ವಿಶ್ವದಲ್ಲಿ ಇಂದು ಐದು ಬಿಲಿಯನ್ ಜನರು ಸ್ಮಾರ್ಟ್ಫೋನನ್ನು (Smartphones) ಉಪಯೋಗಿಸುತ್ತಿದ್ದಾರೆ. ಇದರಲ್ಲಿ ಬಹುಪಾಲು ಆಂಡ್ರಾಯ್ಡ್ ಮೊಬೈಲ್ಗಳೇ ಆಗಿವೆ. ಹೀಗಾಗಿ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಉಪಯೋಗಿಸುತ್ತಿರುವ ಗೂಗಲ್ ಪ್ಲೇ ಸ್ಟೋರ್ನಲ್ಲಿ (Play Store) ನಕಲಿ ಆ್ಯಪ್ಗಳ ಹಾವಳಿ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಪಾಯಕಾರಿ ವೈರಸ್ಗಳನ್ನು ಗುರುತಿಸಿ ಗೂಗಲ್ ಕಿತ್ತೆಸೆದರೂ ಪುನಃ ಹೊಸ ಮಾಲ್ವೇರ್ಗಳು ಹುಟ್ಟಿಕೊಳ್ಳುತ್ತಿವೆ. ಇತ್ತೀಚೆಗಷ್ಟೆ ಡ್ರಿನಿಕ್ (Drinik) ಎಂಬ ಮಾಲ್ವೆರ್ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಕಂಡುಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಪುನಃ ಹಣ ಕದಿಯುವ ಮತ್ತೊಂದಿಷ್ಟು ಅಪಾಯಕಾರಿ ಆ್ಯಪ್ಗಳು ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿರುವ ಪ್ಲೇಸ್ಟೋರ್ನಲ್ಲಿ ಪತ್ತೆಯಾಗಿದೆ.
ಸಂಶೋಧಕರು ಹೇಳುವ ಪ್ರರಕಾರ, ಕೆಲ ಹೊಸ ಆ್ಯಪ್ಗಳು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆಯಂತೆ. ಇದು ಬಳಕೆದಾರರ ಲಾಗಿನ್ ಮಾಹಿತಿ, ಅಕೌಂಟ್ ನಂಬರ್ ಹಾಗೂ ನಿಮ್ಮ ಹಣದ ವಿವರವನ್ನು ಕದಿಯುತ್ತದೆ ಎಂದು ಹೇಳಿದೆ. ಐದು ಪಾಯಕಾರಿ ಆ್ಯಪ್ಗಳನ್ನು ಗುರುತಿಸಲಾಗಿದ್ದು ಇನ್ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ. ಇಲ್ಲಿದೆ ನೋಡಿ ಹಣ ಕದಿಯುವ ಐದು ಡೇಂಜರಸ್ ಆ್ಯಪ್ಗಳು.
ಭಾರತದ ಬ್ಯಾಂಕ್ಗಳೇ ಟಾರ್ಗೆಟ್:
ಕಳೆದ ವಾರವಷ್ಟೆ ಕಂಡುಬಂದತಹ ಡ್ರಿನಿಕ್ ವೈರಸ್ ಎಂಬ ವೈರಲ್ ಆದಾಯ ತೆರಿಗೆ ಮರುಪಾವತಿಯ ಹೆಸರಿನಲ್ಲಿ ಬಳಕೆದಾರರ ಸೂಕ್ಷ್ಮ ಡೇಟಾವನ್ನು ಕದಿಯುತ್ತದೆ. ಅಲ್ಲದೆ ಭಾರತೀಯ ಬಳಕೆದಾರರ 18 ಬ್ಯಾಂಕ್‌ಗಳನ್ನು ಇದು ಟಾರ್ಗೆಟ್ ಮಾಡಿದೆಯಂತೆ. ಪ್ರಸ್ತುತ, ಈ ಬ್ಯಾಂಕ್‌ಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಇದೆ ಎಂದು ಹೇಳಲಾಗಿದೆ. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾತೆ ಹೊಂದಿದ್ದರೆ ಎಚ್ಚರ ವಹಿಸಿ. ಕೇವಲ ಒಂದು ಬ್ಯಾಂಕ್ ಮಾತ್ರವಲ್ಲದೆ ಭಾರತದಲ್ಲಿರುವ ಒಟ್ಟು 27 ಬ್ಯಾಂಕಿಂಗ್ ಸಂಸ್ಥೆಗಳನ್ನು ಈ ವೈರಸ್ ಟಾರ್ಗೆಟ್ ಮಾಡಿಕೊಂಡಿದೆ. ಡ್ರಿನಿಕ್ ವೈರಸ್‌ನ ಹೊಸ ಆವೃತ್ತಿಯು ಬಳಕೆದಾರರನ್ನು ಫಿಶಿಂಗ್ ಪೇಜ್‌ಗೆ ಕರೆದೊಯ್ಯುತ್ತದೆ ಮತ್ತು ಬಳಕೆದಾರರ ಎಲ್ಲ ಮಾಹಿತಿಯನ್ನು ಕದಿಯುತ್ತದೆ. ಈ ಮಾಲ್ವೇರ್ ಅಭಿವೃದ್ಧಿಪಡಿಸಿದವರು ಪೂರ್ತಿಯಾಗಿ ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಆಗಿ ರೂಪಿಸಿದ್ದಾರೆ ಎಂದು ಹೇಳಲಾಗಿದೆ.
ಡ್ರಿನಿಕ್ ಮಾಲ್‌ವೇರ್ APK ಫೈಲ್‌ನೊಂದಿಗೆ ಮಸೇಜ್ ಕಳುಹಿಸುವ ಮೂಲಕ ಬಳಕೆದಾರರನ್ನು ಗುರುತಿಸುತ್ತದೆ. iAssist ಎಂಬ ಅಪ್ಲಿಕೇಶನ್‌ನೊಂದಿಗೆ ಬರುತ್ತದಂತೆ. ಇದು ಬಳಕೆದಾರರ ಕ್ರೆಡಿಟ್ ಕಾರ್ಡ್ CVV, PIN ಮತ್ತು ಪ್ರಮುಖ ವಿವರಗಳನ್ನು ಕದಿಯಬಹುದು. ನಿಮಗೆ ತಿಳಿಯದೆ ನಿಮ್ಮ ಸ್ಮಾರ್ಟ್ಫೋನ್ ಒಳಗೆ ಪ್ರವೇಶ ಪಡೆದು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತದೆ. ನೀವು ಬ್ಯಾಂಕಿಂಗ್‌ಗೆ ಸಂಬಂಧಿಸಿದ ಯಾವುದೇ ಲಿಂಕ್ ಅನ್ನು ಎಸ್ಎಮ್ಎಸ್ ಮೂಲಕ ಅಥವಾ ಇಮೇಲ್ ಮೂಲಕ ಪಡೆದರೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಎರಡು ಬಾರಿ ಪರಿಶೀಲಿಸಬೇಕು. ಯಾವುದೇ ಮೂರನೇ ವ್ಯಕ್ತಿ ಕಳುಹಿಸದ ಮೆಸೇಜ್ ಅನ್ನು ಕಡೆಗಣಿಸಿ.
Published On - 12:01 pm, Wed, 2 November 22