Railway Travel Insurance: ರೈಲಿನಲ್ಲಿ ಹೋಗುತ್ತೀರಾ? ಕೇವಲ 35 ಪೈಸೆ ಕಟ್ಟಿ 10 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಪಡೆಯಿರಿ

IRCTC Ticket Booking Travel Insurance: ಭಾರತೀಯ ರೈಲ್ವೇಸ್ ತೀರಾ ಕಡಿಮೆ ಬೆಲೆಗೆ ಟ್ರಾವೆಲ್ ಇನ್ಷೂರೆನ್ಸ್ ಆಫರ್ ಮಾಡುತ್ತದೆ. ನೀವು ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಟಿಕೆಟ್ ದರಕ್ಕೆ ಹೆಚ್ಚುವರಿಯಾಗಿ 35 ಪೈಸೆ ಕೊಟ್ಟರೆ ಇನ್ಷೂರೆನ್ಸ್ ಪಡೆಯುವ ಆಫರ್ ಇದೆ.

Railway Travel Insurance: ರೈಲಿನಲ್ಲಿ ಹೋಗುತ್ತೀರಾ? ಕೇವಲ 35 ಪೈಸೆ ಕಟ್ಟಿ 10 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಪಡೆಯಿರಿ
ಪ್ರಯಾಣ ವಿಮೆ
Follow us
|

Updated on: Jun 05, 2023 | 3:20 PM

ಒಡಿಶಾದ ಬಾಲಾಸೋರ್​ನಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತದಲ್ಲಿ (Odisha Train Accident) ಬಹಳ ಸಾವು ನೋವುಗಳಾಗಿವೆ. ಸರ್ಕಾರಗಳಿಂದ ಪರಿಹಾರ ಘೋಷಣೆ ಆಗಿದೆಯಾದರೂ ಇಂಥ ಅವಘಡಗಳಲ್ಲಿ ಇನ್ಷೂರೆನ್ಸ್ ಪ್ಲಾನ್​ಗಳು ಬಹಳ ಪ್ರಯೋಜನಕ್ಕೆ ಬರುತ್ತವೆ. ನಾವು ಆನ್​ಲೈನ್​ನಲ್ಲಿ ಬಸ್, ಟ್ರೈನ್ ಅಥವಾ ವಿಮಾನದ ಟಿಕೆಟ್ ಬುಕ್ ಮಾಡುವಾಗ ಸ್ವಲ್ಪ ಹೆಚ್ಚುವರಿ ಹಣಕ್ಕೆ ಇನ್ಷೂರೆನ್ಸ್ ಕವರೇಜ್ ಪಡೆಯುವ ಆಫರ್ ಕೊಡಲಾಗುತ್ತದೆ. ಅ ಸಂದರ್ಭದಲ್ಲಿ ಅನೇಕ ಮಂದಿ ಒಂದೆರಡು ರುಪಾಯಿ ಉಳಿಸುವ ಸಲುವಾಗಿ ಈ ವಿಮಾ ಪ್ಲಾನ್ ತಿರಸ್ಕರಿಸುವುದುಂಟು. ಇದು ಗ್ರಾಹಕರು ಮಾಡುವ ಬಹಳ ದೊಡ್ಡ ತಪ್ಪು ಎನ್ನುತ್ತಾರೆ ತಜ್ಞರು. ಒಡಿಶಾ ರೈಲುದುರಂತದ ಹಿನ್ನೆಲೆಯಲ್ಲಿ ಈಗ ಟ್ರಾವೆಲ್ ಇನ್ಷೂರೆನ್ಸ್ (Travel Insurance) ವಿಚಾರ ಮುನ್ನೆಲೆಗೆ ಬಂದಿದೆ. ಇವತ್ತಿನ ದಿನಮಾನದಲ್ಲಿ ಪ್ರಯಾಣ ವಿಮೆ ಬಹಳ ಅಗತ್ಯವಾದುದು. ಹೆಚ್ಚು ಹೊರೆ ಕೂಡ ಎನಿಸುವುದಿಲ್ಲ.

ಭಾರತೀಯ ರೈಲ್ವೇಸ್ ತೀರಾ ಕಡಿಮೆ ಬೆಲೆಗೆ ಟ್ರಾವೆಲ್ ಇನ್ಷೂರೆನ್ಸ್ ಆಫರ್ ಮಾಡುತ್ತದೆ. ನೀವು ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಟಿಕೆಟ್ ದರಕ್ಕೆ ಹೆಚ್ಚುವರಿಯಾಗಿ 35 ಪೈಸೆ ಕೊಟ್ಟರೆ ಇನ್ಷೂರೆನ್ಸ್ ಪಡೆಯುವ ಆಫರ್ ಇದೆ.

ರೈಲ್ವೆ ಟ್ರಾವೆಲ್ ಇನ್ಷೂರೆನ್ಸ್​ನಲ್ಲಿ 10 ಲಕ್ಷ ರೂವರೆಗೆ ಕವರೇಜ್

ರೈಲು ಪ್ರಯಾಣಕ್ಕೆ ನೀವು ಇನ್ಷೂರೆನ್ಸ್ ಪ್ಲಾನ್ ಖರೀದಿಸಿದರೆ ಆ ಪ್ರಯಾಣದ ವೇಳೆ ಆಗಬಹುದಾದ ಅವಘಡಗಳಿಗೆ 10 ಲಕ್ಷ ರೂವರೆಗೆ ಪರಿಹಾರ ಪಡೆಯಬಹುದು. ಅದರ ವಿವರ ಇಲ್ಲಿದೆ

  • ಪ್ರಯಾಣದ ವೇಳೆ ಸಾವಾದರೆ: 10 ಲಕ್ಷ ರೂವರೆಗೆ ಕ್ಲೈಮ್ ಸಾಧ್ಯ
  • ಅಂಗಕ್ಕೆ ಊನವಾದರೆ: 10 ಲಕ್ಷ ರೂವರೆಗೆ
  • ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ: 2 ಲಕ್ಷ ರೂವರೆಗೆ

ಇದರ ಜೊತೆಗೆ ಭಯೋತ್ಪಾದಕ ದಾಳಿ, ದರೋಡೆ, ಗಲಭೆ, ಆಕಸ್ಮಿಕವಾಗಿ ಬೀಳುವುದು ಇತ್ಯಾದಿ ಏನೇ ಅವಘಡ ಸಂಭವಿಸಿದರೂ ಇನ್ಷೂರೆನ್ಸ್ ಕ್ಲೇಮ್ ಮಾಡಬಹುದು.

ಒಂದು ವೇಳೆ ರೈಲು ಕಾರಣಾಂತರದಿಂದ ವೃಥಾ ನಿಲುಗಡೆ ಆಗಿದ್ದು, ನೀವು ಬೇರೆ ವಾಹನ ಮೂಲಕ ನಿಮ್ಮ ಸ್ಥಾನ ತಲುಪಿದರೆ ಆ ಪ್ರಯಾಣ ವೆಚ್ಚವನ್ನು ಇನ್ಷೂರೆನ್ಸ್ ಮೂಲಕ ಕ್ಲೈಮ್ ಮಾಡಬಹುದು. ನೀವು ಬದಲಿ ಟ್ರೈನಿನಲ್ಲಿ ಹೋದಾಗ ನಿಮ್ಮ ಇನ್ಷೂರೆನ್ಸ್ ಪ್ಲಾನ್ ಕೂಡ ವರ್ಗಾವಣೆ ಆಗುತ್ತದೆ.

ಇದನ್ನೂ ಓದಿAccident Insurance: ಅಪಘಾತ ವಿಮೆ ಬಹಳ ಮುಖ್ಯ; ಆಕ್ಸಿಡೆಂಟ್ ಇನ್ಷೂರೆನ್ಸ್ ಖರೀದಿಸುವ ಮುನ್ನ ಈ ಅಂಶ ತಿಳಿದಿರಲಿ

ಐಆರ್​ಸಿಟಿಸಿ ಟ್ರಾವೆಲ್ ಇನ್ಷೂರೆನ್ಸ್ ಪಡೆಯುವುದು ಹೇಗೆ?

ವಿದೇಶೀಯರು ಮತ್ತು 5 ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ಎಲ್ಲಾ ಭಾರತೀಯರು ರೈಲು ಪ್ರಯಾಣಕ್ಕೆ ಇನ್ಷೂರೆನ್ಸ್ ಪಡೆಯಬಹುದು. ಐಆರ್​ಸಿಟಿಸಿ ವೆಬ್​ಸೈಟ್ ಅಥವಾ ಆ್ಯಪ್ ಮೂಲಕ ಬುಕ್ ಮಾಡಲಾಗುವ ಟಿಕೆಟ್ ದರಕ್ಕೆ ಹೆಚ್ಚುವರಿಯಾಗಿ 35 ಪೈಸೆ ನೀಡಿದರೆ ಈ ಇನ್ಷೂರೆನ್ಸ್ ಪ್ಲಾನ್ ಸಿಗುತ್ತದೆ. ಇದು ಕಡ್ಡಾಯ ಇರುವುದಿಲ್ಲ. ನಿಮಗೆ ಬೇಡವೆಂದರೆ ಕೇವಲ ಟಿಕೆಟ್ ದರವಷ್ಟೇ ನೀಡಿ ಟಿಕೆಟ್ ಖರೀದಿಸಬಹುದು. ನೀವು ಒಂದು ಪಿಎನ್​ಆರ್ ನಂಬರ್ ಅಡಿಯಲ್ಲಿ ಹಲವರಿಗೆ ಟಿಕೆಟ್ ಬುಕ್ ಮಾಡಿದಾಗ ಒಬ್ಬರಿಗಷ್ಟೇ ಇನ್ಷೂರೆನ್ಸ್ ಖರೀದಿಸುವಂತಿಲ್ಲ. ಎಲ್ಲಾ ಟಿಕೆಟ್​ಗೂ ಇನ್ಷೂರೆನ್ಸ್ ಅಳವಡಿಕೆ ಆಗುತ್ತದೆ.

ಅಂದಹಾಗೆ ಈ ಇನ್ಷೂರೆನ್ಸ್ ಕವರೇಜ್ ಅನ್ನು ಭಾರತೀಯ ರೈಲ್ವೆ ಇಲಾಖೆ ನೀಡುವುದಿಲ್ಲ. ಎಸ್​ಬಿಐ ಜನರಲ್ ಇನ್ಷೂರೆನ್ಸ್ ಕೋ ಲಿ, ಮತ್ತು ಲಿಬರ್ಟಿ ಜನರಲ್ ಇನ್ಷೂರೆನ್ಸ್ ಲಿ ಸಂಸ್ಥೆಗಳು ರೈಲ್ವೆ ಇಲಾಖೆ ಪರ ವಿಮಾ ಪಾಲಿಸಿ ನೀಡುತ್ತವೆ.

ಇದನ್ನೂ ಓದಿByju’s: ಬೈಜೂಸ್​ಗೆ ನಿಲ್ಲದ ಸಂಕಷ್ಟ, ಸಾಲಗಾರರ ಕಾಟ; ಬಡ್ಡಿಕಟ್ಟಲೂ ಕಷ್ಟ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರದಾಟ

ಟ್ರಾವೆಲ್ ಇನ್ಷೂರೆನ್ಸ್ ಹಣ ಕ್ಲೈಮ್ ಮಾಡುವುದು ಹೇಗೆ?

ನಿಮ್ಮ ರೈಲು ಪ್ರಯಾಣದ ವೇಳೆ ಯಾವುದಾದರೂ ಅವಘಡವಾಗಿ ಇನ್ಷೂರೆನ್ಸ್ ಕ್ಲೈಮ್ ಮಾಡಬಹುದು ಎನಿಸಿದಲ್ಲಿ, ಆ ಘಟನೆಯಾದ 4 ತಿಂಗಳೊಳಗೆ ಪ್ರಯಾಣಿಕನಾಗಲೀ ಅಥವಾ ಆತನ ವಾರಸುದಾರನಾಗಲೀ ಕ್ಲೈಮ್ ಫಾರ್ಮ್ ಪ್ರಕಾರ ಇನ್ಷೂರೆನ್ಸ್ ಕಂಪನಿಗೆ ಲಿಖಿತವಾಗಿ ಹೇಳಿಕೆ ಬರೆದು ಕಳುಹಿಸಬೇಕು. ಘಟನೆಗೆ ಸಾಕ್ಷಿಯಾಗಿ ಯಾವುದಾದರೂ ದಾಖಲೆ ಇದ್ದರೆ ಅದನ್ನು ಸಲ್ಲಿಸಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ