Moto G50 5G: 48MP ಕ್ಯಾಮೆರಾ, 5000mAh ಬ್ಯಾಟರಿಯ ಮೋಟೋ ಜಿ60 5G ಸ್ಮಾರ್ಟ್​ಫೋನ್ ಬಿಡುಗಡೆ

ಮೋಟೋ ಜಿ50 5G ಸ್ಮಾರ್ಟ್​ಫೋನಿಗೆ ಆಸ್ಟ್ರೇಲಿಯಾದಲ್ಲಿ ಬೆಲೆ AUD 399 ಅಂದರೆ ಭಾರತದಲ್ಲಿ ಅಂದಾಜಿ 21,500 ರೂ. ಎನ್ನಬಹುದು. 4GB RAM ಹೊಂದಿರುವ ಈ ಫೋನ್ 128GB ಸ್ಟೋರೆಜ್ ಆಯ್ಕೆಯಲ್ಲಿ ಮಾರಾಟ ಕಾಣಲಿದೆ.

Moto G50 5G: 48MP ಕ್ಯಾಮೆರಾ, 5000mAh ಬ್ಯಾಟರಿಯ ಮೋಟೋ ಜಿ60 5G ಸ್ಮಾರ್ಟ್​ಫೋನ್ ಬಿಡುಗಡೆ
Moto G50 5G
Follow us
TV9 Web
| Updated By: Vinay Bhat

Updated on: Aug 26, 2021 | 2:26 PM

ಚೀನಾ ಮೂಲದ ಲೆನೊವೊ (Lenovo) ಒಡೆತನದ ಮೋಟೋರೊಲಾ ಕಂಪೆನಿ, ಜಿ ಸರಣಿಯಲ್ಲಿ ನೂತನ ಮೋಟೋ G50 5ಜಿ (Moto G50 5G) ಸ್ಮಾರ್ಟ್​ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಮೋಟೋ ಜಿ50 ಸದ್ಯ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ರಿಲೀಸ್ ಆಗಿದ್ದು ಸದ್ಯದಲ್ಲೆ ಭಾರತಕ್ಕೂ ಪದಾರ್ಪಣೆ ಮಾಡುವ ಸೂಚನೆ ನೀಡಿದೆ.

ಇದೊಂದು ಮಧ್ಯಮ ಕ್ರಮಾಂಕದ ಫೋನ್ ಆಗಿದ್ದು, ಸಾಕಷ್ಟು ಹೊಸತನದಿಂದ ಕೂಡಿದೆ. 5ಜಿ ಬೆಂಬಲ ಪಡೆದಿರುವುದು ವಿಶೇಷ. Bureau of Indian Standards ನಿಂದ ಪ್ರಮಾಣೀಕರಣಗೊಂಡಿದೆ. ಪ್ರಮುಖವಾಗಿ 48 ಮೆಗಾಫಿಕ್ಸೆಲ್​ನ ಕ್ಯಾಮೆರಾ, ಮೀಡಿಯಾಟೆಕ್ ಡೈಮೆನ್ಸಿಟಿ ಪ್ರೊಸೆರ್, 5000mAh ಬಲಿಷ್ಠ ಬ್ಯಾಟರಿ ನೀಡಲಾಗಿದೆ.

ಮೋಟೋ ಜಿ50 ಸ್ಮಾರ್ಟ್​ಫೋನಿಗೆ ಆಸ್ಟ್ರೇಲಿಯಾದಲ್ಲಿ ಬೆಲೆ AUD 399 ಅಂದರೆ ಭಾರತದಲ್ಲಿ ಅಂದಾಜಿ 21,500 ರೂ. ಎನ್ನಬಹುದು. 4GB RAM ಹೊಂದಿರುವ ಈ ಫೋನ್ 128GB ಸ್ಟೋರೆಜ್ ಆಯ್ಕೆಯಲ್ಲಿ ಮಾರಾಟ ಕಾಣಲಿದೆ. ಅಕ್ವಾ ಗ್ರೀನ್ ಮತ್ತು ಸ್ಟೀಲ್ ಗ್ರೇ ಕಲರ್​ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಮೋಟೋ ಜಿ50 5G ಸ್ಮಾರ್ಟ್​ಫೋನ್ 6.5 ಇಂಚಿನ ಹೆಚ್ಡಿ+ ಡಿಸ್ ಪ್ಲೇ ಹೊಂದಿದ್ದು, 90hz ಹೈ ರಿಫ್ರಿಶ್ ರೇಟ್ ಒಳಗೊಂಡಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಪ್ರೊಸೆರ್ ಅನ್ನು ಅಳವಡಿಸಲಾಗಿದ್ದು, ಮೈಕ್ರೋ ಎಸ್​ಡಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು.

ಇನ್ನೂ 48 ಮೆಗಾಫಿಕ್ಸೆಲ್​ನ ಪ್ರೈಮೆರಿ ಕ್ಯಾಮೆರಾ ಇದರಲ್ಲಿದ್ದು, 2 ಮೆಗಾಫಿಕ್ಸೆಲ್ ಮಾಕ್ರೋ ಕ್ಯಾಮೆರಾ, 2 ಮೆಗಾಫಿಕ್ಸೆಲ್​ನ ಡೆಪ್ತ್ ಸೆನ್ಸಾರ್ ಆಯ್ಕೆ ನೀಡಲಾಗಿದೆ. ಅಂತೆಯೆ ಸೆಲ್ಫಿಗಾಗಿ 13 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. 5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಪವರ್ ಹೊಂದಿದ್ದು, 15W ಚಾರ್ಜಿಂಗ್ ಬೆಂಬಲವಿದೆ. ಜೊತೆಗೆ 5G, ವೈ-ಫೈ, ಬ್ಲೂಟೂತ್ v5, GPS, USB ಟೈನ್-ಸಿ ಪೋರ್ಟ್ ಸೇರಿದಂತೆ ಇತ್ತೀಚೆಗಿನ ಪ್ರಮುಖ ಆಯ್ಕೆ ನೀಡಲಾಗಿದೆ.

Flipkart Apple Days Sale 2021: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಹೊಸ ಮೇಳ: ಐಫೋನ್ ಮೇಲೆ ಕಣ್ಣಿಟ್ಟಿದ್ದರೆ ಮಿಸ್ ಮಾಡ್ಬೇಡಿ

WhatsApp: ವಾಟ್ಸ್​ಆ್ಯಪ್ ಬಳಕೆದಾರರಿಗೆ ಅಚ್ಚರಿಯ ಫೀಚರ್: ಹೊಸ ಅಪ್ಡೇಟ್​ನಲ್ಲಿ ಏನಿರಲಿದೆ ಗೊತ್ತಾ?

(Moto G50 5G With MediaTek Dimensity 700 SoC 48MP Camera Launched Price Specifications)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ