ಗ್ರಾಹಕರಿಗೆ ಭರ್ಜರಿ ರಿಯಾಯಿತಿ ದರದಲ್ಲಿ ಸದಾ ಒಂದಲ್ಲಾ ಒಂದು ಮೇಳವನ್ನು ಆಯೋಜಿಸುತ್ತಿರುವ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ (Flipkart) ಸದ್ಯ ಎಲೆಕ್ಟ್ರಾನಿಕ್ ಸೇಲ್ (Electronics Sale) ಹಮ್ಮಿಕೊಂಡಿದೆ. ಈಗಾಗಲೇ ಈ ಮೇಳ ಪ್ರಾರಂಭವಾಗಿದ್ದು ಜುಲೈ 13 ನಾಳೆ ಕೊನೇಯ ದಿನವಾಗಿದೆ. ಎಲೆಕ್ಟ್ರಾನಿಕ್ ಸೇಲ್ನಲ್ಲಿ ಸ್ಮಾರ್ಟ್ಟಿವಿ (Smart tv), ಸ್ಮಾರ್ಟ್ಫೋನ್ (Smartphone) ಸೇರಿದಂತೆ ಅನೇಕ ಪ್ರೊಡಕ್ಟ್ಗಳ ಮೇಲೆ ಬಂಪರ್ ರಿಯಾಯಿತಿ ನೀಡಲಾಗಿದೆ.
ಅದರಲ್ಲೂ ದುಬಾರಿ ಬೆಲೆಯ ಸ್ಮಾರ್ಟ್ಟಿವಿಗಳು ಅತಿ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಹೊಸ ಟಿವಿ ಕೊಂಡುಕೊಳ್ಳುವ ಪ್ಲಾನ್ನಲ್ಲಿ ಇರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಹಾಗಾದ್ರೆ ಆಫರ್ನಲ್ಲಿ ಖರೀದಿಗೆ ಲಭ್ಯವಿರುವ ಪ್ರಮುಖ ಸ್ಮಾರ್ಟ್ ಟಿವಿಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಸ್ಯಾಮ್‌ಸಂಗ್ ಸ್ಮಾರ್ಟ್ಟಿವಿ: ಸ್ಯಾಮ್ಸಂಗ್ನ 32 ಇಂಚಿನ ಎಚ್‌ಡಿ ರೆಡಿ ಎಲ್ಇಡಿ ಸ್ಮಾರ್ಟ್ ಟಿವಿಯ ಮೂಲಬೆಲೆ 19,990 ರೂ. ಆಗಿದೆ. ಆದರೆ, ಸದ್ಯ ಆಫರ್ನಲ್ಲಿ ಇದು ಕೇವಲ 17,499 ರೂ. ಗಳಲ್ಲಿ ಖರೀದಿಸಲು ಲಭ್ಯವಿದೆ. ಇದು 32 ಇಂಚಿನ ಎಲ್ಇಡಿ ಪ್ಯಾನಲ್ನೊಂದಿಗೆ ಬರುತ್ತಿರುವುದು ವಿಶೇಷ. ಜೊತೆಗೆ ಪ್ರಮುಖ ಒಟಿಟಿ ಸೇವೆಗಳನ್ನು ಬೆಂಬಲಿಸುತ್ತದೆ.
ರಿಯಲ್‌ಮಿ ಸ್ಮಾರ್ಟ್ಟಿವಿ: ರಿಯಲ್‌ಮಿಯ 32 ಇಂಚಿನ ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮೇಳದಲ್ಲಿ ಕೇವಲ 15,999 ರೂ. ಗೆ ಲಭ್ಯವಾಗುತ್ತಿದೆ. ಈ ಟಿವಿಯನ್ನು 2,000 ರೂ. ಗಳ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಆಂಡ್ರಾಯ್ಡ್ ಟಿವಿ ಆಪರೇಟಿಂಗ್ ಸಿಸ್ಟಮ್ ಅನ್ನು ಚಾಲನೆ ಮಾಡುತ್ತದೆ.
ಒನ್‌ಪ್ಲಸ್ ಸ್ಮಾರ್ಟ್ಟಿವಿ: ಒನ್‌ಪ್ಲಸ್ನ U1S 50 ಇಂಚಿನ 4K ಎಲ್ಇಡಿ ಸ್ಮಾರ್ಟ್ ಟಿವಿ ಆಗಿದೆ. ಆಂಡ್ರಾಯ್ಡ್ ಟಿವಿ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಒನ್‌ಪ್ಲಸ್ U1S ಸ್ಮಾರ್ಟ್ ಟಿವಿ ಪ್ರಸ್ತುತ 46,999 ರೂ. ಗಳಲ್ಲಿ ಖರೀದಿಸಲು ಲಭ್ಯವಿದೆ. ಇದರ ಮೂಲಬೆಲೆ: 49,999 ರೂ. ಆಗಿದೆ.
ಎಲ್‌ಜಿ ಸ್ಮಾರ್ಟ್ಟಿವಿ: ಎಲ್‌ಜಿ 43 ಇಂಚಿನ ಎಲ್ಇಡಿ ಸ್ಮಾರ್ಟ್ ಟಿವಿ 2020 ಆವೃತ್ತಿಯದ್ದಾಗಿದೆ. ಇದು 43 ಇಂಚಿನ ಎಲ್ಇಡಿ ಸ್ಮಾರ್ಟ್ ಟಿವಿ ಆಗಿದ್ದು 9,000 ರೂ. ಡಿಸ್ಕೌಂಟ್ನಲ್ಲಿ ಖರೀದಿಸಬಹುದು. ಇದರ ಮೂಲಬೆಲೆ 40,990 ರೂ. ಆಗಿದೆ. ಆಫರ್ನಲ್ಲಿ ಈ ಟಿವಿಯನ್ನು 31,990 ರೂ. ಗೆ ನಿಮ್ಮದಾಗಿಸಬಹುದು. ಇದು ಎಫ್‌ಎಚ್‌ಡಿ ಪ್ರದರ್ಶನವನ್ನು ಹೊಂದಿದೆ ಮತ್ತು ವೆಬ್‌ಓಎಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸುತ್ತದೆ.
Vu ಸ್ಮಾರ್ಟ್ಟಿವಿ: ವಿಯು ಪ್ರೀಮಿಯಂ 50 ಇಂಚಿನ ಅಲ್ಟ್ರಾ ಹೆಚ್‌ಡಿ ಎಲ್ಇಡಿ ಸ್ಮಾರ್ಟ್ ಟಿವಿ ಆಗಿದೆ. ಈ 4 ಕೆ ಯುಹೆಚ್‌ಡಿ ಸ್ಮಾರ್ಟ್ ಟಿವಿಯ ಮೂಲಬೆಲೆ 60,000 ರೂ.. ಪ್ರಸ್ತುತ ಇದು ಕೇವಲ 36,999 ರೂ. ಗೆ ಲಭ್ಯವಾಗುತ್ತಿದೆ. ಅಂದರೆ 24,000 ರೂ. ಗಳ ರಿಯಾಯಿತಿ ನೀಡಲಾಗಿದೆ. ಟಿವಿ ಆಂಡ್ರಾಯ್ಡ್ ಟಿವಿ ಆಪರೇಟಿಂಗ್ ಸಿಸ್ಟಮ್ ಅನ್ನು ನಡೆಸುತ್ತದೆ ಮತ್ತು ಅಂತರ್ನಿರ್ಮಿತ ಕ್ರೋಮ್ಕಾಸ್ಟ್, ಗೂಗಲ್ ಪ್ಲೇ ಸ್ಟೋರ್ ಮತ್ತು ಇತರ ಒಟಿಟಿ ಸೇವೆಗಳನ್ನು ನೀಡಿರುವುದು ವಿಶೇಷ.
7000mAh ಬ್ಯಾಟರಿ, 64MP ಕ್ಯಾಮೆರಾ: 30,000 ರೂ. ನ ಈ ಫೋನನ್ನು ಕೇವಲ 4,700 ರೂ. ಗೆ ಖರೀದಿಸಿ
Whatsapp: ವಾಟ್ಸ್ಆ್ಯಪ್ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ?