ವಾಲ್ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ (Flipkart) ಶಾಪಿಂಗ್ ಪ್ರಿಯರ ನೆಚ್ಚಿನ ಇ ಕಾಮರ್ಸ್ ತಾಣವಾಗಿ ಬಿಟ್ಟಿದೆ. ಬಿಗ್ ಬಿಲಿಯನ್ ಡೇಸ್ ಸೇಲ್, ಬಿಗ್ ಸೇವಿಂಗ್ ಡೇಸ್ ಸೇಲ್, ಹಬ್ಬಗಳ ಸಂದರ್ಭ ದಿಪಾವಳಿ ಸೇಲ್ (Diwali Sale), ನವರಾತ್ರಿ ಮೇಳ, ಕ್ರಿಸ್ಮಸ್ ಸೇಲ್ ಹೀಗೆ ಅನೇಕ ಮೇಳಗಳನ್ನು ಆಯೋಜಿಸಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಆಕರ್ಷಕ ಪ್ರಾಡಕ್ಟ್ಗಳನ್ನು ಮಾರಾಟ ಮಾಡುತ್ತದೆ. ಹೀಗೆ ಗ್ರಾಹಕರಿಗೆ ಸಾಕಷ್ಟು ಹತ್ತಿರವಾಗಿರುವ ಫ್ಲಿಪ್‌ಕಾರ್ಟ್ ಇದೀಗ ದಿಢೀರ್ ಆಗಿ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಫ್ಲಿಪ್‌ಕಾರ್ಟ್ ಮೂಲಕ ಕ್ಯಾಶ್ ಆನ್ ಡೆಲಿವರಿ (COD) ಆಯ್ಕೆ ಮಾಡುವವರು 5 ರೂ. ಹೆಚ್ಚಿನ ಮೊತ್ತವನ್ನು ಪಾವತಿಸಬೇಕು ಎಂದು ಹೇಳಿದೆ.
ಈ ಹಿಂದೆ ಫ್ಲಿಪ್ಕಾರ್ಟ್ನಲ್ಲಿ ಆರ್ಡರ್ ಮಾಡಿ ಪೇಮೆಂಟ್ ಆಯ್ಕೆಯಲ್ಲಿ ಕ್ಯಾಶ್ ಆನ್ ಡೆಲಿವರಿ ಸೆಲೆಕ್ಟ್ ಮಾಡಿದರೆ ನಿಗದಿತ ಬೆಲೆಗಿಂತ ಕೆಳಗಿನ ಉತ್ಪನ್ನಗಳಿಗೆ ವಿತರಣಾ ಶುಲ್ಕವನ್ನು ವಿಧಿಸುತ್ತಿತ್ತು. ಫ್ಲಿಪ್‌ಕಾರ್ಟ್ ಪ್ಲಸ್ ಎಂದು ಪಟ್ಟಿ ಮಾಡಲಾದ ಉತ್ಪನ್ನವನ್ನು ಆರ್ಡರ್ ಮಾಡಿ ಅದರ ಬೆಲೆ 500 ರೂ. ಗಿಂತ ಕಡಿಮೆಯಿದ್ದರೆ 40 ರೂ. ಡೆಲಿವರಿ ಚಾರ್ಜ್ ಮತ್ತು 500 ರೂ. ಗಿಂತ ಅಧಿಕವಾದರೆ ಯಾವುದೇ ಡೆಲಿವರಿ ಚಾರ್ಜ್ ಇರುವುದಿಲ್ಲ. ಆದರೀಗ ಇದರಲ್ಲಿ ಬದಲಾವಣೆ ತರಲಾಗಿದ್ದು ಫ್ಲಿಪ್‌ಕಾರ್ಟ್ ಎಲ್ಲಾ ಕ್ಯಾಶ್ ಆನ್ ಡೆಲಿವರಿ ಆರ್ಡರ್‌ಗಳಿಗೆ 5 ರೂ. ನಿರ್ವಹಣೆ ಶುಲ್ಕವನ್ನು ವಿಧಿಸುತ್ತದೆ. ನೀವು ಆನ್ಲೈನ್ನಲ್ಲೇ ಹಣವನ್ನು ಪಾವತಿಸಿದರೆ ಯಾವುದೆ ಶುಲ್ಕ ಇರುವುದಿಲ್ಲ.
ಫ್ಲಿಪ್ಕಾರ್ಟ್ನಲ್ಲಿ ಮೆಟಾವರ್ಸ್ ಸೌಲಭ್ಯ:
ಇತ್ತೀಚೆಗಷ್ಟೆ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗಾಗಿ ಶಾಪಿಂಗ್ ಮಾಡುವ ಸಂದರ್ಭ ವಸ್ತುಗಳ ನೈಜ ಅನುಭವವನ್ನು ವರ್ಚುವಲ್ ಮೂಲಕ ಪಡೆಯಲು eDAO ಸಹಭಾಗಿತ್ವದಲ್ಲಿ ಮೆಟಾವರ್ಸ್ ಸೌಲಭ್ಯವನ್ನು ಕಲ್ಪಿಸಿದೆ. ಗ್ರಾಹಕರು ಮಾಡಬಹುದಾದ ಮೆಟಾವರ್ಸ್ ಸ್ಪೇಸ್ ಫೋಟೋರಿಯಲಿಸ್ಟಿಕ್ ವರ್ಚುವಲ್ ಡೆಸ್ಟಿನೇಷನ್ ನಲ್ಲಿ ಉತ್ಪನ್ನಗಳನ್ನು ಅನ್ವೇಷಣೆ ಮಾಡಿ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್ನಲ್ಲಿ ಶಾಪಿಂಗ್ ಮಾಡಬಹುದು. ಈ ಸೇವೆಯನ್ನು ಆರಂಭಿಸುವ ಉದ್ದೇಶವೆಂದರೆ ಶಾಪಿಂಗ್ ನಿರೂಪಣೆಯನ್ನು ‘ಫ್ಲಿಪ್’ ಮಾಡುವುದು, ಗ್ರಾಹಕರು ತಮ್ಮ ನೆಚ್ಚಿನ ಬ್ರ್ಯಾಂಡ್ಗಳಿಗೆ ಹತ್ತಿರವಾಗಲು ಅವಕಾಶ ಮಾಡಿಕೊಡುವ ಮೆಟಾವರ್ಸ್ ನಲ್ಲಿ ಸಂವಹನವು ಎರಡು ರೀತಿಯಲ್ಲಿ ಚಾಲನೆಗೊಳ್ಳುತ್ತದೆ. ಫ್ಲಿಪ್ ವರ್ಸ್ ಫ್ಲಿಪ್ಕಾರ್ಟ್ನ ಹೊಸದಾಗಿ ಆರಂಭಿಸಲಾದ ಪ್ಲಾಟ್ ಫಾರ್ಮ್, ಫೈರ್ ಡ್ರಾಪ್ಸ್ನಲ್ಲಿ ಲಭ್ಯವಾಗಲಿದೆ.
Published On - 3:21 pm, Sat, 29 October 22