬಳಿಕ ಪ್ರಿವ್ಯೂ ಅಂಡ್ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಐಟಿಆರ್​ನಲ್ಲಿ ನಮೂದಾದ ಎಲ್ಲಾ ಮಾಹಿತಿ ವೆರಿಫೈ ಆಗುತ್ತದೆ. ಈಗ ಐಟಿಆರ್ ಸಬ್ಮಿಟ್ ಮಾಡಿ.
  12. ಒಂದು ವೇಳೆ ನೀವು ಇವೆರಿಫೈ ಆಯ್ಕೆ ಆರಿಸಿಕೊಂಡರೆ ಅದರಲ್ಲೂ ವಿವಿಧ ಆಯ್ಕೆಗಳಿವೆ. ಇವಿಸಿ ಅಥವಾ ಒಟಿಪಿ ಮೂಲಕ ವೆರಿಫಿಕೇಶನ್ ಮಾಡಬಹುದು. ನೊಂದಾಯಿತ ಮೊಬೈಲ್ ನಂಬರ್​ಗೆ ಇವಿಸಿ ಅಥವಾ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ವೆರಿಫಿಕೇಶನ್ ಪೂರ್ಣಗೊಳಿಸಬೇಕು.
  13. ಒಟಿಪಿಯನ್ನು 60 ಸೆಕೆಂಡ್​ನೊಳಗೆ ನಮೂದಿಸಿ ಸಬ್ಮಿಟ್ ಮಾಡದಿದ್ದರೆ ಮೈ ಅಕೌಂಟ್ ಹಾಗೂ ಇವೆರಿಫೈ ರೆಟರ್ನ್​ಗೆ ಹೋಗಿ ಮತ್ತೊಮ್ಮೆ ವೆರಿಫಿಕೇಶನ್ ಮಾಡಬೇಕಾಗುತ್ತದೆ.
  14. ಇ ವೆರಿಫಿಕೇಶನ್ ಆದ ಬಳಿಕ ನಿಮ್ಮ ಐಟಿ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಂತಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು ನೀವು ಇದೇ ಪೋರ್ಟಲ್​ನಲ್ಲಿ ಸಲ್ಲಿಕೆಯಾದ ಐಟಿಆರ್ ಅನ್ನು ವೀಕ್ಷಿಸಬಹುದು.

ಇದನ್ನೂ ಓದಿLIC: ತಿಂಗಳಿಗೆ 5,000 ಕಟ್ಟಿದರೆ 20 ವರ್ಷದಲ್ಲಿ 23 ಲಕ್ಷ ರೂ; ಎಲ್​ಐಸಿ ಪೆನ್ಷನ್ ಪ್ಲಸ್ ಪ್ಲಾನ್ ಬಗ್ಗೆ ತಿಳಿಯಿರಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್