iPhone 13: ಕೇವಲ 42,200 ರೂ. ಗೆ ಐಫೋನ್ 13 ಖರೀದಿಸುವ ಅವಕಾಶ: ಈ ಆಫರ್ ಮಿಸ್ ಮಾಡ್ಬೇಡಿ

ದುಬಾರಿ ಬೆಲೆಯ ಆ್ಯಪಲ್ ಐಫೋನ್ ಖರೀದಿಸಬೇಕು ಎಂಬವರಿಗೆ ಈಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಬಂಪರ್ ಆಫರ್ ನೀಡಿದೆ. ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆದ ಐಫೋನ್ 13 ಅನ್ನು ಕೇವಲ 45,200 ರೂ. ಗೆ ಖರೀದಿಸಬಹುದು.

iPhone 13: ಕೇವಲ 42,200 ರೂ. ಗೆ ಐಫೋನ್ 13 ಖರೀದಿಸುವ ಅವಕಾಶ: ಈ ಆಫರ್ ಮಿಸ್ ಮಾಡ್ಬೇಡಿ
Apple iPhone 13
Edited By:

Updated on: Dec 03, 2022 | 2:08 PM

ಆ್ಯಪಲ್ (Apple) ಕಂಪನಿಯ ಐಫೋನ್ ಹೊಸ ಸರಣಿ ಐಫೋನ್ 14 ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಅಷ್ಟೇನು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಐಫೋನ್ 14 ಸರಣಿಗಿಂತ ಐಫೋನ್ 13 (iPhone 13) ಸರಣಿಗಳೇ ಅತ್ಯುತ್ತಮ ಆಗಿದೆ ಎಂಬುದು ಅನೇಕರ ಅಭಿಪ್ರಾಯ. ಹೀಗಾಗಿ ಈಗಲೂ ಅನೇಕರು ಐಫೋನ್ 14 ಬದಲು ಐಫೋನ್ 13 ಅನ್ನೇ ಆಯ್ಕೆ ಮಾಡುತ್ತಾರೆ. ಹೀಗಿರುವಾಗ ಐಫೋನ್ ತನ್ನ ಹಳೆಯ ಮಾಡೆಲ್​ಗಳ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ದುಬಾರಿ ಬೆಲೆಯ ಆ್ಯಪಲ್ ಐಫೋನ್ ಖರೀದಿಸಬೇಕು ಎಂಬವರಿಗೆ ಈಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart) ಬಂಪರ್ ಆಫರ್ ನೀಡಿದೆ.

  • ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆದ ಐಫೋನ್ 13 ಸ್ಮಾರ್ಟ್​ಫೋನ್ ಫ್ಲಿಪ್​ಕಾರ್ಟ್​ನಲ್ಲಿ ಕೇವಲ 45,200 ರೂ. ಗೆ ಖರೀದಿಸಬಹುದು.
  • ಐಫೋನ್ 13ನ 128GB ಆಯ್ಕೆಯ ಫೋನ್ ಮೂಲ ಬೆಲೆ 69,900 ರೂ. ಆಗಿದೆ. ಈ ಫೋನ್ ಮೇಲೆ ಶೇ. 5 ರಷ್ಟು ಡಿಸ್ಕೌಂಟ್ ನೀಡಲಾಗಿರುವ ಕಾರಣ 3,495 ರೂ. ರಿಯಾಯಿತಿ ಪಡೆದು 65,999 ರೂ. ಗೆ ನಿಮ್ಮದಾಗಿಸಬಹುದು.
  • ಇದನ್ನೂ ಓದಿ
    iPhone: ಈ ಫೋನಿನ ಬೆಲೆ ಬರೋಬ್ಬರಿ 97 ಕೋಟಿ ರೂಪಾಯಿ: ಅಷ್ಟಕ್ಕೂ ಇದರಲ್ಲೇನಿದೆ ಗೊತ್ತೇ?
    Infinix Zero 5G 2023: 50MP ಕ್ಯಾಮೆರಾ, 5000mAh ಬ್ಯಾಟರಿ: ಇನ್ಫಿನಿಕ್ಸ್​ನಿಂದ ಬಜೆಟ್ ಬೆಲೆಗೆ ಹೊಸ 5G ಫೋನ್ ರಿಲೀಸ್
    EXPLAINED: ಕಂಪ್ಯೂಟರ್​ಗೆ ವೈರಸ್ ಹೇಗೆ ಅಟ್ಯಾಕ್ ಆಗುತ್ತದೆ?: ಇದರಿಂದ ಎಚ್ಚರ ವಹಿಸುವುದು ಹೇಗೆ?
    Tech Tips: 5G ಬಳಸುವಾಗ ಡೇಟಾ ಸೇವ್ ಮಾಡುವುದು ಹೇಗೆ?; ಇಲ್ಲಿದೆ ನೋಡಿ ಟ್ರಿಕ್ಸ್
  • ಇದರ ಜೊತೆಗೆ ಬ್ಯಾಂಕ್ ಆಫರ್ ಮತ್ತು ಎಕ್ಸ್​ಚೇಂಜ್ ಆಫರ್ ನೀಡಲಾಗಿದೆ.
  • ಐಫೋನ್ 13 ಮೇಲೆ 17,500 ರೂ. ಗೆ ಎಕ್ಸ್​ಚೇಂಜ್ ಆಫರ್ ಘೊಷಿಸಲಾಗಿದೆ. ಫ್ಲಿಪ್​ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆದುಕೊಂಡರೆ ಶೇ. 5ರಷ್ಟು ಡಿಸ್ಕೌಂಟ್ ಪಡೆಯಬಹುದು.
  • ಈ ಮೂಲಕ ಒಟ್ಟು 24,700 ರೂ. ವರೆಗೆ ರಿಯಾಯಿತಿ ಪಡೆಯಬಹುದು. ಹೀಗಾಗಿ ಐಫೋನ್ 13 ಅನ್ನು ನೀವು ಕೇವಲ 45,200 ರೂ. ಗೆ ನಿಮ್ಮದಾಗಿಸಬಹುದು.
  • ಐಫೋನ್‌ 13 ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 6.1 ಇಂಚಿನ ಡಿಸ್‌ ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಈ ಡಿಸ್‌ ಪ್ಲೇ 60Hz ರಿಫ್ರೆಶ್ ರೇಟ್‌ ಹೊಂದಿದ್ದು, 1200 ನಿಟ್ಸ್‌ ಬ್ರೈಟ್‌ನೆಸ್ ​ನಿಂದ ಕೂಡಿದೆ.
  • ಹಾಗೆಯೇ ಐಫೋನ್‌ 13 A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ.
  • ಕ್ಯಾಮೆರಾಕ್ಕೆ ಫೇಮಸ್ ಆಗಿರುವ ಐಫೋನ್ 13 ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ.
  • ಐಫೋನ್ 13 ಐಆರ್ ಆಧಾರಿತ ಫೇಸ್ ಐಡಿಯನ್ನು ಹೊಂದಿದೆ ಮತ್ತು ಮಿಂಚಿನ ಕೇಬಲ್ ಮೂಲಕ ಚಾರ್ಜ್ ಮಾಡುವ ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ.
  • ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ನೆರವಾಗಲಿದೆ. ಇವುಗಳ ಜೊತೆಗೆ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿರುವುದು ವಿಶೇಷ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ