Big Diwali sale: ಇಂದು​ ಬಿಗ್ ದಿವಾಳಿ ಸೇಲ್ ಕೊನೇ ದಿನ: ಐಫೋನ್ 13 ಮೇಲಿದೆ ಭರ್ಜರಿ ಆಫರ್

| Updated By: Vinay Bhat

Updated on: Oct 23, 2022 | 3:03 PM

iPhone 13 Offer: ಫ್ಲಿಪ್‌ಕಾರ್ಟ್ (Flipkart) ನಲ್ಲಿ ಆರಂಭವಾಗಿದ್ದ ಬಿಗ್ ದಿವಾಳಿ ಸೇಲ್ (Flipkart Big Diwali sale) ಇಂದು ಕೊನೆಗೊಳ್ಳಲಿದೆ. ಅಂತಿಮ ದಿನದಂದು ಹೊಸ ಗ್ಯಾಜೆಟ್ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಡಿಸ್ಕೌಂಟ್ ಮತ್ತು ವಿಶೇಷ ಕೊಡುಗೆ ಲಭ್ಯವಾಗಲಿದೆ.

Big Diwali sale: ಇಂದು​ ಬಿಗ್ ದಿವಾಳಿ ಸೇಲ್ ಕೊನೇ ದಿನ: ಐಫೋನ್ 13 ಮೇಲಿದೆ ಭರ್ಜರಿ ಆಫರ್
Flipkart Big Diwali Sale 2022
Follow us on

ದೇಶದ ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆಗಳಲ್ಲಿ ದೀಪಾವಳಿ ಪ್ರಯುಕ್ತ ಮೇಳಗಳು ನಡೆಯುತ್ತಿದೆ. ಫ್ಲಿಪ್‌ಕಾರ್ಟ್ (Flipkart) ನಲ್ಲಿ ಆರಂಭವಾಗಿದ್ದ ಬಿಗ್ ದಿವಾಳಿ ಸೇಲ್ (Flipkart Big Diwali sale) ಇಂದು ಕೊನೆಗೊಳ್ಳಲಿದೆ. ಅಂತಿಮ ದಿನದಂದು ಹೊಸ ಗ್ಯಾಜೆಟ್ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಡಿಸ್ಕೌಂಟ್ ಮತ್ತು ವಿಶೇಷ ಕೊಡುಗೆ ಲಭ್ಯವಾಗಲಿದೆ. ಈ ಸೇಲ್​ನಲ್ಲಿ ಮುಖ್ಯವಾಗಿ ಹಳೆಯ ಐಫೋನ್ (iPhone) ಮಾಡೆಲ್​ಗೆ ಆಕರ್ಷಕ ಡಿಸ್ಕೌಂಟ್ ಘೋಷಿಸಲಾಗಿದೆ. ಟ್ಯಾಬ್ಲೆಟ್‌ಗಳು, ಸ್ಮಾರ್ಟ್​​ ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಕೆಲವು ರೋಮಾಂಚಕಾರಿ ಡೀಲ್‌ಗಳನ್ನು ಪಡೆಯಬಹುದಾಗಿದೆ. ದೀಪಾವಳಿ ಸೇಲ್​ನಲ್ಲಿ ಗ್ಯಾಜೆಟ್‌ಗಳ ಮೇಲೆ ಬರೋಬ್ಬರಿ 45% ರಷ್ಟು ರಿಯಾಯಿತಿ ನೀಡಲಾಗಿದೆ. ಕೊಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಆಫರ್‌ಗಳು ಇರುತ್ತವೆ.

ಐಫೋನ್ 13 128GB ಮಾಡೆಲ್ ಅನ್ನು ನೀವು ದೀವಾಳಿ ಸೇಲ್​ನಲ್ಲಿ 69,990 ರೂ. ಬದಲಾಗಿ 59,990 ರೂ. ಗೆ ಖರೀದಿಸಬಹುದು. ಇದರ ಮೇಲೆ 10,000 ರೂ. ಗಳ ರಿಯಾಯಿತಿ ಘೋಷಿಸಲಾಗಿದೆ. ಅಂತೆಯೆ ಎಸ್​ಬಿಐ ಬ್ಯಾಂಕ್ ಆಫರ್ ಕೂಡ ಲಭ್ಯವಿದ್ದು 2,000 ರೂ. ಗಳ ಡಿಸ್ಕೌಂಟ್ ಪಡೆಯಬಹುದು. ಹಳೆಯ ಐಫೋನನ್ನೇ ಎಕ್ಸ್​ಚೇಂಜ್ ಮಾಡುತ್ತಿರಿ ಎಂದಾದರೆ ಇನ್ನೂ ಹೆಚ್ಚಿನ ರಿಯಾಯಿತಿಯಲ್ಲಿ ಐಫೋನ್ 13 ನಿಮ್ಮದಾಗಿಸಬಹುದು. ಹಿಂದಿನ ಸೇಲ್​ನಲ್ಲಿ ಐಫೋನ್ 13 ಕೇವಲ 49,000 ರೂ. ಗೆ ಮಾರಾಟ ಆಗುತ್ತಿತ್ತು. ಆದರೆ, ಇದು ಕೆಲವೇ ಸಮಯದಲ್ಲಿ ಸೋಲ್ಡ್ ಔಟ್ ಆಗಿತ್ತು. ಹೀಗಾಗಿ ನೀವು ಐಫೋನ್ 13 ಖರೀದಿಸುವ ಪ್ಲಾನ್​ನಲ್ಲಿ ಇದ್ದರೆ ಆದಷ್ಟು ಬೇಗ ಬುಕ್ ಮಾಡುವುದು ಉತ್ತಮ.

ಇನ್ನು ಐಫೋನ್ 12 ಮಿನಿ 36,990 ರೂ. ಗೆ ಮಾರಾಟ ಕಂಡರೆ, ಐಫೋನ್ 11 31,990 ರೂ. ಗೆ ಸೇಲ್ ಆಗುತ್ತಿದೆ. ಇದರ ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. ನೀವು ಹೊಸ ಮಾಡೆಲ್ ಐಫೋನ್ 14 ಮೇಲೆ ಕಣ್ಣಿಟ್ಟಿದ್ದರೆ 79,9000 ರೂ. ಗೆ ಖರೀದಿಸಬಹುದು. ಇದಕ್ಕಿಂತ ಐಫೋನ್ 12 ಅಥವಾ ಐಫೋನ್ 13 ಉತ್ತಮ ಆಯ್ಕೆ ಎಂಬುದು ಅನೇಕರ ಅಭಿಪ್ರಾಯ. ಕಡಿಮೆ ಬೆಲೆಗೆ ಮಾರಾಟ ಆಗುತ್ತಿರುವ ಜೊತೆಗೆ ಇದು 5G ಬೆಂಬಲ ಕೂಡ ಪಡೆದುಕೊಂಡಿದೆ. ಐಫೋನ್ 13 ಹಾಗೂ ಐಫೋನ್ 14 ಫೀಚರ್ಸ್ ಕೂಡ ಬಹುತೇಕ ಒಂದೇ ಇದೆ.

ಇದನ್ನೂ ಓದಿ
WhatsApp: ಬ್ಯಾನ್ ಆದ ವಾಟ್ಸ್​ಆ್ಯಪ್ ಅಕೌಂಟ್ ಅನ್ನು ರಿಕವರಿ ಮಾಡೋದು ಹೇಗೆ?
Tech Tips: ಆಂಡ್ರಾಯ್ಡ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ, ಚಾಟ್ಸ್​ ಟ್ರಾನ್ಫರ್ ಮಾಡುವುದು ಹೇಗೆ?
Tech Tips: ಕಿರಿ ಕಿರಿ ಎನಿಸುವ ಅನಗತ್ಯ ಕರೆಗಳನ್ನು ಬ್ಲಾಕ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್
PDF File: ಪಿಡಿಫ್ ಫೈಲ್​ಗಳ ಪಾಸ್‌ವರ್ಡ್ ಮರೆತು ಹೋಗಿದ್ದರೆ ಈ ಟ್ರಿಕ್ ಮೂಲಕ ಓಪನ್ ಮಾಡಿ

ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇ. 80 ರ ವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಈ ರಿಯಾಯಿತಿ ಒಳಗೆ ಸ್ಮಾರ್ಟ್ ವಾಚ್‌ಗಳು, ಹೆಡ್‌ಫೋನ್‌ಗಳು, ವೈರ್‌ಲೆಸ್ ಇಯರ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಅನೇಕ ಪ್ರಾಟಕ್ಟ್ ಸೇರಿವೆ. ಲ್ಯಾಪ್‌ಟಾಪ್‌ ಮೇಲೆ ಶೇ. 50 ರಷ್ಟು ರಿಯಾಯಿತಿ ಇದೆ. ಬಲಿಷ್ಠವಾದ ಗೇಮಿಂಗ್ ಲ್ಯಾಪ್‌ಟಾಪ್‌ಗಳು ರೂ. 50,990 ರಿಂದ ಮಾರಾಟವಾಗುತ್ತವೆ. ಪ್ರಿಂಟರ್‌ಗಳು ಮತ್ತು ಮಾನಿಟರ್‌ಗಳು ಮಾರಾಟದಲ್ಲಿ ಶೇ. 80 ರಷ್ಟು ರಿಯಾಯಿತಿ ಲಭ್ಯ ಇರುತ್ತವೆ.