UPI Transaction Limit: ಯುಪಿಐ ಲಿಮಿಟ್!; ಪೇಟಿಎಂ, ಫೋನ್ಪೇ ಇತ್ಯಾದಿಯಲ್ಲಿ ದಿನಕ್ಕೆ ಎಷ್ಟು ವಹಿವಾಟು ನಡೆಸಬಹುದು? ಬ್ಯಾಂಕುಗಳಿಂದಲೂ ಮಿತಿ ಹೇರಿಕೆ
Banks Set Limit For Daily UPI Transactions: ಯುಪಿಐ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದ NPCI ಇತ್ತೀಚೆಗೆ ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ, ಯುಪಿಐ ಮೂಲಕ ಒಬ್ಬ ವ್ಯಕ್ತಿ ದಿನಕ್ಕೆ 20ಕ್ಕಿಂತ ಹೆಚ್ಚು ವಹಿವಾಟು ಹಾಗೂ 1ಲಕ್ಷ ರೂಗಿಂತ ಹೆಚ್ಚು ಮೊತ್ತದ ವಹಿವಾಟು ನಡೆಸದಂತೆ ಮಿತಿ ಹಾಕಲಾಗಿದೆ.
ಬೆಂಗಳೂರು: ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್, ಅಥವಾ ಯುಪಿಐ ಬಂದ ಮೇಲೆ ಹಣಕಾಸು ವಹಿವಾಟು ಚಹರೆಯೇ ಪೂರ್ಣ ಬದಲಾಗಿದೆ. ಜನರು ತಮ್ಮ ಬಹುತೇಕ ಹಣವಾಟಿಗೆ ಯುಪಿಐ ಅನ್ನೇ ಬಳಸುತ್ತಿದ್ದಾರೆ. ದಾಖಲೆ ಮಟ್ಟದಲ್ಲಿ ಯುಪಿಐ (UPI) ಬಳಕೆಯಾಗುತ್ತಿದೆ. ಒಂದು ವರದಿ ಪ್ರಕಾರ ಕಳೆದ ಕ್ಯಾಲಂಡರ್ ವರ್ಷದಲ್ಲಿ (2022) 149.5 ಲಕ್ಷ ಕೋಟಿ ರೂ ಮೊತ್ತದಷ್ಟು ಯುಪಿಐ ವಹಿವಾಟು ನಡೆದಿತ್ತು. ಇದರಿಂದ ಯುಪಿಐ ಆ್ಯಪ್ಗಳು ಹಾಗೂ ಬ್ಯಾಂಕುಗಳಿಗೆ ಸಾಕಷ್ಟು ಒತ್ತಡ ಬೀಳುತ್ತಿದೆ. ಯುಪಿಐ ವಹಿವಾಟುಗಳಿಂದ ಹೆಚ್ಚಿನ ಆದಾಯವೂ ಇಲ್ಲದಿರುವುದೂ ಅವರುಗಳನ್ನು ಸಂಬಾಳಿಸಿಕೊಂಡು ಹೋಗುವುದು ಕಷ್ಟವಾಗಿದೆ. ಅತಿ ಹೆಚ್ಚು ನಡೆಯುತ್ತಿರುವ ವಹಿವಾಟುಗಳಿಗೆ ಮಿತಿ ಹಾಕಲು ಯುಪಿಐ ಆ್ಯಪ್ಗಳು ಹಾಗೂ ಬ್ಯಾಂಕುಗಳು ನಿರ್ಧರಿಸಿವೆ. ದಿನಕ್ಕೆ ಗರಿಷ್ಠ ಎಷ್ಟು ವಹಿವಾಟುಗಳು ನಡೆಯಬಹುದು ಎಂದು ಮಿತಿ ಹಾಕಿವೆ.
ಯುಪಿಐ ಆ್ಯಪ್ಗಳಲ್ಲಿ ದಿನಕ್ಕೆ 1 ಲಕ್ಷ ರೂ ಮಿತಿ
ಯುಪಿಐ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ (NPCI) ಇತ್ತೀಚೆಗೆ ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ, ಯುಪಿಐ ಮೂಲಕ ಒಬ್ಬ ವ್ಯಕ್ತಿ ದಿನಕ್ಕೆ 1ಲಕ್ಷ ರೂಗಿಂತ ಹೆಚ್ಚು ಹಣ ಪಾವತಿ ಮಾಡುವಂತಿಲ್ಲ ಎಂದು ಮಿತಿ ಹಾಕಲಾಗಿದೆ. ಅಷ್ಟೇ ಅಲ್ಲ ದಿನಕ್ಕೆ 20ಕ್ಕಿಂತ ಹೆಚ್ಚು ವಹಿವಾಟು ನಡೆಸುವಂತಿಲ್ಲ. ಪೇಟಿಎಂ, ಗೂಗಲ್ ಪೇ ಮತ್ತು ಅಮೇಜಾ್ ಪೇ ಆ್ಯಪ್ಗಳು ದಿನಕ್ಕೆ 1ಲಕ್ಷ ರೂ ಮೊತ್ತದ ವಹಿವಾಟು ನಡೆಸಲು ಮಾತ್ರ ಅವಕಾಶ ಕೊಟ್ಟಿವೆ. ಅಷ್ಟೇ ಅಲ್ಲ, ದಿನಕ್ಕೆ ಗರಿಷ್ಠ 10 ವಹಿವಾಟಿಗೆ ಮಿತಿಗೊಳಿಸಲಾಗಿದೆ.
ಇದನ್ನೂ ಓದಿ: Cash Withdrawal: ಕಾರ್ಡ್ ಬೇಕಿಲ್ಲ, ಮೊಬೈಲ್ನ ಯುಪಿಐ ಮೂಲಕವೇ ಎಟಿಎಂನಿಂದ ಹಣ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಯುಪಿಐ ವಹಿವಾಟಿಗೆ ಬ್ಯಾಂಕುಗಳಿಂದಲೂ ವಿವಿಧ ಮಿತಿ
ಯುಪಿಐ ಪೇಮೆಂಟ್ ವಹಿವಾಟಿನಲ್ಲಿ ವಿವಿಧ ಬ್ಯಾಂಕುಗಳು ವಿವಿಧ ಮಿತಿ ಹಾಕಿವೆ. ಹೆಚ್ಡಿಎಫ್ಸಿ ಬ್ಯಾಂಕು ದಿನಕ್ಕೆ ಯುಪಿಐ ವಹಿವಾಟುಗಳನ್ನು 1 ಲಕ್ಷ ರೂಗೆ ಮಿತಿ ನಿಗದಿ ಮಾಡಿದೆ. ಹೊಸ ಬಳಕೆದಾರರಾದರೆ ಮಿತಿ ಕೇವಲ 5,000 ರೂ ಇರುತ್ತದೆ. ಆ್ಯಕ್ಸಿಸ್ ಬ್ಯಾಂಕ್ ಮತ್ತು ಎಸ್ಬಿಐ ಹಾಗೂ ಇತರ ಕೆಲ ಪ್ರಮುಖ ಬ್ಯಾಂಕುಗಳು ಕೂಡ ಗರಿಷ್ಠ 1 ಲಕ್ಷ ರೂವರೆಗೆ ಮಾತ್ರ ಯುಪಿಐ ವಹಿವಾಟಿಗೆ ಅವಕಾಶ ಕೊಟ್ಟಿದೆ.
ಆದರೆ, ಕೆನರಾ ಬ್ಯಾಂಕು 25,000 ರೂ, ಐಸಿಐಸಿಐ ಬ್ಯಾಂಕು 10,000 ರೂ, ಬ್ಯಾಂಕ್ ಆಫ್ ಬರೋಡಾ 25,000 ರೂ ಮೊತ್ತದ ವಹಿವಾಟಿಗೆ ಮಿತಿ ನಿಗದಿ ಮಾಡಿದೆ.
ಇದನ್ನೂ ಓದಿ: IT Returns: ನೀವೇ ಸ್ವತಃ ಐಟಿ ರಿಟರ್ನ್ಸ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ಗರಿಷ್ಠ ಮಿತಿಯನ್ನು ಬಳಸಿಕೊಳ್ಳುವುದು ಹೇಗೆ?
ಎನ್ಪಿಸಿಐ ನಿಗದಿಪಡಿಸಿರುವ ಮಿತಿ ಎಂದರೆ ದಿನಕ್ಕೆ 1ಲಕ್ಷ ರೂನಷ್ಟು ವಹಿವಾಟು ಹಾಗೂ 20 ಬಾರಿ ವಹಿವಾಟು. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಯುಪಿಐ ಆ್ಯಪ್ ಉಪಯೋಗಿಸುತ್ತಿದ್ದರೆ ಈ ಗರಿಷ್ಠ ಮಟ್ಟವನ್ನು ಉಪಯೋಗಿಸಿಕೊಳ್ಳಬಹುದು. ಪೇಟಿಎಂ, ಗೂಗಲ್ ಪೇ, ಫೋನ್ಪೇ ಮೂಲಕ ತಮ್ಮ ವಹಿವಾಟುಗಳನ್ನು ನಡೆಸಬಹುದು. ಪೇಟಿಎಂ ಮತ್ತು ಜಿಪೇನಲ್ಲಿ ದಿನಕ್ಕೆ 10 ಬಾರಿ ಮಾತ್ರ ವಹಿವಾಟು ಎಂದು ಮಿತಿಗೊಳಿಸಲಾಗಿದೆ. ಎರಡನ್ನೂ ಉಪಯೋಗಿಸಿ ತಲಾ 10 ವಹಿವಾಟು ನಡೆಸಿದರೆ ದಿನಕ್ಕೆ 20 ವಹಿವಾಟು ಆಗುತ್ತದೆ.
ಪೇಟಿಎಂ ಮತ್ತು ಫೋನ್ಪೇನಲ್ಲಿರುವ ವ್ಯಾಲಟ್ ಸೌಲಭ್ಯವನ್ನು ಉಪಯೋಗಿಸಿದರೆ ಹೆಚ್ಚು ಸಂಖ್ಯೆಯಲ್ಲಿ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:03 am, Wed, 7 June 23