AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಕಿರಿ ಕಿರಿ ಎನಿಸುವ ಅನಗತ್ಯ ಕರೆಗಳನ್ನು ಬ್ಲಾಕ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್

Tech Tips and Tricks: ಪ್ರತಿಯೊಬ್ಬರಿಗೂ ತಿಂಗಳಲ್ಲಿ ಬಹಳಷ್ಟು ಬಾರಿ ಹಲವಾರು ಸ್ಪ್ಯಾಮ್ ಕರೆಗಳು ಬಂದೇ ಬರುತ್ತವೆ. ಇಂತಹ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡಲು ಕೆಲವೊಂದು ಟಿಪ್ಸ್ (Tips) ಇಲ್ಲಿದೆ ನೋಡಿ.

Tech Tips: ಕಿರಿ ಕಿರಿ ಎನಿಸುವ ಅನಗತ್ಯ ಕರೆಗಳನ್ನು ಬ್ಲಾಕ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್
Spam Number
TV9 Web
| Updated By: Vinay Bhat|

Updated on: Oct 23, 2022 | 6:12 AM

Share

ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸವೇ ಆಗಿದೆ. ಬಳಕೆದಾರರಿಗೆ ಪ್ರತಿದಿನ ಹಲವಾರು ಸ್ಪ್ಯಾಮ್ ಕರೆಗಳು ಬರುತ್ತಲೇ ಇರುತ್ತವೆ. ಯಾರದ್ದೋ ಕರೆ ಅಂತಾ ಮಾಡುವ ಕೆಲಸ ಬಿಟ್ಟು ಹೋಗಿ ಫೋನ್ ಎತ್ತಿದರೆ ಅದು ಸ್ಪ್ಯಾಮ್ ಕರೆಯಾದಾಗ ಬರುವ ಕೋಪ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಜನರು ಸ್ಪ್ಯಾಮ್‌ ಕರೆಗಳನ್ನು ಬ್ಲಾಕ್‌ ಮಾಡಲು ಬಯಸುತ್ತಾರೆ. ರೋಬೋ ಕಾಲ್‌ಗಳಿಂದ (Robo Call) ದೂರ ಉಳಿಯುವುದಕ್ಕಾಗಿ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಹೊಸ ಹೊಸ ನಂಬರ್‌ಗಳಿಂದ ಸ್ಪ್ಯಾಮ್‌ ಕರೆಗಳು ಬರುವುದು ಮತ್ತೊಂದು ತಲೆನೋವು. ಇವುಗಳನ್ನು ನಿಯಂತ್ರಿಸುವುದಕ್ಕೆ ದಾರಿ ಇಲ್ಲವೇ?. ಪ್ರತಿಯೊಬ್ಬರಿಗೂ ತಿಂಗಳಲ್ಲಿ ಬಹಳಷ್ಟು ಬಾರಿ ಹಲವಾರು ಸ್ಪ್ಯಾಮ್ ಕರೆಗಳು ಬಂದೇ ಬರುತ್ತವೆ. ಇಂತಹ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡಲು ಕೆಲವೊಂದು ಟಿಪ್ಸ್ (Tips) ಇಲ್ಲಿದೆ ನೋಡಿ.

ಸ್ಮಾರ್ಟ್‌ಫೋನ್‌ ಬಳಕೆದಾರರು ಸ್ಪ್ಯಾಮ್‌ ಕಾಲ್‌ ಬ್ಲಾಕ್‌ ಮಾಡುವುದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಟ್ರೂ ಕಾಲರ್‌ ಅಪ್ಲಿಕೇಶನ್‌ ಬಳಸುತ್ತಾರೆ. ಇದೇ ಕಾರಣಕ್ಕೆ ಜಾಗತಿಕವಾಗಿ ಟ್ರೂ ಕಾಲರ್‌ ಅಪ್ಲಿಕೇಶನ್‌ 320 ಮಿಲಿಯನ್‌ಗಿಂತಲೂ ಹೆಚ್ಚಿನ ಡೌನ್‌ಲೋಡ್‌ ಕಂಡಿದೆ. ಟ್ರೂ ಕಾಲರ್‌ ಕಾಲರ್ ಐಡಿ ಡಿವೈಸ್‌ ಆಗಿದ್ದು, ಯಾವುದೇ ದೇಶೀಯ ಅಥವಾ ಅಂತರರಾಷ್ಟ್ರೀಯ ಕರೆ ಮಾಡುವವರ ಹೆಸರನ್ನು ಸೂಚಿಸಲಿದೆ. ಅಲ್ಲದೆ ಹೆಸರು ಅಥವಾ ಸಂಖ್ಯೆಯನ್ನು ಬಳಸಿಕೊಂಡು ವೈಯಕ್ತಿಕ ಬಳಕೆದಾರರ ಪ್ರೊಫೈಲ್‌ಗಳನ್ನು ಹುಡುಕುವುದಕ್ಕೆ ಸಹಕಾರಿ ಆಗಿದೆ.

DND ನಲ್ಲಿ ನೋಂದಾಯಿಸುವ ಮೂಲಕ ಸ್ಪ್ಯಾಮ್ ಕರೆಗಳನ್ನು ಬ್ಲಾಕ್‌ ಮಾಡಬಹುದಾಗಿದೆ. ಈ ಮೊಬೈಲ್-ಆಪರೇಟರ್ ನಿರ್ದಿಷ್ಟ DND (Do-Not-Disturb) ನೋಂದಣಿ ವೆಬ್‌ಸೈಟ್‌ಗಳಲ್ಲಿ ನಿಮ್ಮ ಸಂಖ್ಯೆಯನ್ನು ನೀವು ನೋಂದಾಯಿಸಿಕೊಳ್ಳಬಹುದು, ಇದರ ಸಹಾಯದಿಂದ ನೀವು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುವಲ್ಲಿ ತೀವ್ರವಾದ ಬದಲಾವಣೆಯನ್ನು ಗಮನಿಸಬಹುದು.

ಇನ್ನು ಗೂಗಲ್‍ನ ಹೊಚ್ಚ ಫೋನ್ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡಬಹುದು. ಇದಕ್ಕಾಗಿ ನೀವು ಫೋನ್ ಆ್ಯಪ್ ನಿ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ. ನಂತರ ಆ್ಯಪ್‍ನ ಮೇಲಿನ ಭಾಗದಲ್ಲಿ ಸುಮಾರು ಅರ್ಧದಷ್ಟು, ಹಸಿರು ಫೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಸೈಲೆನ್ಸ್ ಅನ್‍ನೋನ್ ಕಾಲರ್ಸ್ ಅನ್ನು ಆಯ್ಕೆ ಆನ್ ಮಾಡಿ ಟಾಗಲ್ ಮಾಡಿ.

ಇನ್ನು ರೋಬೋಕಾಲ್‌ಗಳನ್ನು ಬ್ಲಾಕ್‌ ಮಾಡುವುದಕ್ಕೆ ರೋಬೋಕಿಲ್ಲರ್‌ ಅಪ್ಲಿಕೇಶನ್‌ ಸೂಕ್ತವಾಗಿದೆ. ಇದು ತನ್ನ ಅಲ್ಗಾರಿದಮ್‌ ಅನ್ನು ಬಳಸಿಕೊಂಡು ಸ್ಪ್ಯಾಮ್‌ ಕಾಲ್‌ಗಳನ್ನು ಬ್ಲಾಕ್‌ ಮಾಡಲಿದೆ. “ಆಡಿಯೋ ಫಿಂಗರ್‌ಪ್ರಿಂಟಿಂಗ್” ಟೆಕ್ನಾಲಿಜಿಯನ್ನು ಈ ಅಪ್ಲಿಕೇಶನ್‌ ಹೊಂದಿದ್ದು, ನೈಜ ಸಮಯದಲ್ಲಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುತ್ತದೆ. ಅಲ್ಲದೆ ಸ್ಪ್ಯಾಮ್ ಕಾಲರ್ ಐಡಿ, ಐಚ್ಛಿಕ AI ಅಸಿಸ್ಟೆಂಟ್‌ ಕರೆಗಳನ್ನು ಕೂಡ ಇದರಲ್ಲಿ ಪ್ರಿ -ಸ್ಕ್ರೀನ್ ಮಾಡಬಹುದಾಗಿದೆ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!