National Internet Day 2022: ಇಂಟರ್ನೆಟ್ ದಿನವಾದ ಇಂದು ನೀವು ತಿಳಿದಿರಬೇಕಾದ ಅಂಶಗಳು ಇಲ್ಲಿವೆ
ಪ್ರಸ್ತುತ ಇಂಟರ್ನೆಟ್ ಇಲ್ಲದ ಜಗತ್ತನ್ನು ಅರಿತುಕೊಳ್ಳುವುದು ಕಷ್ಟ. ತ್ವರಿತ ಮಾಹಿತಿಗಳಿಗಾಗಿ ಎಲ್ಲರೂ ಇಂಟರ್ನೆಟ್ ಪ್ರವೇಶ ಮಾಡುತ್ತಾರೆ. ಇದರಿಂದಾಗಿ ಜ್ಞಾನವನ್ನು ಪಡೆಯುವುದರ ಜೊತೆಗೆ ಮನರಂಜನೆಯೂ ಲಭ್ಯವಾಗುತ್ತದೆ.
ಇಂಟರ್ನೆಟ್ ಎನ್ನುವುದು ಅಂತರ್‌ಸಂಪರ್ಕಿತ ನೆಟ್‌ವರ್ಕ್‌ನ ಕಿರು ರೂಪವಾಗಿದೆ. ಇದು ನಮ್ಮ ಜೀವನದ ಪ್ರಮುಖ ಭಾಗವಾಗಿ ರೂಪುಗೊಂಡಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಜನರನ್ನು ಸಂಪರ್ಕ ಮಾಡಲು ಇಂಟರ್ನೆಟ್ ಸಹಕಾರಿಯಾಗಿದೆ. ಇಂಟರ್ನೆಟ್ ದೊಡ್ಡ ಸಂಖ್ಯೆಯ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನೆಟ್‌ವರ್ಕ್‌ಗಳಿಂದ ಮಾಡಲ್ಪಟ್ಟಿದೆ. ಪ್ರಸ್ತುತ ಇಂಟರ್ನೆಟ್ ಇಲ್ಲದ ಜಗತ್ತನ್ನು ಅರಿತುಕೊಳ್ಳುವುದು ಕಷ್ಟ. ಇಂಟರ್ನೆಟ್ ಮಾಹಿತಿಗೆ ತ್ವರಿತ ಪ್ರವೇಶವನ್ನು ಒದಗಿಸುತ್ತದೆ. ಸರ್ಚ್ ಇಂಜಿನ್‌ಗಳು ಈ ಮಾಹಿತಿಯನ್ನು ಸುಲಭವಾಗಿ ಪಡೆಯುತ್ತವೆ. ಜ್ಞಾನವನ್ನು ಪಡೆಯುವುದರ ಜೊತೆಗೆ ಇಂಟರ್ನೆಟ್ ಬಳಕೆದಾರರಿಗೆ ಅಂತ್ಯವಿಲ್ಲದ ಮನರಂಜನೆಯ ಪೂರೈಕೆ ಮಾಡುತ್ತದೆ. ಇಂಟರ್ನೆಟ್ ನಿಮ್ಮ ಸ್ವಂತ ಮನೆಯ ಸೌಕರ್ಯದಿಂದ ಬ್ಯಾಂಕಿಂಗ್ ಮತ್ತು ಶಾಪಿಂಗ್ ಮಾಡಲು ಸಾಧ್ಯವಾಗಿಸುತ್ತದೆ. ಮನೆಯಲ್ಲೇ ಕುಳಿತು ಕಚೇರಿ ಕೆಲಸ ಕಾರ್ಯಗಳನ್ನು ನಡೆಸಬಹುದು. ಅಷ್ಟೇ ಯಾಕೆ, ತಮ್ಮ ಜೀವನ ಸಂಗಾತಿಯ ಆಯ್ಕೆಗೂ ಇಂಟರ್ನೆಟ್ ಬಳಕೆ ಮಾಡುತ್ತಾರೆ.
ಅದಾಗ್ಯೂ, ಕೆಲವು ದೇಶಗಳು ತಮ್ಮ ನಾಗರಿಕರಿಗೆ ಇಂಟರ್ನೆಟ್ ಬಳಸಲು ಅನುಮತಿಸುವುದಿಲ್ಲ. ಚೀನಾ, ಕ್ಯೂಬಾ, ಇರಾನ್, ಉತ್ತರ ಕೊರಿಯಾ ಮತ್ತು ಸಿರಿಯಾದಂತಹ ಕೆಲವು ದೇಶಗಳಲ್ಲಿನ ಸರ್ಕಾರವು ಬಳಕೆಗೆ ನಿಷೇಧ ಹೇರಿವೆ. ಇಂಟರ್ನೆಟ್ ಬಳಸುವ ನಾಗರಿಕರಿಗೆ ಷರತ್ತುಗಳನ್ನು ಅಥವಾ ಅದರ ಮೇಲಿನ ಸ್ವಾತಂತ್ರ್ಯವನ್ನು ಮಿತಿಗೊಳಿಸಿವೆ.
ಇಂಟರ್ನೆಟ್ ದಿನದ ಇತಿಹಾಸ
ಇಂಟರ್ನೆಟ್ ಅನ್ನು ಎರಡು ಕಂಪ್ಯೂಟರ್ಗಳ ನಡುವಿನ ದೂರಸ್ಥ ಸಂಪರ್ಕ ಎಂದು ವ್ಯಾಖ್ಯಾನಿಸಲಾಗಿದೆ. ಮೊದಲ ಇಂಟರ್ನೆಟ್ ಸಂಪರ್ಕವನ್ನು 1969ರ ಅಕ್ಟೋಬರ್ 29 ರಂದು ಮಾಡಲಾಯಿತು. ಇದು ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಇಳಿದ ಕೇವಲ ಎರಡು ತಿಂಗಳ ನಂತರ. ಇದಾಗಿ ಕೆಲವು ವರ್ಷಗಳು ಉರುಳುತ್ತಿದ್ದಂತೆ HTTP (ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್), HTML (ಹೈಪರ್‌ಟೆಕ್ಸ್ಟ್ ಮಾರ್ಕ್‌ಅಪ್ ಭಾಷೆ) ಅನ್ನು ಅಭಿವೃದ್ಧಿಗೊಂಡಿತು. WWW, HTTP, HTML ಮತ್ತು URL ಗಳ ಅಭಿವೃದ್ಧಿಯು 1989 ಮತ್ತು 1991 ರ ನಡುವೆ ನಡೆಯಿತು. ಈ ಎಲ್ಲದರ ಸ್ಮರಣಾರ್ಥವಾಗಿ 2005ರ ಅಕ್ಟೋಬರ್ 29 ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಇಂಟರ್ನೆಟ್ ದಿನವನ್ನು ಆಚರಿಸಲಾಯಿತು. ಇಂಟರ್‌ನೆಟ್ ಬಳಕೆದಾರರ ಸಂಘದಿಂದ ಅಂತಾರಾಷ್ಟ್ರೀಯ ಇಂಟರ್ನೆಟ್ ದಿನವನ್ನು ಪ್ರಚಾರ ಮಾಡಲಾಗಿದೆ.
ಇಂಟರ್ನೆಟ್ ದಿನ ಮಹತ್ವ
ಸರಳವಾಗಿ ಹೇಳುವುದಾದರೆ ಇಂಟರ್ನೆಟ್ ಒಂದು ತಂತಿಯಾಗಿದ್ದು ಅದು ಭೂಗತವಾಗಿ ಚಲಿಸುತ್ತದೆ ಮತ್ತು ಎರಡು ಕಂಪ್ಯೂಟರ್‌ಗಳು ಪರಸ್ಪರ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಸರ್ವರ್ ಎನ್ನುವುದು ನಿರ್ದಿಷ್ಟ ಕಂಪ್ಯೂಟರ್ ಆಗಿದ್ದು ಅದು ನೇರವಾಗಿ ಇಂಟರ್ನೆಟ್‌ಗೆ ಸಂಪರ್ಕ ಹೊಂದಿದೆ. ಪ್ರಪಂಚದಾದ್ಯಂತದ ಜನರು ವೀಡಿಯೊ ಕಾನ್ಫರೆನ್ಸ್ ಮಾಡಲು ಸಾಧ್ಯವಾಗುತ್ತದೆ, ನಂಬಲಸಾಧ್ಯವಾದ ದರದಲ್ಲಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಮತ್ತು ರವಾನಿಸಲಾಗುತ್ತದೆ. ಮನರಂಜನೆಗೆ ಅಥವಾ ಇನ್ನಾವುದೇ ಕೆಲಸಕ್ಕೆ ಮಾಹಿತಿಯನ್ನು ಪ್ರವೇಶಿಸಲು ಇಂಟರ್ನೆಟ್ ಸುಲಭೀಕರಿಸಿದೆ. ಅದಕ್ಕಾಗಿಯೇ ರಾಷ್ಟ್ರೀಯ ಇಂಟರ್ನೆಟ್ ದಿನವನ್ನು ಆಚರಿಸಲಾಗುತ್ತದೆ.
ವಾಸ್ತವಾಂಶಗಳು
- ಏಷ್ಯಾವು 2.8 ಶತಕೋಟಿಗಿಂತ ಹೆಚ್ಚಿನ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ, ಎರಡನೇ ಸ್ಥಾನದಲ್ಲಿ ಇರುವ ಯುರೋಪ್ ಕೇವಲ 700 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ.
- ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ವರ್ಷಕ್ಕೆ ಸರಾಸರಿ ಶೇ 8.2 ದರದಲ್ಲಿ ಹೆಚ್ಚಾಗುತ್ತದೆ. ಇದಕ್ಕೆ ಹೋಲಿಸಿದರೆ ಜಾಗತಿಕ ಜನಸಂಖ್ಯೆಯು ವಾರ್ಷಿಕವಾಗಿ ಕೇವಲ ಶೇ 1.05 ರಷ್ಟು ಸರಾಸರಿ ದರದಲ್ಲಿ ಹೆಚ್ಚಾಗುತ್ತದೆ.
- ಶೇ 98-99 ರಷ್ಟು ಜನರು ಡೆನ್ಮಾರ್ಕ್, ಐಸ್‌ಲ್ಯಾಂಡ್, ಯುಎಇ, ಕುವೈತ್ ಮತ್ತು ಕತಾರ್‌ನಲ್ಲಿ ಇಂಟರ್ನೆಟ್ ಹೊಂದಿದ್ದಾರೆ. ಪ್ರಪಂಚದಾದ್ಯಂತ ಶೇ 32 ರಷ್ಟು ಇಂಟರ್ನೆಟ್ ಬಳಕೆದಾರರು 25 ರಿಂದ 34 ವರ್ಷ ವಯಸ್ಸಿನವರಾಗಿದ್ದಾರೆ.
- ಸರ್ಚ್ ಇಂಜಿನ್ ಜಗತ್ತಿನಲ್ಲಿ ಗೂಗಲ್ ಪ್ರಾಬಲ್ಯ ಹೊಂದಿದೆ, ಇದು ನಮ್ಮ ವಿಶ್ವದ ಅತ್ಯಂತ ಜನಪ್ರಿಯ ವೆಬ್ ಸರ್ಚ್ ಎಂಜಿನ್ ಆಗಿದೆ.
- Wi-Fi ನ ಹಿಂದೆ ಯಾವುದೇ ಅರ್ಥವಿಲ್ಲ. ಹೈ-ಫೈ ನೊಂದಿಗೆ ಪ್ರಾಸಬದ್ಧವಾಗಿ ಆವಿಷ್ಕಾರಕರು ಅದನ್ನು ಆಯ್ಕೆ ಮಾಡಿದ್ದಾರೆ. ಸರಾಸರಿ ಇಂಟರ್ನೆಟ್ ವೇಗವು 5.6 Mbps ಆಗಿದೆ. ಅತಿ ಹೆಚ್ಚು ಸರಾಸರಿಯು ದಕ್ಷಿಣ ಕೊರಿಯಾದಲ್ಲಿ 26.7 Mbps ಆಗಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:22 am, Sat, 29 October 22