ಫೇಸ್ ರೆಕಗ್ನೇಷನ್ ವ್ಯವಸ್ಥೆ ರದ್ದುಗೊಳಿಸಿದ ಫೇಸ್ ಬುಕ್; ಶತಕೋಟಿ ಜನರ ಡೇಟಾಗಳು ಡಿಲೀಟ್!

| Updated By: shruti hegde

Updated on: Nov 03, 2021 | 10:34 AM

Facial Recognition System: ಫೇಸ್ ಬುಕ್ ತನ್ನ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು (ಫೇಸ್​ ರೆಕಗ್ನೇಷನ್ ಸಿಸ್ಟಮ್) ಸ್ಥಗಿತಗೊಳಿಸಲಿದೆ. ಇದರಿಂದ ಲಕ್ಷಾಂತರ ಜನರ ಫೋಟೋ ವಿಡಿಯೊಗಳ ಟೆಂಪ್ಲೇಟ್​ಗಳನ್ನು ಡಿಲೀಟ್ ಮಾಡುವುದಾಗಿ ಮೂಲ ಕಂಪನಿ ಹೇಳಿದೆ.

ಫೇಸ್ ರೆಕಗ್ನೇಷನ್ ವ್ಯವಸ್ಥೆ ರದ್ದುಗೊಳಿಸಿದ ಫೇಸ್ ಬುಕ್; ಶತಕೋಟಿ ಜನರ ಡೇಟಾಗಳು ಡಿಲೀಟ್!
ಸಂಗ್ರಹ ಚಿತ್ರ
Follow us on

ಫೇಸ್ ಬುಕ್ ತನ್ನ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು (ಫೇಸ್​ ರೆಕಗ್ನೇಷನ್ ಸಿಸ್ಟಮ್) ಸ್ಥಗಿತಗೊಳಿಸಲಿದೆ. ಇದರಿಂದ ಲಕ್ಷಾಂತರ ಜನರ ಫೋಟೋ ವಿಡಿಯೊಗಳ ಟೆಂಪ್ಲೇಟ್​ಗಳನ್ನು ಡಿಲೀಟ್ ಮಾಡುವುದಾಗಿ ಮೂಲ ಕಂಪನಿ ಮಂಗಳವಾರ ಹೇಳಿದೆ. ಫೇಸ್ ರೆಕಗ್ನೇಷನ್ (Face Recognition System) ಮೂಲಕ ಪೋಟೋಗಳು ಮತ್ತು ವಿಡಿಯೊಗಳನ್ನು ಬಳಕೆದಾರರನ್ನು ಸ್ವಯಂಚಾಲಿತವಾಗಿ ಗುರುತಿಸಬಹುದಿತ್ತು. ಆದರೆ ಈ ಸಿಸ್ಟಮ್​ನಿಂದ ತಂತ್ರಜ್ಞಾನದ ದುರ್ಬಳಕೆಯ ಕುರಿತಾಗಿ ಕಳವಳ ವ್ಯಕ್ತವಾಗಿತ್ತು. ಹಾಗಾಗಿ ಫೇಸ್ ಬುಕ್ ತನ್ನ ಜನಪ್ರಿಯ ಸೇವೆ ರೆಕಗ್ನೇಷನ್ ಸಿಸ್ಟಮ್ಅನ್ನು ಶೀಘ್ರದಲ್ಲಿಯೇ ಸ್ಥಗಿತಗೊಳಿಸಲಿದೆ.

ಮುಖ ಗುರುತಿಸುವಿಕೆ ವ್ಯವಸ್ಥೆಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಸೇವೆಯನ್ನು ರದ್ದುಗೊಳಿಸಲು ಫೇಸ್ ಬುಕ್ ನಿರ್ಧರಿಸಿದೆ. ಸಮಾಜದಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನದ ಬಗ್ಗೆ ಹಲವು ಕಾಳಜಿಗಳಿವೆ ಮತ್ತು ನಿಯಂತ್ರಕರು ಅದರ ಬಳಕೆಯನ್ನು ನಿಯಂತ್ರಿಸುವಲ್ಲಿ ಸ್ಪಷ್ಟವಾದ ನಿಯಮಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಕಂಪನಿ ಮೆಟಾ ಹೇಳಿಕೆಯಲ್ಲಿ ತಿಳಿಸಿದೆ.

ಈ ಬದಲಾವಣೆ ಯಾವಾಗ ಕಾರ್ಯಗತಗೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಫೇಸ್ ಬುಕ್ ತನ್ನ ದೈನಂದಿನ ಬಳಕೆದಾರರಲ್ಲಿ ಮೂರನೇ ಒಂದು ಭಾಗದಷ್ಟು ಬಳಕೆದಾರರು ಫೇಸ್​ ರೆಕಗ್ನೇಷನ್​ ಸಿಸ್ಟಮ್​ಗೆ ಹೊಂದಿಕೊಂಡಿದ್ದಾರೆ. ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದರಿಂದ ಶತಕೋಟಿಗೂ ಹೆಚ್ಚು ಜನರ ವೈಯಕ್ತಿಕ ಮುಖ ಗುರುತಿಸುವಿಕೆ ಟೆಂಪ್ಲೇಟ್​ಗಳು ಅಳಿಸುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಪಂಚದಲ್ಲಿ ಫೇಸ್ ಬುಕ್, ಇನ್​ಸ್ಟಾಗ್ರಾಂ ಮತ್ತು ವಾಟ್ಸಾಪ್ಅನ್ನು ಶತಕೋಟಿ ಜನರು ಬಳಸುತ್ತಿದ್ದಾರೆ. ಫೇಸ್ ರೆಕಗ್ನೇಷನ್ ಸಿಸ್ಟಮ್ ಸ್ಥಗಿತಗೊಳಿಸುವುದು ಡಿಸೆಂಬರ್ ವೇಳೆಗೆ ಪೂರ್ಣಗೊಳುವ ಸಾಧ್ಯತೆಗಳಿವೆ. ಈ ಬದಲಾವಣೆಯಿಂದ ಸುಮಾರು ಶತಕೋಟಿ ಜನರ ಫೇಸ್ ರೆಕಗ್ನೇಷನ್ ಟೆಂಪ್ಲೇಟ್​ಗಳು ಅಳಿಸುತ್ತದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:

Facebook files: ಫೇಸ್​ಬುಕ್​ ವಿರುದ್ಧದ ಆರೋಪಕ್ಕೆ ‘ಅದೇ ಹಳೇ ಕಥೆ ಹೇಳಲಾಗುತ್ತಿದೆ’ ಎನ್ನುತ್ತಿದೆ ಕಂಪೆನಿ

Meta: ಕಂಪೆನಿಯ ಹೆಸರು ಬದಲಿಸಿದ ಫೇಸ್​ಬುಕ್​: ಸಾಮಾಜಿಕ ಮಾಧ್ಯಮಗಳಲ್ಲಿ ಹಿಗ್ಗಾಮುಗ್ಗಾ ಜಾಲಾಡಿದ ನೆಟ್ಟಿಗರು

Published On - 10:25 am, Wed, 3 November 21