JIO Down: ದೇಶದಾದ್ಯಂತ ಜಿಯೋ ನೆಟ್ವರ್ಕ್ ಡೌನ್: ಕಾಲ್ ಹೋಗ್ತಿಲ್ಲ, ಮೆಸೇಜ್ ಸೆಂಡ್ ಆಗ್ತಿಲ್ಲ
ದೇಶದಲ್ಲಿ ಅನೇಕ ಜಿಯೋ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದು ಕರೆ ಮಾಡಲು, ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಆಗಿದೆ. ಟ್ವಿಟರ್ನಲ್ಲಿ 'ಜಿಯೋ ಡೌನ್' (Jio Down) ಟ್ರೆಂಡ್ ಆಗಿದ್ದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ.
ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ (Reliance) ಒಡೆತನದ ಜಿಯೋ ನೆಟ್ವರ್ಕ್ ಡೌನ್ ಆಗಿದೆ. ದೇಶದಲ್ಲಿ ಅನೇಕ ಜಿಯೋ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದು ಕರೆ ಮಾಡಲು, ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಆಗಿದೆ. ಟ್ವಿಟರ್ನಲ್ಲಿ ‘ಜಿಯೋ ಡೌನ್’ (Jio Down) ಟ್ರೆಂಡ್ ಆಗಿದ್ದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ. ಇಂದು ಮುಂಜಾನೆಯಿಂದ ಬಳಕೆದಾರರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಮೊಬೈಲ್ ಡೇಟಾ ಎಂದಿನಂತೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕರೆ ಮತ್ತು ಎಸ್ಎಮ್ಎಸ್ ಕಳುಹಿಸಲು ಮಾತ್ರ ಜನರು ಪರದಾಡುತ್ತಿದ್ದಾರೆ. ಈ ಬಗ್ಗೆ ವರದಿ ಮಾಡಿರುವ ಡೌನ್ಡಿಟೆಕ್ಟನ್, ಬೆಳಗ್ಗೆ 6 ಗಂಟೆಯಿಂದ 9 ಗಂಟೆ ವರೆಗೆ ಜಿಯೋ ಬಳಕೆದಾರರು ಈ ಸಮಸ್ಯೆ ಎದುರಿಸಿದ್ದಾರಂತೆ. ಈ ಸಮಯದಲ್ಲಿ ಶೇ. 37 ರಷ್ಟು ಜನರಿಗೆ ಜಿಯೋ ಸಿಗ್ನಲ್ ಕಾಣಿಸುತ್ತಿರಲಿಲ್ಲ. ಶೇ. 26 ರಷ್ಟು ಮಂದಿಗೆ ಮೆಸೇಜ್ (Message) ಕಳುಹಿಸುವಾಗ ಎರಾರ್ ಬಂದಿದೆ. ದೆಹಲಿ, ಅಹ್ಮದಾಬಾದ್, ಮುಂಬೈ, ಚೆನ್ನೈ, ಬೆಂಗಳೂರು ಹಾಗೂ ಕೋಲ್ಕತ್ತಾದಲ್ಲಿ ಈ ಸಮಸ್ಯೆ ಕಂಡುಬಂದಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ಒಬ್ಬರು ಟ್ವೀಟ್ ಮಾಡಿದ್ದು, ಬೆಳಗ್ಗಿನಿಂದ ವೋಲ್ಟ್ ಸಿಗ್ನಲ್ ಕಾಣಿಸುತ್ತಿಲ್ಲ, ಕರೆ ಮಾಡಲು ಆಗುತ್ತಿಲ್ಲ. ಹೀಗಿರುವಾಗ ನೀವು 5G ಸೇವೆಯನ್ನು ಹೇಗೆ ನೀಡುತ್ತೀರಿ ಎಂದು ಬರೆದುಕೊಂಡಿದ್ದಾರೆ. ಇಲ್ಲಿದೆ ನೋಡಿ ಟ್ವಿಟರ್ ರಿಯಾಕ್ಷನ್.
No volte sign since morning & so unable to make any calls. Is this how you are planning to provide 5g services when normal calls are having issues? @reliancejio @JioCare #Jiodown
— Pratik Malviya (@Pratikmalviya36) November 29, 2022
#Jiodown situation when you have jio fiber , jio sim and jio mobile. And the network is down. pic.twitter.com/kI6vagk9SP
— AnishKumar Agarwal (@AnIsH_261290) November 29, 2022
ಆದರೆ, ಜಿಯೋ ಮಾತ್ರ ಈ ಸಮಸ್ಯೆ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ವರ್ಷದಲ್ಲಿ ಜಿಯೋ ಅನೇಕ ಬಾರಿ ಇಂಥಹ ಸಮಸ್ಯೆ ಎದುರಿಸಿದೆ. ಕಳೆದ ಫೆಬ್ರವರಿ, ಜೂನ್ ಮತ್ತು ಅಕ್ಟೋಬರ್ನಲ್ಲೂ ಜಿಯೋ ಬಳಕೆದಾರರು ನೆಟ್ವರ್ಕ್ ಸಮಸ್ಯೆಗೆ ತುತ್ತಾಗಿದ್ದರು.
WhatsApp New Features: ಡೆಸ್ಕ್ಟಾಪ್ ಬಳಕೆದಾರರಿಗೆ ಎರಡು ಹೊಸ ಫೀಚರ್: ವಾಟ್ಸ್ಆ್ಯಪ್ನಿಂದ ವಿಭಿನ್ನ ಪ್ರಯತ್ನ
ಜಿಯೋದಿಂದ ವೆಲ್‌ಕಮ್ ಆಫರ್ ಘೋಷಣೆ:
ಜಿಯೋ ಟ್ರೂ 5G ಅನ್ನು ಉಚಿತವಾಗಿ ಸಂಪರ್ಕಿಸಲು ಮತ್ತು ಆನಂದಿಸಲು ಗ್ರಾಹಕರಿಗೆ ವೆಲ್‌ಕಮ್ ಆಫರ್ ಅನ್ನು ಘೋಷಿಸಿದೆ. ಆದರೆ, ಈ ವೆಲ್‌ಕಮ್ ಆಫರ್ ಆಯ್ದ ಜಿಯೋ 5G ಬಳಕೆದಾರರಿಗೆ ಮಾತ್ರವಷ್ಟೆ ಲಭ್ಯವಾಗುತ್ತಿದೆ. ಈ ಸೌಲಭ್ಯವನ್ನು ಪಡೆಯಲು ಜಿಯೋ ಗ್ರಾಹಕರು ಕೆಲ ಅರ್ಹತೆಯನ್ನು ಪಡೆದುಕೊಂಡಿರಬೇಕು ಎಂದು ರಿಲಯನ್ಸ್ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಜಿಯೋ 5G ವೆಲ್‌ಕಮ್ ಆಫರ್ ಸದ್ಯ ದೆಹಲಿ – NCR, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಇತರ 5 ನಗರಗಳು ಸೇರಿದಂತೆ ಅರ್ಹ ನಗರಗಳಲ್ಲಿ ಮಾತ್ರ ಲಭ್ಯವಿದೆ. ಅಂದಹಾಗೆ ಈ 5G ಕೊಡುಗೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ 1gbps ವೇಗದೊಂದಿಗೆ ಅನಿಯಮಿತ 5G ಡೇಟಾವನ್ನು ಒದಗಿಸುತ್ತಿದೆ. ಅಂತೆಯೆ 5G ನೆಟ್‌ವರ್ಕ್‌ಗೆ ಸಂಪರ್ಕಿಸಲು ಹೊಸ 5G ಸಿಮ್ ಖರೀದಿಸಬೇಕಾಗಿಲ್ಲ ಎಂದು ಜಿಯೋ ಈ ಹಿಂದೆ ತನ್ನ ಬಳಕೆದಾರರಿಗೆ ಭರವಸೆ ನೀಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:43 am, Tue, 29 November 22