ಅಸ್ಟ್ರಾಜೆನೆಕಾ ಹಾಗೂ ಫೈಜರ್ನ ಕೊವಿಡ್-19 ಲಸಿಕೆ ಪಡೆದ ಮನುಷ್ಯರು ಚಿಂಪಾಂಜಿಗಳಾಗಿ ಮಾರ್ಪಡುತ್ತಾರೆ ಎಂದು ತಪ್ಪಾದ ಮಾಹಿತಿಯನ್ನು ತಮ್ಮ ಖಾತೆಗಳ ಮೂಲಕ ಹರಡುತ್ತಿದ್ದ 300ರಷ್ಟು ಖಾತೆಗಳನ್ನು ಫೇಸ್ಬುಕ್ ನಿಷೇಧಿಸಿದೆ. ವರದಿಗಳ ಪ್ರಕಾರ, ಈ ಖಾತೆಗಳು ರಷ್ಯಾದ ತಪ್ಪು ಮಾಹಿತಿ ಜಾಲಕ್ಕೆ ತಳುಕು ಹಾಕಿಕೊಂಡಿರುವಂಥವು ಮತ್ತು ಮುಖ್ಯವಾಗಿ ಭಾರತ, ಲ್ಯಾಟಿನ್ ಅಮೆರಿಕಾ ಹಾಗೂ ಯುಎಸ್ ಬಳಕೆದಾರರನ್ನು ಗುರಿ ಮಾಡಿಕೊಂಡಿರುವಂಥವು. ಈ ತಪ್ಪಾದ ಮಾಹಿತಿ ಜಾಲವು ಆರಂಭದಲ್ಲಿ ಮೀಮ್ಸ್ಗಳು ಹಾಗೂ ಕಾಮೆಂಟ್ಸ್ಗಳನ್ನು ಪೋಸ್ಟ್ ಮಾಡಿವೆ. ಅಂದರೆ ಅದು 2020ರ ನವೆಂಬರ್ ಹಾಗೂ ಡಿಸೆಂಬರ್ ಸಮಯದಲ್ಲಿ. ಅಸ್ಟ್ರಾಜೆನೆಕಾದ ಕೊವಿಡ್-19 ಲಸಿಕೆಯು ಜನರನ್ನು ಚಿಂಪಾಂಜಿಗಳನ್ನಾಗಿ ಮಾಡಿ, ಆ ನಂತರ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದಿತ್ತು. ಐದು ತಿಂಗಳ ನಂತರ, 2021ರ ಮೇ ತಿಂಗಳಲ್ಲಿ ಇದು ಮತ್ತೆ ಕಾಣಿಸಿಕೊಂಡಿದೆ. ಕಳುವಾಗಿ, ಸೋರಿಕೆ ಆಗಿದೆ ಎಂದು ಆರೋಪಿಸಲಾದ ಆಸ್ಟ್ರಾಜೆನೆಕಾ ದಾಖಲಾತಿಗಳ ಮೂಲಕವಾಗಿ ಫೈಜರ್ ಕಂಪೆನಿಯ ಸುರಕ್ಷತೆ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.
“ವಿದೇಶೀ ಮಧ್ಯಪ್ರವೇಶದ ನಮ್ಮ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ನಾವು 65 ಫೇಸ್ಬುಕ್ ಖಾತೆಗಳನ್ನು ಮತ್ತು 243 ಇನ್ಸ್ಟಾಗ್ರಾಮ್ ಖಾತೆಗಳನ್ನು ತೆಗೆದುಹಾಕಿದ್ದೇವೆ. ವಿದೇಶಿ ಸಂಸ್ಥೆಯೊಂದರ ಪರವಾಗಿ ನಿಖರ ಅಲ್ಲದ ನಡವಳಿಕೆಯನ್ನು ಸಂವಹನ ಮಾಡುತ್ತಿದೆ. ನೆಟ್ವರ್ಕ್ ಹತ್ತಾರು ಫೋರಂ ಹಾಗೂ ಪ್ಲಾಟ್ಫಾರ್ಮ್ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಆದರೆ ಪ್ರೇಕ್ಷಕರನ್ನು ಸೃಷ್ಟಿಸಲು ವಿಫಲವಾಗಿದೆ. ನಮ್ಮ ತನಿಖೆ ಮೂಲಕ ಈ ಅಭಿಯಾನ ಮತ್ತು ವಿದೇಶಿ ಖಾತೆಗಳ ಮಧ್ಯದ ಸಂಬಂಧವನ್ನು ಕಂಡುಕೊಳ್ಳಲಾಗಿದೆ. ಈಗ ನಮ್ಮ ಪ್ಲಾಟ್ಫಾರ್ಮ್ನಿಂದ ಆ ಖಾತೆಗಳನ್ನು ಕಿತ್ತೊಗೆಯಲಾಗಿದೆ,” ಎಂದು ಗ್ಲೋಬಲ್ ಐಒ ಥ್ರೆಟ್ ಗುಪ್ತಚರ ಮುಖ್ಯಸ್ಥ ಹಾಗೂ ಫೇಸ್ಬುಕ್ ಐಒ ಥ್ರೆಟ್ ಗುಪ್ತಚರ ಮುಖ್ಯಸ್ಥ ಬೆನ್ ನಿಮ್ಮೊ ಹೇಳಿದ್ದಾರೆ.
ಕೆಲವೇ ಹ್ಯಾಶ್ಟ್ಯಾಗ್ಗಳ ಮೇಲೆ ಗಮನ
“ಆಸ್ಟ್ರಾಜೆನೆಕಾ ಸೃಷ್ಟಿಸಿದ ಕೊರೊನಾ ಚುಚ್ಚುಮದ್ದು ಚಿಂಪಾಂಜಿ ವಂಶವಾಹಿಗಳ ಆಧಾರದ ಮೇಲೆ ರೂಪಿಸಿರುವಥದ್ದು, ಈ ಲಸಿಕೆಯನ್ನು ನಿಷೇಧಿಸಬೇಕು, ಇಲ್ಲದಿದ್ದರೆ ನಾವೆಲ್ಲರೂ ಚಿಂಪಾಂಜಿಗಳಾಗುತ್ತೇವೆ,” ಎಂದು ಬಿಜಿನೆಸ್ ಇನ್ಸೈಡರ್ ತಪ್ಪು ಮಾಹಿತಿ ಜಾಲದಿಂದ ಒಂದು ಪೋಸ್ಟ್ ಅನ್ನು ಉಲ್ಲೇಖಿಸಿದೆ. Instagram ಖಾತೆಗಳು “ಕಚ್ಚಾ ಮತ್ತು ಕುತಂತ್ರದಿಂದ ಕೂಡಿದ” ಚಟುವಟಿಕೆಯನ್ನು ನಡೆಸಿತು, ಅದು #AstraZenecakills ಮತ್ತು #AstraZenecalies, #stopAstraZeneca ನಂತಹ ಕೆಲವು ಹ್ಯಾಶ್ಟ್ಯಾಗ್ಗಳ ಮೇಲೆ ಕೇಂದ್ರೀಕೃತವಾಗಿದೆ. ಡಿಸೆಂಬರ್ 14 ಮತ್ತು ಡಿಸೆಂಬರ್ 21 ರ ನಡುವೆ, ಕಾರ್ಯಾಚರಣೆಯ ಹ್ಯಾಶ್ಟ್ಯಾಗ್ಗಳನ್ನು ಒಳಗೊಂಡ ಸುಮಾರು 10,000 ಪೋಸ್ಟ್ಗಳನ್ನು ಮಾಡಲಾಗಿದೆ, ಆಗಾಗ ಲಿಂಕ್ಗಳೊಂದಿಗೆ ಕಾರ್ಯಾಚರಣೆಯ ಆಫ್-ಪ್ಲಾಟ್ಫಾರ್ಮ್ ಲೇಖನಗಳಿಗೆ ಫೇಸ್ಬುಕ್ ಹೇಳಿದೆ.
ರೆಡ್ಇಟ್, ಮೀಡಿಯಾ, change.org, medapply.co.uk ಇವುಗಳಲ್ಲಿಯೂ ತಪ್ಪಾದ ಲೇಖನ ಹಾಗೂ ಅರ್ಜಿಗಳ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ಆ ನಂತರ ಕುತಂತ್ರ ಬಳಸಿ, ಅವೇ ಲೇಖನಗಳನ್ನು ಫೇಸ್ಬುಕ್ ಮತ್ತು ಇನ್ಸ್ಟಾ ಗ್ರಾಮ್ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ಅಭಿಯಾನದ ಮೂಲಕವಾಗಿ ಈಗಾಗಲೇ ಪ್ರಭಾವಿಸಿರುವಂಥವರನ್ನು ಇನ್ಸ್ಟಾಗ್ರಾಮ್, ಯೂಟ್ಯೂಬ್, ಟಿಕ್ಟಾಕ್ನಂಥವುಗಳಲ್ಲಿ ನಿರ್ದಿಷ್ಟ ಹ್ಯಾಶ್ಟ್ಯಾಗ್ನಲ್ಲಿ ಮೂಲ ಗುರುತು ಬಿಟ್ಟುಕೊಡದೆ ಕಂಟೆಂಟ್ ಪೋಸ್ಟ್ ಮಾಡುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಫೇಸ್ಬುಕ್ ಹೇಳಿದೆ.
“ವಿದೇಶೀಯರೇ ಆಗಿರಲಿ ಅಥವಾ ಸ್ವದೇಶೀಯರೇ ಆಗಿರಲಿ ವಂಚನೆ ಅಭಿಯಾನದಲ್ಲಿ ತೊಡಗಿಕೊಂಡವರನ್ನು ನಮ್ಮ ತಂಡವು ನಿರಂತರವಾಗಿ ನಿರ್ಮೂಲನೆ ಮಾಡುವ ಕಡೆಗೆ ಗಮನ ಹರಿಸುತ್ತದೆ. ನಮ್ಮ ಜಾರಿಗೆ ಪ್ರತಿಯಾಗಿ ಪ್ರಭಾವಿಸುವಂಥ ಕಾರ್ಯಾಚರಣೆ ನಡೆಯುತ್ತಿದೆ ಎಂದು ನಮಗೆ ಗೊತ್ತಿದೆ, ಹೊಸ ಮೋಸದ ನಡವಳಿಕೆಗಳು ಹೊರಹೊಮ್ಮುತ್ತವೆ,” ಎಂದು ಫೇಸ್ಬುಕ್ ಹೇಳಿದೆ.
ಇದನ್ನೂ ಓದಿ: Fact Check ಕೊವಿಡ್ ರೂಪಾಂತರಿ ಯಾವಾಗ ಕಾಣಿಸಿಕೊಳ್ಳುತ್ತದೆ ಎಂದು ದಿನಾಂಕ ತೋರಿಸುವ ವೈರಲ್ ಪೋಸ್ಟ್ ಫೇಕ್
ಇದನ್ನೂ ಓದಿ: Fact Check: ಹನುಮಾನ್ ಸ್ಟಿಕ್ಕರ್ ಇರುವ ಆಂಬುಲೆನ್ಸ್ ಹತ್ತಲು ನಿರಾಕರಿಸಿದ ಕೇರಳದ ದಂಪತಿ; ವೈರಲ್ ಆಗಿದ್ದು ಫೇಕ್ ಸುದ್ದಿ
(Facebook Removes Hundreds Of Accounts Which Were Spreading Fake News About Vaccination)
Published On - 6:21 pm, Fri, 13 August 21