WhatsApp: ವಾಟ್ಸ್ಆ್ಯಪ್ ಬಳಕೆದಾರರಿಗೆ ಅಚ್ಚರಿಯ ಫೀಚರ್: ಹೊಸ ಅಪ್ಡೇಟ್ನಲ್ಲಿ ಏನಿರಲಿದೆ ಗೊತ್ತಾ?
Whatsapp Message Reactions: ವಾಟ್ಸ್ಆ್ಯಪ್ನ ಈ ಹೊಸ ಆಯ್ಕೆ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವಲ್ಲದೆ ಐಫೋನ್ ಸೇರಿದಂತೆ ವಾಟ್ಸ್ಆ್ಯಪ್ ವೆಬ್, ಡೆಸ್ಕ್ಟಾಪ್ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ವರದಿಯಾಗಿದೆ.
ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ (facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಇತ್ತೀಚೆಗೆ ಹೊಸ ಹೊಸ ಅಪ್ಡೇಟ್ಗಳನ್ನು ಘೋಷಿಸುತ್ತಿದೆ. ಸದ್ಯ ಇದೀಗ ವಾಟ್ಸ್ಆ್ಯಪ್ (WhatsApp) ಅಚ್ಚರಿಯ ಫೀಚರ್ ಒಂದನ್ನು ಪರೀಕ್ಷೆಗೆ ಒಳಪಡಿಸಿದ್ದು ಆದಷ್ಟು ಬೇಗ ಬಳಕೆದಾರರಿಗೆ ಮತ್ತೊಂದು ಅತ್ಯುತ್ತಮ ಅಪ್ಡೇಟ್ ನೀಡಲು ಮುಂದಾಗಿದೆ.
ವಾಟ್ಸ್ಆ್ಯಪ್ ಪರಿಚಯಿಸಲು ಹೊರಟಿರುವ ಹೊಸ ಅಪ್ಡೇಟ್ ಮೆಸೇಜ್ ರಿಯಾಕ್ಷನ್. ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಇರುವಂತೆಯೆ ಒಂದು ಮೆಸೇಜ್ಗೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಬಹುದಾಗಿದೆ. ಸದ್ಯ ಈ ಹೊಸ ಆಯ್ಕೆಯು ಪರೀಕ್ಷಾ ಹಂತದಲ್ಲಿದ್ದು, ವಾಟ್ಸ್ಆ್ಯಪ್ ಬೇಟಾ ವರ್ಷನ್ನಲ್ಲಿ ಕಾಣಿಸಿಕೊಂಡಿದೆ.
ವಾಟ್ಸ್ಆ್ಯಪ್ನ ಈ ಹೊಸ ಆಯ್ಕೆ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವಲ್ಲದೆ ಐಫೋನ್ ಸೇರಿದಂತೆ ವಾಟ್ಸ್ಆ್ಯಪ್ ವೆಬ್, ಡೆಸ್ಕ್ಟಾಪ್ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ವರದಿಯಾಗಿದೆ.
ವಾಟ್ಸ್ಆ್ಯಪ್ ತನ್ನ ಕೊನೆಯ ಅಪ್ಡೇಟ್ನಲ್ಲಿ ಬಳಕೆದಾರರು ತಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಫೊಟೋ ಅಥವಾ ವಿಡಿಯೋವನ್ನು ಕಳುಹಿಸಿದಾಗ ಒಮ್ಮೆ ಮಾತ್ರ ಕಾಣಿಸುವಂತೆ ಆಯ್ಕೆ ನೀಡಿತ್ತು. ಈ ಹೊಸ ಸಿಂಗಲ್ ವೀವಿಂಗ್ ಆಯ್ಕೆ ಅನೇಕರು ಮೆಚ್ಚಿಕೊಂಡಿದ್ದಾರೆ.
ನೀವು ನಿಮ್ಮ ಸ್ನೇಹಿತರ ಚಾಟ್ ಬಾಕ್ಸ್ ಓಪನ್ ಮಾಡಿ ಫೋಟೋ ಅಥವಾ ವಿಡಿಯೋ ಕಳುಹಿಸುವ ಬೇಕೆಂದಿದ್ದರೆ, ಐಕಾನ್ ಮೇಲೆ ಕ್ಲಿಕ್ ಮಾಡುತ್ತೀರಿ. ಆಗ ಫೋಟೊ ಅಥವಾ ವಿಡಿಯೋ ಸೆಲಕ್ಟ್ ಮಾಡಿ ಸೆಂಡ್ ಬಟನ್ ಪ್ರೆಸ್ ಮಾಡುವ ಪಕ್ಕದಲ್ಲೇ ವೀವ್ ಒನ್ಸ್ ಮೋಡ್ ಆಯ್ಕೆ ಇರುತ್ತದೆ. ಅದನ್ನು ಪ್ರೆಸ್ ಮಾಡಿ ಕಳುಹಿಸಿದರೆ, ನೀವು ಸೆಂಡ್ ಮಾಡಿದ ಫೈಲ್ ಅನ್ನು ಅವರಿಗೆ ಒಮ್ಮೆಗೆ ಮಾತ್ರ ಓಪನ್ ಮಾಡಲು ಸಾಧ್ಯವಾಗುತ್ತಿದೆ.
Samsung Galaxy A21: ಸ್ಯಾಮ್ಸಂಗ್ ಗ್ಯಾಲಕ್ಸಿಯ ಈ ಸ್ಮಾರ್ಟ್ಫೊನ್ನಲ್ಲಿ ಬೆಂಕಿ: ನಿಮ್ಮಲ್ಲಿದೆಯಾ ಈ ಫೋನ್
WhatsApp: ವಾಟ್ಸ್ಆ್ಯಪ್ನಲ್ಲಿ ಆಡಿಯೋ ಅಥವಾ ವಿಡಿಯೋ ಕಾಲ್ ರೆಕಾರ್ಡ್ ಮಾಡುವ ಟ್ರಿಕ್ ನಿಮಗೆ ಗೊತ್ತೇ?
(WhatsApp Update WhatsApp Testing Message Reactions like Instagram facebook and Twitter )