Top Android Apps 2022: ಈ ವರ್ಷದ ಬೆಸ್ಟ್​​ ಗೇಮ್ಸ್, ಆ್ಯಪ್ಸ್ ಯಾವುದು?; ಗೂಗಲ್ ಪ್ಲೇಯಿಂದ ಪಟ್ಟಿ ಬಿಡುಗಡೆ

ಗೂಗಲ್​ ಪ್ಲೇ ಬೆಸ್ಟ್​ 2022 (Google Play Best Apps 2021) ಅಡಿಯಲ್ಲಿ ಕೆಲ ಆ್ಯಪ್​ಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ಇದರಲ್ಲಿ ಬೀರಿಯಲ್ (BeReal) ಆ್ಯಪ್ ಅತ್ಯುತ್ತಮ ಅಪ್ಲಿಕೇಶನ್ ಎಂಬ ಬಿರುದು ಪಡೆದುಕೊಂಡಿದೆ.

Top Android Apps 2022: ಈ ವರ್ಷದ ಬೆಸ್ಟ್​​ ಗೇಮ್ಸ್, ಆ್ಯಪ್ಸ್ ಯಾವುದು?; ಗೂಗಲ್ ಪ್ಲೇಯಿಂದ ಪಟ್ಟಿ ಬಿಡುಗಡೆ
Google Play's Best of 2022
Follow us
TV9 Web
| Updated By: Digi Tech Desk

Updated on:Dec 01, 2022 | 2:09 PM

ಇಂಟರ್‌ನೆಟ್ ಲೋಕದ ದಿಗ್ಗಜ ಗೂಗಲ್ ಪ್ರತಿವರ್ಷವೂ ಹೊಸ ಹೊಸ ಸೇವೆಗಳನ್ನು ಜನರಿಗೆ ಪರಿಚಯಿಸುತ್ತಿರುತ್ತದೆ. ಈ ಪೈಕಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯರುವ ಗೂಗಲ್ ಪ್ಲೇ ಸ್ಟೋರ್​ನಲ್ಲೂ (Google Play Store) ವರ್ಷಕ್ಕೆ ಸಾಕಷ್ಟು ಆ್ಯಪ್​ಗಳು, ಗೇಮ್​ಗಳನ್ನು ಬಿಡುಗಡೆ ಮಾಡುತ್ತದೆ. ಹೀಗೆ ಪ್ರತಿ ವರ್ಷ ಜನಪ್ರಿಯವಾಗಿರುವ ಆ್ಯಪ್​ಗಳ ಪಟ್ಟಿಯನ್ನೂ ಬಿಡುಗಡೆ ಮಾಡುತ್ತದೆ. ಅದರಂತೆ ಇದೀಗ 2022ನೇ ವರ್ಷದಲ್ಲಿ ಗೂಗಲ್​ ಅತ್ಯುತ್ತಮ ​ಆ್ಯಪ್ಸ್​, ಗೇಮ್ಸ್​​, ಸಿನಿಮಾ ಮತ್ತು ಪುಸ್ತಕ ಕುರಿತಾಗಿ ಮಾಹಿತಿ ಹಂಚಿಕೊಂಡಿದೆ. ಗೂಗಲ್​ ಪ್ಲೇ ಬೆಸ್ಟ್​ 2022 (Google Play Best Apps 2021) ಅಡಿಯಲ್ಲಿ ಕೆಲ ಆ್ಯಪ್​ಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ಇದರಲ್ಲಿ ಬೀರಿಯಲ್ (BeReal) ಆ್ಯಪ್ ಅತ್ಯುತ್ತಮ ಅಪ್ಲಿಕೇಶನ್ ಎಂಬ ಬಿರುದು ಪಡೆದುಕೊಂಡಿದೆ.

ಬೀರಿಯಲ್ ಒಂದು ಫೋಟೋ ಶೇರಿಂಗ್ ಆ್ಯಪ್ ಆಗಿದ್ದು, ಇದರಲ್ಲಿ ದೈನಂದಿನ ಚುಟುವಟಿಕೆ ಬಗ್ಗೆ ಫೋಟೋಗಳನ್ನು ಹಂಚಿಕೊಳ್ಳಬಹುದಾಗಿದೆ. ಇದು 2020 ರಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಪ್ಲೇ ಸ್ಟೋರ್​ನಲ್ಲಿ ಲಾಂಚ್ ಆಗಿತ್ತು. ಇನ್ನು ಗೇಮಿಂಗ್ ಕೆಟಗರಿಯಲ್ಲಿ ಅಪೆಕ್ಸ್ ಲೆಜೆಂಡ್ಸ್ ಮೊಬೈಲ್, ರಾಯಲ್ ಹೀರೋ ಶೂಟರ್ ಅತ್ಯುತ್ತಮ ಆ್ಯಪ್ ಎಂಬುದು ಬಹಿರಂಗ ಪಡಿಸಿದೆ. ಇದು ಲೆಜೆಂಡ್ಸ್ ಮೊಬೈಲ್​ಗೆ ಸಿಗುತ್ತಿರುವ ಎರಡನೇ ಪ್ರಶಸ್ತಿಯಾಗಿದೆ.

WhatsApp: ನಿಮಗೆ ನೀವೇ ಮೆಸೇಜ್ ಮಾಡಿ: ವಾಟ್ಸ್​ಆ್ಯಪ್​ನಿಂದ ಬಂತು ಅಪ್ಡೇಟ್: ಹೇಗೆ ಉಪಯೋಗಿಸುವುದು?

ಇದನ್ನೂ ಓದಿ
Image
WhatsApp Ban: ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್: ಯಾಕೆ?
Image
Facebook: ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ತಪ್ಪಿಯೂ ಹೀಗೆ ಮಾಡಬೇಡಿ
Image
Twitter Character Limit: ಟ್ವಿಟರ್​ ಅಕ್ಷರ ಮಿತಿ 1,000ಕ್ಕೆ ಹೆಚ್ಚಳ; ಎಲಾನ್ ಮಸ್ಕ್ ಸುಳಿವು
Image
Mobile Data: ಪಾಕಿಸ್ತಾನ, ಇಂಗ್ಲೆಂಡ್​​ನಲ್ಲಿ 1GB ಡೇಟಾದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ: ಎಷ್ಟು ಗೊತ್ತೇ?

ಗೂಗಲ್ ಹೇಳಿರುವ ಪ್ರಕಾರ, ಈ ವರ್ಷ ಹೆಚ್ಚಿನವರು ಗೇಮ್, ಹಾಡು, ಮ್ಯೂಸಿಕ್, ಕಾಮಿಡಿ ಈರೀತಿಯ ಕೆಟಗರಿ ಕಡೆ ಉತ್ಸಾಹ ತೋರಿಸಿದ್ದಾರಂತೆ. ಅಂತೆಯೆ ಲೈವ್ ಆಗಿ ಡ್ಯಾನ್ಸ್ ಕಲಿಯುವುದು ಮತ್ತು ಫಿಟ್​ನೆಸ್ ಬಗ್ಗೆ ಇರುವ ಆ್ಯಪ್​ಗಳು ಕೂಡ ಹೆಚ್ಚು ಡೌನ್​ಲೋಡ್ ಆಗಿವೆಯಂತೆ. ಗೂಗಲ್ ಪ್ಲೇ ಬೆಸ್ಟ್ 2022 ಪ್ರಶಸ್ತಿ ಪಡೆದುಕೊಂಡ ಸಂಪೂರ್ಣ ಆ್ಯಪ್​ಗಳ ವಿವರ ಇಲ್ಲಿದೆ.

2022ರ ಅತ್ಯುತ್ತಮ ಆ್ಯಪ್: Dream by Wombo ಬಳಕೆದಾರರ ಆಯ್ಕೆ: BeReal

ಬೆಸ್ಟ್ ಫನ್ ಆ್ಯಪ್: PetStar

2022ರ ಅತ್ಯುತ್ತಮ ಗೇಮ್ಸ್ ಆ್ಯಪ್: Apex Legends Mobile ಬಳಕೆದಾರರ ಆಯ್ಕೆ: Apex Legends Mobile

ಬೆಸ್ಟ್ ಸ್ಟೋರಿ: Papers, Please

ಬೆಸ್ಟ್​ ಆ್ಯಪ್ ಫಾರ್ ಟ್ಯಾಬ್ಲೆಟ್: Tower of Fantasy

ಬೆಸ್ಟ್​ ಆ್ಯಪ್ ಫಾರ್ ಕ್ರೋಮ್​ಬುಕ್ಸ್: Roblox

ಬೆಸ್ಟ್ Pick Up & Play: Angry Birds Journey

ಅತಿ ಹೆಚ್ಚು ಖರೀದಿಸಿದ ಪುಸ್ತಕ:

Fire & Blood by George RR Martin

It Ends With Us by Colleen Hoover

Fairy Tale by Stephen King

I’m Glad My Mom Died by Jeanette McCurdy

A Court of Thorns and Roses by Sara J. Maas

ಅತಿ ಖರೀದಿಯಾದ ಆಡಿಯೋ ಪುಸ್ತಕ:

I’m Glad My Mom Died by Jeanette McCurdy

Fairy Tale by Stephen King

Fire & Blood by George RR Martin

Atomic Habits by James Clear

It Ends With Us by Colleen Hoover

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:57 am, Thu, 1 December 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್