EXPLAINED: ಕಂಪ್ಯೂಟರ್​ಗೆ ವೈರಸ್ ಹೇಗೆ ಅಟ್ಯಾಕ್ ಆಗುತ್ತದೆ?: ಇದರಿಂದ ಎಚ್ಚರ ವಹಿಸುವುದು ಹೇಗೆ?

Tech Tips: ಮಾಲ್ವೇರ್ ಎನ್ನುವುದು ಕಂಪ್ಯೂಟರ್‌ನಲ್ಲಿ ಸಂಭವಿಸುವ ವೈರಸ್‌ನ ಹೆಸರು. ಇದು ಕಂಪ್ಯೂಟರ್‌ನ ಡೇಟಾವನ್ನು ಕ್ಷಣಾರ್ಧದಲ್ಲಿ ವಶಕ್ಕೆ ಪಡೆಯುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗಷ್ಟೆ ದೆಹಲಿಯ ಏಮ್ಸ್ ಆಸ್ಪತ್ರೆಯ ಸರ್ವರ್​ಗೆ ವೈರಸ್ ಅಟ್ಯಾಕ್ ಆಗಿ ಹ್ಯಾಕ್ ಆಗಿರುವುದು.

EXPLAINED: ಕಂಪ್ಯೂಟರ್​ಗೆ ವೈರಸ್ ಹೇಗೆ ಅಟ್ಯಾಕ್ ಆಗುತ್ತದೆ?: ಇದರಿಂದ ಎಚ್ಚರ ವಹಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Vinay Bhat

Updated on:Dec 02, 2022 | 1:07 PM

ಇಂದಿನ ಯುಗವನ್ನು ಕಂಪ್ಯೂಟರ್ (Computer) ಯುಗ ಎಂದು ಕರೆಯಲಾಗುತ್ತದೆ. ಒಂದು ದಶಕದ ಹಿಂದೆ ಇದ್ದ ಸ್ಥಿತಿಗೂ ಇಂದಿನ ಪರಿಸ್ಥಿತಿಗೂ ದೊಡ್ಡ ಮಟ್ಟದ ಬದಲಾವಣೆ ಆಗಿದೆ. ಇಂದು ಕಂಪ್ಯೂಟರ್ ವ್ಯಕ್ತಿಯ ಕೈ ಅಥವಾ ಜೀವನದ ಪ್ರಮುಖ ಭಾಗವಾಗಿಬಿಟ್ಟಿದೆ. ದಿನದಿಂದ ದಿನಕ್ಕೆ ಕಂಪ್ಯೂಟರ್ ಬಳಕೆಯ ವಿಧಾನ ಹೆಚ್ಚುತ್ತಿರುವ ಜೊತೆಗೆ ಇದರಲ್ಲಿ ಸಮಸ್ಯೆಗಳೂ ಅಧಿಕವಾಗುತ್ತಿದೆ. ಮುಖ್ಯವಾಗಿ ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ ಕಂಪ್ಯೂಟರ್​ಗೆ ವೈರಸ್ ಬರುವುದು ಅಥವಾ ಮಾಲ್ವೇರ್ (Malware) ಅಟ್ಯಾಕ್ ಆಗುವುದು ಮಾಮೂಲಾಗಿದೆ. ಮಾಲ್ವೇರ್ ಎನ್ನುವುದು ಕಂಪ್ಯೂಟರ್‌ನಲ್ಲಿ ಸಂಭವಿಸುವ ವೈರಸ್‌ನ ಹೆಸರು. ಇದು ಕಂಪ್ಯೂಟರ್‌ನ ಡೇಟಾವನ್ನು ಕ್ಷಣಾರ್ಧದಲ್ಲಿ ವಶಕ್ಕೆ ಪಡೆಯುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗಷ್ಟೆ ದೆಹಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ (AIIMS) ಆಸ್ಪತ್ರೆಯ ಸರ್ವರ್​ಗೆ ವೈರಸ್ ಅಟ್ಯಾಕ್ ಆಗಿ ಹ್ಯಾಕ್ ಆಗಿರುವುದು.

ಇನ್ನೂ ಸರಿ ಆಗಿಲ್ಲ ಸರ್ವರ್:

ಏಮ್ಸ್​​ನ ಇ-ಆಸ್ಪತ್ರೆ ಡೇಟಾ ಸರ್ವರ್ ಹ್ಯಾಕ್ ಆಗಿ 10 ದಿನವಾಗಿದ್ದರೂ ಸರ್ವರ್‌ ಇನ್ನೂ ಡೌನ್‌ ಆಗಿದೆ. ಇ-ಹಾಸ್ಪಿಟಲ್ ಡೇಟಾವನ್ನು ಮರುಸ್ಥಾಪಿಸಲಾಗಿದ್ದರೂ, ಸೇವೆಗಳನ್ನು ಮರುಸ್ಥಾಪಿಸುವ ಮೊದಲು ನೆಟ್‌ವರ್ಕ್ ಅನ್ನು ಇನ್ನೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಸದ್ಯಕ್ಕೆ ಹೊರರೋಗಿ, ಒಳರೋಗಿ, ಪ್ರಯೋಗಾಲಯಗಳು ಸೇರಿದಂತೆ ಎಲ್ಲಾ ಆಸ್ಪತ್ರೆ ಸೇವೆಗಳು ಸದ್ಯಕ್ಕೆ ಮ್ಯಾನ್ಯುವಲ್ ಮೋಡ್‌ನಲ್ಲಿ ನಡೆಯುತ್ತಿವೆ. ಸರ್ವರ್‌ ಡೌನ್‌ ಆಗಿದ್ದಲ್ಲ, ವೈರಸ್ ಅಟ್ಯಾಕ್ ಆಗಿದೆ ಎನ್ನುವ ಸತ್ಯ ತಡವಾಗಿ ತನಿಖೆ ಕೈಗೊಂಡ ಮೇಲಷ್ಟೇ ಆಸ್ಪತ್ರೆ ಸಿಬ್ಬಂದಿಗೆ ತಿಳಿದು ಆಘಾತವಾಗಿದೆ. ಸರ್ವರ್‌ ಸರಿಪಡಿಸಲು ತೀವ್ರ ಪ್ರಯತ್ನ ನಡೆಯುತ್ತಿದ್ದು, ಇನ್ನೂ ಸರಿಹಾದಿಗೆ ಬಂದಿಲ್ಲ.

ಇದನ್ನೂ ಓದಿ
Image
Tech Tips: 5G ಬಳಸುವಾಗ ಡೇಟಾ ಸೇವ್ ಮಾಡುವುದು ಹೇಗೆ?; ಇಲ್ಲಿದೆ ನೋಡಿ ಟ್ರಿಕ್ಸ್
Image
Moto X40: ರಿಲೀಸ್​ಗೂ ಮುನ್ನ ಭರ್ಜರಿ ಸದ್ದು ಮಾಡುತ್ತಿದೆ ಮೋಟೋ X40 ಸ್ಮಾರ್ಟ್‌ಫೋನ್‌: ಏನಿದರ ವಿಶೇಷತೆ?
Image
Twitter Followers ನಿಮ್ಮ ಟ್ವಿಟ್ಟರ್​ ಫಾಲೋವರ್ಸ್​ ಸಂಖ್ಯೆ ಕುಸಿಯಬಹುದು: ಎಲಾನ್ ಮಸ್ಕ್ ಎಚ್ಚರಿಕೆ
Image
iQOO Neo 7 SE: ಒಂದೇ ದಿನ ಬಾಕಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಐಕ್ಯೂ ನಿಯೋ 7 SE: ಬೆಲೆ ಎಷ್ಟು?

Tech Tips: ಫೋನ್ ಪೇ, ಗೂಗಲ್ ಪೇ ಮೂಲಕ ದಿನಕ್ಕೆ ಎಷ್ಟು ಹಣ ಕಳುಹಿಸಬಹುದು?: ಇಲ್ಲಿದೆ ಮಾಹಿತಿ

ವೈರಸ್ ಅಟ್ಯಾಕ್ ಆಗಲು ಕಾರಣವೇನು?:

ಕಂಪ್ಯೂಟರ್​ನಲ್ಲಿ ಅಗತ್ಯವಾದ ಫೈಲ್​ಗಳು, ವೈಯಕ್ತಿಕ ವಿಚಾರ, ಪರ್ಸನ್ ಫೋಟೋ, ವಿಡಿಯೋ ಮುಂತಾದ ಅಗತ್ಯ ದಾಖಲೆಗಳಿದ್ದರೆ ಅದನ್ನು ವಶಪಡಿಸಿಕೊಳ್ಳಲು ಮಾಲ್ವೇರ್​ಗಳು ವೈರಸ್ ಹರಿಬಿಟ್ಟು ಹ್ಯಾಕ್ ಮಾಡುತ್ತಾರೆ. ಇಂದು ವೈರಸ್‌ಗಳು ಹಲವು ವಿಧಗಳಾಗಿದ್ದು ಅದು ಯಾವುದೇ ರೀತಿಯಲ್ಲಿ ಕಂಪ್ಯೂಟರ್‌ಗೆ ಪ್ರವೇಶಿಸಿ ಎಲ್ಲವನ್ನೂ ನಾಶಪಡಿಸುವ, ವಶಪಡಿಸುವ ಸಾಮರ್ಥ್ಯ ಹೊಂದಿದೆ. ಏಮ್ಸ್‌ ಆಸ್ಪತ್ರೆ ವಿಚಾರವನ್ನೇ ತೆಗೆದುಕೊಳ್ಳುವುದಾದರೆ, ಇಲ್ಲಿ ವಿಐವಿ, ವಿವಿಐಪಿ, ದೇಶದ ಗಣ್ಯಾತಿಗಣ್ಯರು, ಸಚಿವರು, ಮಾಜಿ ಸಚಿವರು, ಸಂಸದರು, ನ್ಯಾಯಾಧೀಶರು ಹಾಗೂ ದೊಡ್ಡ ದೊಡ್ಡ ಅಧಿಕಾರಿಗಳು ಹೆಚ್ಚಾಗಿ ಚಿಕಿತ್ಸೆ ಪಡೆಯುತ್ತಾರೆ. ಇವರೆಲ್ಲರ ಡೇಟಾಗಳು, ಔಷಧಿ ಮಾಹಿತಿಗಳನ್ನೆಲ್ಲ ಕ್ಷಣಮಾತ್ರದಲ್ಲಿ ಬಾಚಿಕೊಂಡು ಎಲ್ಲ ವಿವರಗಳಲ್ಲಿ ಕದ್ದಿದ್ದಾರೆ.

ಹೇಗೆ ಅಟ್ಯಾಕ್ ಆಗುತ್ತದೆ?:

ವೈರಸ್​ಗಳು ಕಂಪ್ಯೂಟರ್​ನ ಪ್ರೋಗ್ರಾಂನೊಳಗೆ ಪ್ರವೇಶಿಸಿ, ಆ ಪ್ರೋಗ್ರಾಂ ರನ್ ಆಗುವಾಗ ಈ ವೈರಸ್ ಕೂಡ ರನ್ ಆಗಿ ಬೇರೆ ಪ್ರೋಗ್ರಾಂಗಳಿಗೆ, ಅಪ್ಲಿಕೇಶನ್‌ಗಳಿಗೆ ಅಥವಾ ಇಡೀ ಕಂಪ್ಯೂಟರಿಗೆ ಹರಡುತ್ತದೆ. ಹೆಚ್ಚಾಗಿ, ಪೂರ್ವನಿರ್ಧರಿತ ದಿನದಂದು ಈ ವೈರಸ್ ಕೋಡ್ ಸಕ್ರಿಯಗೊಳ್ಳುವಂತೆ ಪ್ರೋಗ್ರಾಂ ಮಾಡಬಹುದಾಗಿದೆ. ಹಿಂದೆಲ್ಲಾ ವೈರಸ್‌ಗಳು ಕಂಪ್ಯೂಟರನ್ನು ಹಾಳುಗೆಡಹುವಂತೆ ಕಿಡಿಗೇಡಿಗಳ ಮೂಲಕ ಸೃಷ್ಟಿಯಾಗುತ್ತಿದ್ದವು. ಆದರೆ ಈಗ ಅವು ಮಾಹಿತಿ ಕದಿಯುವ ತಂತ್ರಜ್ಞಾನವಾಗಿ ಬೆಳೆದುಬಿಟ್ಟಿದೆ. ಕೆಲ ವೈರಸ್​ಗಳಲ್ಲಿ ಪ್ರೋಗ್ರಾಂ ಅನ್ನು ರನ್ ಮಾಡಲೇಬೇಕೆಂದಿಲ್ಲ. ತಾನಾಗಿಯೇ ಬೇರೆ ಕಂಪ್ಯೂಟರಿಗೆ ನಕಲಾಗುವ ಇದು, ಸ್ವಯಂ ಆಗಿ ರನ್ ಆಗುತ್ತದೆ ಮತ್ತು ತದ್ರೂಪಿ ಫೈಲ್‌ಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೋಗುತ್ತದೆ. ಇದರಿಂದ ವೆಬ್ ಬ್ರೌಸಿಂಗ್ ನಿಧಾನವಾಗುತ್ತದೆ ಮತ್ತು ಸಾಕಷ್ಟು ಡೇಟಾ ನಷ್ಟವಾಗುತ್ತದೆ. ಇಂಟರ್‌ನೆಟ್‌ ಸಂಪರ್ಕ ಮತ್ತು ಹಾರ್ಡ್‌ ಡ್ರೈವ್‌ಗಳ ಸ್ಕ್ಯಾನ್‌ ಮಾಡದೇ ಬಳಸುವುದರಿಂದ ಕಂಪ್ಯೂಟರ್‌ನೊಳಗೆ ವೈರಸ್‌ ಅಟ್ಯಾಕ್ ಆಗುತ್ತದೆ.

Top Android Apps 2022: ಈ ವರ್ಷದ ಬೆಸ್ಟ್​​ ಗೇಮ್ಸ್, ಆ್ಯಪ್ಸ್ ಯಾವುದು?; ಗೂಗಲ್ ಪ್ಲೇಯಿಂದ ಪಟ್ಟಿ ಬಿಡುಗಡೆ

ವೈರಸ್ ಅಟ್ಯಾಕ್ ಆಗಿದೆಯೆಂದು ತಿಳಿಯವುದು ಹೇಗೆ?:

  • ವೈರಸ್ ಅಟ್ಯಾಕ್ ಆಗಿದೆ ಎಂದಾದರೆ ಕಂಪ್ಯೂಟರ್ ಸಾಮಾನ್ಯ ವೇಗಕ್ಕಿಂತ ಮತ್ತಷ್ಟು ನಿಧಾನವಾಗಿ ಕೆಲಸ ಮಾಡುತ್ತದೆ.
  • ನಿಮ್ಮ ಕಂಪ್ಯೂಟರ್​ನಲ್ಲಿ ಪ್ರೊಸೆಸ್ ಆಗುವ ರಿಸೋರ್ಸ್ ಕೋಟ್​ಗಳ ಮೇಲೆ ಮಾಲ್ವೇರ್​ಗಳು ಅಟ್ಯಾಕ್ ಮಾಡಿದಾಗ ಈ ರೀತಿ ಆಗಿರುವ ಸಾಧ್ಯತೆ ಇರುತ್ತದೆ.
  • ಸಿಸ್ಟಮ್ ನಲ್ಲಿ ಬಿಓಡಿ( ಬ್ಲೂ ಸ್ಕ್ರೀನ್ ಆಫ್ ಡೆತ್) ಕಾಣಿಸುವುದು ವೈರಸ್ ಅಟ್ಯಾಕ್ ಆಗಿರುವು ಮುಖ್ಯ ಲಕ್ಷಣ.
  • ಪ್ರೋಗ್ರಾಮ್ ಅನ್ನು ರನ್ ಮಾಡಲು ನೀವು ಯಾವಾಗ ಬಯಸುತ್ತೀರೋ ಆಗ ಫೈಲ್ ಕರಪ್ಟ್ ಆಗಿದೆ ಪದೇ ಪದೇ ತೋರಿಸುವುದು.
  • ಒಂದು ಫೋಲ್ಡರ್​ನೊಳಗಡೆ ನೀವು ರಚಿಸದ ಕೆಲವು ಶಾರ್ಟ್ ಕಟ್ ಫೋಲ್ಡರ್ ಸೃಷ್ಟಿಯಾಗುವುದು.
  • ರ್ಯಾಡಂ ಮೆಸೇಜ್​ಗಳು ಡ್ರೈವ್ ಲಾಕ್ ಆಗಿದೆ ಎಂದು ತೋರಿಸುವುದು.

ವೈರಸ್ ಅಟ್ಯಾಕ್​ನಿಂದ ಪಾರಾಗುವುದು ಹೇಗೆ?:

ವೈರಸ್‌ ಕಂಪ್ಯೂಟರ್‌ ಅನ್ನು ಪ್ರವೇಶಿಸಿದೆ ಎಂಬ ಅನುಮಾನ ಬಂದ ಕೂಡಲೇ ಮೊದಲು ಕಂಪ್ಯೂಟರ್‌ ಅಂತರ್ಜಾಲ ಸಂಪರ್ಕ ತಪ್ಪಿಸಿ. ಇದರಿಂದ ಹ್ಯಾಕರ್‌ಗಳು ಇಂಟರ್‌ನೆಟ್‌ ಮೂಲಕ ಕಂಪ್ಯೂಟರ್‌ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ. ಅಂತೆಯೆ ಉತ್ತಮ ಕಂಪನಿಯ ಆಂಟಿ-ವೈರಸ್ ಅನ್ನು ಇನ್​ಸ್ಟಾಲ್ ಮಾಡಿ ಉಪಯೋಗಿಸುವುದು ಕಡ್ಡಾಯ. ಈ ಆಂಟಿ-ವೈರಸ್​ಗೆ ಕೊನೆಯ ದಿನಾಂಕವಿದ್ದು ನೆನಪಿನಲ್ಲಿಡಿ. ನೀವು ಮೊಬೈಲ್, ಪೆನ್ ಡ್ರೈವ್ ಅಥವಾ ಯಾವುದೇ ಸಾಧನವನ್ನು ಕಂಪ್ಯೂಟರ್‌ಗೆ ಸಂಪರ್ಕಿಸುವಾಗ ಸ್ಕ್ಯಾನ್ ಮಾಡಿ. ಮುಖ್ಯವಾಗಿ ಆನ್‌ಲೈನ್‌ನಲ್ಲಿ ಏನಾದರು ವೀಕ್ಷಿಸಿದಾಗ ಅಥವಾ ಡೌನ್‌ಲೋಡ್ ಮಾಡಿದಾಗ ಅದು ನಂಬಿಕೆಗೆ ಅರ್ಹವಾದ ತಾಣವೇ ಎಂಬುದನ್ನು ಪರಿಶೀಲಿಸಿ ಉಪಯೋಗಿಸಿ. ಸಿಸ್ಟಂನ ಡೇಟಾವನ್ನು ಬ್ಯಾಕಪ್ ತೆಗೆದುಕೊಂಡು ಸಂಪೂರ್ಣ ಫಾರ್ಮ್ಯಾಟ್ ಮಾಡಿ ಪುನಃ ಹೊಸ ಅಪರೇಟಿಂಗ್ ಸಿಟ್ಟಂ ಇನ್​ಸ್ಟಾಲ್ ಮಾಡುವುದು ಕೂಡ ಒಳ್ಳೆಯ ನಿರ್ಧಾರ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Fri, 2 December 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್