Flipkart Apple Days Sale 2021: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಹೊಸ ಮೇಳ: ಐಫೋನ್ ಮೇಲೆ ಕಣ್ಣಿಟ್ಟಿದ್ದರೆ ಮಿಸ್ ಮಾಡ್ಬೇಡಿ

| Updated By: Vinay Bhat

Updated on: Aug 26, 2021 | 1:35 PM

ನೀವು ಐಫೋನ್ ಖರೀದಿಸಬೇಕು ಎಂಬ ಬಯಕೆಯಲ್ಲಿದ್ದರೆ ಆಕರ್ಷಕ ಡಿಸ್ಕೌಂಟ್‌ನಲ್ಲಿ ಐಫೋನ್ ನಿಮ್ಮದಾಗಿಸಲು ಇದು ಸಕಾಲ ಎನ್ನಬಹುದಾಗಿದೆ.

Flipkart Apple Days Sale 2021: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಹೊಸ ಮೇಳ: ಐಫೋನ್ ಮೇಲೆ ಕಣ್ಣಿಟ್ಟಿದ್ದರೆ ಮಿಸ್ ಮಾಡ್ಬೇಡಿ
Apple iPhone 12
Follow us on

ಪ್ರಸಿದ್ಧ ಇ-ಕಾಮರ್ಸ್‌ ತಾಣವಾದ ಫ್ಲಿಪ್‌ಕಾರ್ಟ್​ (Flipkart) ಇದೀಗ ‘ಆ್ಯಪಲ್ ಡೇಸ್‌’ ಸೇಲ್ (Apple Days Sale) ಆಯೋಜಿಸಿದೆ. ಈ ಸೇಲ್ ಆಗಸ್ಟ್ 26 ಗುರುವಾರದಿಂದ ಆರಂಭವಾಗಿದ್ದು ಶನಿವಾರದವರೆಗೂ ನಡೆಯಲಿದೆ. ಆ್ಯಪಲ್ ಡೇಸ್ ಸೇಲ್‌ನಲ್ಲಿ ಐಫೋನ್‌ಗಳಿಗೆ (iPhone), ಆ್ಯಪಲ್ ಮ್ಯಾಕ್‌ಬುಕ್‌, ಆ್ಯಪಲ್ ಐಫೋಡ್‌ಗಳಿಗೆ ಅತ್ಯುತ್ತಮ ರಿಯಾಯಿತಿ ನೀಡಲಾಗಿದ್ದು, ವಿಶೇಷ ಇಎಮ್ಐ ಸೌಲಭ್ಯಳು, ಎಕ್ಸ್​ಚೇಂಜ್ ಆಫರ್ ಆಯ್ಕೆ ಸಹ ಇದೆ.

ನೀವು ಐಫೋನ್ ಖರೀದಿಸಬೇಕು ಎಂಬ ಬಯಕೆಯಲ್ಲಿದ್ದರೆ ಆಕರ್ಷಕ ಡಿಸ್ಕೌಂಟ್‌ನಲ್ಲಿ ಐಫೋನ್ ನಿಮ್ಮದಾಗಿಸಲು ಇದು ಸಕಾಲ ಎನ್ನಬಹುದಾಗಿದೆ. ಹಾಗಾದ್ರೆ ಐಫೋನ್ ಎಷ್ಟು ಡಿಸ್ಕೌಂಟ್ ಇದೆ, ಏನು ಆಫರ್ ಎಂಬುದನ್ನು ನೋಡೋಣ…

ಐಫೋಲ್ SE: ಆ್ಯಪಲ್ ಡೇಸ್‌ ಸೇಲ್​ನಲ್ಲಿ ಐಫೋಲ್ ಎಸ್​ಇ ಬಂಪರ್ ಡಿಸ್ಕೌಂಟ್​ನಲ್ಲಿ ಸಿಗುತ್ತಿದೆ. 4.7 ಇಂಚಿನ ರೆಟಿನಾ ಡಿಸ್ ​ಪ್ಲೇ  ಹೊಂದಿರುವ ಈ ಫೋನಿನ ಮೂಲ ಬೆಲೆ 44,900 ರೂ. ಆಗಿದೆ. ಆದರೆ, ಸದ್ಯ ಆಫರ್​ನಲ್ಲಿ ಇದು ಕೇವಲ 34,999 ರೂ. ಗೆ ಮಾರಾಟವಾಗುತ್ತಿದೆ.

ಐಫೋನ್ 12: ಐಫೋನ್ 12 ಮೇಲೆ ಸಾಕಷ್ಟು ಬ್ಯಾಂಕ್ ಆಫರ್​ಗಳಿವೆ. ಇದರ ಮೂಲಬೆಲೆ 84,900 ರೂ. ಆದರೆ, ಇದು 82,900 ರೂ. ಗೆ ಖರೀದಿಸಬಹುದು. ಅಲ್ಲದೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ ಬರೋಬ್ಬರಿ 5000 ರೂ. ಡಿಸ್ಕೌಂಟ್ ಸಿಗಲಿದೆ.

ಐಫೋನ್ 12 ಮಿನಿ: ಐಫೋನ್ 12 ಮಿನಿಯ ಮೇಲೂ 2000 ರೂ. ರಿಯಾಯಿತಿ ನೀಡಲಾಗಿದೆ. ಇದರ ಮೂಲಬೆಲೆ 74,900 ಆಗಿದ್ದು, ಆಫರ್​ನಲ್ಲಿ 72,900 ರೂ. ಗೆ ನಿಮ್ಮದಾಗಿಸಬಹುದು. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 5000 ರೂ. ಡಿಸ್ಕೌಂಟ್ ಪಡೆಯಬಹುದು.

ಐಫೋನ್ 11: ಐಫೋನ್ 11 ಮೇಲೆ ಬರೋಬ್ಬರಿ 2900 ರೂ. ರಿಯಾಯಿತಿ ನೀಡಲಾಗಿದೆ. 6.1 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ ಪ್ಲೇ ಹೊಂದಿರುವ ಈ ಫೋನಿನ ಮೂಲಬೆಲೆ 54,900. ಆದರೆ, ಸದ್ಯ ಆಫರ್​ನಲ್ಲಿ ಇದು 51,999 ರೂ. ಗೆ ಖರೀದಿಸಬಹುದು. ಜೊತೆಗೆ 15,000 ರೂ. ವರೆಗಿನ ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದೆ.

ಐಫೋನ್ XR: ಈ ಫೋನಿನ ಮೇಲೆ 5900 ರೂ. ಡಿಸ್ಕೌಂಟ್ ನೀಡಲಾಗಿದೆ. ಐಫೋನ್ XR ಕೇವಲ 46,999 ರೂ. ಗೆ ಮಾರಾಟವಾಗುತ್ತಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 5000 ರೂ. ಡಿಸ್ಕೌಂಟ್ ಪಡೆಯಬಹುದು.

WhatsApp: ವಾಟ್ಸ್​ಆ್ಯಪ್ ಬಳಕೆದಾರರಿಗೆ ಅಚ್ಚರಿಯ ಫೀಚರ್: ಹೊಸ ಅಪ್ಡೇಟ್​ನಲ್ಲಿ ಏನಿರಲಿದೆ ಗೊತ್ತಾ?

Samsung Galaxy A21: ಸ್ಯಾಮ್​ಸಂಗ್​ ಗ್ಯಾಲಕ್ಸಿಯ ಈ ಸ್ಮಾರ್ಟ್​ಫೊನ್​ನಲ್ಲಿ ಬೆಂಕಿ: ನಿಮ್ಮಲ್ಲಿದೆಯಾ ಈ ಫೋನ್

(Flipkart Apple Days Sale 2021 Get exciting discounts on iPhone 12 iPhone 11 iPhone SE)