ಆಂಡ್ರಾಯ್ಡ್ ಸ್ಮಾರ್ಟ್ಫೋನ್ (Android Smartphone) ಬಳಕೆದಾರರು ಉಪಯೋಗಿಸುವ ಗೂಗಲ್ ಪ್ಲೇ ಸ್ಟೋರ್ (Google Play Store) ನಲ್ಲಿ ನಕಲಿ ಆ್ಯಪ್ಗಳ (Fake App) ಹಾವಳಿ ಹೆಚ್ಚುತ್ತಿದೆ. ಈಗಾಗಲೇ ಅನೇಕ ಬಾರಿ ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಅಪಾಯಕಾರಿ ಆ್ಯಪ್‌ಗಳನ್ನು ಡಿಲೀಟ್ ಮಾಡಿದೆ. ವಾರಗಳ ಹಿಂದೆಯಷ್ಟೆ ಗೂಗಲ್ ತನ್ನ ಪ್ಲೇ ಸ್ಟೋರ್ನಲ್ಲಿ ಕಂಡುಬಂದಿದ್ದ 50 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ನೀವು ಇನ್ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚನೆ ನೀಡಿತ್ತು. ಇದೀಗ ಮತ್ತೆ ಪ್ಲೇ ಸ್ಟೋರ್ನಲ್ಲಿ ಫೇಕ್ ಆ್ಯಪ್ ಪತ್ತೆಯಾಗಿದೆ.
ಸೆಕ್ಯುರಿಟಿ ರಿಸರ್ಚ್ ಕಂಪನಿ ಟ್ರೆಂಡ್ ಮೈಕ್ರೊ ಈ ಬಗ್ಗೆ ಮಾಹಿತಿ ತಿಳಿಸಿದ್ದು, ಪ್ಲೇ ಸ್ಟೋರ್ನಲ್ಲಿರುವ ಈ ನಕಲಿ ಆ್ಯಪ್‌ಗಳನ್ನು ಇನ್ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡಿ ಎಂದು ಹೇಳಿದೆ. ಇದು ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುತ್ತದಂತೆ. ಅಲ್ಲದೆ ನಿಮ್ಮ ಬ್ಯಾಂಕ್ಗೆ ಸಂಬಂಧಿಸಿದ ಪಿನ್ ನಂಬರ್, ಪಾಸ್ವರ್ಡ್ ಜೊತೆಗೆ ಅನೇಕ ಮಾಹಿತಿಯನ್ನು ಕಲೆಹಾಕುತ್ತದೆ ಎಂದು ಹೇಳಿದೆ.
ಗೂಗಲ್ ಪ್ಲೇ ಸ್ಟೋರ್ ನಿಯಮ ಪಾಲಿಸದ, ಅನಧಿಕೃತ ಮತ್ತು ನಕಲಿ ಆ್ಯಪ್‌ಗಳನ್ನು ಗೂಗಲ್ ತೆಗೆದುಹಾಕುತ್ತಲೆ ಇದೆ. ಪ್ರತಿ ಬಾರಿ ಹಣ ದೋಚುವ ಆ್ಯಪ್‌ಗಳನ್ನು ಗೂಗಲ್ ಕಿತ್ತುಹಾಕುತ್ತಿದೆ. ಸಸದ್ಯ ಈ ಆ್ಯಪ್‌ಗಳನ್ನು ನೀವು ಬಳಸುತ್ತಿದ್ದರೆ ಕೂಡಲೇ ಅನ್‌ಇನ್‌ಸ್ಟಾಲ್ ಮಾಡಿ. ಆ ಮೂಲಕ ಸಮಸ್ಯೆಯಿಂದ ಪಾರಾಗಿ.
Call Recorder APK (com.caduta.aisevsk)
Rooster VPN (com.vpntool.androidweb)
Super Cleaner- hyper & smart (com.j2ca.callrecorder)
Document Scanner – PDF Creator (com.codeword.docscann)
Universal Saver Pro (com.virtualapps.universalsaver)
Eagle photo editor (com.techmediapro.photoediting)
Call recorder pro+ (com.chestudio.callrecorder)
Extra Cleaner (com.casualplay.leadbro)
Crypto Utils (com.utilsmycrypto.mainer)
FixCleaner (com.cleaner.fixgate)
Just In: Video Motion (com.olivia.openpuremind)
com.myunique.sequencestore
com.flowmysequto.yamer
com.qaz.universalsaver
Lucky Cleaner (com.luckyg.cleaner)
Simpli Cleaner (com.scando.qukscanner)
Unicc QR Scanner (com.qrdscannerratedx)