Flipkart Black Friday Sale: 20,000 ರೂ. ಒಳಗೆ ಸಿಗುತ್ತಿದೆ ಈ ಬೊಂಬಾಟ್ ಸ್ಮಾರ್ಟ್​ಫೋನ್​ಗಳು

SmartPhones Under Rs. 20,000 in India: ಈ ಬ್ಲಾಕ್ ಫ್ರೈಡೇ ಸೇಲ್​ನಲ್ಲಿ (Black Friday Sale) ಮಧ್ಯಮ ಬೆಲೆಯ ಆಕರ್ಷಕ ಸ್ಮಾರ್ಟ್​ಫೋನ್​ಗಳು ಬಂಪರ್ ಡಿಸ್ಕೌಂಟ್​ ದರದಲ್ಲಿ ಮಾರಾಟ ಆಗುತ್ತಿದೆ. ಇದರಲ್ಲಿ 20,000 ರೂ. ಒಳಗಡೆ ಖರೀದಿಸಬಹುದಾದ ಅತ್ಯುತ್ತಮ ಫೋನ್​ಗಳ ಪಟ್ಟಿ ನೋಡುವುದಾದರೆ...

Flipkart Black Friday Sale: 20,000 ರೂ. ಒಳಗೆ ಸಿಗುತ್ತಿದೆ ಈ ಬೊಂಬಾಟ್ ಸ್ಮಾರ್ಟ್​ಫೋನ್​ಗಳು
flipkart black friday sale
Follow us
TV9 Web
| Updated By: Vinay Bhat

Updated on:Nov 28, 2022 | 3:43 PM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ಬ್ಲಾಕ್ ಫ್ರೈಡೇ ಸೇಲ್ ನಡೆಯುತ್ತಿದೆ. ನವೆಂಬರ್ 30 ವರೆಗೆ ನಡೆಯುತ್ತಿರುವ ಈ ಮೇಳದಲ್ಲಿ ಮಧ್ಯಮ ಬೆಲೆಯ ಆಕರ್ಷಕ ಸ್ಮಾರ್ಟ್​ಫೋನ್​ಗಳು ಬಂಪರ್ ಡಿಸ್ಕೌಂಟ್​ ದರದಲ್ಲಿ ಮಾರಾಟ ಆಗುತ್ತಿದೆ. ಇದರ ಜೊತೆಗೆ ಬ್ಯಾಂಕ್ ಆಫರ್ ಕೂಡ ನೀಡಲಾಗಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಮತ್ತು ಸಿಟಿ ಬ್ಯಾಂಕ್ ಕಾರ್ಡ್ ಬಳಸಿ ಸ್ಮಾರ್ಟ್​​ಫೋನ್ (Smartphone) ಖರೀದಿಸಿದರೆ ಶೇ. 12 ರಷ್ಟು ರಿಯಾಯಿತಿ ಸಿಗಲಿದೆ. ಹಾಗಾದರೆ ಈ ಬ್ಲಾಕ್ ಫ್ರೈಡೇ ಸೇಲ್​ನಲ್ಲಿ (Black Friday Sale) 20,000 ರೂ. ಒಳಗಡೆ ಖರೀದಿಸಬಹುದಾದ ಅತ್ಯುತ್ತಮ ಫೋನ್​ಗಳ ಪಟ್ಟಿ ನೋಡುವುದಾದರೆ…

ಮೋಟೋ G82 5G: ಈ ಫೋನಿನ 6GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 23,999 ರೂ. ಇದೆ. ಆದರೀಗ ರಿಯಾಯಿತಿ ದರದಲ್ಲಿ ಕೇವಲ 19,999 ರೂ. ಗೆ ಮಾರಾಟ ಆಗುತ್ತಿದೆ. ಇದರ ಜೊತೆಗೆ 17,500 ರೂ. ಗಳ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗಿದೆ. ಈ ಫೋನ್ 6.6-ಇಂಚಿನ FHD+ ಡಿಸ್​ಪ್ಲೇ ಹೊಂದಿದ್ದು 5000mAh ಬ್ಯಾಟರಿ ಮತ್ತು ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ.

ಪೋಕೋ X4 ಪ್ರೊ 5G: ಈ ಫೋನಿನ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 23,999 ರೂ. ಇದೆ. ಆದರೆ, ಫ್ಲಿಪ್‌ಕಾರ್ಟ್ ಬ್ಲಾಕ್ ಫ್ರೈಡೇ ಸೇಲ್​ನಲ್ಲಿ 17,999 ರೂ. ಗೆ ನಿಮ್ಮದಾಗಿಸಬಹುದು.. 17,000 ರೂ. ಗಳ ಎಕ್ಸ್​ಚೇಂಜ್ ಆಫರ್ ಕೂಡ ಇದೆ. ಇದರಲ್ಲಿ ಕ್ವಾಲ್ಕಂ ಸ್ನಾಪ್​ಡ್ರಾಗನ್ 695 5G ಪ್ರೊಸೆಸರ್ ಅಳವಡಿಸಲಾಗಿದ್ದು, 6.67-ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್​ ಪ್ಲೇಯನ್ನು ನೀಡಲಾಗಿದೆ. 5000mAh ಬ್ಯಾಟರಿ, ಟ್ರಿಪಲ್ ಕ್ಯಾಮೆರಾ ರಿಯರ್ ಸೆಟಪ್‌ನೊಂದಿಗೆ ಬರುತ್ತದೆ.

ಇದನ್ನೂ ಓದಿ
Image
Shocking News: 500 ಮಿಲಿಯನ್ ಮೊಬೈಲ್ ನಂಬರ್ ಮಾರಾಟ: ಇದು ವಾಟ್ಸ್​ಆ್ಯಪ್ ಬಳಕೆದಾರರನ್ನು ಬೆಚ್ಚಿ ಬೀಳಿಸುವ ಸುದ್ದಿ
Image
WhatsApp New Features: ಡೆಸ್ಕ್​ಟಾಪ್ ಬಳಕೆದಾರರಿಗೆ ಎರಡು ಹೊಸ ಫೀಚರ್: ವಾಟ್ಸ್​ಆ್ಯಪ್​ನಿಂದ ವಿಭಿನ್ನ ಪ್ರಯತ್ನ
Image
Sharkbot Malware: ಗೂಗಲ್ ಪ್ಲೇ ಸ್ಟೋರ್​​ನಲ್ಲಿ ಅಪಾಯಕಾರಿ ವೈರಸ್ ಪತ್ತೆ: ಇನ್​ಸ್ಟಾಲ್ ಆಗಿದ್ದರೆ ತಕ್ಷಣ ಡಿಲೀಟ್ ಮಾಡಿ
Image
Tech Tips: ಸ್ಮಾರ್ಟ್​ಫೋನ್ ಮಾರಾಟ ಮಾಡುವ ಮುನ್ನ ಹೀಗೆ ಮಾಡಲು ಮರೆಯದಿರಿ

Black Friday Sale: ಕೇವಲ 7999 ರೂ. ಗೆ ನಥಿಂಗ್ ಫೋನ್ (1) ಖರೀದಿಸಿ: ಇಲ್ಲಿದೆ ನೋಡಿ ಟ್ರಿಕ್

Realme 9 5G SE: ಈ ಫೋನಿನ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 24,999 ರೂ. ಇದೆ. ಆದರೆ, ಫ್ಲಿಪ್‌ಕಾರ್ಟ್ ಬ್ಲಾಕ್ ಫ್ರೈಡೇ ಸೇಲ್​ನಲ್ಲಿ 19,999 ರೂ. ಗೆ ನಿಮ್ಮದಾಗಿಸಬಹುದು.. 17,500 ರೂ. ಗಳ ಎಕ್ಸ್​ಚೇಂಜ್ ಆಫರ್ ಕೂಡ ಇದೆ. ಇದು 6.6-ಇಂಚಿನ FHD+ ಡಿಸ್ ಪ್ಲೇ, 5000mAh ಬ್ಯಾಟರಿ ಮತ್ತು ಟ್ರಿಪಲ್ ಕ್ಯಾಮೆರಾ ರಿಯರ್ ಸೆಟಪ್‌ನೊಂದಿಗೆ ಬರುತ್ತದೆ.

Motorola Edge 20 Fusion 5G: ಈ ಫೋನ್ ಮೇಲೆ ಶೇಕಡಾ 24 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಹೀಗಾಗಿ ಇದರ 6GB RAM ಮತ್ತು 128GB ಶೇಖರಣಾ ರೂಪಾಂತರವು 24,999 ರೂ. ಬದಲಿಗೆ ಕೇವಲ 18,999 ರೂ. ಗೆ ಖರೀದಿಗೆ ಸಿಗುತ್ತಿದೆ. 17,500 ರೂ. ಗಳ ಎಕ್ಸ್​ಚೇಂಜ್ ಆಫರ್ ಕೂಡ ಇದೆ. ಮೀಡಿಯಾಟೆಕ್ ಡೈಮೆನ್ಸಿಟಿ 800U ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ಈ ಫೋನ್​ನಲ್ಲಿ 6.67-ಇಂಚಿನ ಪೂರ್ಣ HD+ AMOLED ಡಿಸ್ ಪ್ಲೇ, ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ.

Tech Tips: ಸ್ಮಾರ್ಟ್​ಫೋನ್ ಮಾರಾಟ ಮಾಡುವ ಮುನ್ನ ಹೀಗೆ ಮಾಡಲು ಮರೆಯದಿರಿ

Oppo F19: ಈ ಫೋನ್ ಮೇಲೆ ಶೇಕಡಾ 28 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಹೀಗಾಗಿ ಇದರ 6GB RAM ಮತ್ತು 128GB ಶೇಖರಣಾ ರೂಪಾಂತರವು 20,990 ರೂ. ಬದಲಿಗೆ ಕೇವಲ 14,990 ರೂ. ಗೆ ಖರೀದಿಸಬಹುದು. 14,000 ರೂ. ಗಳ ಎಕ್ಸ್​ಚೇಂಜ್ ಆಫರ್ ಕೂಡ ಇದೆ. ಇದು 6.43 ಇಂಚಿನ ಪೂರ್ಣ HD+ ಡಿಸ್ ಪ್ಲೇ, 5000mAh ಬ್ಯಾಟರಿ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Mon, 28 November 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್