Mobile Data: ಪಾಕಿಸ್ತಾನ, ಇಂಗ್ಲೆಂಡ್​​ನಲ್ಲಿ 1GB ಡೇಟಾದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ: ಎಷ್ಟು ಗೊತ್ತೇ?

Technology News: ವಿಶ್ವದಾದ್ಯಂತ ಮೊಬೈಲ್ ಡೇಟಾ ಬೆಲೆ 2022 ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಹಲವು ದೇಶಗಳನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ. ಹಾಗಾದರೆ ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳಲ್ಲಿ 1GB ಇಂಟರ್ನೆಟ್ ಬೆಲೆ ಎಷ್ಟು?.

Mobile Data: ಪಾಕಿಸ್ತಾನ, ಇಂಗ್ಲೆಂಡ್​​ನಲ್ಲಿ 1GB ಡೇಟಾದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ: ಎಷ್ಟು ಗೊತ್ತೇ?
Mobile data Price
Follow us
TV9 Web
| Updated By: Vinay Bhat

Updated on: Nov 29, 2022 | 3:12 PM

ಟೆಕ್ನಾಲಜಿ (Technology) ಮುಂದುವರೆದಂತೆ ಟೆಲಿಕಾಂ ಕ್ಷೇತ್ರದಲ್ಲಿ ಕೂಡ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಭಾರತದಲ್ಲಿ ಈಗ 5G ಯುಗ ಆರಂಭವಾಗಿದ್ದು ಕೆಲ ಮೆಟ್ರೋ ನಗರಗಳಲ್ಲಿ ಶರವೇಗದ 5ಜಿ ಸೇವೆಯನ್ನು ಜನರು ಆನಂದಿಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ಟೆಲಿಕಾಂ (Telecom) ಕಂಪನಿಗಳು ಕೂಡ ತಮ್ಮ ಟಾರೀಪ್ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿದ್ದಾರೆ. ಇಂದು ಬಹುತೇಕ ಜನರು ಸ್ಮಾರ್ಟ್​ಫೋನ್ ಉಪಯೋಗಿಸುತ್ತಿರುವುದರಿಂದ ಇಂಟರ್ನೆಟ್ ಬೆಲೆ ಕೂಡ ಗಗನಕ್ಕೇರಿದೆ. ಭಾರತದಲ್ಲಿ 4G ಬಂದ ಮೇಲೆ ಇಂಟರ್ನೆಟ್ ಬೆಲೆ ದಿಢೀರ್ ಏರಿಕೆ ಕಂಡಿತು. ಆದರೆ, ಇತರೆ ದೇಶಗಳಿಗೆ ಹೋಲಿಸಿದರೆ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಇಂಟರ್ನೆಟ್ (Internet) ಸೇವೆ ನೀಡುತ್ತಿರುವ ಕೆಲವೇ ದೇಶಗಳಲ್ಲಿ ಭಾರತ ಕೂಡ ಇದೆ ಎಂದರೆ ನಂಬಲೇಬೇಕು.

ಇದೀಗ ವಿಶ್ವದಾದ್ಯಂತ ಮೊಬೈಲ್ ಡೇಟಾ ಬೆಲೆ 2022 ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಹಲವು ದೇಶಗಳನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ. ಹಾಗಾದರೆ ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಇತರೆ ದೇಶಗಳಲ್ಲಿ 1GB ಇಂಟರ್ನೆಟ್ ಬೆಲೆ ಎಷ್ಟು?. ಇಲ್ಲಿದೆ ನೋಡಿ ಮಾಹಿತಿ.

ಮೂರನೇ ಸ್ಥಾನದಲ್ಲಿದೆ ಭಾರತ:

ಇದನ್ನೂ ಓದಿ
Image
Xiaomi 13 Series: ಬಹುನಿರೀಕ್ಷಿತ ಶವೋಮಿ 13 ಸರಣಿ ಸ್ಮಾರ್ಟ್​ಫೋನ್ ಲಾಂಚ್​ಗೆ ದಿನಾಂಕ ಫಿಕ್ಸ್: ಏನು ಫೀಚರ್ಸ್?, ಬೆಲೆ?
Image
WhatsApp: ನಿಮಗೆ ನೀವೇ ಮೆಸೇಜ್ ಮಾಡಿ: ವಾಟ್ಸ್​ಆ್ಯಪ್​ನಿಂದ ಬಂತು ಅಪ್ಡೇಟ್: ಹೇಗೆ ಉಪಯೋಗಿಸುವುದು?
Image
JIO Down: ದೇಶದಾದ್ಯಂತ ಜಿಯೋ ನೆಟ್​ವರ್ಕ್ ಡೌನ್: ಕಾಲ್ ಹೋಗ್ತಿಲ್ಲ, ಮೆಸೇಜ್ ಸೆಂಡ್ ಆಗ್ತಿಲ್ಲ
Image
YouTube Ambient Mode: ಏನಿದು ಯೂಟ್ಯೂಬ್ ಆಂಬಿಯೆಂಟ್ ಮೋಡ್?: ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಜಗತ್ತಿನಲ್ಲೇ ಅತ್ಯಂತ ಅಗ್ಗದ ಬೆಲೆಗೆ ಇಂಟರ್ನೆಟ್ ಸೇವೆ ನೀಡುತ್ತಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಇತ್ತೀಚೆಗಷ್ಟೆ Cable.co.uk ಇದರ ಬಗ್ಗೆ ಸಮೀಕ್ಷೆ ನಡೆಸಿದ್ದು 233 ದೇಶಗಳಲ್ಲಿ 5,292 ಮೊಬೈಲ್ ಡೇಟಾ ಯೋಜನೆಗಳಿಂದ ಡೇಟಾವನ್ನು ವಿಶ್ಲೇಷಿಸಿದೆ ಮತ್ತು 1GB ಮೊಬೈಲ್ ಡೇಟಾದ ವೆಚ್ಚವನ್ನು ಆಧರಿಸಿ ಶ್ರೇಯಾಂಕವನ್ನು ಪಕ್ರಟಿಸಿದೆ. ಇದರ ಪ್ರಕಾರ, ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯ ಬಳಕೆದಾರರು ಡೇಟಾಗೆ ಕಡಿಮೆ ಬೆಲೆಯನ್ನು ಪಾವತಿಸುತ್ತಿದ್ದಾರೆ. ಇಲ್ಲಿ 1GB ಡೇಟಾದ ಬೆಲೆ $0.17 (ಅಂದಾಜು 13.88 ರೂ.). ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕಾಂತ್ರಿ ಹುಟ್ಟಿಸಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ಸದ್ಯ ಕಡಿಮೆ ಬೆಲೆಗೆ ಹೆಚ್ಚಿನ ಸ್ಪೀಡ್​ನಲ್ಲಿ ಇಂಟರ್ ನೆಟ್ ಸೇವೆ ಒದಗಿಸುತ್ತಿದೆ.

Tech Tips: ಗೂಗಲ್​ನಲ್ಲಿ ನಿಮ್ಮ ಫೋಟೋ ಕಾಣಿಸಬೇಕೇ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ

ವಿಶ್ವದ ಅತ್ಯಂತ ಅಗ್ಗದ ಇಂಟರ್ನೆಟ್ ಸೇವೆ ಲಭ್ಯವಿರುವುದು ಇಸ್ರೇಲ್‌ನಲ್ಲಿ. ಇದೊಂದು ಚಿಕ್ಕ ದೇಶವಾಗಿದ್ದರೂ ತಂತ್ರಜ್ಞಾನದ ವಿಷಯದಲ್ಲಿ ಬಹಳ ಮುಂದಿದೆ. ಇಸ್ರೇಲ್‌ನಲ್ಲಿ 1GB ಮೊಬೈಲ್ ಡೇಟಾದ ಬೆಲೆ ಕೇವಲ $0.04. ಅಂದರೆ, ಭಾರತೀಯ ಮೌಲ್ಯದ ಪ್ರಕಾರ 3.27 ರೂಪಾಯಿ ಅಷ್ಟೆ. ಅಂತೆಯೆ ಅತಿ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ಒದಗಿಸುತ್ತಿರುವ ಎರಡನೇ ದೇಶ ಇಟಲಿ. ಈ ಪಟ್ಟಿಯಲ್ಲಿ ಫ್ರಾನ್ಸ್ ನಂತರ ಇದು ಎರಡನೇ ಯುರೋಪಿಯನ್ ದೇಶವಾಗಿದೆ. ಇಟಲಿಯಲ್ಲಿ, ಬಳಕೆದಾರರು 1GB ಡೇಟಾಕ್ಕೆ $0.12 ಪಾವತಿ ಮಾಡುತ್ತಾರೆ. ಭಾರತೀಯ ಮೌಲ್ಯದ ಪ್ರಕಾರ 1GB ಮೊಬೈಲ್ ಡೇಟಾಕ್ಕೆ ಸುಮಾರು 9.80 ರೂಪಾಯಿಗಳನ್ನು ಪಾವತಿಸಬೇಕು.

ಈಗಾಗಲೇ ಹೇಳಿರುವಂತೆ ಮೂರನೇ ಸ್ಥಾನದಲ್ಲಿ ಭಾರತವಿದೆ. ಇಲ್ಲಿ 1GB ಡೇಟಾದ ಬೆಲೆ $0.17 (ಅಂದಾಜು 13.88 ರೂ.). ಸದ್ಯಕ್ಕೆ ಜಿಯೋ ಟೆಲಿಕಾಂ ಕಂಪನಿ ಭಾರತದಲ್ಲಿ 15 ರೂಪಾಯಿಗೆ 1GB ಡೇಟಾವನ್ನು ನೀಡುತ್ತಿದೆ. ನಾಲ್ಕನೇ ಸ್ಥಾನದಲ್ಲಿ ಫ್ರಾನ್ಸ್ ದೇಶವಿದೆ. ಇಲ್ಲಿ ಬಳಕೆದಾರರು 1GB ಡೇಟಾಕ್ಕಾಗಿ $0.23 ಖರ್ಚು ಮಾಡುತ್ತಾರೆ. ಭಾರತೀಯ ಕರೆನ್ಸಿಯಲ್ಲಿ ಅಂದಾಜು 18.78 ರೂ. ಎನ್ನಬಹುದು. ಈ ದೇಶದಲ್ಲಿ ನೆಟ್‌ವರ್ಕ್ ಮೂಲಸೌಕರ್ಯವು ತುಂಬಾ ಪ್ರಬಲವಾಗಿದ್ದು ಜನರು ಇಂಟರ್ನೆಟ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರಂತೆ.

ಐದನೇ ಸ್ಥಾನದಲ್ಲಿ ಪಾಕಿಸ್ತಾನ:

Cable.co.uk ತನ್ನ ವರದಿಯಲ್ಲಿ ಹೇಳಿರುವ ಪ್ರಕಾರ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ಒದಗಿಸುತ್ತಿರುವ ದೇಶದಗಳ ಪಟ್ಟಿಯಲ್ಲಿ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ. ಇಲ್ಲಿ 1GB ಮೊಬೈಲ್ ಡೇಟಾದ ಬೆಲೆ $0.36, ಅಂದರೆ ಭಾರತೀಯ ಮೌಲ್ಯದ ಪ್ರಕಾರ 29.40 ರೂ.. ಇತರೆ ಎಲ್ಲ ದೇಶಗಳಿಗೆ ಹೋಲಿಸಿದರೆ ಸೇಂಟ್ ಹೆಲೆನಾ ಅತ್ಯಂತ ದುಬಾರಿ ಇಂಟರ್ನೆಟ್ ಬೆಲೆ ಹೊಂದಿರುವ ದೇಶವಾಗಿದೆ. ಇಲ್ಲಿ 1GB ಮೊಬೈಲ್ ಡೇಟಾ ಬೆಲೆ $ 41.06, ಅಂದರೆ ಸುಮಾರು 3,350 ರೂಪಾಯಿ. ಅಂತೆಯೆ ಕೆನಡಾದಲ್ಲಿ 1GB ಇಂಟರ್ನೆಟ್‌ನ ಬೆಲೆ $5.94 (ಸುಮಾರು 485ರೂ.). ಅಮೆರಿಕನ್ನರು 1GB ಇಂಟರ್​ನೆಟ್​ಗೆ USD 3.12 ಪಾವತಿ ಮಾಡುತ್ತಿದ್ದಾರೆ. ಅಂದರೆ ಸುಮಾರು 254 ರೂಪಾಯಿ ಎನ್ನಬಹುದು. ಇತ್ತ ಇಂಗ್ಲೆಂಡ್​ನಲ್ಲಿ 1GB ಇಂಟರ್​ನೆಟ್​ ಬೆಲೆ USD 0.79 ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್